ಕಮಲ್ ಹಾಸನ್-ರಜನಿಕಾಂತ್ ಕನಸಿನ ಸಿನಿಮಾ ನಿಂತೋಯ್ತಾ? ಇಲ್ಲಿದೆ ಅಪ್ ಡೇಟ್

ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕಮಲ್ ಹಾಸನ್ ತಮಿಳು ಚಿತ್ರರಂಗದ ಎರಡು ಕಣ್ಣುಗಳಂತಿರುವ ಇಬ್ಬರು ಸ್ಟಾರ್ಸ್ ಒಟ್ಟಿಗೆ ಸಿನಿಮಾ ಮಾಡುತ್ತಿರುವುದು ಅಭಿಮಾನಿಗಳಿಗೆ ದೊಡ್ಡ ಹಬ್ಬ. ಇಬ್ಬರನ್ನು ಒಟ್ಟಿಗೆ ತೆರೆಮೇಲೆ ನೋಡುವುದೇ ಒಂದು ಸಂಭ್ರಮ. ಈಗಾಗಲೆ ಇಬ್ಬರ ಸಿನಿಮಾ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ.

ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ ಇಬ್ಬರು ಸೂಪರ್ ಸ್ಟಾರ್ಸ್ ಸಿನಿಮಾ ಪ್ರಾರಂಭದಲ್ಲಿಯೆ ನಿಂತುಹೋಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೆ ಶುರುವಾಗಬೇಕಿತ್ತು. ಆದರೆ ಕೊರೊನಾ ಹಾವಳಿಯ ಪರಿಣಾಮ ಸಿನಿಮಾ ಕೆಲಸಗಳು ಸ್ಥಗಿತಗೊಂಡಿವೆ. ಮುಂದೆ ಓದಿ..

ಸಿನಿಮಾ ನಿಂತೋಯ್ತಾ?

ಸಿನಿಮಾ ನಿಂತೋಯ್ತಾ?

ಕಮಲ್ ಮತ್ತು ರಜನಿ ಅವರ ಕನಸಿನ ಪ್ರೋಜೆಕ್ಟ್ ಪ್ರಾರಂಭವಾಗುವುದೇ ಅನುಮಾನ ಎನ್ನುವ ಮಾತುಗಳು ಕಾಲಿವುಡ್ ನಲ್ಲಿ ಕೇಳಿ ಬರುತ್ತಿದೆ. ಆದರೆ ನಟರ ಆಪ್ತ ಮೂಲಗಳು ಸಿನಿಮಾ ತಾತ್ಕಾಲಿಕವಾಗಿ ಸ್ಥಗಿತವಾಗಿದೆ ಅಷ್ಟೆ, ಕೊರೊನಾ ಭೀತಿ ಕಡಿಮೆಯಾದ ಬಳಿಕ ಶೂಟಿಂಗ್ ಪ್ರಾರಂಭವಾಗಲಿದೆ. ತಡವಾಗಬಹುದು ಆದರೆ ಸಿನಿಮಾ ನಿಂತಿಲ್ಲ ಎಂದು ಹೇಳುತ್ತಿದ್ದಾರೆ.

2021ಕ್ಕೆ ಸಿನಿಮಾ ಮುಂದೂಡಿಕೆ

2021ಕ್ಕೆ ಸಿನಿಮಾ ಮುಂದೂಡಿಕೆ

ರಜನಿಕಾಂತ್ ಮತ್ತು ಕಮಲ್ ಸಿನಿಮಾ ಮುಂದಿನ ವರ್ಷ 2021ಕ್ಕೆ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ. ಇಬ್ಬರು ಸೂಪರ್ ಸ್ಟಾರ್ ಒಂದೆ ಸಿನಿಮಾದಲ್ಲಿ ಕೆಲಸ ಮಾಡುತ್ತಾರೆ ಅಂದ್ಮೇಲೆ ಸಿನಿಮಾದ ಮೇಲಿನ ನಿರೀಕ್ಷೆ ಇಮ್ಮಡಿ ಯಾಗಿರುತ್ತೆ. ತಡವಾದರು ಬೆಸ್ಟ್ ನೀಡಬೇಕೆಂದುಕೊಂಡು ಮುಂದಿನ ವರ್ಷಕ್ಕೆ ಪೋಸ್ಟ್ ಪೋನ್ ಮಾಡಲಾಗಿದೆ.

ಲೋಕೇಶ್ ಕನಗರಾಜ್ ನಿರ್ದೇಶನ

ಲೋಕೇಶ್ ಕನಗರಾಜ್ ನಿರ್ದೇಶನ

ಅಂದ್ಹಾಗೆ ಕಮಲ್ ಹಾಸನ್ ಮತ್ತು ರಜನಿಕಾಂತ್ ಸಿನಿಮಾಗೆ ಲೋಕೇಶ್ ಕನಗರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ವಿಜಯ್ ಗೆ ಮಾಸ್ಟರ್ ಸಿನಿಮಾ ನಿರ್ದೇಶನ ಮಾಡಿರುವ ಲೋಕೇಶ್ ಈಗ ಸೂಪರ್ ಸ್ಟಾರ್ಸ್ ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಚಿತ್ರಕ್ಕೆ ಕಮಲ್ ಹಾಸನ್ ನಿರ್ಮಾಣ ಮಾಡುತ್ತಿದ್ದಾರೆ.

ಅತಿಥಿ ಪಾತ್ರದಲ್ಲಿ ಕಮಲ್

ಅತಿಥಿ ಪಾತ್ರದಲ್ಲಿ ಕಮಲ್

ಚಿತ್ರದಲ್ಲಿ ಕಮಲ್ ಹಾಸನ್ ಸಂಪೂರ್ಣವಾಗಿ ಇರುವುದಿಲ್ಲ. ಕೇವಲ ಅತಿಥಿ ಪಾತ್ರದಲ್ಲಿ ಮಾತ್ರ ಕಮಲ್, ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಕಾಣಿಸಿಕೊಳ್ಳಲಿದ್ದಾರಂತೆ. ಸುಮಾರು 35 ವರ್ಷಗಳ ಬಳಿಕ ಕಮಲ್ ಮತ್ತು ರಜನಿಕಾಂತ್ ಇಬ್ಬರು ಒಟ್ಟಿಗೆ ತೆರೆಹಂಚಿಕೊಳ್ಳುತ್ತಿರುವ ವಿಚಾರ ಕಾಲಿವುಡ್ ನಲ್ಲಿ ಸಂಚಲನ ಮೂಡಿಸಿದೆ.

ರಜನಿಕಾಂತ್ ಮತ್ತು ಕಮಲ್ ಸಿನಿಮಾಗಳು

ರಜನಿಕಾಂತ್ ಮತ್ತು ಕಮಲ್ ಸಿನಿಮಾಗಳು

ಕಮಲ್ ಹಾಸನ್ ಸದ್ಯ ಶಂಕರ್ ನಿರ್ದೇಶನದ ಇಂಡಿಯನ್-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅಣ್ಣಾತೆ ಸಿನಿಮಾದಲ್ಲಿ ನಿರತರಾಗಿದ್ದಾರೆ. ಕೊರೊನಾ ಹಾವಳಿಯ ಪರಿಣಾಮ ಎಲ್ಲಾ ಸಿನಿಮಾಗಳ ಲೆಕ್ಕಾಚಾರ ತಲೆಕೆಳಗಾಗಿದೆ. ಈ ಎಲ್ಲಾ ಸಿನಿಮಾಗಳ ಕೆಲಸ ಮುಗಿದ ಬಳಿಕ ರಜನಿಕಾಂತ್ ಮತ್ತು ಕಮಲ್ ಸಿನಿಮಾ ಸೆಟ್ಟೇರಲಿದೆ.

More from Filmibeat

English summary
Rumours spreading that Super star Rajinikanth and Kamal Haasan Mega Project dropped.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X