"ವಯಸ್ಸು ಕೇವಲ ಸಂಖ್ಯೆ ಅಷ್ಟೇ"; ರಜನಿಯ "ಚಿಕಿತು ವೈಬ್ಸ್" ನೋಡಿ ಫ್ಯಾನ್ಸ್ ಕಾಮೆಂಟ್ಸ್ ಮೇಲೆ ಕಾಮೆಂಟ್ಸ್
ಸೂಪರ್‌ಸ್ಟಾರ್ ರಜನಿಕಾಂತ್ ಇಂದು (ಡಿಸೆಂಬರ್ 12) 74ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೇ ಸಂಭ್ರಮದಲ್ಲಿ ಲೋಕೇಶ್ ಕನಕರಾಜ್ ನಿರ್ದೇಶಿಸಿದ 'ಕೂಲಿ' ಸಿನಿಮಾದ ಗ್ಲಿಂಪ್ಸ್ ಬಿಡುಗಡೆಯಾಗಿದೆ. ರಜನಿ ಬರ್ತ್‌ಡೇ ಹಿನ್ನೆಲೆಯಲ್ಲಿಯೇ ಚಿತ್ರತಂಡ ಸರ್ಪ್ರೈಸ್ ಕೊಡುವುದಾಗಿ ಅನೌನ್ಸ್ ಮಾಡಿತ್ತು. ಅದನ್ನು ನೋಡುವುದಕ್ಕಾಗಿಯೇ ಸೂಪರ್‌ಸ್ಟಾರ್ ಅಭಿಮಾನಿಗಳು ಕಾದು ಕೂತಿದ್ದರು.
ಲೋಕೇಶ್ ಕನಕರಾಜ್ ಹಾಗೂ ರಜನಿಕಾಂತ್ ಕಾಂಬಿನೇಷನ್ ಸಿನಿಮಾ ಅಂದಾಗ ಹಗುರವಾಗಿ ತೆಗೆದುಕೊಳ್ಳುವಂತೆ ಇಲ್ಲ. ಲೋಕೇಶ್ ಯುವ ಸಮುದಾಯದ ಫೇವರಿಟ್ ಡೈರೆಕ್ಟರ್. ಸೂಪರ್‌ಸ್ಟಾರ್ ರಜನಿ ಬಗ್ಗೆ ವಿವರಣೆ ಕೊಡುವುದು ಬೇಕಿಲ್ಲ. ಇವರಿಬ್ಬರೂ ಸೇರಿದರೆ ಸಿನಿಮಾ ಹೇಗಿ ಮೂಡಿ ಬರಬಹುದು ಅನ್ನೋದು ಕಲ್ಪನೆಯಲ್ಲಿ ಫ್ಯಾನ್ಸ್ ಕಳೆದು ಹೋಗಿದ್ದರು.

ರಜನಿ ಹುಟ್ಟುಹಬ್ಬದ ಈ ಸಮಯದಲ್ಲಿಯೇ ಲೋಕೇಶ್ ಕನಕರಾಜ್ 'ಕೂಲಿ' ಸಿನಿಮಾದ "ಚಿಕಿತು ವೈಬ್ಸ್" ಹಾಡಿನ ಗ್ಲಿಂಪ್ಸ್ ಅನ್ನು ರಿಲೀಸ್ ಮಾಡಿದ್ದಾರೆ. ಸಂಭ್ರಮದಲ್ಲಿರೋ ಸೂಪರ್‌ಸ್ಟಾರ್ ಅಭಿಮಾನಿಗಳಿಗೆ ಈ ತುಣುಕು ಕಿಕ್ ಕೊಟ್ಟಿದೆ. ಗ್ಲಿಂಪ್ಸ್ ನೋಡಿ ರಜನಿಯನ್ನು ಹಾಡಿ ಹೊಗಳಿಸಿದ್ದಾರೆ. ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಅಷ್ಟಕ್ಕೂ ಈ ಗ್ಲಿಂಪ್ಸ್ ನೋಡಿ ಅಭಿಮಾನಿಗಳ ಮಾಡಿದ ಕಾಮೆಂಟ್ ಏನು? ತಿಳಿಯಲು ಮುಂದೆ ಓದಿ.
'ಕೂಲಿ' ಕಾಲಿವುಡ್‌ನ ಬಿಗ್ ಬಜೆಟ್ ಸಿನಿಮಾ. ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಬಗ್ಗೆ ಈಗಾಗಲೇ ನಿರೀಕ್ಷೆಗಳು ಹೆಚ್ಚಾಗಿದೆ. ಅದರಲ್ಲೂ ಲೋಕೇಶ್ ಕನಕರಾಜ್ ದೊಡ್ಡ ಸ್ಟಾರ್‌ಕಾಸ್ಟ್ ಅನ್ನೇ ಈ ಸಿನಿಮಾಗೆ ಹಾಕಿಕೊಂಡಿದ್ದಾರೆ. ತೆಲುಗು ಚಿತ್ರರಂಗದಿಂದ ನಾಗಾರ್ಜುನ, ಕನ್ನಡದಿಂದ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೇ ಚೌಬಿನ್ ಸಾಹಿರ್, ಶ್ರುತಿ ಹಾಸನ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇಷ್ಟು ದೊಡ್ಡ ಸ್ಟಾರ್‌ಕಾಸ್ಟ್ ಜೊತೆಗೆ ಮತ್ತೊಂದು ಸೂಪರ್‌ಸ್ಟಾರ್ ಎಂಟ್ರಿ ಕೊಟ್ಟಿದ್ದಾರೆ ಅಂತ ಹೇಳಲಾಗಿದೆ. ಬಾಲಿವುಡ್‌ನ ಸೂಪರ್‌ಸ್ಟಾರ್ ಆಮಿರ್ ಖಾನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕೆ ಮೊದಲು ಶಾರುಖ್ ಖಾನ್ ಅನ್ನು ಅಪ್ರೋಚ್ ಮಾಡಲಾಗಿತ್ತು. ಆದರೆ, ಅತಿಥಿ ಪಾತ್ರದಲ್ಲಿ ನಟಿಸುವುದಕ್ಕೆ ಶಾರುಖ್ ಖಾನ್ ಒಪ್ಪಲಿಲ್ಲ ಎಂದು ಹೇಳಲಾಗಿದೆ. ಈ ಕಾರಣಕ್ಕೆ ಆಮಿರ್ ಖಾನ್ ಅನ್ನು ಅಪ್ರೋಚ್ ಮಾಡಲಾಗಿದೆ ಅನ್ನೋ ಮಾತು ಕೇಳಿಬರುತ್ತಿದೆ.
ಇಷ್ಟೊಂದು ಹೈಪ್ ಕ್ರಿಯೇಟ್ ಮಾಡಿರುವ ರಜನಿಯ 'ಕೂಲಿ' ಸಿನಿಮಾದ ಗ್ಲಿಂಪ್ಸ್ ಅಭಿಮಾನಿಗಳಿಗೆ ಇಷ್ಟ ಆಗಿದೆ. ರಜನಿಯ ಮ್ಯಾನರಿಸಂಗೆ ಮತ್ತೆ ಫಿದಾ ಆಗಿದ್ದಾರೆ. 74ನೇ ವಯಸ್ಸಿನಲ್ಲೂ ಸೂಪರ್‌ಸ್ಟಾರ್ ಡ್ಯಾನ್ಸ್ ನೋಡಿ ಥ್ರಿಲ್ ಆಗಿದ್ದಾರೆ. ಖುಷಿಯಿಂದ ಕಾಮೆಂಟ್‌ಗಳ ಸುರಿ ಮಳೆಯನ್ನೇ ಹರಿಸಿದ್ದಾರೆ. ಹಾಗಿದ್ದರೆ, ಅಭಿಮಾನಿಗಳು 'ಚಿಕಿತು ವೈಬ್ಸ್' ನೋಡಿ ಏನೆಲ್ಲ ಕಾಮೆಂಟ್ಸ್ ಮಾಡಿದ್ದಾರೆ ನೋಡುವುದಕ್ಕೆ ಮುಂದೆ ಓದಿ.
ಚಿಕಿತು ವೈಬ್ಸ್ ನೋಡಿ ನೆಟ್ಟಿಗರೊಬ್ಬರು "ಈ ವಯಸ್ಸಿನಲ್ಲೂ ಹೀಗಿರುವುದರಿಂದ ಸಿನಿಮಾ ಪ್ರೇಮಿಗಳು ಅವರನ್ನು ಸೂಪರ್ ಸ್ಟಾರ್ ಎಂದೇ ಕರೆಯುತ್ತಾರೆ" ಎಂದು ಹೇಳಿದ್ದಾರೆ. ಮತ್ತೆ ಕೆಲವರು "ಮನುಷ್ಯ ವಯಸ್ಸಾದಂತೆ ಚಿಕ್ಕವನಾಗುತ್ತಾನೆ. ಸೂಪರ್ ಸ್ಟಾರ್ ರಜಿನಿ ಸರ್ ಬಹಳಷ್ಟು ಮಂದಿಗೆ ಉತ್ತಮ ಮಾದರಿ. ವಯಸ್ಸು ಕೇವಲ ಸಂಖ್ಯೆ ಅಷ್ಟೇ ರಜಿನಿ ಸಾರ್ ಸಾಬೀತು ಮಾಡುತ್ತಲೇ ಇದ್ದಾರೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು " ಎಷ್ಟೇ ವಯಸ್ಸಾದರೂ ಅವರ ಯೌವನ ಮಾತ್ರ ಬದಲಾಗುವುದಿಲ್ಲ. ಅವರ ದಾಖಲೆಯನ್ನು ಮುರಿಯುವುದು ಬಹಳ ಕಷ್ಟ" ಎಂದಿದ್ದಾರೆ.


Click it and Unblock the Notifications











