Rajini-Jailer:'ಜೈಲರ್' ಅಡ್ವಾನ್ಸ್ ಬುಕಿಂಗ್.. ಅಮೆರಿಕದಲ್ಲಿ ₹6 ಕೋಟಿ.. ಭಾರತದಲ್ಲೆಷ್ಟು? Day 1 ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು
ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ 'ಜೈಲರ್' ಥಿಯೇಟರ್‌ಗೆ ಲಗ್ಗೆ ಇಡುವುದಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಅಷ್ಟರಲ್ಲಾಗಲೇ ಸಿನಿಮಾದ ಕಲೆಕ್ಷನ್ ಬಗ್ಗೆ ಲೆಕ್ಕಾಚಾರ ಹಾಕುವುದಕ್ಕೆ ಶುರು ಮಾಡಿದ್ದಾರೆ. ಎರಡು ಬ್ಯಾಕ್ ಟು ಬ್ಯಾಕ್ ಸೋಲುಗಳನ್ನ ಕಂಡಿರೋ ರಜನಿಯ ಈ ಸಿನಿಮಾ ಏನಾಗುತ್ತೆ? ಅನ್ನೋ ಕುತೂಹಲದಲ್ಲಿ ಚಿತ್ರರಂಗವಿದೆ.
ಇನ್ನೊಂದು ಕಡೆ ರಜನಿಕಾಂತ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿ ಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ದೇಶ ಅಷ್ಟೇ ಅಲ್ಲ. ವಿಶ್ವದ ಮೂಲೆ ಮೂಲೆಯಲ್ಲೂ 'ಜೈಲರ್'ಗೆ ಮಸ್ತ್ ಕ್ರೇಜ್ ಇದೆ. ಹೀಗಾಗಿ ಕೆಲವು ದಿನಗಳ ಹಿಂದೆನೇ ಅಡ್ವಾನ್ಸ್ ಬುಕಿಂಗ್ ಮಾಡುವುದಕ್ಕೆ ಅವಕಾಶವನ್ನು ನೀಡಲಾಗಿತ್ತು.

ನೆಲ್ಸನ್ ದಿಲೀಪ್ ಕುಮಾರ್ ಹಾಗೂ ರಜನಿಕಾಂತ್ ಕಾಂಬಿನೇಷನ್‌ನಲ್ಲಿ ಥಿಯೇಟರ್‌ಗೆ ಲಗ್ಗೆ ಇಡುತ್ತಿರುವ ಮೊದಲ ಸಿನಿಮಾವಿದು. ಈ ಕಾರಣಕ್ಕೆ 'ಜೈಲರ್' ನೋಡುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. 'ಜೈಲರ್' ಸಿನಿಮಾ ಅಡ್ವಾನ್ಸ್ ಬುಕಿಂಗ್‌ನಿಂದ ಗಳಿಸಿದ್ದೆಷ್ಟು? ಮೊದಲ ದಿನದ ಬಾಕ್ಸಾಫೀಸ್ ಅಂದಾಜು ಗಳಿಕೆ ಎಷ್ಟು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಅಡ್ವಾನ್ಸ್ ಬುಕಿಂಗ್..ಯುಸ್‌ನಲ್ಲಿ ₹6 ಕೋಟಿ.. ಭಾರತದಲ್ಲೆಷ್ಟು?
ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಕ್ರೇಜ್ ಕಡಿಮೆ ಆಯ್ತು. ಇನ್ನು ಅವರ ಆಟ ನಡೆಯೋದಿಲ್ಲ ಅಂತ ಮಂದಿ ಭವಿಷ್ಯ ನುಡಿದಿದ್ದರು. ಅದಕ್ಕೆ ತದ್ವಿದ್ಧವಾಗಿ ಅಡ್ವಾನ್ಸ್ ಬುಕಿಂಗ್‌ನಿಂದಲೇ 'ಜೈಲರ್' ಕೋಟಿ ಕೋಟಿ ಲೂಟಿ ಮಾಡಿದೆ. ಇತ್ತೀಚೆಗೆ ಬಂದಿರೋ ವರದಿ ಪ್ರಕಾರ, ಕೇವಲ ಅಮೆರಿಕದಲ್ಲಿಯೇ 'ಜೈಲರ್' ₹6 ಕೋಟಿ ಕಲೆಕ್ಷನ್ ಮಾಡಿದೆ. ಹಾಗೇ ಅಡ್ವಾನ್ಸ್ ಬುಕಿಂಗ್‌ನಿಂದ ಭಾರತದಲ್ಲಿ ಕಲೆಹಾಕಿದ್ದು ₹12.8 ಕೋಟಿ. ಇದರಲ್ಲಿ ₹11.7 ಕೋಟಿ ತಮಿಳು ವರ್ಷನ್‌ನಿಂದ ಬಂದಿದ್ದರೆ. ₹1.1 ಕೋಟಿ ತೆಲುಗು ವರ್ಷನ್‌ನಿಂದ ಬಂದಿದೆ. ಈ ಮೂಲಕ ಅಡ್ವಾನ್ಸ್ ಬುಕಿಂಗ್‌ನಿಂದ ಬಂದ ಒಟ್ಟು ಹಣ ₹19 ಕೋಟಿ ಎಂದು ವರದಿಯಾಗಿದೆ.

ಮೊದಲ ದಿನದ ಅಂದಾಜು ಗಳಿಕೆ ಎಷ್ಟು?
'ಜೈಲರ್' ಸಿನಿಮಾ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡುತ್ತೆ? ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಟ್ರೇಡ್ ಎಕ್ಸ್‌ಪರ್ಟ್ಸ್ ಈಗಾಗಲೇ 'ಜೈಲರ್' ಮೊದಲ ದಿನ ಕಲೆಕ್ಷನ್ ಬಗ್ಗೆ ಲೆಕ್ಕಾಚಾರ ಹಾಕಿ ಕೂತಿದ್ದಾರೆ. ಒಂದು ಅಂದಾಜಿನ ಪ್ರಕಾರ ರಜನಿಕಾಂತ್ ಸಿನಿಮಾ ಮೊದಲ ದಿನವೇ ವಿಶ್ವದಾದ್ಯಂತ ₹80 ಕೋಟಿಗೂ ಅಧಿಕ ಕಲೆಕ್ಷನ್ ಮಾಡುತ್ತದೆ. ಅದರಲ್ಲಿ ₹25 ಕೋಟಿ ಕೇವಲ ತಮಿಳುನಾಡಿನಿಂದಲೇ ಬರುತ್ತೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದಲ್ಲಿ ಕಲೆಕ್ಷನ್ ಎಷ್ಟು?
ರಜನಿಕಾಂತ್ ಸಿನಿಮಾಗಳು ಕರ್ನಾಟಕ, ಆಂಧ್ರ, ತೆಲಂಗಾಣ, ಕೇರಳ ಹಾಗೂ ಉತ್ತರ ಭಾರತದಲ್ಲಿ ಚೆನ್ನಾಗಿಯೇ ಓಡುತ್ತವೆ. ಅದರಲ್ಲೂ ಕರ್ನಾಟಕದಲ್ಲಿ ರಜನಿಕಾಂತ್ ದೊಡ್ಡ ಮಟ್ಟದ ಫ್ಯಾನ್ ಫಾಲೋವಿಂಗ್ ಇದೆ. ಹೀಗಾಗಿ ಮೊದಲ ದಿನ ಒಂದು ಕೋಟಿಗೂ ಅಧಿಕ ಕಲೆಕ್ಷನ್ ಆಗಬಹುದು ಎಂದು ಅಂದಾಜಿಸಲಾಗಿದೆ. ಕರ್ನಾಟಕ, ಆಂಧ್ರ, ತೆಲಂಗಾಣ, ಕೇರಳ ಹಾಗೂ ಉತ್ತರ ಭಾರತ ಇಷ್ಟು ಕಡೆಯಿಂದ ಸುಮಾರು ₹25 ಕೋಟಿ ಕಲೆಕ್ಷನ್ ಆಗಬಹುದು ಎಂದು ಅಂದಾಜು ಮಾಡಲಾಗಿದೆ.
ಮಲ್ಟಿಸ್ಟಾರರ್ ಸಿನಿಮಾ ಏನಾಗುತ್ತೆ?
'ಜೈಲರ್' ಸಿನಿಮಾದಲ್ಲಿ ಮಲ್ಟಿಸ್ಟಾರ್‌ಗಳ ದಂಡೇ ಇದೆ. ರಜನಿಕಾಂತ್ ಸಿನಿಮಾದಲ್ಲಿ ದಕ್ಷಿಣ ಹಾಗೂ ಉತ್ತರ ಭಾರತದ ತಾರೆಯರ ದಂಡೇ ಇದೆ. ಕನ್ನಡದಿಂದ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೇ ಮಲಯಾಳಂನಿಂದ ಮೋಹನ್‌ಲಾಲ್, ತೆಲುಗಿನಿಂದ ಸುನೀಲ್, ಬಾಲಿವುಡ್‌ನಿಂದ ಜಾಕಿ ಶ್ರಾಫ್ ನಟಿಸಿದ್ದಾರೆ. ಇನ್ನು ರಮ್ಯಾ ಕೃಷ್ಣ, ತಮನ್ನಾ ಕೂಡ ಈ ಸಿನಿಮಾದಲ್ಲಿ ಇರೋದು ಸಿನಿಮಾದ ಮತ್ತೊಂದು ಹೈಲೈಟ್.


Click it and Unblock the Notifications











