Jr.Silk Smitha: ತೆರೆಮೇಲೆ ಸಿಲ್ಕ್ ಸ್ಮಿತಾ ಪ್ರತ್ಯಕ್ಷ.. 'ಹಳ್ಳಿ ಮೇಷ್ಟ್ರು' ಕನ್ಫ್ಯೂಸ್ ಆಗೋದು ಗ್ಯಾರಂಟಿ !

ತನ್ನ ಮಾದಕ ನೋಟದಿಂದಲೇ ಸಿನಿಮಾ ಜಗತ್ತನ್ನು ಆಳುತ್ತಿದ್ದ ನಟಿ, ಡ್ಯಾನ್ಸರ್ ಸಿಲ್ಮ್ ಸ್ಮಿತಾ. ಬದುಕಿದ್ದರೆ, ಇನ್ನೊಂದಿಷ್ಟು ಸಿನಿಮಾದಲ್ಲಿ ನಟಿಸುತ್ತಿದ್ದರು. ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದರೇನೋ..? ಆದರೆ, ಅವರ ಅಭಿಮಾನಿಗಳಿಗೆ ಆ ಅವಕಾಶ ಸಿಗಲೇ ಇಲ್ಲ.

ಬದುಕಿದ್ದ 35 ವರ್ಷಗಳಲ್ಲಿಯೇ ನಟಿ ಸಿಲ್ಮ್ ಸ್ಮಿತಾ ಸುಮಾರು 450 ಸಿನಿಮಾಗಳಲ್ಲಿ ನಟಿಸಿದ್ದರು. ಇಷ್ಟೊಂದು ಬ್ಯುಸಿಯಾಗಿದ್ದ ನಟಿ ಇದ್ದಕ್ಕಿದ್ದ ಹಾಗೇ ಆತ್ಮಹತ್ಯೆಗೆ ಶರಣಾಗಿಬಿಟ್ಟರು. ತನ್ನ ಅಭಿಮಾನಿಗಳಿಗೆ ದೊಡ್ಡ ಶಾಕ್ ಕೊಟ್ಟು ಹೊರಟು ಹೋಗ್ಬಿಟ್ರು.

junior-silk-smitha-mark-antony

ಇದೇ ತಿಂಗಳು ಅಂದರೆ, 1996, ಸೆಪ್ಟೆಂಬರ್ 23ರಂದು ಸಿಲ್ಕ್ ಸ್ಮಿತಾ ಆತ್ಮಹತ್ಯೆಗೆ ಶರಣಾಗಿದ್ದರು. ಅಂದಿನಿಂದ ಸಿನಿಮಾರಂಗದಲ್ಲಿ ಸಿಲ್ಮ್ ಸ್ಮಿತಾ ಸೃಷ್ಟಿಸುತ್ತಿದ್ದ ಮಾದಕ ಲೋಕ ಕಣ್ಮರೆಯಾಗಿಬಿಡ್ತು. ಇಷ್ಟು ವರ್ಷಗಳ ಬಳಿಕ ಮತ್ತೆ ಸಿಲ್ಕ್ ಸ್ಮಿತಾ ಕಾಣಿಸಿಕೊಂಡಿದ್ದಾರೆ. ಅಂದರೆ, ಸಿಲ್ಕ್ ಸ್ಮಿತಾರನ್ನೇ ಹೋಲುವ ಜೂನಿಯರ್ ಸಿಲ್ಕ್ ಸ್ಮಿತಾ.

ಮತ್ತೆ ಬಂದ ಸಿಲ್ಮ್ ಸ್ಮಿತಾ

ಸಿನಿಮಾ ಪ್ರೇಮಿಗಳಿಗೆ ಇಂದಿಗೂ ಸಿಲ್ಕ್ ಸ್ಮಿತಾ ಬಗ್ಗೆ ತಿಳಿದುಕೊಳ್ಳುವ ಬಯಕೆ ಇದೆ. ಅದಕ್ಕೆ 'ಡರ್ಟಿ ಪಿಕ್ಚರ್' ಅಂತಹ ಸಿನಿಮಾ ಬಂದಾಗ ಮುಗಿಬಿದ್ದು ನೋಡಿದ್ದರು. ಆದರೂ ವಿದ್ಯಾ ಬಾಲನ್ ಅಂತ ಟ್ಯಾಲೆಂಟೆಡ್ ನಟಿಗೆ ಸಿಲ್ಕ್ ಸ್ಮಿತಾರನ್ನು ಮ್ಯಾಚ್ ಮಾಡೋದಕ್ಕೆ ಆಗಲಿಲ್ಲ. ಆದ್ರೀಗ ಸಿಲ್ಕ್ ಸ್ಮಿತಾರನ್ನೇ ಹೋಲುವ ನಟಿ ತಮಿಳು ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾರೆ. ಅಂದ್ಹಾಗೆ ಆ ಸಿನಿಮಾವೇ 'ಮಾರ್ಕ್ ಆಂಟೋನಿ'.

junior-silk-smitha-mark-antony

ಯಾರೀ ಜೂನಿಯರ್ ಸಿಲ್ಕ್ ಸ್ಮಿತಾ?

ತಮಿಳು ನಟ ವಿಶಾಲ್ ಅಭಿನಯದ ಹೊಚ್ಚ ಸಿನಿಮಾ 'ಮಾರ್ಕ್ ಆಂಟೋನಿ' ನಾಳೆ (ಸೆಪ್ಟೆಂಬರ್ 15) ರಿಲೀಸ್ ಆಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಈ ಸಿನಿಮಾ ಟ್ರೈಲರ್ ರಿಲೀಸ್ ಆಗಿತ್ತು. ಇದರಲ್ಲಿ ಸಿಲ್ಮ್ ಸ್ಮಿತಾ ನೋಡಿ ಸಿನಿಮಾ ಪ್ರೇಮಿಗಳು ಥ್ರಿಲ್ ಆಗಿದ್ದರು. ಸಿನಿಮಾ ತಂಡ ಎಐ(Artificial Intelligence) ಬಳಸಿ ಸಿಲ್ಮ್ ಸ್ಮಿತಾರನ್ನು ಕ್ರಿಯೇಟ್ ಮಾಡಿರಬಹುದು ಎಂದು ಊಹೆ ಮಾಡಿದ್ದರು. ಆದರೆ, ಇದು ಎಐ ತಂತ್ರಜ್ಞಾನ ಬಳಸಿದ ಸಿಲ್ಮ್ ಸ್ಮಿತಾ ಅಲ್ಲ. ಬದಲಾಗಿದೆ ಯುವ ನಟಿ ವಿಷ್ಣು ಪ್ರಿಯ ಗಾಂಧಿ ಅನ್ನೋದು ಗೊತ್ತಾಗಿತ್ತು.

ವಿಷ್ಣು ಪ್ರಿಯಾ ಗಾಂಧಿ ಹಿನ್ನೆಲೆಯೇನು?

ವಿಷ್ಣು ಪ್ರಿಯಾ ಗಾಂಧಿ ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್ ಹಾಗೂ ನಟಿ. ಜೂನಿಯರ್ ಸಿಲ್ಕ್ ಸ್ಮಿತಾ ಅಂತಲೇ ನಟಿ ವಿಷ್ಣು ಪ್ರಿಯಾ ಗಾಂಧಿ ಜನಪ್ರಿಯರಾಗಿದ್ದಾರೆ. ಹುಟ್ಟೂರು ತಿರುಪತಿ. ತಿರುಪತಿಯ ಎಸ್‌ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಸಿನಿಮಾರಂಗದಲ್ಲಿ ಜೂನಿಯರ್ ಸಿಲ್ಕ್ ಸ್ಮಿತಾ ಅಂತಲೇ ಜನಪ್ರಿಯರಾಗಿದ್ದಾರೆ.

'ಮಾರ್ಕ್ ಆಂಟೋನಿ' ಜೊತೆ ಎಂಟ್ರಿ

ಜೂನಿಯರ್ ಸಿಲ್ಕ್ ಸ್ಮಿತಾ ಅಪಿಯರೆನ್ಸ್ 'ಮಾರ್ಕ್ ಆಂಟೋನಿ'ಗೆ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸುವಂತೆ ಮಾಡಿದೆ. ಈ ಸಿನಿಮಾದಲ್ಲಿ ಸಿಲ್ಮ್ ಸ್ಮಿತಾ ಎಪಿಸೋಡ್ ಇದ್ದು, ಎಷ್ಟು ನಿಮಿಷ ಕಾಣಿಸಿಕೊಳ್ಳುತ್ತಾರೆ ಅನ್ನೋದು ಕಾತುರ ಸಿನಿಮಾ ಪ್ರೇಮಿಗಳಿಗಿದೆ. ಅಧಿಕ್ ರವಿಚಂದ್ರನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ವಿಶಾಲ್ ಹಾಗೂ ಎಸ್‌ ಜೆ ಸೂರ್ಯ ಜೋಡಿಯಾಗಿ ನಟಿಸಿದ್ದಾರೆ.

More from Filmibeat

English summary
Silk Smitha doppelganger actress Vishnu Priya Gandhi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X