ಸಿಲ್ಮ್ ಸ್ಮಿತಾ ಮದುವೆ ಆಗಬೇಕಿದ್ದ ವ್ಯಕ್ತಿ ಯಾರು? ಆಕೆಯ ಸಾವಿಗೆ ಕಾರಣನಾದರೇ ಅಪ್ಪ-ಮಗ?

ಸಿಲ್ಮ್ ಸ್ಮಿತಾ ದಕ್ಷಿಣ ಭಾರತದ ಜನಪ್ರಿಯ ನಟಿ, ಡ್ಯಾನ್ಸರ್. ಅಂದಿನ ಯುವಕ ಹಾರ್ಟ್‌ಬೀಟ್. ಸಿನಿಮಾದಲ್ಲಿ ಸಿಲ್ಮ್ ಸ್ಮಿತಾ ಇಲ್ಲ ಅನ್ನೋ ಸುದ್ದಿ ಗೊತ್ತಾದರೇ ಆ ಕಾಲದ ಯುವಕರು ಥಿಯೇಟರ್‌ಗೆ ಲಗ್ಗೆ ಇಡುವ ಆಲೋಚನೆ ಕೂಡ ಮಾಡುತ್ತಿರಲಿಲ್ಲ. ಅಂತಹದ್ದೊಂದು ಕ್ರೇಜ್ ಅನ್ನು ಹುಟ್ಟಾಕಿದ್ದಿದ್ದು ಸಿಲ್ಮ್ ಸ್ಮಿತಾ. ದಕ್ಷಿಣ ಭಾರತದ ಗಟ್ಟಿ ವ್ಯಕ್ತಿತ್ವದ ನಟಿಯೆಂದೇ ಗುರುತಿಸಿದ್ದ ಈಕೆಯ ಬದುಕು ಮಾತ್ರ ಕೊನೆಯಲ್ಲಿ ಹೀನಾಯವಾಗಿತ್ತು.

ಸಿಲ್ಕ್ ಸ್ಮಿತಾ ದಕ್ಷಿಣ ಭಾರತದ ದಿಗ್ಗಜರ ಸಿನಿಮಾಗಳಲ್ಲಿ ಲಕ್ಕಿ ಲೇಡಿಯಾಗಿದ್ದರು. ಸೌತ್ ಇಂಡಸ್ಟ್ರಿಯ ಬಹುತೇಕ ಸೂಪರ್‌ಸ್ಟಾರ್‌ಗಳ ಜೊತೆ ಸಿಲ್ಕ್ ಸ್ಮಿತಾ ನಟಿಸಿದ್ದಾರೆ. ರಜನಿಕಾಂತ್, ಕಮಲ್ ಹಾಸನ್, ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಹಲವು ದಿಗ್ಗಜರೊಂದಿಗೆ ನಟಿಸಿದ್ದಾರೆ. ಅತೀ ಕಡಿಮೆ ಸಮಯದಲ್ಲಿ ಸಿಲ್ಕ್ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಇದು ಅವರ ಜನಪ್ರಿಯತೆ ಹೇಗಿತ್ತು ಅನ್ನೋದನ್ನು ಹೇಳುತ್ತೆ.

Silk Smitha was going to marry a doctor s son reveals her friend Puliyur Saroja in an interview

ಭಾರತೀಯ ಚಿತ್ರರಂಗದಲ್ಲಿ ಕೆಲವು ತಾರೆಯರ ಸಾವು ನಿಗೂಢವಾಗಿವೆ. ಅವರ ಸಾವಿನ ಸುತ್ತ ನೂರೆಂಟು ಕಥೆಗಳು ಹುಟ್ಟಿಕೊಂಡಿವೆ. ಅಂತಹದ್ದರಲ್ಲಿ ಸಿಲ್ಕ್ ಸ್ಮಿತಾ ಸಾವು ಕೂಡ ಹಲವು ಅನುಮಾನಗಳನ್ನು ಹುಟ್ಟಾಗಿದೆ. ಈಕೆ ಆತ್ಮಹತ್ಯೆಗೆ ಶರಣಾಗಿ 29 ವರ್ಷಗಳಾಗಿವೆ. ಆದರೂ, ಜನರು ಮರೆತಿಲ್ಲ. ಸಿಲ್ಮ್ ಸ್ಮಿತಾ ಬಗ್ಗೆ ಒಂದಲ್ಲ ಒಂದು ವಿಷಯಗಳು ಹೊರ ಬೀಳುತ್ತಲೇ ಇರುತ್ತೆ. ಸಿಲ್ಮ್ ಗೆಳತಿ ಪುಲಿಯೂರ್ ಸರೋಜ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಆಕೆಯ ಮದುವೆಯ ಗುಟ್ಟನ್ನು ಬಿಟ್ಟು ಕೊಟ್ಟಿದ್ದಾರೆ. ಗೆಳತಿ ಕಿವಿಯಲ್ಲಿ ತಾನು ಮದುವೆ ಆಗುವುದಕ್ಕೆ ಹೊರಟಿದ್ದ ಆ ಹುಡುಗನ ಹೆಸರನ್ನು ಪಿಸುಗುಟ್ಟಿದ್ದಳಂತೆ. ಅದನ್ನು ಸಂದರ್ಶನವೊಂದರಲ್ಲಿ ಪುಲಿಯೂರ್ ಸರೋಜ ಹೇಳಿಕೊಂಡಿದ್ದರು.

ಸಿಲ್ಮ್ ಸ್ಮಿತಾ ದುರಂತ ಬದುಕು

ಸಿಲ್ಮ್ ಸ್ಮಿತಾ ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ಒಂದು ರೋಚಕ ಕಥೆ. ಈಕೆಯ ಹಿನ್ನೆಲೆಯನ್ನು ಹುಡುಕಿಕೊಂಡು ಹೊರಟ ಸಿನಿಮಾ ಮಂದಿಗೆ ರೋಚಕ ವಿಷಯಗಳು ಸಿಕ್ಕಿವೆ. ಒಂದು ಕಾಲದಲ್ಲಿ ಸಿಲ್ಕ್ ಸ್ಮಿತಾ ಕಂಡರೆ ಸಾಲುಗಟ್ಟಿ ನಿಲ್ಲುತ್ತಿದ್ದ ನಿರ್ಮಾಪಕರು, ನಿರ್ದೇಶಕರು ಆಕೆ ಸತ್ತಾಗ ಐದು ಮಂದಿ ಕೂಡ ಸೇರಿರಲಿಲ್ಲ. ಆಕೆಯ ಮೃತದೇಹದ ಸುತ್ತ ಸಂಬಂಧಿಕರು ಇರಲಿಲ್ಲ. ಸಿನಿಮಾ ಮಂದಿ ಇರಲಿಲ್ಲ. ಸಿಲ್ಕ್ ಸಾವು ಅಷ್ಟೊಂದು ದುರಂತಮಯವಾಗಿತ್ತು.

ಮನೆಯಿಂದ ಓಡಿ ಬಂದಿದ್ದಳು

ಸಿಲ್ಮ್ ಸ್ಮಿತಾ ಮೂಲತ: ಆಂಧ್ರಪ್ರದೇಶದವರು. ಈಕೆಯ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನ ವಿಜಯಲಕ್ಷ್ಮಿ ಎಂಬ ಹೆಸರಿತ್ತು. ಅದು ಬದಲಾಗಿತ್ತು ಚಿತ್ರರಂಗಕ್ಕೆ ಕಾಲಿಟ್ಟ ಬಳಿಕವೇ. ಸಿಲ್ಕ್‌ಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಲಾಗಿತ್ತು. ಆದರೆ, ಗಂಡನ ಮನೆಯಲ್ಲಿ ಸಿಕ್ಕಾಪಟ್ಟೆ ಕಾಟ ಕೊಡುತ್ತಿದ್ದರು. ಹೀಗಾಗಿ ಮನೆಯಿಂದ ತಪ್ಪಿಸಿಕೊಂಡು ಚೆನ್ನೈಗೆ ಬಂದು ಸೇರಿಕೊಂಡಿದ್ದರು. ಬಳಿಕ ತಮಿಳಿನ ನಿರ್ದೇಶಕ ವಿನು ಚಕ್ರವರ್ತಿಯ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅವರು ಈಕೆಯ ಪ್ರತಿಭೆಯನ್ನು ಗಮನಿಸಿ ತಮ್ಮ ಸಿನಿಮಾದಲ್ಲಿ ಸಿಲ್ಮ್ ಎನ್ನುವ ಪಾತ್ರವನ್ನು ನೀಡಿದ್ದರು. ಆ ಪಾತ್ರದಿಂದಲೇ ವಿಜಯಲಕ್ಷ್ಮಿ ಮುಂದೆ ಸಿಲ್ಕ್ ಸ್ಮಿತಾಳಾಗಿ ಜನಪ್ರಿಯಳಾದಳು.

Silk Smitha was going to marry a doctor s son reveals her friend Puliyur Saroja in an interview

ಸಿಲ್ಮ್ ಇದ್ದರೆ ಸಿನಿಮಾ ಸಕ್ಸಸ್

ಸಿಲ್ಕ್ ಸ್ಮಿತಾ ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಯಶಸ್ಸು ಅನ್ನೋದು ಈಕೆಯ ಜೊತೆಯಲ್ಲಿಯೇ ತಿರುಗಾಡುತ್ತಲೇ ಇರುತ್ತಿತ್ತು. ಸಿನಿಮಾ ನಿರ್ಮಾಪಕರಿಗೆ ಈಕೆಯ ಕಾಲ್‌ಶೀಟ್ ಸಿಕ್ಕರೆ ಸಾಕು ಎನ್ನುವಂತಹ ಸ್ಥಿತಿಯನ್ನು ನಿರ್ಮಾಣ ಮಾಡಿದ್ದಳು. ಒಂದು ಸಿನಿಮಾದಲ್ಲಿ ಸಿಲ್ಮ್ ಸ್ಮಿತಾ ಒಂದು ಸಿನಿಮಾದಲ್ಲಿ ಸ್ಟೆಪ್ಸ್ ಹಾಕಿದರೇ, ಸಾಕು. ಆ ಸಿನಿಮಾ ಹಿಟ್ ಅಂತಲೇ ಅರ್ಥ. ಆಕೆಯ ಕಣ್ಣುಗಳಿಗೆ ಪ್ರತ್ಯೇಕ ಫ್ಯಾನ್ ಫಾಲೋವಿಂಗ್ ಇತ್ತು. ಆ ಮಟ್ಟಿಗೆ ಸೆಳೆದು ಬಿಟ್ಟಿದ್ದಳು.

ಪ್ರೀತಿ ವಾತ್ಸಲ್ಯಕ್ಕೆ ಹಂಬಲಿಸಿದ್ದ ಸಿಲ್ಕ್

ಸಿಲ್ಕ್ ಸ್ಮಿತಾ ಚಿಕ್ಕಂದಿನಿಂದಲೂ ನೂರೆಂಟು ಕಷ್ಟಗಳನ್ನು ಎದುರಿಸಿಯೇ ಬಂದಿದ್ದಳು. ಬರ ಬರುತ್ತಾ ಸಿಲ್ಮ್ ಸ್ಮಿತಾ ಆ ಕಷ್ಟಗಳನ್ನು ಹೊಡೆದು ಓಡಿಸಿದ್ದಳು. ಈಕೆಯಲ್ಲಿ ಕೈಯಲ್ಲಿ ಹಣ ಓಡಾಡುತ್ತಿತ್ತು. ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಹೆಸರಿಸತ್ತು. ಇವೆಲ್ಲ ಏನೇ ಇದ್ದರೂ, ಸಿಲ್ಮ್ ಸ್ಮಿತಾ ಪ್ರೀತಿ ಹಾಗೂ ವಾತ್ಸಲ್ಯಕ್ಕೆ ಹಂಬಲಿಸುತ್ತಿದ್ದಳು. ಪ್ರೀತಿ, ಮದುವೆ ಅಂತ ದೊಡ್ಡ ಕನಸನ್ನೇ ಕಟ್ಟಿಕೊಂಡಿದ್ದಳು. ಆದರೆ, ಈಕೆಗೆ ಹೆಸರು, ಹಣ ಸಿಕ್ಕಿತೇ ವಿನ: ನಿಜವಾದ ಪ್ರೀತಿ ಅನ್ನೋದು ಸಿಗಲೇ ಇಲ್ಲ. ಪ್ರೀತಿಯ ನಾಟಕವಾಗಿ ಅದೆಷ್ಟೋ ಮಂದಿ ಈಕೆ ಮೋಸ ಮಾಡಿದವರೇ ಹೆಚ್ಚು.

ಮದುವೆ ಆಗುತ್ತಿದ್ದೇನೆ ಎಂದಿದ್ದ ಸಿಲ್ಕ್

ಸಿಲ್ಮ್ ಸ್ಮಿತಾ ಸಾವಿನ ಕುರಿತು ಗೆಳತಿ ಪುಲಿಯೂರ್ ಸರೋಜಾ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನವನ್ನು ನೀಡಿದ್ದಾರೆ. ಈ ಸಂದರ್ಶನದಲ್ಲಿ ಸಿಲ್ಕ್ ಸ್ಮಿತಾ ಬಗ್ಗೆ ಕೆಲವು ರೋಚಕ ಸಂಗತಿಗಳನ್ನು ರಿವೀಲ್ ಮಾಡಿದ್ದಾರೆ. ಇದರಲ್ಲಿ ಸಿಲ್ಕ್ ಸ್ಮಿತಾ ಮದುವೆ ಆಗುವುದಕ್ಕೆ ಬಯಸಿದ್ದರ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ತನ್ನ ಕಿವಿಯಲ್ಲಿ ಸಿಲ್ಕ್‌ ಸ್ಮಿತಾ ಮದುವೆ ಬಗ್ಗೆ ಪ್ರಸ್ತಾಪ ಮಾಡಿದ್ದರು. ಹುಡುಗನ ಬಗ್ಗೆ ಹೇಳಿದ್ದರು. ಎನ್ನುವುದನ್ನು ರಿವೀಲ್ ಮಾಡಿದ್ದರು.

Silk Smitha was going to marry a doctor s son reveals her friend Puliyur Saroja in an interview

ಕಿವಿಯಲ್ಲಿ ಪಿಸುಗುಟ್ಟಿದ್ದ ಸಿಲ್ಮ್

ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಪುಲಿಯೂರು ಸರೋಜಾ ಕೆಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಇವರ ಬಳಿಕ ಆಕೆ ಮದುವೆಯಾಗುವ ಹುಡುಗ ಹೆಸರನ್ನು ಕಿವಿಯಲ್ಲಿ ಸಿಲ್ಮ್ ಸ್ಮಿತಾ ಪಿಸುಗುಟ್ಟಿದ್ದಳೆಂದು ಹೇಳಿಕೊಂಡಿದ್ದಾರೆ. " ತಿರುಪತಿಗೆ ಹೊರಡುವ ಎರಡು ದಿನಗಳ ಮುನ್ನ ಸಿಲ್ಮ್ ಸ್ಮಿತಾ ಒಂದು ಆಭರಣ ಪೆಟ್ಟಿಗೆಯನ್ನು ತಂದು ತೋರಿಸಿದ್ದರು. ಆಗ ನಾನು ಮದುವೆಯಾಗುತ್ತಿದ್ದೇನೆ ಎಂದು ಹುಡುಗನ ಹೆಸರನ್ನು ನನ್ನ ಕಿವಿಯಲ್ಲಿ ಪಿಸುಗುಟ್ಟಿದರು" ಎಂದು ಪುಲಿಯೂರು ಸರೋಜಾ ಹೇಳಿಕೊಂಡಿದ್ದಾರೆ.

ಮದುವೆ ಆಗ್ಬೇಕಿದ್ದ ಹುಡುಗ ಯಾರು?

ಸಿಲ್ಮ್ ಸ್ಮಿತಾ ಬಳಿ ರಾಧಾಕೃಷ್ಣನ್ ಎಂಬುವವರು ಕೆಲಸ ಮಾಡುತ್ತಿದ್ದರು. ಅವರ ಮಗನನ್ನೇ ಮದುವೆ ಆಗುತ್ತಿರುವುದಾಗಿ ಹೇಳಿಕೊಂಡಿದ್ದರಂತೆ. ರಾಧಾಕೃಷ್ಣನ್ ಅವರ ಮಗ ಹಾಗೂ ನಾನು ಮದುವೆ ಆಗುತ್ತಿದ್ದೇವೆ ಎಂದು ಹೇಳಿದ್ದರು ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಪುಲಿಯೂರು ಸರೋಜಾ ಅವರ ಸಂದರ್ಶನ ನೋಡುತ್ತಿದ್ದಂತೆ ಆಕೆಯ ಅಭಿಮಾನಿಗಳು ಸಿಲ್ಕ್ ಸ್ಮಿತಾ ಸಾವಿಗೆ ರಾಧಾಕೃಷ್ಣನ್ ಹಾಗೂ ಅವರ ಮಗನೇ ಕಾರಣ ಇರಬಹುದೆಂದು ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಸಿಲ್ಕ್ ಸ್ಮಿತಾ ಸಾವಿನ ಬಗ್ಗೆ ಅನುಮಾನಗಳು ಒಂದರೆಡಲ್ಲ. ಒಬ್ಬೊಬ್ಬರೂ ಒಂದೊಂದು ಕಥೆಯನ್ನು ಹೇಳುತ್ತಲೇ ಬಂದಿದ್ದಾರೆ. ಆದರೆ, ಪುಲಿಯೂರು ಸರೋಜಾ ಅವರ ಹೇಳಿಕೆಗಳು ಸಂಚಲನವನ್ನು ಸೃಷ್ಟಿಸಿದ್ದರು.

ಸಿಲ್ಮ್ ಸ್ಮಿತಾ ಮೃತದೇಹ ಅನಾಥವಾಗಿತ್ತು

ದಕ್ಷಿಣ ಭಾರತದ ಗ್ಲಾಮರಸ್ ನಟಿ ಸಿಲ್ಮ್ ಸ್ಮಿತಾ ಪ್ರೀತಿಯಲ್ಲಿ ಆದ ಮೋಸಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡರು ಎನ್ನುತ್ತಾರೆ. ಇನ್ನು ಕೆಲವರು ಖಿನ್ನತೆಗೆ ಜಾರಿದ್ದರು. ಅದರಿಂದ ಆತ್ಮಹತ್ಯೆಗೆ ಶರಣಾಗಿದ್ದರು ಎನ್ನುವವರೂ ಇದ್ದಾರೆ. ಅದೇ ಮತ್ತೆ ಕೆಲವರು ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ವಾದಿಸುವವರು ಇದ್ದಾರೆ. ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗ, ಸುತ್ತಮುತ್ತ ಇರುತ್ತಿದ್ದ ಜನರು ಸಿಲ್ಮ್ ಸ್ಮಿತಾ ಮೃತದೇಹದ ಪಕ್ಕ ಐದು ಮಂದಿ ಕೂಡ ಇರಲಿಲ್ಲ ಎಂದು ಪುಲಿಯೂರು ಸರೋಜಾ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೇ ಹಲವು ಗಂಭೀರ ವಿಷಯವನ್ನು ಪ್ರಸ್ತಾಪಿಸಿದ್ದರು.

ಸಿಲ್ಕ್ ಮೃತದೇಹವನ್ನೂ ಬಿಟ್ಟಿರಲಿಲ್ಲ

ಸಿಲ್ಕ್ ಸ್ಮಿತಾ ಮೃತದೇಹವನ್ನು ರಾಯಪೆಟ್ಟ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿತ್ತು. ಆ ವೇಳೆ ಈಕೆಯ ಮೃತದೇಹಕ್ಕೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಕಾಮುಕರು ಆಕೆಯ ಮೃತದೇಹವನ್ನು ಬಿಟ್ಟಿರಲಿಲ್ಲ. ಆದರೆ, ಈ ಆರೋಪಗಳನ್ನು ಸಾಬೀತು ಪಡಿಸುವುದಕ್ಕೆ ನಿಖರವಾದ ಪುರಾವೆಗಳು ಇಲ್ಲ.

More from Filmibeat

English summary
Silk Smitha was going to marry a doctor's son reveals her friend Puliyur Saroja in an interview
Read more about: silk smitha marriage kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X