"ಶಾರುಖ್- ಕರಣ್ ಸಲಿಂಗ ಕಾಮಿಗಳು.. ವಿದೇಶಕ್ಕೆ ಹೋಗಿ ಏನ್ ಮಾಡ್ತಾರೆ ಗೊತ್ತಾ?": ಸುಚಿತ್ರಾ

ತಮಿಳು ಗಾಯಕಿ ಸುಚಿತ್ರಾ ಗಂಭೀರ ಆರೋಪಗಳ ಮೂಲಕ ಬಹಳ ಸುದ್ದಿಯಲ್ಲಿದ್ದಾರೆ. ತಮ್ಮ ಮಾಜಿ ಪತಿ ನಟ ಕಾರ್ತಿಕ್ ಕುಮಾರ್, ನಟರಾದ ಧನುಷ್, ವಿಜಯ್, ಕಮಲ್ ಹಾಸನ್, ನಟಿ ತ್ರಿಶಾ ಸೇರಿದಂತೆ ಹಲವರ ಬಗ್ಗೆ ನಾನಾ ರೀತಿಯಲ್ಲಿ ಆರೋಪ ಮಾಡಿದ್ದಾರೆ. ಕಾರ್ತಿಕ್, ಧನುಷ್ ಇಬ್ಬರೂ ಸಲಿಂಗಕಾಮಿಗಳು ಎಂದಿದ್ದಾರೆ.

ಸುಚಿತ್ರಾ ಆರೋಪಗಳು ಇಲ್ಲಿಗೆ ನಿಲ್ಲಲಿಲ್ಲ. ಇದೀಗ ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಬಗ್ಗೆಯೂ ವಿವಾದಾಸ್ಪದವಾಗಿ ಮಾತನಾಡಿದ್ದಾರೆ. ಲಂಡನ್ ಪ್ರವಾಸದ ವೇಳೆ ಮಾಜಿ ಪತಿ ಕಾರ್ತಿಕ್ ಕುಮಾರ್, ಶಾರುಖ್ ಮತ್ತು ಕರಣ್ ಒಟ್ಟಿಗೆ ಗೇ ಪಾರ್ಟಿಗಳಿಗೆ ತೆರಳಿದ್ದರು ಎಂದು ಇದೀಗ ಸುಚಿತ್ರಾ ಬಾಂಬ್ ಸಿಡಿಸಿದ್ದಾರೆ. ಸಲಿಂಗಕಾಮಿಗಳಿಗೆ ಕಾನೂನುಬದ್ಧವಾಗಿ ಅವಕಾಶವಿರುವ ದೇಶಗಳಿಗೆ ಅವರು ಹೋಗುತ್ತಾರೆ ಎಂದಿದ್ದಾರೆ.

Singer Suchitra Makes shocking aligeations against ShahRukh Khan Karan johar and Kamal haasan

ಕಾರ್ತಿಕ್ ಖುದ್ದು ನನಗೆ ಈ ವಿಷಯ ಹೇಳಿದ್ದ. ಕರಣ್- ಶಾರುಖ್ ಆಗಾಗ್ಗೆ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಸಲಿಂಗಕಾಮಿಗಳಿಗೆ ಸ್ವತಂತ್ರವಾಗಿರುವ ಅವಕಾಶವಿರುವ ಜಾಗಗಳಿಗೆ ಹೋಗುತ್ತಾರೆ. ಅಲ್ಲಿ ನಡೆಯುವ ಪಾರ್ಟಿಗಳಿಗೆ ಗೇಗಳ ರೀತಿ ವೇಷ ಬದಲಿಸಿಕೊಂಡು ಅವರೊಟ್ಟಿಗೆ ಸೇರಿ ಪಾರ್ಟಿಯಲ್ಲಿ ಸೇರಿಕೊಳ್ಳುತ್ತಾರೆ. ಕಾರ್ತಿಕ್ ಕೂಡ ಅಲ್ಲಿ ಹೋದಾಗ ಅವರಿಬ್ಬರನ್ನು ಭೇಟಿ ಮಾಡಿದ್ದಾಗಿ ಹೇಳಿದ್ದ ಎಂದು ಸುಚಿತ್ರಾ ಆರೋಪಿಸಿದ್ದಾರೆ.

ಇತ್ತೀಚೆಗೆ ನಟ ಕಮಲ್ ಹಾಸನ್ ಬಗ್ಗೆ ಕೂಡ ಸುಚಿತ್ರಾ ಕಾಮೆಂಟ್ಸ್ ವೈರಲ್ ಆಗಿತ್ತು. ಕಮಲ್ ಈ ಹಿಂದೆ ಕೊಕೇನ್ ಪಾರ್ಟಿಗಳನ್ನು ಆಯೋಜಿಸಿದ್ದರು. ಕಮಲ್ ಟ್ರಾನ್ಸ್‌ಜೆಂಡರ್.. ಅದಕ್ಕೆ ಚೂಡಿದಾರ್, ಕುರ್ತಾ ರೀತಿಯ ಕಾಸ್ಟ್ಯೂಮ್ ಹೆಚ್ಚು ಧರಿಸುತ್ತಾರೆ. 'ವಿಶ್ವರೂಪಂ' ಚಿತ್ರದಲ್ಲಿ ಕ್ಲಾಸಿಕಲ್ ಡ್ಯಾನ್ಸ್ ಕಲಿಸುವಾಗ ಕಮಲ್ ಎಕ್ಸ್‌ಪ್ರೇಶನ್ ಬಹುತೇಕ ಟ್ರಾನ್ಸ್‌ಜೆಂಡರ್ ರೀತಿ ಇರುತ್ತದೆ. ಆದ್ದರಿಂದ ಅವರು ಯಾವಾಗಲೂ ಬಿಳಿ ಬಣ್ಣದ ಡ್ರೆಸ್ ಧರಿಸುತ್ತಾರೆ, ರೀಲ್ ಲೈಫ್‌ನಲ್ಲಿ ಮಾತ್ರವಲ್ಲ ರಿಯಲ್ ಲೈಫ್‌ನಲ್ಲೂ ಇಂತಹ ಬಟ್ಟೆ ಧರಿಸುತ್ತಾರೆ ಎಂದು ಸುಚಿತ್ರಾ ಕಾಮೆಂಟ್ ಮಾಡಿದ್ದರು.

ಸುಚಿತ್ರಾ ತಮಿಳು ಚಿತ್ರರಂಗದಲ್ಲಿ ಗಾಯಕಿಯಾಗಿ ಗುರ್ತಿಸಿಕೊಂಡಿದ್ದಾರೆ. ಇನ್ನು ಸ್ಟ್ಯಾಂಡಪ್ ಕಾಮಿಡಿಯನ್, ನಟ ಕಾರ್ತಿಕ್ ಕುಮಾರ್ ಅವರನ್ನು ಹಿಂದೆ ಮದುವೆ ಆಗಿದ್ದರು. ಏಳೆಂಟು ವರ್ಷಗಳ ಹಿಂದೆ ಸುಚೀ ಲೀಕ್ಸ್ ಹೆಸರಿನಲ್ಲಿ ತಮಿಳು, ತೆಲುಗು ಕಲಾವಿದರ ಖಾಸಗಿ ಫೋಟೊ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸುಚಿತ್ರಾ ಟ್ವಿಟರ್ ಖಾತೆಯಿಂದಲೇ ಎಲ್ಲವೂ ಲೀಕ್ ಆಗಿತ್ತು ಎಂದು ವರದಿಯಾಗಿತ್ತು.

Singer Suchitra Makes shocking aligeations against ShahRukh Khan Karan johar and Kamal haasan

ನಟ-ನಟಿಯರು ಬಹಳ ಆತ್ಮೀಯವಾಗಿರುವ ಇಂತಹ ಫೋಟೊ, ವೀಡಿಯೋಗಳು ಸುಚೀ ಲೀಕ್ಸ್‌ ಹೆಸರಿನಲ್ಲಿ ಸದ್ದು ಮಾಡಿತ್ತು. ಆದರೆ ಅದೆಲ್ಲಾ ನಾನು ಮಾಡಿದ್ದಲ್ಲ. ನನ್ನ ಟ್ವಿಟ್ಟರ್ ಖಾತೆ ಬಳಸಿ ನನ್ನ ಮಾಜಿ ಪತಿ ಕಾರ್ತಿಕ್ ಹಾಗೂ ಆತನ ಸ್ನೇಹಿತರು ಮಾಡಿದ್ದು. ಆ ಗುಂಪಿನಲ್ಲಿ ನಟ ಧನುಷ್, ನಟಿ ತ್ರಿಶಾ ಸೇರಿದಂತೆ ಹಲವು ಇದ್ದರು ಎಂದು ಸುಚಿತ್ರಾ ಆರೋಪಿಸಿದ್ದಾರೆ.

ಇನ್ನು ಧನುಷ್ ಹಾಗೂ ಐಶ್ವರ್ಯ ಡಿವೋರ್ಸ್ ಬಗ್ಗೆಯೂ ಸುಚಿತ್ರಾ ಪ್ರತಿಕ್ರಿಯಿಸಿದ್ದಾರೆ. ಇಬ್ಬರೂ ಬೇರೆ ಬೇರೆಯವರೊಟ್ಟಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಹಾಗಾಗಿ ಇಬ್ಬರಿಗೂ ಮದುವೆ ಜೀವನ ಸಾಕಾಗಿದೆ. ಒಬ್ಬರಿಗೊಬ್ಬರು ಮೋಸ ಮಾಡುತ್ತಾ ಇರುವ ಬದಲು ದೂರಾಗೋಣ ಎಂದು ನಿರ್ಧರಿಸಿದ್ದಾರೆ. ತಮ್ಮ ಮಕ್ಕಳಿಗೆ ಐಶ್ವರ್ಯ ಒಳ್ಳೆ ತಾಯಿ ಆಗಲಿಲ್ಲ. ಧನುಷ್ ಮಾತ್ರ ಒಳ್ಳೆ ತಂದೆ ಎನಿಸಿಕೊಂಡಿದ್ದಾರೆ ಎಂದು ಇತ್ತೀಚೆಗೆ ಸುಚಿತ್ರಾ ಆರೋಪಿಸಿದ್ದರು.

More from Filmibeat

English summary
Suchitra shocking comments over ShahRukh Khan and Karan johar;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X