ಊರುಗೋಲು ಹಿಡಿದು ಬಾಬಾಜಿ ಗುಹೆ ಕಡೆಗೆ ಹೆಚ್ಚು ಹಾಕಿದ ರಜನಿಕಾಂತ್ಲ; ವಿಡಿಯೋ ವೈರಲ್!

ಸೂಪರ್‌ಸ್ಟಾರ್ ರಜನಿಕಾಂತ್ ಇತ್ತೀಚೆಗೆ ಹಿಮಾಲಯದ ಕಡೆಗೆ ಪಯಣ ಬೆಳೆಸಿದ್ದಾರೆ. ಬಹಳ ದಿನಗಳ ಬಳಿಕ ಆಧ್ಯಾತ್ಮಿಕ ಪ್ರವಾಸ ಮಾಡುತ್ತಿದ್ದಾರೆ. ರಜನಿಕಾಂತ್‌ಗೆ ಹಿಮಾಲಯ ಹೊಸದೇನು ಅಲ್ಲ. ಆಗಾಗ ಅಲ್ಲಿಗೆ ಹೋಗಿ ಕೆಲವು ದಿನಗಳು ಅಲ್ಲಿ ಇದ್ದು ಬರುತ್ತಾರೆ. ಈ ವರ್ಷ ಕೂಡ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡು ಹಿಮಾಲಯದಲ್ಲಿ ತಂಗಿದ್ದಾರೆ.

ಹಾಗಂತ ರಜನಿಕಾಂತ್ ವೇಷ ಮರೆಸಿಕೊಂಡು ಹಿಮಾಲಯದ ಸುತ್ತುತ್ತಿಲ್ಲ. ತಮ್ಮ ಅಭಿಮಾನಿಗಳಿಗಾಗಿ ರಜನಿಕಾಂತ್ ತಮ್ಮ ಆಧ್ಯಾತ್ಮಿಕ ಜರ್ನಿಯ ದರ್ಶನವನ್ನು ಮಾಡಿಸುತ್ತಿದ್ದಾರೆ. ಆಗಾಗ ಕೆಲವು ಫೋಟೊಗಳನ್ನು, ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದು ರಜನಿ ಅಭಿಮಾನಿಗಳಿಗೆ ಖುಷಿ ದುಪ್ಪಟ್ಟು ಮಾಡಿದೆ.

Superstar Rajinikanth visits Babaji Cave in the Himalayas video went viral

ರಜನಿಕಾಂತ್ ಕಾಲ ಇನ್ನೇನು ಮುಗೀತು ಅನ್ನುವಾಗಲೇ ತಾನಿನ್ನೂ ಸೂಪರ್‌ಸ್ಟಾರ್ ಅನ್ನೋದನ್ನು ತೋರಿಸಿದ್ದಾರೆ. 'ಜೈಲರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ 600 ಕೋಟಿ ರೂಪಾಯಿ ದೋಚುತ್ತಿದ್ದಂತೆ ರಜನಿ ಮತ್ತೆ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೀಗ ಡಿ.ಜೆ.ಜ್ಞಾನವೇಲ್ ನಿರ್ದೇಶಿಸಿದ ಸಿನಿಮಾದ ಚಿತ್ರೀಕರಣವನ್ನು ಮುಗಿಸಿದ್ದಾರೆ.

ಜ್ಞಾನವೇಲು ಸಿನಿಮಾ ಮುಗಿದ ಬೆನ್ನಲ್ಲೇ ರಜನಿಕಾಂತ್ ಮತ್ತೊಂದು ಪ್ರಾಜೆಕ್ಟ್‌ಗೆ ತಯಾರಿ ನಡೆಸಿದ್ದಾರೆ. ತಮಿಳಿನ ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಕರಾಜ್ ನಿರ್ದೇಶಿಸುತ್ತಿರುವ 'ಕೂಲಿ' ಸಿನಿಮಾದಲ್ಲಿ ಭಾಗಿಯಾಗಲಿದ್ದಾರೆ. ಇದೇ ಜೂನ್ 10ರಿಂದ ರಜನಿಕಾಂತ್ ಕೂಲಿ ಸಿನಿಮಾದಲ್ಲಿ ಭಾಗಿಯಾಗುತ್ತಿದ್ದಾರೆಂಬ ಮಾಹಿತಿಯಿದೆ. ಅಷ್ಟರೊಳಗೆ ರಜನಿ ತಮ್ಮ ಆಧ್ಯಾತ್ಮಿಕ ಪ್ರವಾಸ ಮುಗಿಸಿ ಬರಲಿದ್ದಾರೆ ಅಂತ ವರದಿಗಳಾಗಿವೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹರಿದಾಡುತ್ತಿದ್ದು, ರಜನಿಕಾಂತ್ ಊರುಗೋಲು ಹಿಡಿದು ಬಾಬಾಜಿ ಗುಹೆಯ ಕಡೆಗೆ ಪಯಣ ಬೆಳೆಸುತ್ತಿದ್ದಾರೆ. ಈ ವಿಡಿಯೋದಲ್ಲಿ ಅಲ್ಲಿನ ಪೊಲೀಸರು ಸೂಪರ್‌ಸ್ಟಾರ್‌ಗೆ ನೆರವಾಗಿದ್ದಾರೆ. ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 73ರ ಹರೆಯದಲ್ಲೂ ರಜನಿಕಾಂತ್ ಹಿಮಾಲಯ ಪ್ರವಾಸ ಮಾಡುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ವರದಿಯಾಗಿರುವ ಪ್ರಕಾರ, ರಜನಿಕಾಂತ್ ಇನ್ನು ಕೆಲವೇ ದಿನಗಳಲ್ಲಿ 'ಕೂಲಿ' ಚಿತ್ರೀಕರಣ ಭಾಗಿಯಾಗಲಿದ್ದಾರೆ. ಶೂಟಿಂಗ್ ಒಂದೆರಡು ದಿನ ಬಾಕಿ ಇರುವ ಹಾಗೆ ರಜನಿಕಾಂತ್ ಚೆನ್ನೈಗೆ ಮರಳಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ರಜನಿಕಾಂತ್ ಈಗ ಕಷ್ಟಕರವಾದ ಬಾಬಾ ಗುಹೆಯ ಕಡೆಗೆ ಪಯಣ ಬೆಳೆಸಿದ್ದಾರೆ.

ರಜನಿಕಾಂತ್ 'ಕೂಲಿ' ಸಿನಿಮಾ ಮೇಲೆ ಅವರ ಅಭಿಮಾನಿಗಳು ನೀರಿಕ್ಷೆ ಇಟ್ಟುಕೊಂಡಿದ್ದಾರೆ. ಈ ಹಿಂದೆ ನಿರ್ದೇಶಕ ಲೋಕೇಶ್ ಕನಕರಾಜ್ ಸಂದರ್ಶನವೊಂದರಲ್ಲಿ ರಜನಿಕಾಂತ್ ವಿಭಿನ್ನ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಹಿಂದೆ ನಟಿಸಿದ ಸಿನಿಮಾಗಿಂತಲೂ ಹೆಚ್ಚು ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದಿದ್ದರು. ಈಗಾಗಲೇ ರಿಲೀಸ್ ಆಗಿರೋ ಸಿನಿಮಾದ ಫಸ್ಟ್ ಲುಕ್ ಟೀಸರ್, ಫ್ಯಾನ್ಸ್‌ಗೆ ಮತ್ತಷ್ಟು ಥ್ರಿಲ್ ಕೊಟ್ಟಿದೆ.

More from Filmibeat

English summary
Rajinikanth visits Babaji Cave:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X