"ರಾಘವ ಲಾರೆನ್ಸ್ ಹೀಗೆ ವರ್ತಿಸಬಹುದೇ.. ಆಶ್ಚರ್ಯ ಆಗುತ್ತೆ": 'ಜಿಗರ್ತಾಂಡ 2' ನೋಡಿ ರಜನಿ ಪತ್ರ

ತಮಿಳಿನ ಜನಪ್ರಿಯ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸಿದ 'ಜಿಗರ್ತಾಂಡ ಡಬಲ್ ಎಕ್ಸ್' ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ರಾಘವ ಲಾರೆನ್ಸ್ ಹಾಗೂ ಎಸ್.ಜೆ.ಸೂರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಈ ಇಬ್ಬರೂ ನಟರದ್ದೂ ವಿಭಿನ್ನ ಪಾತ್ರ.

ಕಾರ್ತಿಕ್ ಸುಬ್ಬರಾಜು ಸಿನಿಮಾ ಅನ್ನೋದು ಒಂದು ಬ್ರ್ಯಾಂಡ್. ಇನ್ನು ಈ ಸಿನಿಮಾದಲ್ಲಿ ತಮಿಳಿನ ಇಬ್ಬರು ಅತ್ಯುತ್ತಮ ನಟರು ಹಿಂದೆಂದೂ ಕಾಣದ ಅವತಾರದಲ್ಲಿ ಕಂಡಿದ್ದಾರೆ. ತಮಿಳುನಾಡಿನಲ್ಲೂ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ. 'ಜಿಗರ್ತಾಂಡ ಡಬಲ್ ಎಕ್ಸ್' ಕೇವಲ ನಾಲ್ಕು ದಿನಕ್ಕೆ 35 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ ಎನ್ನಲಾಗಿದೆ.

Superstar rajinikanth released a statement praising jigarthanda double x

ಈ ಸಿನಿಮಾ ನೋಡಿ ಸೂಪರ್‌ಸ್ಟಾರ್ ರಜನಿಕಾಂತ್ ಚಿತ್ರತಂಡಕ್ಕೆ ಸುಧೀರ್ಘ ಪತ್ರವನ್ನು ಬರೆದಿದ್ದಾರೆ. "ರಾಘವ ಲಾರೆನ್ಸ್ ಹೀಗೆ ವರ್ತಿಸಬಹುದೇ.. ಆಶ್ಚರ್ಯ ಆಗುತ್ತೆ" ಎಂದು ರಜನಿಕಾಂತ್ ಹೇಳಿದ್ದಾರೆ. ಅಷ್ಟಕ್ಕೂ ಸೂಪರ್‌ಸ್ಟಾರ್ ಬರೆದ ಪತ್ರ ಏನಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಜಿಗರ್ತಾಂಡ ಡಬಲ್ ಎಕ್ಸ್' ಡಿಫ್ರೆಂಟ್ ಸಿನಿಮಾ

'ಜಿಗರ್ತಾಂಡ ಡಬಲ್ ಎಕ್ಸ್' ವಿಭಿನ್ನ ಕಥೆಯುಳ್ಳ ಸಿನಿಮಾ. ಸಿನಿಮಾ ರಿಲೀಸ್ ಆದಲ್ಲಿಂದ ನಿರ್ದೇಶಕ ಕಾರ್ತಿಕ್ ಸುಬ್ಬರಾಜು, ರಾಘವ ಲಾರೆನ್ಸ್, ಎಸ್‌.ಜೆ ಸೂರ್ಯ ಮೂವರಿಗೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಕಾರ್ತಿ ನಟಿಸಿದ 'ಜಪಾನ್' ಸಿನಿಮಾ ಕೂಡ ಒಟ್ಟಿಗೆ ರಿಲೀಸ್ ಆಗಿದ್ದು, ಬಾಕ್ಸಾಫೀಸ್‌ನಲ್ಲಿ ಅದಕ್ಕಿಂತಲೂ ಹೆಚ್ಚು ಗಳಿಕೆ ಕಂಡಿದೆ ಎಂದು ವರದಿಗಳಾಗಿವೆ. ಇದೇ ವೇಳೆ ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ ನೋಡಿ ಚಿತ್ರತಂಡಕ್ಕೆ ಪತ್ರ ಬರೆದಿದ್ದಾರೆ.

ಸೂಪರ್‌ಸ್ಟಾರ್ ರಜನಿಕಾಂತ್ ಹೇಳಿದ್ದೇನು?

ರಜನಿಕಾಂತ್ 'ಜಿಗರ್ತಾಂಡ ಡಬಲ್ ಎಕ್ಸ್' ಸಿನಿಮಾ ವೀಕ್ಷಿಸಿದ್ದಾರೆ. ಈ ಹಿಂದೆ ಕಾರ್ತಿಕ್ ಸುಬ್ಬರಾಜು ರಜನಿಗಾಗಿ 'ಪೆಟ್ಟಾ' ಸಿನಿಮಾ ನಿರ್ದೇಶಿಸಿದ್ದರು. ಈ ಬಾಂಡಿಂಗ್ ಮುಂದುವರೆದಿದೆ. ಹೀಗಾಗಿ ಸಿನಿಮಾ ನೋಡಿ ಚಿತ್ರತಂಡಕ್ಕೆ ಪತ್ರ ಬರೆದಿದ್ದಾರೆ. 'ಜಿಗರ್ತಾಂಡ ಡಬಲ್ ಎಕ್ಸ್' ಸಿನಿಮಾವನ್ನು ರಜನಿ ಕುರುಂಜಿ ಹೂವಿಗೆ ಹೊಲಿಸಿದ್ದಾರೆ. ಹಾಗೇ ಪ್ರಮುಖ ಪಾತ್ರಗಳ ಬಗ್ಗೆನೂ ವರ್ಣಿಸಿದ್ದಾರೆ.

Superstar rajinikanth released a statement praising jigarthanda double x

ಲಾರೆನ್ಸ್ ಈ ರೀತಿ ವರ್ತಿಸಬಹುದೇ?

ಕಾರ್ತಿಕ್ ಸುಬ್ಬರಾಜ್ ಅವರ ನಿರ್ದೇಶನ ಅದ್ಭುತ. ಇದೊಂದು ವಿಶಿಷ್ಟ ಕಥೆಯುಳ್ಳ ಸಿನಿಮಾ. ಸಿನಿಪ್ರಿಯರು ಇಂತಹ ಹೊಸ ದೃಶ್ಯಗಳನ್ನು ನೋಡಿಲ್ಲ. ರಾಘವ ಲಾರೆನ್ಸ್ ಅವರನ್ನು ನೋಡಿ ಈ ರೀತಿ ವರ್ತಿಸಬಹುದೇ ಎಂದು ನಮಗೆ ಆಶ್ಚರ್ಯವಾಗುತ್ತದೆ. ಎಸ್.ಜೆ.ಸೂರ್ಯ ಇಂದಿನ ಸ್ಟಾರ್. ಈ ಸಿನಿಮಾದಲ್ಲಿ ಖಳನಟರ ಹಾಸ್ಯದ ಜೊತೆಗೆ ಪಾತ್ರಗಳ ಮಿಶ್ರಣವಾಗಿದೆ ಎಂದು ರಜನಿಕಾಂತ್ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.

ಆಕ್ಷನ್ ಸೀಕ್ವೆನ್ಸ್ ಅದ್ಭುತ

'ಜಿಗರ್ತಾಂಡ ಡಬಲ್ ಎಕ್ಸ್'ನಲ್ಲಿ ಆಕ್ಷನ್ ಸೀಕ್ವೆನ್ಸ್ ಅದ್ಭುತವಾಗಿದೆ. ದಿಲೀಪ್ ಸುಬ್ರಾಯನ್ ನಿರ್ದೇಶಿಸಿದ ಸೀನ್‌ಗಳು ಚೆನ್ನಾಗಿದೆ ಎಂದು ಹೊಗಳಿದ್ದಾರೆ. ಕ್ಯಾಮರಾ, ಆರ್ಟ್ ಡೈರೆಕ್ಷನ್, ಸಂತೋಷ್ ನಾರಾಯಣ್ ಡಿಫ್ರೆಂಟ್ ಮ್ಯೂಸಿಕ್ ಇಷ್ಟ ಆಗುತ್ತೆ. ಸಂಗೀತ ಈ ಸಿನಿಮಾಗೆ ಜೀವ ತುಂಬುತ್ತೆ. ಈ ಸಿನಿಮಾ ಮೂಲಕ ಸಂಗೀತದಲ್ಲಿ ಮಾಸ್ಟರ್ ಎಂಬುದನ್ನು ಸಾಬೀತು ಮಾಡಿದ್ದಾರೆಂದು ರಜನಿಕಾಂತ್ ಹೇಳಿದ್ದಾರೆ.

More from Filmibeat

English summary
superstar rajinikanth released a statement praising jigarthanda double x
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X