ಕೂಲಿಂಗ್ ಗ್ಲಾಸ್.. ಗೋಲ್ಡನ್ ವಾಚ್.. ಮಾಸ್ ಲುಕ್‌ನಲ್ಲಿ ರಜನಿ; ಲೋಕೇಶ್ ಸಿನಿಮಾದ ಫಸ್ಟ್ ಲುಕ್ ಔಟ್

'ಲಾಲ್ ಸಲಾಂ' ಹೀನಾಯ ಸೋಲಿನಿಂದ ಬೇಜಾರಾಗಿದ್ದ ಸೂಪರ್‌ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಷನ್ ಸಿನಿಮಾ ಬಗ್ಗೆ ತಿಳಿದುಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದ ಫ್ಯಾನ್ಸ್‌ಗೆ ಹುಚ್ಚೆದ್ದು ಕುಣಿಯುವ ಸುದ್ದಿ ಹೊರಬಿದ್ದಿದೆ.

ತಮಿಳಿನ ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಕರಾಜ್ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಆಕ್ಷನ್ ಕಟ್ ಹೇಳಬೇಕು ಅನ್ನೋದು ಅಭಿಮಾನಿಗಳ ಮಹದಾಸೆಯಾಗಿತ್ತು. ಆ ಆಸೆ ಈಡೇರುವ ಸಮಯ ಬಂದಿದೆ. ಈಗಾಗಲೇ ರಜನಿಯ 171ನೇ ಸಿನಿಮಾವನ್ನು ಲೋಕೇಶ್ ಕನಕರಾಜ್ ನಿರ್ದೇಶನ ಮಾಡುವುದು ಅನ್ನೋದು ಈಗಾಗಲೇ ತೀರ್ಮಾನ ಆಗಿತ್ತು. ಅದು ಬಿಟ್ಟರೆ, ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ.

Superstar Rajinikanth Lokesh Kanagaraj movie Thalaivar 171 first look out

ಇಂದು (ಮಾರ್ಚ್ 28) ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ 171ನೇ ಸಿನಿಮಾದ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಲಾಗಿದೆ. ಈ ಮೂಲಕ ಅಧಿಕೃತವಾಗಿ ಲೋಕೇಶ್ ಕನಕರಾಜ್ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಆಕ್ಷನ್ ಕಟ್ ಹೇಳೋದು ಕನ್ಫರ್ಮ್ ಆಗಿದೆ. ರಜನಿಯ ಮಾಸ್ ಲುಕ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಸದ್ಯ ಈ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾದ ಫಸ್ಟ್ ಲುಕ್ ಅಷ್ಟೇ ರಿವೀಲ್ ಆಗಿದೆ. ಲೋಕೇಶ್ ಕನಕರಾಜ್ ಅವರದ್ದೇ ಕಥೆ. ಅವರದ್ದೇ ನಿರ್ದೇಶಕ ಅನ್ನೋದು ಕನ್ಫರ್ಮ್ ಆಗಿದೆ. ಅನಿರುದ್ಧ್ ಮ್ಯೂಸಿಕ್ ನೀಡುತ್ತಿದ್ದಾರೆ. ಸಾಹಸ ದೃಶ್ಯಗಳನ್ನು ಅನ್ಬರಿವ್ ನಿರ್ದೇಶನ ಮಾಡುತ್ತಿದ್ದಾರೆ. ಪ್ರೀ ಪ್ರೊಡಕ್ಷನ್ ಹಂತದಲ್ಲಿರುವ ಸಿನಿಮಾದಲ್ಲಿ ಯಾರೆಲ್ಲ ಕೆಲಸ ಮಾಡುತ್ತಿದ್ದಾರೆ ಅನ್ನೋದನ್ನು ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ರಿವೀಲ್ ಆಗಿದೆ.

'ತಲೈವರ್ 171' ಫಸ್ಟ್ ಲುಕ್‌ನಲ್ಲಿ ರಜನಿ ಮಾಸ್ ಅವತಾರ ಕಿಕ್ ಕೊಡುವಂತಿದೆ. ರಜನಿಕಾಂತ್ ಮ್ಯಾನರಿಸಂ ಎದ್ದು ಕಾಣುತ್ತಿದೆ. ಪಕ್ಕಾ ಸೂಪರ್‌ಸ್ಟಾರ್‌ಗಾಗಿಯೇ ಈ ಸಿನಿಮಾವನ್ನು ಮಾಡುತ್ತಿರೋದು ಪಕ್ಕಾ ಆಗಿದೆ. ಸ್ಟೈಲಿಶ್ ಆಗಿ ಕೂಲಿಂಗ್ ಗ್ಲಾಸ್ ತೊಟ್ಟು, ದುಬಾರಿ ವಾಚ್‌ಗಳನ್ನು ಸರಪಳಿ ಮಾಡಿಕೊಂಡು ಮಾಸ್ ಲುಕ್ ಕೊಟ್ಟಿರೋ ರಜನಿ ನೋಡಿ ಫ್ಯಾನ್ಸ್ ಕಳೆದು ಹೋಗಿದ್ದಾರೆ.

ಈ ಫಸ್ಟ್ ಲುಕ್ ಪೋಸ್ಟರ್ 171ನೇ ಸಿನಿಮಾದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಸದ್ಯ ಲುಕ್ ರಿಲೀಸ್ ಮಾಡಿದ್ದು, ಏಪ್ರಿಲ್ 22 ರಂದು ಟೀಸರ್ ಜೊತೆ ಟೈಟಲ್ ಅನ್ನು ರಿಲೀಸ್ ಮಾಡುವುದಕ್ಕೆ ನಿರ್ದೇಶಕ ಲೋಕೇಶ್ ಕನಕರಾಜ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. 'ಜೈಲರ್' ಅಂತಹ ಮೆಗಾ ಸಿನಿಮಾವನ್ನು ನಿರ್ಮಿಸಿರೋ ಕಲಾನಿಧಿ ಮಾರನ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇತ್ತೀಚೆಗೆ ಲೋಕೇಶ್ ಕನಕರಾಜ್ ತಲೈವರ್ 171ನೇ ಸಿನಿಮಾದ ಕೆಲವು ಸೀಕ್ರೆಟ್ ಅನ್ನು ಬಿಚ್ಚಿಟ್ಟಿದ್ದರು. ಈ ಸಿನಿಮಾ ಪಕ್ಕಾ ಹೈ ವೋಲ್ಟೇಜ್ ಆಕ್ಷನ್ ಸಿನಿಮಾ. ಹಲವು ವರ್ಷಗಳ ಬಳಿಕ ರಜನಿಕಾಂತ್ ಇಂತಹ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಸಿನಿಮಾ ಪ್ರಿ ಪ್ರೊಡಕ್ಷನ್‌ ಹಂತನಲ್ಲಿದ್ದು, ಶೂಟಿಂಗ್‌ಗೆ ಹೆಚ್ಚು ಸಮಯ ಹಿಡಿಯಲಿದೆ ಎಂದು ಲೋಕೇಶ್ ಕನಕರಾಜ್ ಹೇಳಿದ್ದರು. ರಜನಿಕಾಂತ್ ಕೂಡ ಈ ಸಿನಿಮಾದ ಕಥೆ ಕೇಳಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ ಎಂದು ಲೋಕೇಶ್ ಕನಕರಾಜ್ ಹೇಳಿಕೊಂಡಿದ್ದರು.

More from Filmibeat

English summary
Superstar Rajinikanth and Lokesh Kanagaraj combination movie Thalaivar 171 first look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X