'ಜನ ನಾಯಗನ್' ರಿಲೀಸ್ ಆಗಲ್ಲ.. 'ಪರಾಶಕ್ತಿ'ನೂ ಆಗಲ್ವಾ? ಇದು ಪೊಲಿಟಿಕಲ್ ಗೇಮ್ ಇರಬಹುದಾ?

ಸಂಕ್ರಾಂತಿಗೆ ತಮಿಳು ಚಿತ್ರರಂಗದಿಂದ ಎರಡು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಒಂದ್ಕಡೆ ದಳಪತಿ ವಿಜಯ್ ನಟನೆಯ 'ಜನ ನಾಯಗನ್'. ಇನ್ನೊಂದು ಕಡೆ ಶಿವಕಾರ್ತಿಕೇಯನ್ ನಟನೆಯ 'ಪರಾಶಕ್ತಿ'. ಈ ಎರಡೂ ಸಿನಿಮಾಗಳೂ ಒಂದು ದಿನದ ಅಂತರದಲ್ಲಿ ರಿಲೀಸ್ ಆಗಬೇಕಿತ್ತು. ಆದರೆ, ವಿಜಯ್ ಸಿನಿಮಾ ಸೆನ್ಸಾರ್ ಸಮಸ್ಯೆಯಿಂದ ಕೋರ್ಟ್ ಮೆಟ್ಟಿಲೇರಿದೆ. ಅದು ಜನವರಿ 9ಕ್ಕೆ ರಿಲೀಸ್ ಆಗೋದು ಅನುಮಾನ. ಇನ್ನೊಂದು ಕಡೆ ಶಿವಕಾರ್ತಿಕೇಯನ್ ನಟನೆಯ 'ಪರಾಶಕ್ತಿ' ಕೂಡ ಸೆನ್ಸಾರ್ ಅಂಗಳದಲ್ಲಿಯೇ ಇದೆ.

ಸದ್ಯ ಎರಡೂ ಸಿನಿಮಾಗಳಿಗೆ ಇನ್ನೂ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿಲ್ಲ. ಒಂದ್ಕಡೆ 'ಜನ ನಾಯಗನ್' ಸಮಸ್ಯೆಯಾದರೆ, ಇನ್ನೊಂದು ಕಡೆ 'ಪರಾಶಕ್ತಿ' ಬಿಡುಗಡೆನೂ ಮುಂದಕ್ಕೆ ಹೋಗುತ್ತಾ ಅನ್ನೋ ಆತಂಕದಲ್ಲಿ ಅವರ ಅಭಿಮಾನಿಗಳು ಇದ್ದಾರೆ. ಆದರೆ, ಎರಡು ಸಿನಿಮಾಗಳ ಈ ಸೆನ್ಸಾರ್ ಸಮಸ್ಯೆಯಲ್ಲಿ ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ ಮುಖಂಡರ ಕೈವಾಡವಿದೆಯೇ? ಇಂತಹದ್ದೊಂದು ಪ್ರಶ್ನೆ ಹುಟ್ಟಿಕೊಂಡಿತ್ತು.

Sivakarthikeyan Parasakthi film censor clearance delay raises question on january 10 release

ಇನ್ನು ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್ ಅವರ ಪುತ್ರ ಉದಯನಿಧಿ ಸ್ಟ್ಯಾಲಿನ್ ಅವರ ರೆಡ್‌ ಗೈಂಟ್ ಮೂವೀಸ್ 'ಪರಾಶಕ್ತಿ'ಯನ್ನು ವಿತರಣೆ ಮಾಡುತ್ತಿದೆ. ಹಾಗೆ ನೋಡಿದರೆ, ಇಷ್ಟೊತ್ತಿಗಾಗಲೇ 'ಪರಾಶಕ್ತಿ'ಗೂ ಸೆನ್ಸಾರ್ ಸರ್ಟಿಫಿಕೇಟ್ ಸಿಗಬೇಕಿತ್ತು. ಆದರೆ, ಇನ್ನೂ ಸಿಗದೇ ಇರೋದು ಶಿವಕಾರ್ತಿಕೇಯನ್ ಫ್ಯಾನ್ಸ್‌ಗಳಲ್ಲಿ ಆತಂಕ ಹುಟ್ಟಿಕೊಂಡಿದೆ. ಅಷ್ಟಕ್ಕೂ 'ಪರಾಶಕ್ತಿ' ಪೋಸ್ಟ್‌ಪೋನ್‌ ಆಗುತ್ತಾ? ಅಂದುಕೊಂಡ ಡೇಟ್‌ಗೆ ರಿಲೀಸ್ ಆಗುತ್ತಾ?

ತಮಿಳುನಾಡಿನಲ್ಲಿ ಪೊಂಗಲ್ ಬಹುದೊಡ್ಡ ಹಬ್ಬ. ಈ ಹಬ್ಬದ ಸಂಭ್ರಮದಲ್ಲಿರುವ ತಮಿಳರು ಕುಟುಂಬ ಸಮೇತ ಸಿನಿಮಾಗಳನ್ನು ನೋಡುತ್ತಾರೆ. ಈ ಎರಡು ಸಿನಿಮಾಗಳು ಅದ್ಧೂರಿಯಾಗಿ ಬಿಡುಗಡೆಗೆ ಸಜ್ಜಾಗಿದ್ದವು. ಆದರೆ, ಎರಡೂ ಸಿನಿಮಾಗಳಿಗೂ ಸೆನ್ಸಾರ್ ಸಮಸ್ಯೆ ಎದುರಾಗಿದೆ. ಇದು ಶಿವಕಾರ್ತಿಕೇಯನ್ ನಟನೆಯ 25ನೇ ಸಿನಿಮಾ. ಜನವರಿ 10ರಂದು ಅದ್ಧೂರಿಯಾಗಿ ರಿಲೀಸ್ ಅಂತ ಅನೌನ್ಸ್ ಮಾಡಿದೆ. ಸುಧಾ ಕೊಂಗರಾ ನಿರ್ದೇಶನದ ಈ ಚಿತ್ರಕ್ಕೆ ಪ್ರಖ್ಯಾತ ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. ರವಿ ಮೋಹನ್, ಅಥರ್ವಾ, ಶ್ರೀಲೀಲಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

'ಪರಾಶಕ್ತಿ' ಸೆನ್ಸಾರ್ ಮಂಡಳಿ ಸದಸ್ಯರ ನಿದ್ದೆ ಕೆಡಿಸಿರುವುದಕ್ಕೆ ಕಾರಣ ಸಿನಿಮಾದ ಕಥೆ. ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ವಿರುದ್ಧ ನಡೆದ ಬೃಹತ್ ಪ್ರತಿಭಟನೆಯನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಈ ಹಾಗಾಗಿ ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. 'ಅಮರನ್'ಗಿಂತಲೂ ಹೆಚ್ಚಿನ ಯಶಸ್ಸನ್ನು 'ಪರಶಕ್ತಿ' ತಂದುಕೊಡುತ್ತೆ ಎಂದು ಶಿವಕಾರ್ತಿಕೇಯನ್ ಭರವಸೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ.

ಆದರೆ, 'ಪರಶಕ್ತಿ' ಸಿನಿಮಾ ಕೂಡ ಸೆನ್ಸಾರ್ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಹಿಂದೆ 'ಪರಾಶಕ್ತಿ'ಗೆ ಸೆನ್ಸಾರ್ ಸಮಸ್ಯೆ ಎದುರಾಗಿದ್ದು, U/A ಪ್ರಮಾಣಪತ್ರ ನೀಡಲಾಗಿದೆ ಎಂಬ ಸುದ್ದಿಯಿತ್ತು. ಇದರಿಂದ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿತ್ತು. ಆದರೆ, ಸೆನ್ಸಾರ್ ಅಧಿಕಾರಿಗಳು ಈ ಸಿನಿಮಾಗೂ ಇನ್ನೂ ಸೆನ್ಸಾರ್ ಪತ್ರವನ್ನು ನೀಡಿಲ್ಲ. ಕೆಲವು ತಿದ್ದು ಪಡಿಗಳನ್ನು ಮಾಡಿಕೊಂಡು ಮರುಪರಿಶೀಲನಾ ಸಮಿತಿಗೆ ಮತ್ತೆ ಸಲ್ಲಿಸಿದೆ. ಸಮಿತಿಯಿಂದಲೂ ಪ್ರಮಾಣಪತ್ರ ಇನ್ನೂ ಬಂದಿಲ್ಲ.

Sivakarthikeyan Parasakthi film censor clearance delay raises question on january 10 release

ಕೆಲವು ಮೂಲಗಳ ಪ್ರಕಾರ 'ಪರಾಶಕ್ತಿ' ಸಿನಿಮಾದ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ. ಇಂದು ಸಂಜೆಯೊಳಗೆ ಸಿನಿಮಾತಂಡಕ್ಕೆ ಪ್ರಮಾಣ ಪತ್ರ ಸಿಗಲಿದೆ. 'ಜನ ನಾಯಗನ್' ಸಮಸ್ಯೆ ಆಗಿದ್ದರಿಂದ 'ಪರಾಶಕ್ತಿ' ಸೆನ್ಸಾರ್ ಸರ್ಟಿಫಿಕೇಟ್ ಕೊಟ್ಟರೆ, ರಾಜಕೀಯ ರೂಪ ಪಡೆದುಕೊಳ್ಳುತ್ತೆ ಎನ್ನುವ ಕಾರಣಕ್ಕೆ ತಡ ಮಾಡಲಾಗಿದೆ ಎಂಬ ಮಾತುಗಳು ಕೂಡ ಹರಿದಾಡುತ್ತಿವೆ.

ಒಂದು ವೇಳೆ ಈ ಎರಡೂ ಸಿನಿಮಾಗಳಿಗೂ ಸೆನ್ಸಾರ್ ಸರ್ಟಿಫಿಕೇಟ್ ಸಿಗದೇ ಹೋದರೆ, ತಮಿಳು ಚಿತ್ರರಂಗಕ್ಕೆ ದೊಡ್ಡ ನಷ್ಟ ಆಗೋದು ಗ್ಯಾರಂಟಿ. ಆದರೆ, 'ಪರಾಶಕ್ತಿ' ಸಿನಿಮಾ ಪ್ರದರ್ಶನಕ್ಕೆ ಸಜ್ಜಾಗಿರುವ ಹಲವು ಚಿತ್ರಮಂದಿರಗಳು ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಿ ಟಿಕೆಟ್ ವಿತರಣೆ ಮಾಡುತ್ತಿವೆ. ಹೀಗಾಗಿ 'ಪರಾಶಕ್ತಿ' ಜನವರಿ 10ರಂದು ರಿಲೀಸ್ ಆಗೋದು ಪಕ್ಕಾ ಅನ್ನೋ ಮಾತು ಕೇಳಿ ಬರುತ್ತಿದೆ.

More from Filmibeat

English summary
Sivakarthikeyan Parasakthi film censor clearance delay raises question on january 10 release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X