ಅಣ್ಣ ಆಯ್ತು.. ವಿಚ್ಛೇದನದ ಬಳಿಕ ತಮ್ಮನ ಸಿನಿಮಾಗೂ ಜೈ ಎಂದ ಸಮಂತಾ

ಎಲ್ಲಿ ನೋಡದರೂ ಸಮಂತಾ.. ಸಮಂತಾ.. ಸಮಂತಾ. ಪತಿ ನಾಗಚೈತನ್ಯರಿಂದ ಬೇರೆಯಾಗುತ್ತಿದ್ದಂತೆ ಚಿತ್ರರಂಗದಲ್ಲಿ ಸಮಂತಾಗೆ ಬೇಡಿಕೆ ಹೆಚ್ಚಾಗಿದೆ. ಟಾಲಿವುಡ್‌, ಕಾಲಿವುಡ್, ಬಾಲಿವುಡ್ ಎಲ್ಲಾ ಕಡೆಯಿಂದಲೂ ಸಮಂತಾಗೆ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ. ವಿಚ್ಛೇದನದ ಬಳಿಕ ಸಮಂತಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ನಟಿಯ ವೈಯುಕ್ತಿಕ ಜೀವನ ಹಳಿತಪ್ಪಿದರೂ ವೃತ್ತಿ ಜೀವನ ಫುಲ್ ಸ್ವಿಂಗ್‌ನಲ್ಲಿ ಸಾಗಿದೆ. ಸದ್ಯ ಇನ್ನೊಂದು ಸಿನಿಮಾ ಸಮಂತಾ ಜೈ ಎಂದಿದ್ದಾರೆ.

ವಿಚ್ಛೇದನದ ಬಳಿಕ ಸಮಂತಾ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಈ ನೋವಿನಿಂದ ಹೊರಬರಲು ಸಮಯ ತೆಗೆದುಕೊಂಡು, ಮತ್ತೆ ಅದೇ ಲವಲವಿಕೆಯಿಂದ ಕೆಲಸ ಆರಂಭಿಸಿದ್ದಾರೆ. ವಿಶೇಷ ಅಂದ್ರೆ, ಸಮಂತಾ ಈ ಹಿಂದೆಯೂ ಸಿಗದಷ್ಟು ಜನಪ್ರಿಯತೆ ವಿಚ್ಛೇದನದ ಬಳಿಕ ಸಿಕ್ಕಿದೆ. ಕೈ ತುಂಬಾ ಸಿನಿಮಾಗಳಿವೆ. ಸದ್ಯ ಹೊಸ ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರೆ. ವಿಶೇಷ ಅಂದರೆ, ಈ ನಟನೊಂದಿಗೆ ಸಮಂತಾ ಹಿಂದೆಂದೂ ನಟಿಸಿರಲಿಲ್ಲ.

ದ್ವಿಭಾಷಾ ಸಿನಿಮಾಗೆ ಜೈ ಎಂದ ಸಮಂತಾ

ದ್ವಿಭಾಷಾ ಸಿನಿಮಾಗೆ ಜೈ ಎಂದ ಸಮಂತಾ

ಸಮಂತಾ ಈಗಾಗಲೇ ಎರಡು ದ್ವಿಭಾಷಾ ಸಿನಿಮಾಗಳಿಗೆ ಸಮ್ಮತಿ ನೀಡಿದ್ದಾರೆ. ಈ ಮಧ್ಯೆ ಮತ್ತೊಂದು ಸಿನಿಮಾಗೂ ಜೈ ಅಂದಿದ್ದಾರೆ. ಟಾಲಿವುಡ್ ಮೂಲಗಳ ಪ್ರಕಾರ, ಸಮಂತಾ ತಮಿಳು ಹಾಗೂ ತೆಲುಗು ದ್ವಿಭಾಷಾ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ವಿಶೇಷ ಅಂದರೆ ತಮಿಳಿನ ಸ್ಟಾರ್ ನಟ ಸೂರ್ಯ ಸಹೋದರ ಕಾರ್ತಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾವಿದು. ಹೀಗಾಗಿ ಈ ಸಿನಿಮಾ ಬಗ್ಗೆ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ.

ಸೂರ್ಯ ತಮ್ಮನ ಸಿನಿಮಾಗೆ ಸಮಂತಾ ಸಹಿ

ಸೂರ್ಯ ತಮ್ಮನ ಸಿನಿಮಾಗೆ ಸಮಂತಾ ಸಹಿ

ಈ ಹಿಂದೆ ಸಮಂತಾ ತಮಿಳಿನ ಸ್ಟಾರ್ ನಟ ಸೂರ್ಯ ಜೊತೆ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೂರ್ಯ ಹಾಗೂ ಸಮಂತಾ ಇಬ್ಬರೂ '24' ಹಾಗೂ 'ಅಂಜಾನ್' ಎನ್ನುವ ಎರಡು ಸಿನಿಮಾಗಳಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಸೂರ್ಯ ತ್ರಿಪಾತ್ರದಲ್ಲಿ ನಟಿಸಿದ್ದರು. '24' ಬಾಕ್ಸಾಫೀಸ್‌ನಲ್ಲಿ 100 ಕೋಟಿ ಲೂಟಿ ಮಾಡಿತ್ತು. ಎರಡು ರಾಷ್ಟ್ರ ಪ್ರಶಸ್ತಿ ಕೂಡ ಮುಡಿಗೇರಿಸಿಕೊಂಡಿತ್ತು. ಆದರೆ, 'ಅಂಜಾನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳವಂತಹ ಸದ್ದು ಮಾಡಿಲ್ಲ. ಆಗ ಬಳಿಕ ಸಮಂತಾ ಹಾಗೂ ಸೂರ್ಯ ಮತ್ತೆ ಒಟ್ಟಿಗೆ ನಟಿಸಿಲ್ಲ. ಆದ್ರೀಗ ಸಹೋದರ ಕಾರ್ತಿ ಜೊತೆ ನಟಿಸಲು ಮುಂದೆ ಬಂದಿದ್ದಾರೆ.

ಸಮಂತಾ ಸಿನಿಮಾಗೆ ನಿರ್ದೇಶಕರು ಯಾರು?

ಸಮಂತಾ ಸಿನಿಮಾಗೆ ನಿರ್ದೇಶಕರು ಯಾರು?

ಇದೇ ಮೊದಲ ಬಾರಿ ಕಾರ್ತಿ ಜೊತೆ ನಟಿಸುತ್ತಿರುವ ಸಮಂತಾ ಸಿನಿಮಾ ನಿರ್ದೇಶಕರು ಯಾರು ಎನ್ನುವ ಗೊಂದಲವೆದ್ದಿದೆ. ತೆಲುಗು ಮಾಧ್ಯಮಗಳು ಕಾರ್ತಿ-ಸಮಂತಾ ಸಿನಿಮಾಗೆ 'ಬ್ಯಾಚುಲರ್' ಖ್ಯಾತಿಯ ಸತೀಶ್ ಸೆಲ್ವಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ ಎನ್ನುತ್ತಿದೆ. ಇದೇ ತಮಿಳು ಮಾಧ್ಯಮಗಳು ಬೇರೆಯದ್ದೇ ನಿರ್ದೇಶಕನ ಹೆಸರು ಸೂಚಿಸಿವೆ. ಸಮಂತಾ ನಟಿಸಿದ 'ಅಂಜಾನ್' ಸಿನಿಮಾದ ನಿರ್ದೇಶಕ ಎನ್ ಲಿಂಗುಸಾಮಿ ಡೈರೆಕ್ಟರ್ ಎಂದು ಹೇಳುತ್ತಿದೆ. ಹೀಗಾಗಿ ಇಬ್ಬರಲ್ಲಿ ನಿರ್ದೇಶಕರು ಯಾರು ಅನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

ಸಮಂತಾ ಕೈಯಲ್ಲಿ ಎಷ್ಟು ಸಿನಿಮಾಗಳಿವೆ?

ಸಮಂತಾ ಕೈಯಲ್ಲಿ ಎಷ್ಟು ಸಿನಿಮಾಗಳಿವೆ?

ಸಮಂತಾ ಸದ್ಯ 'ಶಾಕುಂತಲಂ' ಸಿನಿಮಾ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗಿದೆ. ಸದ್ಯ 'ಯಶೋಧ' ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಇದು ವಿಚ್ಛೇದನದ ಬಳಿಕ ಶೂಟಿಂಗ್ ಶುರುವಾದ ಮೊದಲ ಸಿನಿಮಾ. ಹಾಲಿವುಡ್ ಸಿನಿಮಾ ಸರದಿಯಲ್ಲಿದೆ. 'ದಿ ಫ್ಯಾಮಿಲಿ ಫ್ಯಾನ್ 2' ವೆಬ್ ಸಿರೀಸ್ ಬಳಿಕ ಮತ್ತೊಂದು ವೆಬ್ ಸಿರೀಸ್‌ಗೆ ಸಹಿ ಹಾಕಿದ್ದಾರೆ. ಎರಡು ದ್ವಿಭಾಷಾ ಸಿನಿಮಾಗಳು ಕೈಯಲ್ಲಿವೆ. ಈ ವರ್ಷ ಸಮಂತಾ ಫುಲ್ ಬ್ಯುಸಿಯಾಗಿದ್ದು, ಒಂದೊಂದೇ ಸಿನಿಮಾ ಬಿಡುಗಡೆಯಾಗಲಿದೆ.

More from Filmibeat

English summary
Samantha is likely to pair up with tamil actor Surya brother Karthi in the Movie. This will be Samantha’s first movie with Tamil actor Karthi. Sathish Selvakumar of Bachelor Fame will direct the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X