ವಿಜಯ್ ಕೊನೆಯ ಸಿನಿಮಾ ಕನ್ನಡದ ಈ ನಟನೇ ವಿಲನ್? ಪ್ರಭಾಸ್ ಎದುರೂ ಘರ್ಜಿಸಿದ್ದ ಕನ್ನಡಿಗ

ದಳಪತಿ ವಿಜಯ್ 69ನೇ ಸಿನಿಮಾ 'ಜನ ನಾಯಗನ್' ಶೂಟಿಂಗ್ ಶುರುವಾಗಿದೆ. ಇದು ವಿಜಯ್ ನಟಿಸುತ್ತಿರುವ ಕೊನೆಯ ಸಿನಿಮಾ. ಯಾಕಂದ್ರೆ ಈಗಾಗಲೇ ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿರುವ ತಮಿಳಿನ ಈ ಸ್ಟಾರ್ ನಟ ಸಿನಿಮಾಗೆ ಗುಡ್‌ ಬೈ ಹೇಳುವುದಕ್ಕೆ ಮನಸ್ಸು ಮಾಡಿದ್ದಾರೆ. 2026ರಲ್ಲಿ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ರಾಜಕೀಯ ಪಕ್ಷವನ್ನು ಅಖಾಡಕ್ಕೆ ಇಳಿಸುವುದಕ್ಕೆ ನಿರ್ಧರಿಸಿದ್ದಾರೆ.

ಈ ಕಾರಣಕ್ಕೆ ಕೊನೆಯ ಸಿನಿಮಾ 'ಜನ ನಾಯಗನ್' ರಿಲೀಸ್ ಆಗುತ್ತಿದ್ದಂತೆ ನಟನೆಗೆ ಗುಡ್‌ ಬೈ ಹೇಳುತ್ತಾರೆ ಅನ್ನೋದು ಈಗಾಗಲೇ ಅಧಿಕೃತವಾಗಿದೆ. ಆದರೂ, 'ಜನ ನಾಯಗನ್' ಅಲ್ಲದೆ ಇನ್ನೂ ಒಂದು ಸಿನಿಮಾದಲ್ಲಿ ದಳಪತಿ ವಿಜಯ್ ನಟಿಸಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಆದರೆ, ಅದ್ಯಾವುಕ್ಕೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ, ವಿಜಯ್ ಇನ್ನೊಂದು ಸಿನಿಮಾದಲ್ಲಿ ನಟಿಸುವುದು ಅನುಮಾನ ಎಂದೇ ಕಾಲಿವುಡ್‌ನಲ್ಲಿ ಟಾಕ್‌ ಇದೆ.

Salaar villain Vajrang shetty playing main villain in Thalapathy Vijay Last film Jana Nayagan

ಅಷ್ಟಕ್ಕೂ ದಳಪತಿ ವಿಜಯ್ 69ನೇ ಸಿನಿಮಾ ಬಗ್ಗೆ ಮತ್ತೆ ವಿಷಯ ಎತ್ತಿದ್ದಕ್ಕೆ ಒಂದು ಕಾರಣವಿದೆ. ಈ ಸಿನಿಮಾದಲ್ಲಿ ಕನ್ನಡಿಗರೇ ಹೆಚ್ಚು ಮಂದಿ ನಟಿಸುತ್ತಿದ್ದಾರೆ. ಅದರಲ್ಲೂ ಪ್ರಭಾಸ್ ಎದುರು ಖಡಕ್ ವಿಲನ್ ಲುಕ್ ಕೊಟ್ಟಿದ್ದ ಕನ್ನಡದ ನಟ ದಳಪತಿ ವಿಜಯ್ ಎದುರು ಅಬ್ಬರಿಸಲಿದ್ದಾರೆ. ಅಷ್ಟಕ್ಕೂ ಆ ನಟ ಯಾರು? ಆ ನಟನ ಹೆಸರು ಯಾಕಿಷ್ಟು ಸದ್ದು ಮಾಡುತ್ತಿದೆ? ಕನ್ನಡದ ಯಾರೆಲ್ಲ ನಟರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಕೆವಿಎನ್ ಪ್ರೊಡಕ್ಷನ್ ಎರಡು ಬಿಗ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಅದರಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಒಂದಾದರೆ, ಇನ್ನೊಂದು ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಕೂಡ ಒಂದು. ಈ ಸಿನಿಮಾ 300 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ ಅನ್ನೋ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ. ಸಿನಿಮಾ ಇನ್ನೂ ನಿರ್ಮಾಣ ಹಂತದಲ್ಲಿಯೇ ಇರುವುದರಿಂದ ಬಜೆಟ್‌ ಬಗ್ಗೆ ಈಗಲೇ ಅಂದಾಜು ಮಾಡಲು ಸಾಧ್ಯವಿಲ್ಲ.

ದಳಪತಿ ವಿಜಯ್ ಕೊನೆಯ ಸಿನಿಮಾದಲ್ಲಿ ವಿಲನ್ ಕನ್ನಡದ ನಟ ಅನ್ನೋದು ಸದ್ಯದ ಸುದ್ದಿ. ಈಗಾಗಲೇ ಅದೇ ನಟ ವಿಲನ್ ಅನ್ನೋದು ಫೈನಲ್ ಆಗಿದೆಯಂತೆ. ಪ್ರಶಾಂತ್ ನೀಲ್ ನಿರ್ದೇಶಿಸಿದ್ದ 'ಸಲಾರ್' ಸಿನಿಮಾದಲ್ಲಿ ಪ್ರಭಾಸ್ ಎದುರು ಖಡಕ್ ಲುಕ್ ಕೊಟ್ಟಿದ್ದ ವಜ್ರಾಂಗ್ ಶೆಟ್ಟಿ 'ಜಗ ನಾಯಗನ್‌'ಗೆ ವಿಲನ್ ಅನ್ನೋ ಮಾತು ಕೇಳಿ ಬರುತ್ತಿದೆ. ದಳಪತಿ ವಿಜಯ್ ಎದುರು ವಜ್ರಾಂಗ್ ಶೆಟ್ಟಿ ಖಡಕ್ ಫೈಟ್ ಮಾಡಲಿದ್ದಾರೆ. ಆದರೆ, ಈ ಸುದ್ದಿಯನ್ನು ಕೆವಿಎನ್ ಪ್ರೊಡಕ್ಷನ್ ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ. ಶೀಘ್ರದಲ್ಲಿಯೇ ಈ ವಿಷಯವನ್ನು ಈ ಸಂಸ್ಥೆಯೇ ರಿವೀಲ್ ಮಾಡುವ ಸಾಧ್ಯತೆಯಿದೆ.

Salaar villain Vajrang shetty playing main villain in Thalapathy Vijay Last film Jana Nayagan

ವಜ್ರಾಂಗ್ ಶೆಟ್ಟಿ ಕನ್ನಡದ ಸ್ಟಾರ್ ಎದುರು ಕೂಡ ಅಬ್ಬರಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಧುವ ಸರ್ಜಾ, ಪುನೀತ್ ರಾಜ್‌ಕುಮಾರ್ ಸಿನಿಮಾದಲ್ಲಿ ವಿಲನ್ ಲುಕ್ ಕೊಟ್ಟು ಗಮನ ಸೆಳೆದಿದ್ದರು. ಆ ಬಳಿಕ ಪ್ರಶಾಂತ್ ನೀಲ್ ಸಿನಿಮಾ 'ಸಲಾರ್'ನಲ್ಲೂ ನೆಗೆಟಿವ್ ರೋಲ್‌ನಲ್ಲಿ ಅಬ್ಬರಿಸಿದ್ದರು. ಈಗ ದಳಪತಿ ವಿಜಯ್ ನಟಿಸುತ್ತಿರುವ 69ನೇ ಸಿನಿಮಾ 'ಜನ ನಾಯಗನ್' ಸಿನಿಮಾದಲ್ಲೂ ನಟಿಸುತ್ತಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿದೆ.

ಹಾಗಂತ ಈ ಸಿನಿಮಾದಲ್ಲಿ ನಟಿಸುವ ಕನ್ನಡದ ಮೂಲಕದ ನಟರ ದಂಡು ದೊಡ್ಡದೇ ಇದೆ. ವಿಜಯ್‌ಗೆ ನಾಯಕಿಯಾಗಿ ಕರಾವಳಿ ಬ್ಯೂಟಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಇವರೊಂದಿಗೆ ಬಹುಭಾಷಾ ನಟ ಪ್ರಕಾಶ್ ರೈ, ಪ್ರಿಯಾಮಣಿ ಹಾಗೂ ವಜ್ರಾಂಗ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಸಿನಿಮಾ ನಿರ್ಮಾಣ ಸಂಸ್ಥೆ ಕೆವಿಎನ್ ಕೂಡ ಕನ್ನಡದ್ದೇ ಆಗಿದೆ. ಹೀಗಾಗಿ ಈ ಸಿನಿಮಾದಲ್ಲಿ ಇನ್ನೂ ಹೆಚ್ಚೆಚ್ಚು ಕನ್ನಡಿಗರನ್ನು ನೋಡುವ ಸಾಧ್ಯತೆಯಿದೆ.

More from Filmibeat

English summary
Salaar villain Vajrang shetty playing main villain in Thalapathy Vijay Last film;
Read more about: vijay pooja hegde prakash raj
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X