Fact Check: "ತಮಿಳು ಸಿನಿಮಾಗಳಲ್ಲಿ ಸಮಸ್ಯೆ ಎದುರಿಸಿದೆ.. ತಮಿಳು ಹೀರೊ ಕಿರುಕುಳ ನೀಡಿದ್ದ" .ಏನಂತಾರೆ ನಿತ್ಯಾ ಮೆನೆನ್?

ನಿತ್ಯಾ ಮೆನೆನ್ ಯಾರಿಗೆ ಗೊತ್ತಿಲ್ಲ ಹೇಳಿದೆ. ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದಲ್ಲೂ ನಟಿಸುತ್ತಿರುವ ನಟಿಯೀಕೆ. ಯಾವುದೇ ಚಿತ್ರರಂಗದಲ್ಲಿ ಕೆಲಸ ಮಾಡಿದರೂ ವಿವಾದವನ್ನು ಮೈ ಮೇಲೆ ಎಳೆದುಕೊಂಡಿಲ್ಲ. ತಮ್ಮ ಕೆಲಸವನ್ನು ಅಚ್ಚು ಕಟ್ಟಾಗಿ ಮುಗಿಸಿಕೊಟ್ಟಿದ್ದಾರೆ.

ತಮ್ಮ ಪ್ರತಿಭೆಯಿಂದಲೇ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅಷ್ಟಕ್ಕೂ ಭಾಷೆ ಸಮಸ್ಯೆಯಂತೂ ಇಲ್ಲ. ನಾಲ್ಕು ಭಾಷೆಗಳನ್ನೂ ಮಾತಾಡಬಲ್ಲರು. ಈ ಎಲ್ಲಾ ಕಾರಣಗಳಿಂದ ನಾಲ್ಕು ಭಾಷೆಯ ಸಿನಿ ಪ್ರಿಯರಿಗೂ ನಿತ್ಯಾ ಮೆನೆನ್ ಪರಿಚಯ ಚೆನ್ನಾಗಿಯೇ ಇದೆ.

nithya-menen-tamil-movie-controversy

ಇತ್ತೀಚೆಗೆ ನಿತ್ಯಾ ಮೆನೆನ್ ತಮಿಳು ಚಿತ್ರರಂಗ ಹಾಗೂ ಹೀರೊ ಬಗ್ಗೆ ಕೊಟ್ಟಿದ್ದಾರೆ ಎನ್ನಲಾದ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ತಮಿಳಿನ ನ್ಯೂಸ್ ಪೋರ್ಟಲ್‌ಗಳು ನಿತ್ಯಾ ಮೆನೆನ್ ಹೇಳಿಕೆ ಕೊಟ್ಟಿದ್ದಾರೆಂದು ವರದಿ ಮಾಡಿವೆ. ಅಷ್ಟಕ್ಕೂ ನಿತ್ಯಾ ಮೆನೆನ್ ಸುತ್ತ ಸುತ್ತಾಡುತ್ತಿರುವ ಆ ಸುದ್ದಿ ಏನು? ತಿಳಿಯುವುದಕ್ಕೆ ಮುಂದೆ ಓದಿ.

ನಿತ್ಯಾ ಮೆನೆನ್‌ಗೆ ತಮಿಳು ಹೀರೊ ಕಿರುಕುಳ

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ನಿತ್ಯಾ ಮೆನೆನ್ ಹೇಳಿಕೆಯೊಂದನ್ನು ನೀಡಿದ್ದರು. ಆ ಹೇಳಿಕೆ ಈಗ ತಮಿಳು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. "ಇಲ್ಲಿವರೆಗೂ ನನಗೆ ತೆಲುಗು ಸಿನಿಮಾಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಆದರೆ, ತಮಿಳು ಚಿತ್ರರಂಗದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿದ್ದೇನೆ. ತಮಿಳು ನಟನೊಬ್ಬ ಸಿನಿಮಾ ಶೂಟಿಂಗ್ ಮಾಡುವ ವೇಳೆ ಕಿರುಕುಳ ನೀಡಿದ್ದ" ಎಂದು ನಿತ್ಯಾ ಮೆನೆನ್ ಹೇಳಿರುವುದಾಗಿ ವರದಿ ಮಾಡಲಾಗಿದೆ.

ಕಿರುಕುಳ ಕೊಟ್ಟ ಹೀರೊ ಯಾರು?

ನಿತ್ಯಾ ಮೆನೆನ್‌ಗೆ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲೂ ಅಭಿಮಾನಿಗಳಿದ್ದಾರೆ. ನಿತ್ಯಾ ಮೆನೆನ್ ಕೊಟ್ಟಿರೋ ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ಆ ಹೀರೊ ಯಾರಿರಬಹುದು ಎಂದು ಹುಡುಕಲು ಆರಂಭಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಿತ್ಯಾ ಮೆನೆನ್‌ಗೆ ಆ ಹೀರೊ ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ನಿತ್ಯಾ ಮೆನೆನ್ ತಮಿಳು ಸಿನಿಮಾಗಳನ್ನು ಪಟ್ಟಿ ಮಾಡುತ್ತಿದ್ದಾರೆ. ಆದರೆ, ನಿತ್ಯಾ ಮೆನೆನ್ ಯಾವ ಕಾರ್ಯಕ್ರಮದಲ್ಲಿ? ಯಾವಾಗ ಹೇಳಿದ್ದಾರೆ? ಎಂಬ ಮಾಹಿತಿಯನ್ನು ತಮಿಳಿನ ಆನ್‌ಲೈನ್ ಮೀಡಿಯಾ ವರದಿ ಮಾಡಿಲ್ಲ.

ಈ ಸುದ್ದಿಯ ಹಿನ್ನೆಲೆ ಏನು?

ನಿತ್ಯಾ ಮೆನೆನ್ ಬಗ್ಗೆ ಸುದ್ದಿ ಹರಿದಾಡುತ್ತಿದ್ದಂತೆ ತಮಿಳಿನ ಟ್ರೇಡ್ ಎಕ್ಸ್‌ಪರ್ಟ್ ಮನೋಬಾಲ ವಿಜಯಬಾಲನ್ ವಿವಾದಾತ್ಮಕ ಹೇಳಿಕೆ ಕುರಿತು ಟ್ವೀಟ್ ಮಾಡಿದ್ದಾರೆ. "ನಿತ್ಯಾ ಮೆನೆನ್ ಬಗ್ಗೆ ಹರಿದಾಡುತ್ತಿರುವ ಸುದ್ದಿ ಆಧಾರ ರಹಿತ. ಇದರಲ್ಲಿ ಯಾವುದೇ ರೀತಿಯ ಸತ್ಯಾಂಶವಿಲ್ಲ" ಎಂದು ಹೇಳಿದ್ದಾರೆ. ಹೀಗಾಗಿ ಫ್ಯಾನ್ಸ್ ಯಾವುದು ನಂಬುವುದು. ಯಾವುದನ್ನು ಬಿಡುವುದು ಅನ್ನೋ ಗೊಂದಲದಲ್ಲಿ ಇದ್ದಾರೆ.

nithya-menen-tamil-movie-controversy

ಏನಂತಾರೆ ನಿತ್ಯಾ ಮೆನೆನ್?

ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ನಿತ್ಯಾ ಮೆನೆನ್‌ ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಸ್ಟೆಟಸ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು. "ನಾನು ಎಲ್ಲೂ ಸಂದರ್ಶನ ಕೊಟ್ಟಿಲ್ಲ. ಈ ಗಾಳಿ ಸುದ್ದಿ ಎಲ್ಲಿಂದ ಶುರುವಾಯ್ತು ಅನ್ನೋದು ಯಾರಿಗಾದರೂ ಗೊತ್ತಿದ್ದರೆ ತಿಳಿಸಿ. ಕ್ಲಿಕ್‌ಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು" ಎಂದು ನಿತ್ಯಾ ಮೆನೆನ್ ಕಿಡಿಕಾಡಿದ್ದಾರೆ.

ಧನುಷ್ 50ನೇ ಸಿನಿಮಾದಲ್ಲಿ ನಿತ್ಯಾ ಮೆನೆನ್

ಇಷ್ಟೆಲ್ಲ ವಿವಾದ ಏನೇ ಇದ್ದರೂ ಧನುಷ್ 50ನೇ ಸಿನಿಮಾದಲ್ಲಿ ನಿತ್ಯಾ ಮೆನೆನ್ ನಟಿಸುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಅಲ್ಲದೆ ಇಬ್ಬರ ಜೊತೆಯಾಲ್ಲಿರುವ ಫೋಟೊ ಕೂಡ ವೈರಲ್ ಆಗಿದೆ. ನಿತ್ಯಾ ಮೆನೆನ್ ಸದ್ಯ 'ಕುಮಾರಿ ಶ್ರೀಮತಿ' ಅನ್ನುವ ವೆಬ್‌ ಸೀರಿಸ್‌ನಲ್ಲಿ ನಟಿಸಿದ್ದಾರೆ. ಈ ವೆಬ್ ಸೀರಿಸ್ ಸೆಪ್ಟೆಂಬರ್ 28ರಂದು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಆದರೆ, ಕನ್ನಡದಲ್ಲೇ ಈ ವೆಬ್ ಸೀರಿಸ್ ಇಲ್ಲ. ಹೀಗಾಗಿ ಕೆಲವೇ ದಿನಗಳ ಹಿಂದಷ್ಟೇ ಕನ್ನಡದಲ್ಲಿ ಯಾಕಿಲ್ಲ ಅನ್ನೋ ಪ್ರಶ್ನೆ ಎದ್ದಿತ್ತು.

More from Filmibeat

English summary
Fact Check: Actress Nithya Menen says Tamil Hero harassed me
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X