ಬುರ್ಜ್ ಖಲೀಫಾ ಮುಂದೆ ನಯನಾತಾರಾ ಹಣೆಗೆ ಮುತ್ತಿಟ್ಟ ವಿಘ್ನೇಶ್ ಶಿವನ್: ಹೊಸ ವರ್ಷದ ಸಂಭ್ರಮ ಹೇಗಿತ್ತು?
ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಹಾಗೂ ಬಾಯ್‌ಫ್ರೆಂಡ್ ವಿಘ್ನೇಶ್ ಶಿವನ್ ಇಬ್ಬರು ಡೇಟಿಂಗ್ ಮಾಡುತ್ತಿರುವುದು ಗೊತ್ತಿರುವ ವಿಷಯವೇ. ಲಾಕ್‌ಡೌನ್ ಮುಗಿದ ಬಳಿಕವೇ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತೆ ಎಂದೇ ನಂಬಲಾಗಿತ್ತು. ಆದರೆ, ಲಾಕ್‌ಡೌನ್ ಮುಗಿದ ಬಳಿಕ ಮದುವೆ ಬಗ್ಗೆ ನಯನತಾರಾ ಹಾಗೂ ವಿಘ್ನೇಶ್ ಮದುವೆ ಬಗ್ಗೆ ಆಸಕ್ತಿ ತೋರಿಸಲ್ಲ. ಈಗ 2022ರಲ್ಲಿ ಮದುವೆಯಾಗುವ ಸುಳಿವು ನೀಡಿದ್ದಾರೆ.
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇಬ್ಬರೂ ಹೊಸವರ್ಷದ ಸಂಭ್ರಮಾಚರಣೆಗೆ ದುಬೈಗೆ ಹಾಕಿದ್ದರು. ಜಗತ್‌ಪ್ರಸಿದ್ಧ ದುಬೈನ ಬುರ್ಜ್ ಖಲೀಫಾದಲ್ಲಿ ಹೊಸ ವರ್ಷವನ್ನು ಅದ್ಧೂರಿಯಾಗಿ ಸಂಭ್ರಮಿಸಿದ್ದಾರೆ. ಈ ವೇಳೆ ಕಾಲಿವುಡ್‌ನ ಈ ಕ್ಯೂಟ್ ಜೋಡಿ ವಿಡಿಯೋ ಒಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಅದೇ ವಿಡಿಯೋ ನೋಡಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ನಯನತಾರಾ ಹಣೆಗೆ ಮುತ್ತಿಕ್ಕಿದ ವಿಘ್ನೇಶ್ ಸಿವನ್
ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ಬಾಯ್‌ಫ್ರೆಂಡ್ ವಿಫ್ನೇಶ್ ಶಿವನ್ ಕ್ರಿಸ್‌ಮಸ್ ಹಾಗೂ ಹೊಸ ವರ್ಷವನ್ನು ದುಬೈನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ದುಬೈನಲ್ಲಿ ಕಳೆಯುತ್ತಿರುವ ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡುತ್ತಿದ್ದಾರೆ. ದುಬೈನ ಬುರ್ಜ್ ಖಲೀಫಾದ ಮುಂದೆ ಹೊಸ ವರ್ಷವನ್ನು ಈ ಜೋಡಿ ಸ್ವಾಗತ ಮಾಡಿದೆ. ಆ ವಿಡಿಯೋವನ್ನು ಈ ಜೋಡಿ ಶೇರ್ ಮಾಡಿಕೊಂಡಿದೆ. ಈ ವಿಡಿಯೋದಲ್ಲಿ ವಿಘ್ನೇಶ್ ಶಿವನ್ ಭಾವಿ ಪತ್ನಿ ನಯನಾತಾರಾ ಹಣೆಗೆ ಮುತ್ತಿಕ್ಕಿದ್ದಾರೆ. ಈ ವಿಡಿಯೋ ಇಬ್ಬರ ಅಭಿಮಾನಿ ಬಳಗಕ್ಕೆ ಖುಷಿ ತಂದಿದೆ.

ದೇವರು ಪರೀಕ್ಷೆ ಮಾಡುತ್ತಾನೆ
ವಿಘ್ನೇಶ್ ಶಿವನ್ ತನ್ನ ಗರ್ಲ್‌ಫ್ರೆಂಡ್ ನಟಿ ನಯನಾತಾರಾಗೆ ಮುತ್ತಿಟ್ಟ ವಿಡಿಯೋ ಶೇರ್ ಮಾಡಿದ್ದಷ್ಟೇ ಅಲ್ಲದೆ, ಹೊಸ ವರ್ಷದ ಶುಭಾಶಯವನ್ನೂ ಕೋರಿದ್ದಾರೆ. "ಎಲ್ಲರಿಗೂ ಪ್ರಪಂಚದಲ್ಲಿರುವ ಎಲ್ಲಾ ಅದ್ಭುತವಾದ ಆತ್ಮಗಳಿಗೆ ಹೊಸ ವರ್ಷದ ಶುಭಾಶಯಗಳು. 2022 ಶಾಂತಿಯುತವಾಗಿ, ಸಂತೋಷವಾಗಿ, ಎಲ್ಲರ ನೆನಪಿನಲ್ಲಿ ಉಳಿಯುವಂತಹ ವರ್ಷ ಆಗಿರುತ್ತೆ. ಯಾಕಂದರೆ, ದೇವರಿಗೆ ತನ್ನ ಪ್ರೀತಿ ಪಾತ್ರರಾದವರನ್ನು ಪರೀಕ್ಷೆ ಮಾಡುವ ಅಭ್ಯಾಸವಿದೆ. ಆ ಬಳಿಕ ಉತ್ತಮವಾದ ಉಡುಗೊರೆಯನ್ನು ನೀಡುತ್ತಾನೆ. ಕಳೆದ ಎರಡು ವರ್ಷಗಳಿಂದ ಜನರೊಂದಿಗೆ ಇರದೆ ಇದ್ದಿದ್ದಕ್ಕೆ ಅವನಲ್ಲಿ ತಪ್ಪಿತಸ್ಥ ಭಾವನೆ ಇದೆ. ಇದಕ್ಕೆ ಪ್ರಮುಖ ಕಾರಣ ಈ ಸಾಂಕ್ರಾಮಿಕ. ಆ ದೇವರು ತಾನು ಮಾಡಿದ ತಪ್ಪಿಗೆ ಈ ವರ್ಷ ಡಬಲ್ ಖುಷಿ ನೀಡುತ್ತಾನೆ." ವಿಘ್ನೇಶ್ ಶಿವನ್ ಇನ್‌ಸ್ಟಾಗ್ರಾಂ ಪೋಸ್ಟ್ ಮಾಡಿದ್ದಾರೆ.

ನಯನಾತಾರಾ-ವಿಘ್ನೇಶ್‌ಗೆ ಫ್ಯಾನ್ಸ್ ಹಾರೈಕೆ
ನಯನತಾರಾ ಹಾಗೂ ವಿಘ್ನೇಶ್ ಶಿವನ್ ದುಬೈನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದಾರೆ. ಇತ್ತ ಅಭಿಮಾನಿಗಳೂ ಕೂಡ ಈ ಜೋಡಿ ಶುಭ ಕೋರಿದೆ. ನಯನಾತಾರಾ ಹಾಗೂ ವಿಘ್ನೇಶ್ ಇಬ್ಬರೂ ಕ್ರಿಸ್‌ಮಸ್ ಪಾರ್ಟಿಯ ಫೋಟೊಗಳನ್ನು ಶೇರ್ ಮಾಡಿದ್ದರು. ಆಗಲೂ ಫ್ಯಾನ್ಸ್ ಖುಷಿ ವ್ಯಕ್ತಪಡಿಸಿದ್ದರು. ಆದರೆ, ನಯನಾ ಹಾಗೂ ವಿಘ್ನೇಶ್ ಇಬ್ಬರೂ ದುಬೈಗೆ ಹೊಸ ವರ್ಷದ ಆಚರಣೆ ಮಾಡುವುದಕ್ಕೆ ಹೋಗಿದ್ದಾರಾ? ಅಥವಾ ಕೆಲಸದ ಮೇಲೆ ಪಯಣ ಬೆಳೆಸಿದ್ದಾರಾ? ಅನ್ನುವುದು ಇನ್ನೂ ರಹಸ್ಯವಾಗಿಯೇ ಇದೆ.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ
ವಿಘ್ನೇಶ್ ಶಿವನ್ ಹಾಗೂ ನಯನತಾರಾ ಇಬ್ಬರೂ ಸೇರಿ 'ರಾಕಿ' ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ವಿಘ್ನೇಶ್ ಶಿವನ್ ಸದ್ಯ 'ಕಾಥು ವಾಕುಲ ರೆಂಡು ಕಾದಲ್' ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಇತ್ತ ನಯನತಾರಾ, ಬಾಲಿವುಡ್‌ಗೆ ಕಾಲಿಟ್ಟಿದ್ದು, ಅಟ್ಲಿ ನಿರ್ದೇಶನದ ಶಾರುಖ್ ಖಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಜಯ್ ಸೇತುಪತಿ ಹಾಗೂ ಸಮಂತಾ ಜೊತೆನೂ ಕಾಣಿಸಿಕೊಳ್ಳಲಿದ್ದು ನಯನಾತಾರಾ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಈ ಮಧ್ಯೆ 2022ರಲ್ಲಿ ಇಬ್ಬರೂ ಮದುವೆ ಆಗುತ್ತಾರೆ ಅನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.


Click it and Unblock the Notifications











