"ವೈನ್ ಬಾಟಲಿ ಹಿಡ್ಕೊಂಡಿದ್ದ ಆ ಕೈಗಳಿಗೆ ಮೈಕ್ ಹಿಡಿಯೋಕೆ ಆಗ್ತಿಲ್ಲ.. ನಂಗದು ಖುಷಿ ಕೊಟ್ಟಿದೆ"; ಗಾಯಕಿ ಸುಚಿತ್ರಾ

ತಮಿಳು ಚಿತ್ರರಂಗದ ಸ್ಟಾರ್ ನಟ ವಿಶಾಲ್ ಅನಾರೋಗ್ಯ ಚಿತ್ರರಂಗದಲ್ಲಿ ಆತಂಕ ಹುಟ್ಟಿದೆ. ಅವರ ಅಭಿಮಾನಿಗಳು ನಟನ ಆರೋಗ್ಯ ಸುಧಾರಣೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. 'ಮದಗಜರಾಜ' ಪತ್ರಿಕಾಗೋಷ್ಠಿಯಲ್ಲಿ ಈ ನಟನನ್ನು ಸ್ಥಿತಿಯನ್ನು ನೋಡಿ ಎಲ್ಲರಿಗೂ ಶಾಕ್ ಆಗಿತ್ತು. ಅಲ್ಲಿಂದ ವಿಶಾಲ್ ಬಗ್ಗೆ ಒಂದಿಷ್ಟು ನೆಗೆಟಿವ್ ಹಾಗೂ ಪಾಸಿಟಿವ್ ಕಾಮೆಂಟ್‌ಗಳು ಕೇಳಿ ಬರುತ್ತವೆ.

ವಿಶಾಲ್ ಆರೋಗ್ಯದ ಬಗ್ಗೆ ಚರ್ಚೆಯಾಗುತ್ತಿದ್ದಂತೆ ವೈದ್ಯರೇ ಮಾಹಿತಿಯನ್ನು ಹಂಚಿಕೊಂಡಿದ್ದರು. ವಿಶಾಲ್ ವೈರಲ್ ಫೀವರ್‌ನಿಂದ ಬಳಲುತ್ತಿದ್ದು, ಎರಡು ತಿಂಗಳು ವಿಶ್ರಾಂತಿಯ ಅಗತ್ಯವಿದೆ. ಆ ಬಳಿಕ ಅವರನ್ನು ಮತ್ತೆ ಸಹಜ ಸ್ಥಿತಿಯಲ್ಲಿ ನೋಡಬಹುದಾಗಿದೆ ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಷ್ಟರೊಳಗೆ ಕೆಲವು ನೆಗೆಟಿವ್ ಮಾಹಿತಿಗಳು ಹರಿದಾಡುತ್ತಿದೆ. ಅದನ್ನು ನೋಡಿ ವಿಶಾಲ್ ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದಾರೆ.

Suchi leaks fame singer Suchitra s allegation against actor Vishal and his health

ಈ ಮಧ್ಯೆ ಸುಚಿ ಲೀಕ್ಸ್ ಖ್ಯಾತಿಯ ವಿವಾದಾತ್ಮಕ ಗಾಯಕಿ ಸುಚಿತ್ರಾ ಅನಾರೋಗ್ಯದಿಂದ ಬಳಲುತ್ತಿರುವ ವಿಶಾಲ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ವಿಶಾಲ್ ಪರಿಸ್ಥಿತಿಯನ್ನು ನೋಡಿ ಹಲವು ಮಂದಿ ನೊಂದು ಕೊಂಡಿದ್ದಾರೆ. ಆದರೆ, ಆತ ನೊಂದುಕೊಳ್ಳುವಷ್ಟು ಒಳ್ಳೆಯ ವ್ಯಕ್ತಿ ಅಲ್ಲ ಎಂದು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿ ಮತ್ತೆ ಜನರ ಕಟು ಟೀಕೆಗೆ ಒಳಗಾಗಿದ್ದಾರೆ.

ಹಿಂದೊಮ್ಮೆ ವಿಶಾಲ್ ಈ ಗಾಯಕಿಯ ಮನೆಗೆ ಹೋಗಿದ್ದರು. ಆ ವೇಳೆ ವಿಶಾಲ್ ನಡೆದುಕೊಂಡಿ ರೀತಿ ಹೇಗಿತ್ತು ಅನ್ನೋದನ್ನು ಹೇಳಿಕೊಂಡಿದ್ದಾರೆ. "ನಾನು ಹಾಗೂ ಕಾರ್ತಿಕ್ ಕುಮಾರ್ ಜೊತೆಯಲ್ಲಿ ವಾಸ ಮಾಡುತ್ತಿದ್ದಾಗ ಒಂದು ಘಟನೆ ನಡೆದಿತ್ತು. ಕಾರ್ತಿಕ್ ಕುಮಾರ್ ಇಲ್ಲದ ವೇಳೆ ಬಂದು ವಿಶಾಲ್ ಬಾಗಿಲು ಬಡಿದಿದ್ದ. ಬಾಗಿಲು ತೆರೆದ ನನಗೆ ವಿಶಾಲ್ ಕೈಯಲ್ಲಿ ವೈನ್ ಬಾಟಲ್ ಹಿಡಿದು ನಿಂತಿದ್ದು ಕಾಣಿಸಿತ್ತು. ಆ ವೇಳೆ ಅವನು ಕುಡಿದಿದ್ದ" ಎಂದು ಗಾಯಕಿ ಸುಚಿತ್ರಾ ಹೇಳಿಕೊಂಡಿದ್ದಾರೆ.

ಹಾಗಂತ ಈ ಘಟನೆ ಇಲ್ಲಿಗೆ ಮುಗಿದಿಲ್ಲ. " ಬಾಗಿಲು ತೆಗೆದ ಬಳಿಕ ನನಗೆ ಕಾರ್ತಿಕ್ ಕುಮಾರ್ ಇಲ್ಲವೇ ಎಂದು ಕೇಳಿದ. ಅವರು ಇಲ್ಲ ಎಂದು ಹೇಳಿದ್ದೆ. ಆಗ ವಿಶಾಲ್ ವೈನ್ ಬಾಟಲ್ ಅನ್ನು ನನಗೆ ಕೊಡುವುದಕ್ಕೆ ಮುಂದೆ ಬಂದಿದ್ದ. ಒಳಗೆ ಬರಬಹುದೇ ಎಂದು ಕೇಳಿದ. ನಾನು ಬೇಡ ಎಂದ ಕೂಡಲೇ, ಆ ವೈನ್ ಬಾಟಲ್ ಅನ್ನು ನನ್ನ ಕೈಗಿಟ್ಟು, ಈ ಕಾರಣಕ್ಕೆ ನಾನು ಬಂದಿದ್ದು ಎಂದು ಹೇಳಿದ." ಎಂದು ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ.

Suchi leaks fame singer Suchitra s allegation against actor Vishal and his health

ಕಾರ್ತಿಕ್ ಕುಮಾರ್ ಇಲ್ಲ ಅವನು ಗೌತಮ್ ಮೆನನ್ ಆಫೀಸ್‌ನಲ್ಲಿ ಇದ್ದು, ಅಲ್ಲಿಗೆ ಹೋಗಿ ಕೊಡುವಂತೆ ಗಾಯಕಿ ಸುಚಿತ್ರ ಮುಖದ ಮೇಲೆ ಹೊಡೆದಂತೆ ಹೇಳಿ ಬಾಗಿಲು ಹಾಕಿದ್ದನ್ನು ನೆನಪಿಸಿಕೊಂಡಿದ್ದಾರೆ. ಆ ಸಮಯದಲ್ಲಿ ವಿಶಾಲ್‌ಗೆ ಕೆಟ್ಟ ಪದಗಳಿಂದ ಬೈದಿದ್ದಾಗಿಯೂ ಹೇಳಿಕೊಂಡಿದ್ದಾರೆ. ಆ ಬಳಿಕ ವಿಶಾಲ್ ಪ್ರತಿಕ್ರಿಯೆ ಹೇಗಿತ್ತು? ಅನ್ನೋದನ್ನು ಹೇಳಿಕೊಂಡಿದ್ದಾರೆ. ಇಂತಹ ಸ್ಥಿತಿಯಲ್ಲೂ ವಿಶಾಲ್ ನೆನಪಿಸಿಕೊಂಡು ಶಪಿಸಿದ್ದಾರೆ.

ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವಿಶಾಲ್ ಕೆಟ್ಟ ವ್ಯಕ್ತಿ ಎಂದಿದ್ದಾರೆ. ವಿಶಾಲ್ ಗುಣಮುಖರಾಗಲಿ ಎಂದು ಎಲ್ಲೂ ಪ್ರಾರ್ಥಿಸುತ್ತಿದ್ದೀರಿ. ಆದರೆ ದಿನ ವೈನ್ ಬಾಟಲಿ ಹಿಡಿದುಕೊಂಡು ಆ ಕೈಗಳು ಇಂದು ಮೈಕ್ ಹಿಡಿದುಕೊಳ್ಳುವುದಕ್ಕೆ ಪರದಾಡುತ್ತಿವೆ. ಅದನ್ನು ತನಗೆ ಬಹಳ ಖುಷಿಯಾಗಿದೆ ಎಂದು ಗಾಯಕಿ ಸುಚಿತ್ರ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಹೊರ ಬಂದ ಬಳಿಕ ನೆಟ್ಟಿಗರು ಗಾಯಕಿ ವಿರುದ್ಧ ಅಸಮಧಾನ ಹೊರ ಹಾಕಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಈ ಸ್ಥಿತಿಯಲ್ಲಿ ಇಂತಹ ಕಾಮೆಂಟ್‌ಗಳು ಬೇಕೆ? ಇಂತಹ ಟೀಕೆಗಳು ಸರಿಯಲ್ಲ ಎಂದು ಗಾಯಕಿ ಸುಚಿತ್ರಾರನ್ನು ಟೀಕೆ ಮಾಡುತ್ತಿದ್ದಾರೆ.

More from Filmibeat

English summary
Suchi leaks fame singer Suchitra's allegation against actor Vishal and his health;
Read more about: vishal filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X