Rajinikanth-Jailer: 'ಜೈಲರ್' ಸಾಂಗ್ ಯಾವಾಗ ಗುರು? ಎಂದವ್ರಿಗೆ ಸಿಕ್ಕೇಬಿಡ್ತು ಡೇಟ್.. ಜುಲೈ 6ಕ್ಕೆ ಹೆಜ್ಜೆ ಹಾಕೋದೇ!

ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ ಅಂದರೆ, ಸಂಭ್ರಮವೇನು ಕಮ್ಮಿ ಇರುತ್ತಾ? ಅಭಿಮಾನಿಗಳು ತಿಂಗಳಿನಿಂದಲೇ ಥಿಯೇಟರ್‌ನಲ್ಲಿ ಟಿಕೆಟ್ ಬುಕ್ ಮಾಡೋಕೆ ರೆಡಿಯಾಗುತ್ತಾರೆ. ಅಷ್ಟೇ ಯಾಕೆ? ಒಂದು ಹಾಡು ರಿಲೀಸ್ ಮಾಡ್ತೀವಿ ಅಂದರೂ ಸಾಕು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿಬಿಡುತ್ತಾರೆ.

ರಜನಿಕಾಂತ್ 'ಜೈಲರ್' ಸಿನಿಮಾದಲ್ಲಿ ನಟಿಸುತ್ತಿರೋದು ಗೊತ್ತೇ ಇದೆ. ಕಳೆದೆರಡು ದಿನಗಳಿಂದ ಮೊದಲ ಹಾಡಿನ ಪ್ರೋಮೊವನ್ನು ಇಂದು (ಜುಲೈ 3) ರಿಲೀಸ್ ಮಾಡುತ್ತೇವೆ ಎಂದು ಅನೌನ್ಸ್ ಮಾಡಿದ್ದರು. ಅದಕ್ಕೆ ತಕ್ಕಂತೆ ಈಗ ಚಿಕ್ಕದೊಂದು ವಿಡಿಯೋ ರಿಲೀಸ್ ಆಗಿದೆ.

Rajinikanth-Jailer-Aniruddh-Nelson Dileep Kumar

'ಜೈಲರ್' ಪ್ರೋಮೊದಲ್ಲಿದಲ್ಲಿ ಮೊದಲ ಹಾಡಿನ ಬಗ್ಗೆ ಚರ್ಚೆಯಾಗಿದೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ನಡುವಿನ ಮಜವಾದ ಸಂಭಾಷಣೆಯಿದೆ. ಜೊತೆ ಹಾಡಿನ ಚಿಕ್ಕದೊಂದು ತುಣುಕು ಹಾಗೂ ರಿಲೀಸ್ ಡೇಟ್ ಕೂಡ ಇದೆ.

'ಜೈಲರ್' ಸಾಂಗ್ ಝಲಕ್ ಹೇಗಿದೆ?

ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾದ ಖದರೇ ಹಾಗೇ. 72ನೇ ವಯಸ್ಸಿನಲ್ಲೂ ಸೂಪರ್‌ಸ್ಟಾರ್ ಪಟ್ಟವನ್ನು ಉಳಿಸಿಕೊಂಡಿರುವ ನಟ. ಈ ವಯಸ್ಸಿನಲ್ಲೂ ರಜನಿಕಾಂತ್ ಸ್ಟೈಲ್‌ಗೆ ಸರಿಸಾಟಿ ಯಾರೂ ಇಲ್ಲ. ಇಂತಹ ನಟನೊಂದಿಗೆ ನೆಲ್ಸನ್ ದಿಲೀಪ್ ಕುಮಾರ್, ಅನಿರುದ್ಧ್ ರವಿಚಂದರ್ ಅಂತಹವರು ಸೇರಿದರೆ ಹೇಗಿರುತ್ತೆ? ಆ ಕುತೂಹಲಕ್ಕೀಗ ತೆರೆಬೀಳುವ ಸಮಯ ಬಂದಿದೆ.

Rajinikanth-Jailer-Aniruddh-Nelson Dileep Kumar

'ಜೈಲರ್' ಸಿನಿಮಾದ ಮೊದಲ ಹಾಡು 'ಕಾವಾಲಾ'. ಇಂದು (ಜುಲೈ 3) ರಿಲೀಸ್ ಆಗಿರುವ ವಿಡಿಯೋದಲ್ಲಿ ಹಾಡಿನ ಕೊನೆಯಲ್ಲಿ ಒಂದು ಝಲಕ್ ಕೂಡ ಇದೆ. ಅನಿರುದ್ಧ ರವಿಚಂದರ್ ಕಡೆಯಿಂದ ಮತ್ತೊಂದು ಪವರ್‌ಫುಲ್ ಡ್ಯಾನ್ಸಿಂಗ್ ಸಾಂಗ್ ಬರುತ್ತೆ ಅನ್ನೋ ಸುಳಿವು ಸಿಕ್ಕಿದೆ.

ಫ್ಯಾನ್ಸ್ ರಿಯಾಕ್ಷನ್ ಏನಿದೆ?

ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಹಾಗೂ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ ರವಿಚಂದರ್ ನಡುವಿನ ಸಂಭಾಷಣೆ ರಜನಿ ಫ್ಯಾನ್ಸ್‌ಗೆ ಕಿಕ್ ಕೊಡುತ್ತಿದೆ. ಈ ವಿಡಿಯೋ ಫ್ಯಾನ್ಸ್‌ ಡಿಸೈನ್ ಡಿಸೈನ್ ಆಗಿ ಟ್ಯೂನ್ ಹಾಕುತ್ತಿದ್ದಾರೆ. ಒಬ್ಬರು "ಎಷ್ಟೋ ಮಾಸ್ ಹೀರೋಗಳು ಬಂದರೂ ರಜನಿ ಸರ್ ಮೊದಲಿಗರು" ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಈ ಹಾಡು ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿ, ಜನರ ಹೃದಯದಲ್ಲಿ ಸ್ಥಾನ ಪಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಹೇಳಿದ್ದಾರೆ.

"ಆ ದಿನದಿಂದ ಇಂದಿನವರೆಗೆ, ನಾಯಕನಿಗೆ ಕಂಪೋಸ್ ಮಾಡಿದ ಹಾಡಿನೊಂದಿಗೆ ನಮ್ಮ ಆಟವನ್ನು ತೋರಿಸುತ್ತೇವೆ." ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "Actor + Dancer +Singer + Pan World Star + Craze Kaa Baap + Motivater + Handsome + A man with Diamond heart = Thalaivaaa Sir.." ಎಂದು ಕಮೆಂಟ್ ಮಾಡಿದ್ದಾರೆ.

72 ವರ್ಷದ ಸೂಪರ್‌ಸ್ಟಾರ್

ಸೂಪರ್‌ಸ್ಟಾರ್ ರಜನಿಕಾಂತ್‌ಗೀಗ 72 ವರ್ಷ. ಈ ವಯಸ್ಸಿನಲ್ಲೂ ರಜನಿಕಾಂತ್ ಸೂಪರ್‌ಸ್ಟಾರ್‌ಗಳೊಂದಿಗೆ ಪೈಪೋಟಿ ಕೊಡುತ್ತಿದ್ದಾರೆ. ಅದಕ್ಕೆ ಅಭಿಮಾನಿಗಳು ಕೂಡ "ವಿಶ್ವದ 72 ವರ್ಷದ ಸೂಪರ್‌ಸ್ಟಾರ್" ಎಂದು ಬಿರುದು ನೀಡುತ್ತಿದ್ದಾರೆ. ಸದ್ಯ ಚಿಕ್ಕದೊಂದು ತುಣಿಕಿನಿಂದ "ಕಾವಾಲಾ.." ಸಾಂಗ್ ಹೇಗಿರುತ್ತೆ? ಅನ್ನೋದನ್ನು ಚಿತ್ರತಂಡ ತೋರಿಸಿದೆ.

ಇದೇ ಜುಲೈ 6ರಂದು ಹಾಡು ರಿಲೀಸ್ ಆಗಲಿದ್ದು, ಈ ಹಾಡನ್ನು ಕೇಳುವುದಕ್ಕೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ರಜನಿಕಾಂತ್ ಜೊತೆ ಶಿವರಾಜ್‌ಕುಮಾರ್, ಮೋಹನ್‌ಲಾಲ್, ಜಾಕಿ ಶ್ರಾಫ್ ಸೇರಿದಂತೆ ದಿಗ್ಗಜರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Superstar Rajinikanth Movie Jailer First Single Kaavaalaa Promo out Fans Thrilled. Kaavaalaa song will be releasing on July 6th, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X