ಊರ್ವಶಿ ಜೊತೆ ನಟಿಸಲು ನಿರಾಕರಿಸಿದ್ದೇಕೆ ಕ್ಯಾಪ್ಟನ್ ವಿಜಯಕಾಂತ್; ಹಿರಿಯ ನಟಿ ಹೇಳಿದ್ದೇನು?
ತಮಿಳುನಾಡಿನ ಫೈಯರ್ ಬ್ರ್ಯಾಂಡ್ ಆಗಿದ್ದ ನಟ ಕಮ್ ರಾಜಕೀಯ ಮುಖಂಡ ವಿಜಯ್‌ಕಾಂತ್. ಇತ್ತೀಚೆಗಷ್ಟೇ ಅನಾರೋಗ್ಯದಿಂದ ವಿಜಯ್‌ಕಾಂತ್ ನಿಧನರಾಗಿದ್ದರು. ಆ ನೋವಿನಿಂದ ಇನ್ನೂ ಅವರ ಅಭಿಮಾನಿಗಳು ಹೊರಗೆ ಬಂದಿಲ್ಲ. ತಮ್ಮ ಸಹಾಯ ಮನೋಭಾವದಿಂದಲೇ ಲೆಕ್ಕವಿಲ್ಲದಷ್ಟು ಅಭಿಮಾನಿಗಳನ್ನು ಸಂಪಾಧಿಸಿದ್ದಾರೆ.
ತಮಿಳುನಾಡಿನ ಜನರಿಗೆ ವಿಜಯ್‌ಕಾಂತ್ ಕೇವಲ ನಟ, ರಾಜಕಾರಣಿ ಅಷ್ಟೇ ಅಲ್ಲ.. ಅವರೊಬ್ಬ ಮಹಾನ್ ವ್ಯಕ್ತಿ. ರಜನಿಕಾಂತ್, ಕಮಲ್ ಹಾಸನ್ ಅಂತ ನಟರು ಉತ್ತುಂಗದಲ್ಲಿದ್ದಾಗ ವಿಜಯ್‌ಕಾಂತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇಷ್ಟೊಂದು ಕಾಂಪಿಟೇಷನ್ ನಡುವೆಯೂ ವಿಜಯ್‌ಕಾಂತ್ ತಮ್ಮದೇ ಸಾಮ್ರಾಜ್ಯವನ್ನು ಕಟ್ಟುಕೊಂಡಿದ್ದರು.

ವಿಜಯ್‌ಕಾಂತ್‌ಗೆ ಅಪಾರ ಅಭಿಮಾನಿಗಳಿದ್ದಾರೆ. ಇದು ಅವರ ನಟನೆಯಿಂದಲೋ, ರಾಜಕಾರಣಿ ಆಗಿದ್ದರಿಂದಲೋ ಅಲ್ಲ. ತಮ್ಮ ಸಹಾಯ ಮನೋಭಾವನೆಯಿಂದ ಈ ಮಟ್ಟಿಗೆ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇಂತಹ ಮೇರು ನಟನೊಂದಿಗೆ ನಟಿಸಿದ ಅನುಭವವನ್ನು ಹಿರಿಯ ನಟಿ ಊರ್ವಶಿ ಹೇಳಿದ್ದಾರೆ. ವಿಜಯ್‌ಕಾಂತ್ ಒಮ್ಮೆ ಊರ್ವಶಿ ಜೊತೆ ನಟಿಸೋದಿಲ್ಲ ಎಂದು ಹೇಳಿದ್ದರಂತೆ.
ವಿಜಯ್‌ಕಾಂತ್ ಮಾತುಗಳು ಬೆಂಕಿಯಿದ್ದಂತೆ ಇರುತ್ತಿದ್ದವು. ತಮಗೆ ಹೇಳಬೇಕು ಅನಿಸಿದ್ದನ್ನು ಹಿಂದೆ ಮುಂದೆ ನೋಡದೇ ಹೇಳಿಬಿಡುತ್ತಿದ್ದ ಜಾಯಮಾನ ಅವರದ್ದು. ರಜನಿಕಾಂತ್‌ಯಿಂದ ಹಿಡಿದು ಗಣ್ಯರು ಯಾರನ್ನೂ ಬಿಟ್ಟಿಲ್ಲ. ಅದಕ್ಕೆ ತಮಿಳಿಗರು ಇವರನ್ನು ಕ್ರಾಂತಿಕಾರಿ ನಟನೆಂದು ಕರೆಯುತ್ತಾರೆ. ಯಾವುದೇ ಸಮಸ್ಯೆ ಎದುರಾದರೂ, ಅಂಜದೆ ಮುನ್ನುಗ್ಗಿತ್ತಿದ್ದ ನಟನೀತ.

ಡಿಎಂಡಿ ಅನ್ನುವ ತಮ್ಮದೇ ರಾಜಕೀಯ ಪಕ್ಷ ಕಟ್ಟಿ, ವಿರೋಧ ಪಕ್ಷದ ನಾಯಕರಾಗುವ ಮಟ್ಟಕ್ಕೆ ಬೆಳೆದು ನಿಂತಿದ್ದರು. ಆದರೆ, ಅನಾರೋಗ್ಯದಿಂದ ಕೆಲವು ವರ್ಷಗಳಿಂದ ಡಿಎಂಡಿ ಪಕ್ಷದಿಂದ ದೂರವೇ ಉಳಿದಿದ್ದರು. ಅಲ್ಲದೆ ಕೆಲ ಮುಖಂಡರು ತಮ್ಮ ಪಕ್ಷ ತೊರೆದಿದ್ದರಿಂದ ಮಾನಸಿಕವಾಗಿಯೂ ನೊಂದಿದ್ದರು ಎನ್ನಲಾಗಿದೆ. ಇಂತಹ ನಟನೊಂದಿಗೆ ಹಿರಿಯ ನಟಿ ಊರ್ವಶಿ ನಟಿಸಿದ್ದರು. ಒಂದು ಸಂದರ್ಭದಲ್ಲಿ ವಿಜಯ್‌ಕಾಂತ್ ಇವರೊಂದಿಗೆ ನಟಿಸಲು ನಿರಾಕರಿಸಿದ್ದರಂತೆ. ಅದನ್ನು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಊರ್ವಶಿ ಹೇಳಿಕೊಂಡಿದ್ದಾರೆ.
ವಿಜಯ್‌ಕಾಂತ್ ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಕೆಲ ನಟಿಯರು ಅವರೊಂದಿಗೆ ನಟಿಸಲು ಹಿಂದೇಟು ಹಾಕಿದ್ದರಂತೆ. ಆದರೆ, ವಿಜಯ್‌ಕಾಂತ್ ಸ್ಟಾರ್ ಪಟ್ಟಕ್ಕೆ ಏರುತ್ತಿದ್ದಂತೆ ಅವರೇ ಖುದ್ದಾಗಿ ನಟಿಸಲು ಮುಗಿಬಿದ್ದಿದ್ದೂ ಇದೆ. ಊರ್ವಶಿ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಕ್ಯಾಪ್ಟನ್ ವಿಜಯ್‌ಕಾಂತ್ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರೊಂದಿಗೆ ನಟಿಸಲು ವಿಜಯ್‌ಕಾಂತ್ ನಿರಾಕರಿಸಿದ್ದನ್ನೂ ಹೇಳಿಕೊಂಡಿದ್ದಾರೆ.
ಊರ್ವಶಿ ಬಾಲನಟಿಯಾಗಿದ್ದಾಗ ವಿಜಯ್‌ಕಾಂತ್ ಸಿನಿಮಾಗಳಲ್ಲಿ ನಟಿಸಿದ್ದರು. ಆ ವೇಳೆ ಊರ್ವಶಿಯನ್ನು 'ತಂಗಚ್ಚಿ' ಎಂದು ವಿಜಯ್‌ಕಾಂತ್ ಕರೆಯುತ್ತಿದ್ದರಂತೆ. ಬಳಿಕ ಅವರದ್ದೇ ಸಿನಿಮಾಗೆ ನಾಯಕಿಯಾಗಿ ನಟಿಸಬೇಕಾಗಿ ಬಂದಾಗ, ವಿಜಯ್‌ಕಾಂತ್ ನಿರಾಕರಿಸಿದ್ದರಂತೆ. ತಂಗಚ್ಚಿ (ತಂಗಿ) ಎಂದು ಕರೆದ ಬಳಿಕ ಅವರೊಂದಿಗೆ ಹೇಗೆ ನಟಿಸುವುದು ಎಂದು ಹೇಳಿದ್ದರಂತೆ. ಈ ವಿಷಯವನ್ನು ಹಿರಿಯ ನಟಿ ಊರ್ವಶಿ ಹಂಚಿಕೊಂಡಿದ್ದಾರೆ.
ಇಷ್ಟೇ ಅಲ್ಲ, ನಾವಿಬ್ಬರು ನಟಿಸುವ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ದೃಶ್ಯಗಳಿದ್ದರೆ ಹೇಗೆ ಎಂದು ಕಸಿವಿಸಿಗೊಂಡಿದ್ದರಂತೆ. ಹಾಗೇ ಊರ್ವಶಿ ಸಿಕ್ಕಾಪಟ್ಟೆ ಬೆಳ್ಳಗೆ ಇದ್ದಾಳೆ. ಅವರೊಂದಿಗೆ ನಟಿಸೋ ನಾನು ಹೇಗಿದ್ದೇನೆ ಎಂದು ತಮ್ಮನ್ನು ತಾವೇ ಕಾಮಿಡಿ ಮಾಡಿಕೊಳ್ಳುತ್ತಿದ್ದರು ಎಂದು ಊರ್ವಶಿ ಹೇಳಿದ್ದಾರೆ. ವಿಜಯ್‌ಕಾಂತ್ ಎಲ್ಲರನ್ನೂ ಒಂದೇ ರೀತಿ ನೋಡುತ್ತಿದ್ದರೆಂದು ಊರ್ವಶಿ ಹೇಳಿದ್ದಾರೆ.


Click it and Unblock the Notifications











