'ಗ್ರೇಟ್ ಎಸ್ಕೇಪ್' ಮಲಯಾಳಂ ಮೀಟೂ ಬಗ್ಗೆ ನಂಗೇನು ಗೊತ್ತಿಲ್ಲ ಎಂದ ರಜನಿ: ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ನ್ಯಾಯಮೂರ್ತಿ ಹೇಮಾ ಕಮಿಟಿ ವರದಿ ಬಹಿರಂಗಗೊಂಡ ಬಳಿಕ ಮಲಯಾಳಂ ಚಿತ್ರರಂಗ ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ. ಈ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ ಹಲವು ಸಮಸ್ಯೆಗಳನ್ನು ಈ ವರದಿ ಬೆಳಕಿಗೆ ತಂದಿತ್ತು. ಈ ವರದಿ ಬಳಿಕ ಹಲವು ಮಂದಿ ನಟಿಯರು ತಮಗಾದ ಅನುಭವವನ್ನು ಹೊರ ಹಾಕಿದ್ದರು.

ಮಲಯಾಳಂ ಮೀಟೂ ಬಗ್ಗೆ ನಟಿಯರು ಧೈರ್ಯದಿಂದ ಮುಂದೆ ಬಂದು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಸಂಬಂಧ ಕೆಲವು ಮಲಯಾಳಂ ಚಿತ್ರರಂಗದ ದಿಗ್ಗಜರು ಮೇಲೆ ಗಂಭೀರ ಆರೋಪವನ್ನು ಎದುರಿಸುತ್ತಿದ್ದಾರೆ. ನಿರ್ದೇಶಕ ರಂಜಿತ್, ಹಿರಿಯ ನಟ ಮುಕೇಶ್ ಅಂತಹ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎಫ್‌ಐಆರ್ ಅನ್ನು ದಾಖಲಿಸಿಕೊಂಡಿದ್ದಾರೆ.

Superstar Rajinikanth shocking response to Hema Committee Report here is netizens reaction

ಮಲಯಾಳಂ ಚಿತ್ರರಂಗದ ಬಗ್ಗೆ ಹೇಮಾ ಕಮಿಟಿ ವರದಿ ನೀಡಿದ್ದಂತೆ ಬೇರೆ ಭಾಷೆಯಲ್ಲೂ ಇಂತಹದ್ದೇ ಕಮಿಟಿಯನ್ನು ರಚಿಸಬೇಕು ಎಂಬ ಒತ್ತಡ ಕೇಳಿ ಬರುತ್ತಿದೆ. ಇತ್ತೀಚೆಗೆ ಸಮಂತಾ ಕೂಡ ತೆಲುಗು ಚಿತ್ರರಂಗದಲ್ಲಿಯೂ ಇಂತಹದ್ದೇ ಕಮಿಟಿಯನ್ನು ರಚಿಸಬೇಕು ಎಂದು ಹೇಳಿಕೆ ನೀಡಿದ್ದರು. ಎಲ್ಲಾ ಕಡೆ ಹೇಮಾ ಕಮಿಟಿ ವರದಿ ಬಗ್ಗೆ ಚರ್ಚೆಯಾಗುತ್ತಿರುವಾಗಲೇ ಸೂಪರ್‌ಸ್ಟಾರ್ ರಜನಿಕಾಂತ್ ಮಾತ್ರ ತನಗೇನು ಗೊತ್ತೇ ಇಲ್ಲ ಎಂದಿದ್ದಾರೆ.

ಹೌದು, ನಿನ್ನೆ (ಸೆಪ್ಟೆಂಬರ್ 1) ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಹೇಮಾ ಕಮಿಟಿ ವರದಿ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಆದರೆ, ರಜನಿಕಾಂತ್ ಈ ಬಗ್ಗೆ ತನಗೇನು ಗೊತ್ತಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ರಜನಿಕಾಂತ್ ವಿರುದ್ಧ ತಿರುಗಿಬಿದ್ದಿದ್ದಾರೆ.

Superstar Rajinikanth shocking response to Hema Committee Report here is netizens reaction

ಸೂಪರ್ ಸ್ಟಾರ್ ರಜನಿಕಾಂತ್ ತಾವು ನಟಿಸಿರುವ ಹೊಸ ಸಿನಿಮಾ 'ವೆಟ್ಟೈಯಾನ್' ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದರು. ಈ ವೇಳೆ ರಜನಿಕಾಂತ್‌ಗೆ ಮಲಯಾಳಂ ಚಿತ್ರರಂಗದ ಕಾಮಕಾಂಡದ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದರು. ಆ ವೇಳೆ ಶಾಕ್ ಆದ ರಜನಿಕಾಂತ್ " ಹೇಮಾ ಕಮಿಟಿ, ಮಲಯಾಳಂ. ಕ್ಷಮಿಸಿ, ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ" ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹೀಗಂದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಹೇಮಾ ಕಮಿಟಿ ವರದಿ ಬಗ್ಗೆ ಸೂಪರ್‌ಸ್ಟಾರ್ ಪ್ರತಿಕ್ರಿಯೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ಮಲಯಾಳಂ ಚಿತ್ರರಂಗವನ್ನು ಅಲ್ಲೋಲ ಕಲ್ಲೋಲ ಮಾಡುತ್ತಿರುವ ಸಂಗತಿ ಗೊತ್ತಿಲ್ಲವೇ?", "ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ವಿಷಯ ರಜನಿಕಾಂತ್‌ಗೆ ಗೊತ್ತಿಲ್ಲ" ಅಂತೆಲ್ಲ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ಸೂಪರ್‌ಸ್ಟಾರ್ ರಜನಿಕಾಂತ್ ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ 'ವೆಟ್ಟೈಯಾನ್' ಸಿನಿಮಾ ರೆಡಿಯಾಗಿದ್ದು, ಅಕ್ಟೋಬರ್ 10ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿಸ ಸೂರ್ಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅತಿಥಿಯಾಗಿ ನಟಿಸಿದ್ದಕ್ಕೆ ಸೂಪರ್‌ಸ್ಟಾರ್ ರಜನಿಕಾಂತ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಹಾಗೇ 'ಕಂಗುವಾ' ಸಿನಿಮಾನೂ ಹಿಟ್ ಆಗಲಿ ಎಂದು ಹಾರೈಸಿದ್ದಾರೆ.

More from Filmibeat

English summary
Superstar Rajinikanth shocking response to Hema Committee Report:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X