"ದುಬಾರಿ ಕಾರು ಇಲ್ಲ.. ಅಹಂ ಇಲ್ಲ": ಮುಂಬೈ ಏರ್‌ಪೋರ್ಟ್‌ನಲ್ಲಿ ರಜನಿ ನೋಡಿ ನೆಟ್ಟಿಗರು ಕಮೆಂಟ್

ಒಂದು ವಾರದಿಂದ ದಕ್ಷಿಣ ಭಾರತದಲ್ಲೂ ರಜನಿಕಾಂತ್ ಟ್ರೆಂಡಿಂಗ್.. ಉತ್ತರ ಭಾರತದಲ್ಲೂ ಟ್ರೆಂಡಿಂಗ್. ರಜನಿಕಾಂತ್ ಹೋದಲ್ಲೆಲ್ಲಾ ಕ್ರೇಜ್ ಹೆಚ್ಚುಗುತ್ತಿದೆ. ಇಂದು (ಮೇ 7) ಸೂಪರ್‌ಸ್ಟಾರ್ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರನ್ನು ಕಂಡು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ರಜನಿಕಾಂತ್ ಇತ್ತೀಚೆಗೆ ವಿವಾದದಲ್ಲಿ ಸಿಕ್ಕಿಕೊಂಡಿದ್ದರು. ಸೀನಿಯರ್ ಎನ್‌ಟಿಆರ್ ಕಾರ್ಯಕ್ರಮಕ್ಕೆ ಆಂಧ್ರಕ್ಕೆ ತೆರಳಿದ್ದ ರಜನಿ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಹಾಡಿಹೊಗಳಿದ್ದರು. ಅದೇ ವೈಎಸ್‌ಆರ್‌ ಕಾಂಗ್ರೆಸ್ ಸದಸ್ಯರನ್ನು ಕೆರಳಿಸಿತ್ತು.

Superstar Rajinikanth came Mumbai for Lal Salaam fans thrilled about his simplicity

ಈ ವಿವಾದ ಬೆನ್ನಲ್ಲೇ 'ಜೈಲರ್' ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದರು. ರಜನಿಯ 'ಜೈಲರ್' ಲುಕ್, ಸ್ಟೈಲ್‌ ಟ್ರೆಂಡಿಂಗ್‌ನಲ್ಲಿತ್ತು. ಇನ್ನೇನು ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆ ಫ್ಯಾನ್ಸ್ ನಿಂತಲ್ಲಿ ನಿಲ್ಲುತ್ತಿಲ್ಲ. ಇದೇ ಗ್ಯಾಪ್‌ನಲ್ಲಿ ತಲೈವಾ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಮುಂಬೈ ಏರ್‌ಪೋರ್ಟ್‌ನಲ್ಲಿ ರಜನಿಕಾಂತ್

ಭಾನುವಾರ (ಮೇ 7) ಸೂಪರ್‌ಸ್ಟಾರ್ ರಜನಿಕಾಂತ್ ದಿಢೀರನೇ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಪಪಾರಾಜಿಗಳು ತಲೈವಾ ನೋಡಿ ಅವರನ್ನೇ ಹಿಂಬಾಸಿದ್ದಾರೆ. ಈ ವೇಳೆ ರಜನಿಕಾಂತ್ ಸರಳತೆ ಹಾಗೂ ಸ್ವಭಾವವನ್ನು ಕಂಡು ನೆಟ್ಟಿಗರು ಫಿದಾ ಆಗೋಗಿದ್ದಾರೆ.

ರಜನಿಕಾಂತ್ ಸ್ಪೀಡ್‌ಗೆ.. ವಾಕಿಂಗ್ ಸ್ಟೈಲ್‌ಗೆ.. ಸ್ಮೈಲ್‌ಗೆ ಫ್ಯಾನ್ಸ್ ಖುಷಿಯಾಗಿದ್ದಾರೆ. ಮುಂಬೈ ಏರ್‌ಪೋರ್ಟ್‌ನಲ್ಲಿ ಸೂಪರ್‌ಸ್ಟಾರ್ ಇನ್ನೋವಾ ಕ್ರಿಸ್ಟದಲ್ಲಿ ನಿರ್ಗಮಿಸಿದ್ದರು. ಈ ವೇಳೆ ಅವರು ತೊಟ್ಟಿದ್ದ ಡ್ರೆಸ್‌ ಕೂಡ ಅಷ್ಟೇ ಸಿಂಪಲ್ ಆಗಿತ್ತು. ಇದನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಅದಕ್ಕೆ ನೆಟ್ಟಿಗರು ಸೂಪರ್‌ಸ್ಟಾರ್ ಆಗಿದ್ದರೂ "ದುಬಾರಿ ಕಾರು ಇಲ್ಲ.. ಅಹಂ ಇಲ್ಲ" ಎಂದು ಹೇಳಿದ್ದಾರೆ.

ಮುಂಬೈಗೆ ಬಂದಿದ್ದೇಕೆ?

ಸೂಪರ್‌ಸ್ಟಾರ್ ರಜನಿಕಾಂತ್ ಮಗಳ ಸಿನಿಮಾಗಾಗಿ ಮುಂಬೈ ಬಂದಿದ್ದಾರೆ. ಪುತ್ರಿ ಐಶ್ವರ್ಯಾ ರಜನಿಕಾಂತ್ ನಿರ್ದೇಶಕನಕ್ಕೆ ಇಳಿದಿರೋದು ಗೊತ್ತೇ ಇದೆ. 'ಲಾಲ್ ಸಲಾಂ' ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ಇದೇ ಸಿನಿಮಾದಲ್ಲಿ ರಜನಿಕಾಂತ್ ಅತಿಥಿಯಾಗಿ ನಟಿಸುತ್ತಿದ್ದಾರೆ. ಅದಕ್ಕಾಗಿ ಮುಂಬೈಗೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಐಶ್ವರ್ಯಾ ರಜನಿಕಾಂತ್ 'ಲಾಲ್ ಸಲಾಂ' ಸಿನಿಮಾದ ಫಸ್ಟ್ ಲುಕ್ ಅನ್ನು ಮೇ 8ರ ಮಧ್ಯರಾತ್ರಿ ರಿಲೀಸ್ ಮಾಡಲಿದೆ ಚಿತ್ರತಂಡ.ಈ ಸಿನಿಮಾದಲ್ಲಿ ವಿಷ್ಣು ವಿಶಾಲ್ ಹಾಗೂ ವಿಶಾಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

ರಜನಿಕಾಂತ್ ಫುಲ್ ಬ್ಯುಸಿ

ಸೂಪರ್‌ಸ್ಟಾರ್ ರಜನಿಕಾಂತ್ 'ಜೈಲರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಬೀಸ್ಟ್' ಸಿನಿಮಾದ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶಿವರಾಜ್‌ಕುಮಾರ್, ಮೋಹನ್ ಲಾಲ್, ಜಾಕಿಶ್ರಾಫ್, ರಮ್ಯಾಕೃಷ್ಣ, ತಮನ್ನಾ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಮ್ಯೂಸಿಕ್ ನೀಡುತ್ತಾರೆ.

ಇನ್ನೊಂದು ಕಡೆ ಲೋಕೇಶ್ ಕನಗರಾಜ್ ಹಾಗೂ ರಜನಿಕಾಂತ್ ಕಾಂಬಿನೇಷನ್‌ನಲ್ಲಿ ಸಿನಿಮಾ ಸೆಟ್ಟೇರಲಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಆದರೆ, ಇವರಿಬ್ಬರ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗಿಲ್ಲ.

More from Filmibeat

English summary
Superstar Rajinikanth came Mumbai for Lal Salaam fans thrilled about his simplicity, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X