ಚಿತ್ರರಂಗಕ್ಕೆ ಸೂಪರ್‌ಸ್ಟಾರ್ ರಜನಿಕಾಂತ್ ಗುಡ್ ಬೈ? ಬಾಂಬ್ ಸಿಡಿಸಿದ ತಮಿಳು ನಿರ್ದೇಶಕ

ರಜನಿಕಾಂತ್‌ ಭಾರತೀಯ ಚಿತ್ರರಂಗ ಕಂಡ ಅತಿ ದೊಡ್ಡ ಸೂಪರ್‌ಸ್ಟಾರ್. ದಕ್ಷಿಣ ಭಾರತದಲ್ಲಷ್ಟೇ ಅಲ್ಲ. ವಿಶ್ವದ ಮೂಲೆ ಮೂಲೆಯಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಅಭಿಮಾನಿಗಳು ಇದ್ದಾರೆ. ರಜನಿ ರಿಲೀಸ್ ಅಲ್ಲ, ಸಿನಿಮಾ ಅನೌನ್ಸ್ ಆದರೆ ಸಾಕು ಸಂಭ್ರಮ ಪಡುತ್ತಾರೆ.

72 ವರ್ಷದ ಸೂಪರ್‌ಸ್ಟಾರ್ ರಜನಿಕಾಂತ್ ಇನ್ನೂ ಬ್ಯೂಸಿಯಾಗಿದ್ದಾರೆ. ಇಂದಿನ ಪೀಳಿಗೆ ಮುಂದೆ ತೊಡೆತಟ್ಟಿ ನಿಲ್ಲುಷ್ಟು ಪವರ್‌ಫುಲ್. ರಜನಿ ಸಿನಿಮಾ ರಿಲೀಸ್ ಆದರೆ, ಇಂದಿಗೂ ಬಾಕ್ಸಾಫೀಸ್ ಶೇಕ್ ಆಗುತ್ತೆ. ಅದಕ್ಕೆ ಕೋಟಿ ಕೋಟಿ ಹಣ ಸುರಿಯೋದಕ್ಕೆ ತಮಿಳು ನಿರ್ಮಾಪಕರು ತುದಿಗಾಲಲ್ಲಿ ನಿಲ್ಲುತ್ತಾರೆ.

Superstar Rajinikanth last movie with Lokesh Kanagaraj says Tamil actor Mysskin

ಕಳೆದ ಕೆಲವು ದಿನಗಳಿಂದ ತಮಿಳು ಚಿತ್ರರಂಗದಲ್ಲಿ ಸುದ್ದಿಯೊಂದು ಹರಿದಾಡುತ್ತಿತ್ತು. ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ ಆಕ್ಷನ್ ಕಟ್ ಹೇಳುತ್ತಾರೆ ಎನ್ನಲಾಗಿತ್ತು. ಈ ಮಧ್ಯೆನೇ ರಜನಿ ಅಭಿಮಾನಿಗಳಿಗೆ ನಿರಾಸೆಯಾಗುವಂತಹ ಸುದ್ದಿಯೊಂದು ಹರಿದಾಡುತ್ತಿದೆ. ಶೀಘ್ರದಲ್ಲಿಯೇ 'ತಲೈವಾ' ಸಿನಿಮಾಗೆ ಗುಡ್ ಬೈ ಹೇಳಲಿದ್ದಾರೆ ಎನ್ನಲಾಗುತ್ತಿದೆ.

ಲೋಕೇಶ್ ಕನಗರಾಜ್‌ ಜೊತೆ 171ನೇ ಸಿನಿಮಾ?

ತಮಿಳಿನ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ 'ಲಿಯೋ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ದಳಪತಿ ವಿಜಯ್ ನಟಿಸುತ್ತಿರುವ ಈ ಸಿನಿಮಾದ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಈ ಮಧ್ಯೆನೇ ಅವರ ಮುಂದಿನ ಸಿನಿಮಾ ರಜನಿಕಾಂತ್ ಜೊತೆ ಎನ್ನಲಾಗುತ್ತಿದೆ. ಆದರೆ, ಅಧಿಕೃತವಾಗಿ ಇವರಿಬ್ಬರೂ ಕನ್ಫರ್ಮ್ ಮಾಡಿಲ್ಲ.

ವಿಷಯ ಹೀಗಿದ್ದರೂ, ರಜನಿಕಾಂತ್ 171ನೇ ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡೋದು ಕನ್ಫರ್ಮ್ ಅಂತ ತಮಿಳು ನಟ ಮಿಸ್ಕಿನ್ ರಿವೀಲ್ ಮಾಡಿದ್ದಾರೆ. ಅದೇ ಸಿನಿಮಾದಲ್ಲಿ ಅವರು ನಟಿಸುತ್ತಿದ್ದು, ಸ್ವತ: ರಜನಿಕಾಂತ್ ಅವರೇ ಲೋಕೇಶ್ ಕನಗರಾಜ್ ಅವರನ್ನು ಕರೆದು ಅವಕಾಶ ನೀಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ರಜನಿ ನಿವೃತ್ತಿ ಬಗ್ಗೆನೂ ಮಾತಾಡಿದ್ದಾರ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Superstar Rajinikanth last movie with Lokesh Kanagaraj says Tamil actor Mysskin

ರಜನಿಕಾಂತ್ ನಿವೃತ್ತಿ?

ರಜನಿ ಅಭಿಮಾನಿಗಳಿಗೆ ತಮಿಳು ಫಿಲ್ಮ್ ಮೇಕರ್ ಹಾಗೂ ನಟ ಮಿಸ್ಕಿನ್ ಒಂದು ಖುಷಿ ವಿಷಯ ಹಾಗೂ ಇನ್ನೊಂದು ಬೇಸರ ಸಂಗತಿಯನ್ನು ಹೇಳಿದ್ದಾರೆ. ಖುಷಿ ವಿಷಯ ರಜನಿಕಾಂತ್ 171ನೇ ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡುವುದು ಕನ್ಫರ್ಮ್. ಬೇಸರದ ಸಂಗತಿ ಏನಂದ್ರೆ, ಲೋಕೇಶ್ ಕನಗರಾಜ್ ಸಿನಿಮಾವೇ ರಜನಿಕಾಂತ್ ಕೊನೆಯ ಸಿನಿಮಾ ಆಗಲಿದೆ ಎಂದಿದ್ದಾರೆ.

ರಜನಿಕಾಂತ್ ಸಿನಿಮಾದಿಂದ ನಿವೃತ್ತಿ ಪಡೆಯುತ್ತಾರೆ ಅನ್ನೋದು ಅವರ ಅಭಿಮಾನಿಗಳಿಗೆ ಶಾಕಿಂಗ್ ಸಂಗತಿ. ಸೂಪರ್‌ಸ್ಟಾರ್ ಸಿನಿಮಾದಿಂದ ದೂರ ಉಳಿಯುತ್ತಾರೆ ಅನ್ನೋದನ್ನು ಅವರ ಅಭಿಮಾನಿಗಳಿಗೆ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಆದರೆ, ರಜನಿಕಾಂತ್ ಹಾಗೂ ಲೋಕೇಶ್ ಕನಗರಾಜ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತಿದೆ ಅನ್ನೋದು ಸಮಾಧಾನ ಕೊಟ್ಟಿದೆ.

ಎರಡು ಸಿನಿಮಾಗಳಲ್ಲಿ ರಜನಿ ಬ್ಯುಸಿ

ಸಿನಿಮಾದಿಂದ ನಿವೃತ್ತಿ ಪಡೆದುಕೊಳ್ಳುವ ಬಗ್ಗೆ ರಜನಿಕಾಂತ್ ಎಲ್ಲೂ ಅಧಿಕೃತವಾಗಿ ಹೇಳಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಿರುವ 'ಜೈಲರ್' ಸಿನಿಮಾದಲ್ಲಿ ರಜನಿ ನಟಿಸುತ್ತಿದ್ದಾರೆ. ಇದರಲ್ಲಿ ರಜನಿಗೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ಮೋಹನ್ ಲಾಲ್, ಜಾಕಿಶ್ರಾಫ್ ಅಂತಹ ದಿಗ್ಗಜರು ನಟಿಸುತ್ತಿದ್ದಾರೆ.

ಪುತ್ರ ಐಶ್ವರ್ಯಾ ರಜನಿಕಾಂತ್ ನಿರ್ದೇಶಕ ಮಾಡುತ್ತಿರುವ 'ಲಾಲ್ ಸಲಾಂ' ಸಿನಿಮಾದಲ್ಲೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊಯ್ದೀನ್ ಭಾಯ್ ಪಾತ್ರದಲ್ಲಿ ರಜನಿಕಾಂತ್ ನಟಿಸುತ್ತಿದ್ದು, ಫಸ್ಟ್ ಲುಕ್ ರಿಲೀಸ್ ಆಗಿದೆ.

More from Filmibeat

English summary
Superstar Rajinikanth last movie with Lokesh Kanagaraj says Tamil actor Mysskin, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X