Rajinikanth: ಕೇರಳದ ಕೊಚ್ಚಿಗೆ ಹೋಗಿ ಟೀ ಮಾರಿದ್ರಾ ರಜನಿಕಾಂತ್? ವೈರಲ್ ವಿಡಿಯೋ ಹಿಂದಿನ ಗುಟ್ಟೇನು?
ಸೂಪರ್‌ಸ್ಟಾರ್ ರಜನಿಕಾಂತ್ ಯಾರಿಗೆ ಗೊತ್ತಿಲ್ಲ ಹೇಳಿ. ಹೀಗೆ ರಸ್ತೆ ಮೇಲೆ ನಿಂತು ಆರಾಮಾಗಾಗಿ ಗಂಟೆಗಟ್ಟಲೆ ಮಾತಾಡುವುದಕ್ಕೆ ಸಾಧ್ಯವೇ? ಎಲ್ಲಿ ಹೋದರೂ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ರಜನಿಕಾಂತ್ ರಸ್ತೆಯಲ್ಲಿ ಇಷ್ಟು ಸಲೀಸಾಗಿ ನಿಂತು ಹರಟೆ ಹೊಡೆಯಲು ಸಾಧ್ಯವಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ರಜನಿಕಾಂತ್ ರಸ್ತೆಯಲ್ಲಿ ಆರಾಮಾಗಿ ನಿಂತು ಯಾರೊಂದಿಗೆ ಮಾತಾಡುತ್ತಿರುವ ವಿಡಿಯೋ. ಈ ವಿಡಿಯೋ ನೋಡಿ ಅಭಿಮಾನಿಗಳೇ ಶಾಕ್ ಆಗಿದ್ದಾರೆ. ಆ ವಿಡಿಯೋ ನೋಡಿ ರಜನಿಕಾಂತ್ ಯಾಕೆ ಶಾಕ್ ಆಗಿದ್ದಾರೆ ಅನ್ನೋದೇ ಇಂಟ್ರೆಸ್ಟಿಂಗ್ ಸ್ಟೋರಿ.

ರಜನಿಕಾಂತ್ ವೇಷ ಮರೆಸಿಕೊಂಡು ಬರುತ್ತಾರೆ. ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಓಡಾಡುತ್ತಾರೆ ಅನ್ನೋದನ್ನು ಅವರ ಗೆಳೆಯ ರಾಜಬಹದ್ದೂರ್ ಅವರೇ ಹಲವು ಸಂದರ್ಶಗಳಲ್ಲಿ ಹೇಳಿಕೊಂಡಿದ್ದಾರೆ. ಹೀಗಾಗಿ ರಜನಿಕಾಂತ್ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದು ಹೊಸತೇನು ಅಲ್ಲ. ಆದರೆ, ವೈರಲ್ ಆದ ವಿಡಿಯೋದಲ್ಲಿ ಆರಾಮಾಗಿ ಓಡಾಡುವುದಕ್ಕೆ ಸಾಧ್ಯವೇ ಇಲ್ಲ.
ಅಂದ್ಹಾಗೆ,ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇರೋದು ರಜನಿಕಾಂತ್ ಅಲ್ಲ. ಆದರೆ, ಥೇಟ್ ರಜನಿಕಾಂತ್‌ರನ್ನೇ ಹೋಲುವ ವ್ಯಕ್ತಿ. ಸೂಕ್ಷ್ಮವಾಗಿ ಗಮನಿಸಿದರೆ ರಜನಿಕಾಂತ್‌ರನ್ನೇ ಹೋಲುವ ವ್ಯಕ್ತಿ ಎಂಬು ಅರಿವಿಗೆ ಬರುತ್ತೆ. ಯಾವುದೋ ತಂಡದೊಂದಿಗೆ ನಿಂತು ಆರಾಮಾಗಿ ಮಾತಾಡುತ್ತಿರುವ ವಿಡಿಯೋ ನೋಡಿ ರಜನಿಕಾಂತ್ ಅಭಿಮಾನಿಗಳೇ ಶಾಕ್ ಆಗಿದ್ದಾರೆ.
ನೀಲಿ ಶರ್ಟ್ ಹಾಕಿಕೊಂಡು, ಹೆಚ್ಚು ಕಡಿಮೆ ಅದೇ ಬಣ್ಣದ ಚಡ್ಡಿ ಹಾಕೊಂಡು, ರಜನಿಯಂತೆಯೇ ಬಿಳಿ ಗಡ್ಡ ಬಿಟ್ಟು ನಿಂತಿದ್ದಾರೆ. ಹಾಗೇ ಕನ್ನಡಕವನ್ನು ತೊಟ್ಟಿದ್ದಾರೆ. ದೂರದಿಂದ ನೋಡಿದರೆ ಒಂದು ಕ್ಷಣಕ್ಕೆ ಇವರು ರಜನಿಕಾಂತ್ ಅವರೇ ಇರಬಹುದು ಎಂದು ಗೊಂದಲಕ್ಕೆ ಒಳಗಾಗುವುದು ಗ್ಯಾರಂಟಿ.
ಅಸಲಿಗೆ ವೈರಲ್ ಆಗಿರುವ ಈ ವಿಡಿಯೋದಲ್ಲಿರುವ ವ್ಯಕ್ತಿ ಯಾರು? ಅನ್ನೋ ಮಾಹಿತಿ ಹೊರಬಿದ್ದಿಲ್ಲ. ಆದರೆ, ವಿಡಿಯೋಗೆ ನೆಟ್ಟಿಗರು ಹಾಕಿರೋ ಕಮೆಂಟ್‌ಗಳಲ್ಲೊಂದು ಈತ ಕೇರಳದ ಕೊಚ್ಚಿ ಮೂಲದ ವ್ಯಕ್ತಿ ಎಂದು ಹೇಳಲಾಗಿದೆ. ಕೊಚ್ಚಿಯಲ್ಲಿ ಟೀ ಮಾರಿ ಜೀವನ ನಡೆಸುತ್ತಿದ್ದಾರೆ. ಆ ಏರಿಯಾದ ಸುತ್ತಮುತ್ತಲಿನ ಪ್ರದೇಶದಲ್ಲಿ ಇವರ ರಜನಿಕಾಂತ್ ಅಂತಲೇ ಫೇಮಸ್ ಎಂದು ಬರೆದುಕೊಂಡಿದ್ದಾರೆ.
ರಜನಿಕಾಂತ್ ಮತ್ತೆ ಸೂಪರ್ ಸಕ್ಸಸ್ ಮೂಡಿನಲ್ಲಿದ್ದಾರೆ. ತಲೈವ ನಟಿಸಿದ 'ಜೈಲರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ 600 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಮತ್ತೆ ರಜನಿಕಾಂತ್ ಸಕ್ಸಸ್ ಟ್ರ್ಯಾಕ್‌ಗೆ ಮರಳಿದ್ದಾರೆ. ಪುತ್ರಿ ಐಶ್ವರ್ಯಾ ರಜನಿಕಾಂತ್ ನಿರ್ದೇಶಿಸುತ್ತಿರುವ 'ಲಾಲ್ ಸಲಾಂ' ಸಿನಿಮಾ ಮುಗಿಸಿದ್ದು, ಅದು ಬಿಡುಗಡೆಯಾಗಬೇಕಿದೆ. ಹಾಗೇ 'ಜೈ ಭೀಮ್' ನಿರ್ದೇಶಕನ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾಗೂ ಸೂಪರ್‌ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ರಜನಿಕಾಂತ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ.


Click it and Unblock the Notifications











