ಬೆತ್ತಲೆ ವೀಡಿಯೋ ರಿಲೀಸ್, ರಹಸ್ಯ ಮದುವೆ, ಆತ ಬೆದರಿಕೆ ಹಾಕಿದ್ದನೇ? ವಿಜಯಲಕ್ಷ್ಮಿ ಬಿಚ್ಚಿಟ್ಟ ಸತ್ಯವೇನು?
ಸೂರ್ಯವಂಶ, 'ನಾಗಮಂಡಲ'ದಂತಹ ಸಿನಿಮಾಗಳಲ್ಲಿ ನಟಿಸಿದ್ದ ವಿಜಯಲಕ್ಷ್ಮಿಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಹೊಸದೇನು ಅಲ್ಲ. ಈಗ ಮತ್ತೊಂದು ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದು ಅದರಲ್ಲಿ ಮತ್ತೆ ತಮಿಳುನಾಡಿನ ನಾಮ್ ತಮಿಳರ್ ಪಕ್ಷದ ಸೀಮನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ವಿಡಿಯೋ ಈಗ ಮತ್ತೆ ಸಂಚಲನ ಸೃಷ್ಟಿಸಿದೆ.
ಈ ಸಂದರ್ಶನದಲ್ಲಿ ವಿಜಯಲಕ್ಷ್ಮಿ ಸೀಮನ್ ವಿರುದ್ಧ ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಶೋಷಣೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ ಏಳು ಬಾರಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯ ಮಾಡಿದ್ದರು. ತನ್ನ ನಗ್ನ ವಿಡಿಯೋವನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಸಂದರ್ಶನದ ವೇಳೆ ಕಣ್ಣೀರು ಹಾಕಿದ್ದಾರೆ.

ಹಾಗಂತ ಸೀಮನ್ ವಿರುದ್ಧ ಆರೋಪ ಮಾಡುತ್ತಿರುವುದು ಇದೇ ಮೊದಲನೇನು ಅಲ್ಲ. ಈ ಹಿಂದೆ ಕೂಡ ವಿಜಯಲಕ್ಷ್ಮಿ ವಿಡಿಯೋ ಒಂದನ್ನು ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಹಾಗೇ ಪೊಲೀಸ್ ಆಯುಕ್ತರಿಗೆ ಸೀಮನ್ ವಿರುದ್ಧ ದೂರನ್ನು ನೀಡಿದ್ದರು. ಈಗ ನೀಡಿದ ಸಂದರ್ಶನದಲ್ಲಿ ವಿಜಯಲಕ್ಷ್ಮಿ ಮತ್ತೆ ಸೀಮನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಅವರಿಬ್ಬರ ಸಂಬಂಧವನ್ನು ರಿವೀಲ್ ಮಾಡಿದ್ದಾರೆ. ಅದೇನು ತಿಳಿಯುವುದಕ್ಕೆ ಮುಂದೆ ಓದಿ.
ಸೀಮನ್ ಪರಿಚಯ
ವಿಜಯಲಕ್ಷ್ಮಿ ಕನ್ನಡದ ಜೊತೆ ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 'ಐ ಆಮ್ ಹ್ಯಾಪಿ' ಎನ್ನುವ ಸಿನಿಮಾದಲ್ಲಿ ವಿಜಯಲಕ್ಷ್ಮಿ ಹಾಗೂ ಸೀಮನ್ ಒಟ್ಟಿಗೆ ನಟಿಸಿದ್ದರು. ಈ ವೇಳೆ ಸೀಮನ್ ಪರಿಚಯ ಆಯಿತು. ಆರಂಭದಲ್ಲಿ ಇಬ್ಬರಿಗೂ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಚಿತ್ರೀಕರಣವಿದ್ದಾಗ ವಿಜಯಲಕ್ಷ್ಮಿ ಮುರುಗನ್ ದೇವರ ದರ್ಶನ ಪಡೆಯುತ್ತಿದ್ದರು. ಆದರೆ, ಸೀಮನ್ ನಟಿ ವಿಜಯಲಕ್ಷ್ಮಿಯನ್ನು ದೇವಸ್ಥಾನಕ್ಕೆ ಹೋಗಲು ಬಿಡುವುದಿಲ್ಲ ಎಂದು ಹೇಳಿದ್ದರಂತೆ. ದೇವರ ದರ್ಶನ ಆಮೇಲೆ ಮಾಡಿ, ಮೊದಲು ಶೂಟಿಂಗ್ ಮಾಡುತ್ತಿರುವ ಜನರೊಂದಿಗೆ ಬೆರೆಯಿರಿ ಎಂದಿದ್ದರಂತೆ. ಆ ವೇಳೆ ಇಬ್ಬರಿಗೂ ಸಂಘರ್ಷ ಆಗಿತ್ತು. ಹೀಗಾಗಿ ಸೀಮನ್ ಸೆಟ್ಟಿಗೆ ಬಂದರೆ ತಾನು ಅಲ್ಲಿ ಇರುತ್ತಿರಲಿಲ್ಲ ಎಂದಿದ್ದಾರೆ.

ಸಂಬಂಧ ಬೆಳೆದಿದ್ದೇಗೆ?
ಇದೇ ವೇಳೆ ವಿಜಯಲಕ್ಷ್ಮಿ ಸಹೋದರಿಯ ಕುಟುಂಬದಲ್ಲಿ ಸಮಸ್ಯೆ ಎದುರಾಗಿತ್ತು. ಇವರ ಸಹೋದರಿಯ ಪತಿ ಚಿತ್ರಹಿಂಸೆ ನೀಡುತ್ತಿದ್ದರು. ಆಕೆ ಸಂಸಾರದಲ್ಲಿ ಸಮಸ್ಯೆ ಎದುರಾದಾಗ ವಿಜಯಲಕ್ಷ್ಮಿ ಸೀಮನ್ ಅವರ ಬಳಿ ಸಹಾಯಕ್ಕಾಗಿ ಮೊರೆ ಹೋಗಿದ್ದರು. ಆ ವೇಳೆ ಸೀಮನ್ ನಟಿ ವಿಜಯಲಕ್ಷ್ಮಿಗೆ ಸಮಾಧಾನ ಮಾಡುತ್ತಿದ್ದರಂತೆ. ಅಲ್ಲದೆ ವಿಜಯಲಕ್ಷ್ಮಿ ತಾಯಿ ಶ್ರೀಲಂಕಾದ ತಮಿಳರಾಗಿದ್ದರಿಂದ ಅವರಿಗೆ ಸೀಮನ್ ತುಂಬಾನೇ ಇಷ್ಟ ಆಗಿದ್ದರು. ಈ ವೇಳೆ ಅವರು ನನಗೂ ತುಂಬಾನೇ ಹತ್ತಿರವಾದರು ಎಂದು ಹೇಳಿಕೊಂಡಿದ್ದಾರೆ.
ಮದುವೆಯಾಗಿ ಎಂದಿದ್ದ ಚೇರನ್
ಶ್ರೀಲಂಕಾದಲ್ಲಿ ಉದ್ವಿಘ್ನ ಪರಿಸ್ಥಿತಿ ಎದ್ದಿದ್ದಾಗ ಸೀಮನ್ ರಾಮೇಶ್ವರಂನಲ್ಲಿ ನಡೆದ ಸಭೆಯಲ್ಲಿ ಭಾಷಣ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸೀಮನ್ ಅವರನ್ನು ಬಂಧಿಸಿ ಮಧುರೈ ಜೈಲಿನಲ್ಲಿ ಇರಿಸಿದ್ದರು. ಆ ವೇಳೆ ಜೈಲಿನಿಂದಲೇ ವಿಜಯಲಕ್ಷ್ಮಿ ಜೊತೆ ಹಲವು ಬಾರಿ ಮಾತಾಡಿದ್ದರಂತೆ. ಆ ಬಳಿಕ ಸೀಮನ್ ಮಧುರೈನಲ್ಲಿಯೇ ಉಳಿಯುವುದ್ಕೆ ಬಯಸಿದ್ದರು. ಹೀಗಾಗಿ ತಾನು ಕೂಡ ಅವರೊಂದಿಗೆ ಉಳಿದುಕೊಂಡಿದ್ದರಂತೆ. "ಆ ವೇಳೆ ಮನೆಗೆ ಯಾರೇ ಬಂದರೂ ಒಂದು ರೂಮಿನಲ್ಲಿ ವಿಜಯಲಕ್ಷ್ಮಿಯನ್ನು ಕೂಡಿ ಹಾಕುತ್ತಿದ್ದರು. ಆಗ ಚೇರನ್ ಈ ರೀತಿ ಇರುವುದು ಸರಿಯಿಲ್ಲ. ನೀವು ಮದುವೆ ಆಗುವುದು ಉತ್ತಮ ಎಂದು ಹೇಳಿದ್ದರು" ಎಂದಿದ್ದಾರೆ.
ಕಾರಿನಲ್ಲಿ ರಹಸ್ಯ ಮದುವೆ
ಚೇರನ್ ಹೇಳಿದ ಮಾತನ್ನು ವಿಜಯಲಕ್ಷ್ಮಿ ಗಂಭೀರವಾಗಿ ಪರಿಗಣಿಸಿದ್ದರು. ಸೀಮನ್ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ್ದರಿಂದ ತಮ್ಮ ವಿವಾಹದ ಪದ್ಧತಿಯನ್ನು ಬದಲಾಯಿಸಲು ಹಿಂದೇಟು ಹಾಕಿದ್ದರಂತೆ. ಅಲ್ಲದೇ ದೇವಸ್ಥಾನದೊಳಗೆ ಬರುವುದಿಲ್ಲ ಎಂದೂ ಹೇಳಿದ್ದರಂತೆ. ಹೀಗಾಗಿ ಒಂದು ದಿನ ಸಂಜೆ ಕಾರಿನಲ್ಲೇ ಸೀಮನ್ ಜೊತೆ ತಮ್ಮ ಮದುವೆ ನಡೆದು ಹೋಯಿತು ಎಂದಿದ್ದಾರೆ. "ಆ ವೇಳೆ ತೆಗೆದ ಫೋಟೊಗಳನ್ನು ತನ್ನ ಬಳಿಯೇ ಇಟ್ಟುಕೊಂಡ. ನನಗೆ ಅವುಗಳನ್ನು ಕೊಡಲೇ ಇಲ್ಲ. ಅಂದು ಆ ಫೋಟೋಗಳನ್ನು ತೆಗೆದು ಚೇರನ್‌ಗೆ ಕಳಿಸಿದ್ದರೆ, ಇಂದು ಅವರು ನನ್ನ ಬಗ್ಗೆ ಮಾತಾಡುತ್ತಿದ್ದರು. ಹಾಗೆ ಮಾಡದೇ ಇದ್ದಿದ್ದಕ್ಕೆ ಇಂದು ನನಗೆ ಕಷ್ಟ ಎದುರಾಗಿದೆ" ಎಂದು ಹೇಳಿಕೊಂಡಿದ್ದಾರೆ.
ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ
ಸೀಮನ್ ವಿಜಯಲಕ್ಷ್ಮಿ ಜೊತೆ ಮದುವೆ ಆದ್ಮೇಲೆ ತೆನ್ಮೋಳಿ ಎಂಬುವವರಿಂದ ಸಂದೇಶ ಬಂದಿತ್ತು. ಆಕೆ ಯಾರು ಎಂದು ವಿಜಯಲಕ್ಷ್ಮಿ ವಿಚಾರಿಸಿದಾಗ ಸೀಮನ್ ಆಕೆಯೊಂದಿಗೆ ನಿಶ್ವಿತಾರ್ಥ ಮಾಡಿಕೊಂಡಿದ್ದು ಬೆಳಕಿಗೆ ಬಂದಿತ್ತು. ಆಗ ಸೀಮನ್ ಅವರಿಂದ ಬೇರೆಯಾಗಿದ್ದಾರೆ ಹೇಳಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ತೆನ್ಮೋಳಿ ಎಂಬ ಮಹಿಳೆಗೂ ಸೀಮನ್ ಮೋಸ ಮಾಡಿದ್ದಾಗಿ ಹೇಳಿದ್ದಾರೆ. ಈ ವಿಷಯ ಬಹಿರಂಗಗೊಳ್ಳುತ್ತಿದ್ದಂತೆ ತನ್ನನ್ನು ದೂರ ಮಾಡಿದರು. "ಸೀಮನ್‌ನ ಕೆಲವು ಜನರು ನನಗೆ ಕರೆ ಮಾಡಿ, ಇಲ್ಲಿ ಇರಬೇಡ. ಬೆಂಗಳೂರಿಗೆ ಹೋಗು. ನಿನ್ನ ಸಹೋದರಿಯ ಜೀವನ ಬದಲಾಗುತ್ತೆ. ಇಲ್ಲಿದ್ದರೆ ಸರಿಯಿರಲ್ಲ" ಎಂದು ಬೆದರಿಕೆ ಹಾಕಿದ್ದರು ಎಂದಿದ್ದಾರೆ.
ಅವನು ನನ್ನ ಜೊತೆ ಇರಬೇಕು
ಅವರು ಬೆದರಿಕೆ ಹಾಕಿದ್ದರಿಂದ ಪೊಲೀಸ್ ಆಯುಕ್ತರಿಗೆ ದೂರನ್ನು ನೀಡಿದ್ದೆ. ಅವರೊಂದಿಗೆ ಬದುಕು ನಡೆಸಲು ಬಯಸಿದ್ದೆ. ಆದರೆ, ಅವರು ನಾನು ಹಣ ಕೇಳಿದೆ ಎಂದು ಅಪವಾದ ಹೊರಿಸಿದರು. ನಾನು ಎಂದೂ ಅವರಿಗೆ ಹಣವನ್ನು ಕೇಳಿರಲಿಲ್ಲ. ಅಂದಿನಿಂದ ಇಲ್ಲಿಯವರೆಗೂ ಅವರು ನನ್ನನ್ನು ಯಾಕೆ ಬಿಟ್ಟು ಹೋದರು ಅನ್ನೋದು ನನಗೆ ತಿಳಿದಿಲ್ಲ. ಅವನು ಯಾವಾಗಲೂ ನನ್ನ ಜೊತೆಯೇ ಇರಬೇಕು ಅನ್ನೋದು ನನ್ನ ಆಸೆ. ನನ್ನ ತಾಯಿ ಸಾಯುವಾಗ ಮತ್ತೆ ಮದುವೆಯಾಗಿ ಸಂತೋಷದಿಂದ ಬದುಕುವಂತೆ ಹೇಳಿದ್ದರು. ಆದರೆ, ನನಗೆ ಸೀಮನ್ ಅವರನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಆದರೆ, ಅವರು ಹಣ ಹಾಗೂ ಖ್ಯಾತಿ ಸಿಕ್ಕ ಬಳಿಕ ಸಂಪೂರ್ಣವಾಗಿ ಬದಲಾದರು ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.
ಬೆತ್ತಲೆ ವಿಡಿಯೋ
ಸೀಮನ್ ತನ್ನನ್ನು ಮದುವೆ ಆಗುತ್ತೇನೆ ಎಂದು ಭರವಸೆ ನೀಡಿದ ಬಳಿಕ ದೂರನ್ನು ಹಿಂದಕ್ಕೆ ತೆಗೆದುಕೊಂಡೆ. ಆದರೆ, ಅವರು ನನ್ನನ್ನು ಮದುವೆ ಆಗಲಿಲ್ಲ. ನನಗೆ ಬೇರೆ ಬೇರೆ ಕಡೆಯಿಂದ ಬೆದರಿಕೆ ಕರೆಗಳು ಬಂದವು. ನನ್ನ ಬೆತ್ತಲೆ ವಿಡಿಯೋ ರಿಲೀಸ್ ಮಾಡುವುದಾಗಿ ಹೇಳಿದರು. ಅವರಿಗೆ ನಾನು ಏನು ಮಾಡುತ್ತೇನೋ ಎನ್ನುವ ಭಯವಿದೆ. ಹೀಗಾಗಿ ನಾನು 14 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ.
ಲೈಂಗಿಕ ಕಾರ್ಯಕರ್ತೆ ಅಂದರು
ಇಷ್ಟು ವರ್ಷಗಳಿಂದ ನಾನು ಅವರೊಂದಿಗೆ ಬದುಕುವುದಕ್ಕೆ ಹೋರಾಟ ಮಾಡುತ್ತಿದ್ದೇನೆ. ಆದರೆ, ಅವರು ನನ್ನನ್ನು ಲೈಂಗಿಕ ಕಾರ್ಯಕರ್ತೆ ಅಂತ ಕರೆದರು. ನಾನು ಲೈಂಗಿಕ ಕಾರ್ಯಕರ್ತೆ ಆಗಿದ್ದರೆ, ಅದನ್ನೇ ಮಾಡುತ್ತಿದೆ. ಸೀಮನ್‌ಗಾಗಿ ನಾನು ಇಷ್ಟು ಹೋರಾಟ ಮಾಡುತ್ತಿರಲಿಲ್ಲ. ಸೀಮನ್ ಬೇಕು ಎಂದು ಹೇಳುವುದಕ್ಕೆ ಅರ್ಥವೇ ಇರುತ್ತಿರಲಿಲ್ಲ. ಅವರು ಹೀಗೆಲ್ಲ ಮಾತಾಡಿದ್ದಕ್ಕೆ ನನಗೆ ದ್ವೇಷದ ಭಾವನೆ ಹುಟ್ಟಿಕೊಂಡಿದೆ. ನಮ್ಮಿಬ್ಬರ ಬಗ್ಗೆ ಗೊತ್ತಿರುವವರು ಸೀಮನ್ ಅನ್ನು ರಕ್ಷಿಸುವುದಕ್ಕೆ ನಿಂತಿದ್ದಾರೆ. ಎಂದು ವಿಜಯಲಕ್ಷ್ಮಿ ಸಂದರ್ಶನದಲ್ಲಿ ತಿಳಿಸಿದ್ದಾರೆ. ವಿಜಯಲಕ್ಷ್ಮಿ ಸಂದರ್ಶನ ಸದ್ಯ ತಮಿಳುನಾಡಿನಲ್ಲಿ ಮತ್ತೆ ಜೋರಾಗಿ ಸದ್ದು ಮಾಡುತ್ತಿದೆ. ಈ ಹಿಂದೆ ಕೂಡ ಸೀಮನ್ ತನ್ನನ್ನು ಮದುವೆ ಆಗಿದ್ದಾರೆಂದು ಹೇಳಿದ್ದರು. ಆ ಸಂಬಂಧ ವಿಡಿಯೋ ಮಾಡಿದ್ದರು. ಆ ವೇಳೆ ಕೂಡ ವಿಜಯಲಕ್ಷ್ಮಿ ಹೇಳಿಕೆಗಳು ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಆದ್ರೀಗ ಎರಡು ವರ್ಷಗಳ ಬಳಿಕ ಮತ್ತೆ ಅದೇ ವಿಚಾರ ಪ್ರಸ್ತಾಪಿಸಿ ಕಣ್ಣೀರು ಹಾಕಿದ್ದಾರೆ.


Click it and Unblock the Notifications











