ಶಿವಕಾರ್ತಿಕೇಯನ್ ಸಿನಿಮಾಗೆ 4500+ VFX: ಭಾರತದ ಮೊದಲ ಲೈವ್ ಆಕ್ಷನ್ ಸಿನಿಮಾ ಅಯಲಾನ್'
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಳು ನಡೆಯುತ್ತಿವೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗ ಹೊಸ ಬಗೆಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿವೆ. ಸದ್ಯಕ್ಕೀಗ ತಮಿಳಿನಲ್ಲಿ ಏಲಿಯನ್ಸ್ ಕುರಿತಾದ ಸಿನಿಮಾವೊಂದು ನಿರ್ಮಾಣ ಆಗುತ್ತಿದೆ. ಅದುವೇ 'ಅಯಲಾನ್'.
ತಮಿಳಿನ ಸ್ಟಾರ್ ನಟ ಶಿವಕಾರ್ತಿಕೇಯನ್ 'ಅಯಲಾನ್' ಸಿನಿಮಾದ ಹೀರೊ. ಅತೀ ಹೆಚ್ಚು ವಿಜ್ಯೂವಲ್ ಎಫೆಕ್ಟ್ಸ್ ಬಳಸಿ ಈ ಸಿನಿಮಾವನ್ನ ನಿರ್ಮಾಣ ಮಾಡಲಾಗುತ್ತಿದ್ದು, ನಿಧಾನವಾಗಿ ತನ್ನತ್ತ ಗಮನ ಸೆಳೆಯಲು ಮುಂದಾಗಿದೆ.

'ಅಯಲಾನ್' ಸಿನಿಮಾವನ್ನು ಆರ್.ರವಿಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷ ಅಂದ್ರೆ, ಈ ಸಿನಿಮಾ ಮೂಲಕ ರಾಕುಲ್ ಪ್ರೀತ್ ಸಿಂಗ್ ನಾಲ್ಕು ವರ್ಷಗಳ ಬಳಿಕ ತಮಿಳು ಸಿನಿಮಾಗೆ ರೀ ಎಂಟ್ರಿ ಕೊಟ್ಟಿದ್ದಾರೆ.
ತಮಿಳಿನ ಸ್ಟಾರ್ ನಟ ಶಿವಕಾರ್ತಿಕೇಯನ್ ಚಿತ್ರರಂಗದಲ್ಲಿ ಬಹಳ ಶ್ರಮಪಟ್ಟು ನೆಲೆಯೂರಿದ್ದಾರೆ. ತಮ್ಮ ಅಭಿಮಾನಿಗಳಿಗೆ ಸದಾ ವಿಶಿಷ್ಟ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ. ರಿಯಾಲಿಟಿ ಶೋಗಳಿಂದ ಆರಂಭವಾದ ಇವರ ಜರ್ನಿ ಹಾಸ್ಯ ನಟನಾಗಿ, ಬರಹಗಾರನಾಗಿ ,ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ.
ಶಿವಕಾರ್ತಿಕೇಯನ್ ಈಗ ಮಾಸ್ ಹೀರೊ ಅವತಾರದಲ್ಲಿ ತಮಿಳು ಸಿನಿಪ್ರಿಯರನ್ನು ರಂಜಿಸುತ್ತಿದ್ದಾರೆ. ಇದರ ಇನ್ನೊಂದು ಪ್ರಯತ್ನವೇ 'ಅಯಲಾನ್'. ಇದು ಶಿವಕಾರ್ತಿಕೇಯನ್ ನಟಿಸುತ್ತಿರುವ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಅಲ್ಲದೆ ಇದು ಏಲಿಯನ್‌ಗೆ ಸಂಬಂಧಿಸಿದ ಸಿನಿಮಾ ಆಗಿರೋದ್ರಿಂದ ದಕ್ಷಿಣ ಭಾರತದಲ್ಲಿ ಕುತೂಹಲ ಹೆಚ್ಚಾಗಿದೆ.
ದಕ್ಷಿಣ ಭಾರತದಲ್ಲಿ ಇಂತಹ ಸಿನಿಮಾಗಳು ಬರೋದು ತೀರ ವಿರಳ. ವೈಜ್ಞಾನಿಕ ಹಿನ್ನೆಲೆಯುಳ್ಳ ಸಿನಿಮಾಗಳು ದಕ್ಷಿಣ ಭಾರತದಲ್ಲಿ ಸೆಟ್ಟೇರೋದು ತೀರಾ ವಿರಳ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಏಲಿಯನ್ಸ್ ಕಥೆಯನ್ನು ಹೊತ್ತಿ ನಿರ್ಮಾಣ ಆಗಿರುವ ಮೊದಲ ಸಿನಿಮಾ ಎನ್ನಲಾಗಿದೆ.
ಆರ್ ರವಿಕುಮಾರ್ ಕಥೆ ಬರೆದು ನಿರ್ದೇಶಿಸುತ್ತಿರುವ 'ಅಯಲಾನ್' ಸಿನಿಮಾ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಬೆಳಕಿನ ಹಬ್ಬ ದೀಪಾವಳಿಗೆ ವಿಶ್ವಾದ್ಯಂತ ಚಿತ್ರ ರಿಲೀಸ್ ಆಗಲಿದೆ. ಮತ್ತೊಂದು ವಿಶೇಷ ಅಂದ್ರೆ, ಈ ಸಿನಿಮಾಗೆ ಅತೀ ಹೆಚ್ಚು ವಿಜ್ಯೂವಲ್ ಎಫೆಕ್ಟ್ಸ್ ಅನ್ನು ಬಳಸಲಾಗುತ್ತಿದೆ.
ತಾಂತ್ರಿಕವಾಗಿ ಅದ್ಭುತ ಸಿನಿಮಾ ನಿರ್ಮಾಣ ಮಾಡೋಕೆ ಚಿತ್ರತಂಡ ಪಣ ತೊಟ್ಟಿದೆ. ಹೀಗಾಗಿ ಭಾರತೀಯ ಚಿತ್ರರಂಗದಲ್ಲಿ 4500+ VFX ಶಾಟ್‌ಗಳನ್ನು ಹೊಂದಿರುವ ಪೂರ್ಣ ಪ್ರಮಾಣದ ಮೊದಲ ಲೈವ್-ಆಕ್ಷನ್ ಸಿನಿಮಾ ಆಗಿದೆ. ಫ್ಯಾಂಟಮ್ FX ಸಂಸ್ಥೆ ಈ ಸಿನಿಮಾಗೆ ವಿಎಫ್‌ಎಕ್ಸ್ ಜವಾಬ್ದಾರಿ ಹೊತ್ತುಕೊಂಡಿದೆ.
ಶಿವಕಾರ್ತಿಕೇಯನ್ ಜೊತೆ ಗಿಲ್ಲಿ ಬ್ಯೂಟಿ ರಕುಲ್ ಪ್ರೀತ್ ಸಿಂಗ್ ಕರುಣಾಕರನ್, ಯೋಗಿ ಬಾಬು, ಶರದ್ ಕೇಳ್ಕರ್, ಇಶಾ ಕೊಪ್ಪಿಕರ್, ಬಾನುಪ್ರಿಯಾ, ಬಾಲಸರವಣನ್ ಸೇರಿದಂತೆ ಹಲವು ತಾರೆಯರು ನಟಿಸಿದ್ದು, ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಟ್ಯೂನ್ ಹಾಕುತ್ತಿದ್ದಾರೆ.


Click it and Unblock the Notifications











