ಸಿಕ್ಸ್ ಪ್ಯಾಕ್‌ನಲ್ಲಿ ಮೈಮಾಟ ಪ್ರದರ್ಶಿಸಿದ ಬೆಂಗಳೂರು ಮೂಲದ ನಟಿ
ಸಿಕ್ಸ್ ಪ್ಯಾಕ್ ಎನ್ನುವುದು ಜಿಮ್‌ನಲ್ಲಿ ಗಂಟೆಗಟ್ಟಲೆ ಕಸರತ್ತು ಮಾಡಿ ಮೈಹುರಿಗಟ್ಟಿಸಿಕೊಳ್ಳುವ ಪುರುಷರಿಗಷ್ಟೇ ಅಲ್ಲ, ಮಹಿಳೆಯರೂ ತಮ್ಮ ಆಬ್ಸ್‌ಅನ್ನು ಪುರುಷರಂತೆ ಪ್ರದರ್ಶಿಸಬಲ್ಲರು ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಆದರೆ ಚಿತ್ರನಟಿಯರು ಈ ಸಾಹಸಕ್ಕೆ ಕೈಹಾಕುವುದು ತೀರಾ ಕಡಿಮೆ.
Recommended Video
ಬಾಲಿವುಡ್‌ನ ಅನೇಕ ನಟಿಯರು ಸಿಕ್ಸ್ ಆಬ್ಸ್‌ನಲ್ಲಿ ಮಿಂಚುವ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದರು. ನಾಯಕ ನಟರಂತೆಯೇ ನಟಿಯರೂ ತಾವೇನೂ ಕಮ್ಮಿಯಿಲ್ಲ ಎಂಬಂತೆ ಸಿಕ್ಸ್ ಪ್ಯಾಕ್‌ನಲ್ಲಿ ದೇಹದಾರ್ಢ್ಯ ಪ್ರದರ್ಶಿಸಿದ್ದರು. ಅವರ ಸಾಲಿಗೆ ಕನ್ನಡ ಮೂಲದ ನಟಿ ಪೂಜಾ ರಾಮಚಂದ್ರನ್ ಸೇರಿದ್ದಾರೆ. ಪೂಜಾ ಅವರ ಸಿಕ್ಸ್ ಪ್ಯಾಕ್ ಕಂಡು ದಕ್ಷಿಣ ಭಾರತದ ಅನೇಕ ನಟ, ನಟಿಯರು ಅಚ್ಚರಿಪಟ್ಟುಕೊಂಡಿದ್ದಾರೆ. ಏಕೆಂದರೆ ದಕ್ಷಿಣದ ನಟಿಯರು ತಮ್ಮ ಬಳುಕುವ ದೇಹದ ಫಿಟ್‌ನೆಸ್ ಕಾಪಾಡಿಕೊಂಡರೂ ಸಿಕ್ಸ್‌ಪ್ಯಾಕ್‌ನ ಕಸರತ್ತು ಮಾಡಿರುವುದು ಕಡಿಮೆ.

ಸಿಕ್ಸ್ ಆಬ್ಸ್ ದೇಹ
ಸಮುದ್ರ ತೀರದಲ್ಲಿ ಸಾಗುವಾಗ ಟೂ ಪೀಸ್ ಉಡುಗೆಯಲ್ಲಿರುವ ಚಿತ್ರವನ್ನು ಪೂಜಾ ರಾಮಚಂದ್ರನ್ ಹಂಚಿಕೊಂಡಿದ್ದಾರೆ. ಬಳಿಕ ಬೀಚ್ ವರ್ಕೌಟ್‌ನ ವಿಡಿಯೋವನ್ನೂ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ಅದರಲ್ಲಿ ಅವರ ಸಿಕ್ಸ್ ಆಬ್ಸ್ ಎಲ್ಲರನ್ನೂ ವಿಸ್ಮಯಗೊಳಿಸಿದೆ.
ಸಮುದ್ರವೇ ಹೆಚ್ಚು ಇಷ್ಟ
'ಅಲೆಗಳೊಂದಿಗೆ ನೃತ್ಯ, ಸಮುದ್ರದೊಂದಿಗೆ ಚಲನೆ. ನಿಮ್ಮ ಆತ್ಮವನ್ನು ನೀರಿನ ಲಯ ಮುಕ್ತಿಗೊಳಿಸಲಿ' ಎಂಬ ಸಾಲುಗಳನ್ನು ಬರೆದುಕೊಂಡಿರುವ ಪೂಜಾ, ತಮಗೆ ಪ್ರವಾಸಗಳಿಗಿಂತಲೂ ಸಮುದ್ರದ ಆಪ್ತತೆಯೇ ಇಷ್ಟ ಎಂದಿದ್ದಾರೆ. ಅಂದಹಾಗೆ ಅವರು ಈ ಫೋಟೊವನ್ನು ತೆಗೆಸಿಕೊಂಡಿರುವುದು ಮಾಲ್ಡೀವ್ಸ್‌ನಲ್ಲಿ.

ಸಿಕ್ಸ್ ಪ್ಯಾಕ್‌ನ ಮೊದಲ ತಮಿಳು ನಟಿ
ಪೂಜಾ ಸಿಕ್ಸ್ ಪ್ಯಾಕ್ ಅನ್ನು ತಾಪ್ಸಿ ಪನ್ನು ಶ್ಲಾಘಿಸಿದ್ದಾರೆ. 'ನಿಮ್ಮ ಬಗ್ಗೆ ತುಂಬಾ ಹೆಮ್ಮೆಯಾಗುತ್ತಿದೆ. ಆಬ್ಸ್‌ಗಾಗಿ ಸಾಕಷ್ಟು ಕೆಲಸ ಮಾಡಿದ್ದೀರಿ' ಎಂದು ತಾಪ್ಸಿ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ಕನಿಹಾ, 'ನೀನು ಅದ್ಭುತವಾಗಿ ಕಾಣಿಸುತ್ತಿದ್ದೀಯಾ ಬೇಬ್' ಎಂದು ಹೊಗಳಿದ್ದಾರೆ. ತಮಿಳು ಚಿತ್ರರಂಗವೂ ಪೂಜಾ ಅವರ ಶ್ರಮವನ್ನು ಕೊಂಡಾಡಿದೆ. ಸಿಕ್ಸ್ ಪ್ಯಾಕ್ ಬರಿಸಿಕೊಂಡ ತಮಿಳಿನ ಮೊದಲ ನಟಿ ಎಂದು ಅವರನ್ನು ಹೊಗಳಿದೆ.

ಯಾರು ಈ ಪೂಜಾ ರಾಮಚಂದ್ರನ್?
ಪೂರಾ ರಾಮಚಂದ್ರನ್ ಮೂಲತಃ ಕೇರಳದವರು. ಆದರೆ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡ ಅವರು, ಮಲಯಾಳಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ನಂತರ ತೆಲುಗು ಹಾಗೂ ತಮಿಳಿನಲ್ಲಿಯೂ ನಟಿಸಿದ್ದಾರೆ. ತೆಲುಗಿನಲ್ಲಿ ಬಿಗ್ ಬಾಸ್ 2ನೇ ಸೀಸನ್‌ನ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಕಾಣಿಸಿಕೊಂಡರು. ಎಸ್ಎಸ್ ಮ್ಯೂಸಿಕ್‌ನಲ್ಲಿ ವಿಜೆಯಾಗಿಯೂ ಹೆಸರು ಮಾಡಿದ್ದರು.

ಎರಡನೆಯ ಮದುವೆಯಾಗಿದ್ದ ಪೂಜಾ-ಜಾನ್
ಕಳೆದ ವರ್ಷವಷ್ಟೇ ಪೂಜಾ ರಾಮಚಂದ್ರನ್ ಎರಡನೆಯ ಮದುವೆಯಾಗಿದ್ದರು. ಕೆಜಿಎಫ್, ಅಣ್ಣಾಬಾಂಡ್, ಪೃಥ್ವಿ, ಶೌರ್ಯ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದ ಮಲಯಾಳಿ ನಟ ಜಾನ್ ಕೊಕೇನ್ ಅವರೊಂದಿಗೆ ಏಪ್ರಿಲ್‌ನಲ್ಲಿ ಹಸೆಮಣೆ ಏರಿದ್ದರು. ಇಬ್ಬರೂ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದು, ಇಬ್ಬರಿಗೂ ಇದು ಎರಡನೆಯ ಮದುವೆ. ಜಾನ್ ಕೊಕೇನ್ ಮೊದಲು ನಟಿ ಮೀರಾ ವಾಸುದೇವನ್ ಅವರನ್ನು ಮದುವೆಯಾಗಿದ್ದರೆ, ಪೂಜಾ ಅವರು 2010ರಲ್ಲಿ ಎಸ್ಎಸ್ ಮ್ಯೂಸಿಕ್‌ನ ವಿಜೆ ಕ್ರೆಗ್ ಅವರನ್ನು ಮದುವೆಯಾಗಿ 2017ರಲ್ಲಿ ವಿಚ್ಚೇದನ ಪಡೆದುಕೊಂಡಿದ್ದರು.


Click it and Unblock the Notifications











