ಅರ್ಜುನ್ ಸರ್ಜಾ ಮಗಳ ಮದುವೆ ಸಮಾರಂಭ ಶುರು: ಹಳದಿ ಶಾಸ್ತ್ರದ ಫೋಟೊ ವೈರಲ್

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮೊದಲ ಪುತ್ರಿ ಐಶ್ವರ್ಯಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ತಮಿಳು ಚಿತ್ರರಂಗದ ಹಾಸ್ಯ ನಟ ತಂಬಿ ರಾಮಯ್ಯ ಅವರ ಪುತ್ರಿ ಉಮಾಪತಿ ರಾಮಯ್ಯ ಅವರೊಂದಿಗೆ ಹಸಮಣೆ ಏರುವುದಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಈ ಮಧ್ಯೆ ಮದುವೆಗೆ ಮೂರು ದಿನಗಳು ಬಾಕಿ ಇವೆ ಅನ್ನುವಾಗಲೇ ಕಾರ್ಯಕ್ರಮಗಳು ಆರಂಭ ಆಗಿವೆ.

ಐಶ್ವರ್ಯಾ ಅರ್ಜುನ್ ಅವರ ಹಳದಿ ಕಾರ್ಯಕ್ರಮ ಜರುಗಿದ್ದು, ಆ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಸೋಮವಾರ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ. ಹೀಗಾಗಿ ಎರಡೂ ಮನೆಯಲ್ಲೂ ಸಂಭ್ರಮ ಮನೆ ಮಾಡಿದೆ. ಎರಡೂ ಕಡೆ ಶಾಸ್ತ್ರಗಳು ಆರಂಭ ಆಗಿವೆ.

South actor Arjun Sarja daughter Aishwarya haldi ceremony photo went viral

ಅರ್ಜುನ್ ಸರ್ಜಾ ತಮ್ಮ ಪುತ್ರಿ ಐಶ್ವರ್ಯಾರನ್ನು ಸಿನಿಮಾರಂಗಕ್ಕೆ ಪರಿಚಯಿಸಿದ್ದರು. ಕನ್ನಡ, ತಮಿಳು, ತೆಲುಗು ಮೂರು ಭಾಷೆಗಳಲ್ಲೂ ಪರಿಚಯ ಮಾಡಿದ್ದಾರೆ. ಆದರೆ, ಐಶ್ವರ್ಯಾ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿರಲಿಲ್ಲ. ಆದರೂ, ತಮ್ಮ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಸದ್ಯ ತಮಿಳಿನ ಯುವ ನಟನೊಂದಿಗೆ ಸಪ್ತಪದಿ ತುಳಿಯುವ ಖುಷಿಯಲ್ಲಿದ್ದಾರೆ.

ಐಶ್ವರ್ಯಾ ವಿವಾಹವಾಗುತ್ತಿರುವ ಉಮಾಪತಿ ರಾಮಯ್ಯ ತಮಿಳಿನ ಜನಪ್ರಿಯರ ಹಾಸ್ಯ ನಟ ತಂಬಿ ರಾಮಯ್ಯ ಅವರ ಪುತ್ರ. ಉಮಾಪತಿ ಕೂಡ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಯುವ ನಟನಾಗಿ ಗುರುತಿಸಿಕೊಂಡಿದ್ದಾರೆ. ರಿಯಾಲಿಟಿ ಶೋ ಮೂಲಕ ಪರಿಚಯವಾಗಿದ್ದ ಉಮಾಪತಿ ಮೇಲೆ ಐಶ್ವರ್ಯಾಗೆ ಪ್ರೀತಿ ಹುಟ್ಟಿತ್ತು. ಎರಡೂ ಮನೆಯವರು ಒಪ್ಪಿದ ಬಳಿಕ ಕಳೆದ ನವೆಂಬರ್‌ನಲ್ಲಿ ಈ ಜೋಡಿ ನಿಶ್ವಿತಾರ್ಥ ಮಾಡಿಕೊಂಡಿತ್ತು.

ಅರ್ಜುನ್ ಸರ್ಜಾ ತಮಿಳಿನಲ್ಲಿ 'ಸರ್ವೈವರ್' ಅನ್ನುವ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದರು. ಈ ಕಾರ್ಯಕ್ರಮದ ಶೂಟಿಂಗ್ ವೇಳೆ ಐಶ್ವರ್ಯಾ ಹೋಗಿ ಬರುತ್ತಿದ್ದರು. ಆ ವೇಳೆ ಉಮಾಪತಿ ಹಾಗೂ ಅರ್ಜುನ್ ಮಗಳು ಐಶ್ವರ್ಯಾ ನಡುವೆ ಪ್ರೀತಿ ಚಿಗುರಿತ್ತು ಅಂತ ವರದಿಯಾಗಿದೆ. ಸದ್ಯ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದೆ.

South actor Arjun Sarja daughter Aishwarya haldi ceremony photo went viral

ಐಶ್ವರ್ಯಾ ಅರ್ಜುನ್ ಹಾಗೂ ಉಮಾಪತಿ ರಾಮಯ್ಯ ಮದುವೆ ಜೂನ್ 10 ರಂದು ಚೆನ್ನೈನಲ್ಲಿ ನಡೆಯಲಿದೆ. ನಟ ಅರ್ಜುನ್ ಸರ್ಜಾ ನಿರ್ಮಿಸಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿವಾಹ ನಡೆಯಲಿದೆ. ಹಾಗೇ ಜೂನ್ 14ರಂದು ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ.

ಈಗಾಗಲೇ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ರಜನಿಕಾಂತ್, ಕಮಲ್ ಹಾಸನ್, ವಿಜಯ್, ಅಜಿತ್, ಸೂರ್ಯ ಸೇರಿದಂತೆ ಹಲವು ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಿದ್ದಾರೆ. ಇನ್ನು ಈಗಾಗಲೇ ಮದುವೆ ಸಮಾರಂಭ ಆರಂಭ ಆಗಿದ್ದು, ಹಳದಿ ಶಾಸ್ತ್ರ ನೆರವೇರಿದೆ. ಐಶ್ವರ್ಯಾ ಹಳದಿ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಈ ಕಾರ್ಯಕ್ರಮದ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.

ಐಶ್ವರ್ಯಾ ಅರ್ಜುನ್ ಮದುವೆಗೂ ಮುನ್ನ ತನ್ನ ತಂಗಿ ಹಾಗೂ ಸ್ನೇಹಿತರೊಂದಿಗೆ ಬಾಲಿಯಲ್ಲಿ ಬ್ಯಾಚಿಲ್ಲೋರೆಟ್ ಪಾರ್ಟಿ ಮಾಡಿದ್ದಾರೆ. ಆ ಫೋಟೊಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಿದೆ.

More from Filmibeat

English summary
South actor Arjun Sarja daughter Aishwarya haldi ceremony photo went viral:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X