ಕೇರಳದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್; ಕೈಯಲ್ಲೇ ಕರ್ಪೂರ ಹಚ್ಚಿ ಬೆಳಗಿದ ತಲೈವಾ ಅಭಿಮಾನಿ

ಸೂಪರ್‌ಸ್ಟಾರ್ ರಜನಿಕಾಂತ್ ಹೋದಲ್ಲೆಲ್ಲ ಫ್ಯಾನ್ಸ್. ಅವರಿಗೆ ವಿಶ್ವದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಇದ್ದಾರೆ. ರಜನಿ ಸಿನಿಮಾ ರಿಲೀಸ್ ಆಗುತ್ತಿದೆ ಅಂತ ಗೊತ್ತಾದರೇ ಸಾಕು. ಒಂದು ತಿಂಗಳು ಮುಂಚಿತವಾಗಿಯೇ ಅಭಿಮಾನಿಗಳು ಸಂಭ್ರಮಿಸುವುದಕ್ಕೆ ಶುರುವಿಟ್ಟುಕೊಳ್ಳುತ್ತಾರೆ. ಥಿಯೇಟರ್‌ಗಳಲ್ಲಿ ತಲೈವಾ ಫ್ಯಾನ್ಸ್ ಸಂಭ್ರಮ ಮನೆ ಮನೆ ಮಾಡಿರುತ್ತೆ. ಇನ್ನು ತಮ್ಮದೇ ಊರಿಗೆ ಶೂಟಿಂಗ್‌ಗೆ ಬಂದರೆ ಅವರಿಗೆ ಏನಾಗಬೇಡ?

ರಜನಿಕಾಂತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ, ಲೋಕೇಶ್ ಕನಕರಾಜ್ ನಿರ್ದೇಶಿಸುತ್ತಿರುವ 'ಕೂಲಿ' ಶೂಟಿಂಗ್ ಮುಗಿಸುತ್ತಿದ್ದಂತೆ 'ಜೈಲರ್ 2' ಶುರು ಮಾಡಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಿರುವ ಈ ಸಿನಿಮಾದ ಶೂಟಿಂಗ್ ಸದ್ಯ ಕೇರಳದ ಅಟ್ಟಪ್ಪಾಡಿಯಲ್ಲಿ ನಡೆಯುತ್ತಿದೆ. ಈ ವೇಳೆ ಸೂಪರ್‌ಸ್ಟಾರ್ ರಜನಿಕಾಂತ್ ತಮ್ಮ ಅಭಿಮಾನಿಗಳಿಗೆ ಕಾಣಿಸಿಕೊಂಡಿದ್ದಾರೆ.

Superstar Rajinikanth waved his fans from his car while shooting Jailer 2 in Kerala

ಸೋಶಿಯಲ್ ಮೀಡಿಯಾದಲ್ಲಿ ರಜನಿಕಾಂತ್ ಅಭಿಮಾನಿಗಳಿಗೆ ಕೈ ಬೀಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಎಂದಿನಂತೆ ಬಿಳಿ ಬಣ್ಣದ ಕುರ್ತಾ ಹಾಗೂ ಪಂಚೆಯುಟ್ಟು ರಜನಿಕಾಂತ್ ತಮ್ಮ ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದಾರೆ. ತಲೈವಾರನ್ನು ಕಣ್ತುಂಬಿಕೊಂಡು ಕೇರಳದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ವೇಳೆ ರಜನಿ ಕೂಡ ದರ್ಶನ ಕೊಟ್ಟು ಅಭಿಮಾನಿಗಳಿಗೆ ಖುಷಿ ಪಡಿಸಿದ್ದಾರೆ.

'ಜೈಲರ್ 2' ಸಿನಿಮಾಗಾಗಿ ರಜನಿಕಾಂತ್ ಕೇರಳದ ಅಟ್ಟಪ್ಪಾಡಿಗೆ ಬಂದಿರುವುದು ಅಭಿಮಾನಿಗಳ ಕಿವಿಗೆ ಬಿದ್ದಿದೆ. ಹೀಗಾಗಿ ಸೂಪರ್‌ಸ್ಟಾರ್ ಫ್ಯಾನ್ಸ್ ಅವರನ್ನು ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ಕೆಲವರು ತಲೈವಾ ಎಂದು ಘೋಷಣೆಗಳನ್ನು ಹಾಕುತ್ತಿದ್ದರು. ಇದನ್ನು ಅರಿತ ರಜನಿಕಾಂತ್ ತಮ್ಮ ಕಾರಿನೊಳಗಿನಿಂದಲೇ ಎದ್ದು ನಿಂತು ಅಭಿಮಾನಿಗಳಿಗೆ ಕೈ ಬೀಸಿ ದರ್ಶನ ನೀಡಿದ್ದಾರೆ.

ರಜನಿಕಾಂತ್ ಕಾರು ಬರುತ್ತಿದೆ. ಇನ್ನೇನು ದರ್ಶನ ಕೊಡುತ್ತಾರೆ ಎನ್ನುವಾಗಲೇ ಅಭಿಮಾನಿಯೊಬ್ಬ ಅಂಗೈಯಲ್ಲೇ ಕರ್ಪೂರ ಹಚ್ಚಿ ಬೆಳಗಿದ್ದಾನೆ. ಇನ್ನು ಕೆಲವರು ತಲೈವಾ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ರಜನಿಕಾಂತ್ ಕೂಡ ತಮ್ಮ ಅಭಿಮಾನಿಗಳಿಗೆ ಸಿಗ್ನಲ್ ಕೊಟ್ಟಿದ್ದಾರೆ. ನಾಳೆನೂ ಬರುವುದಾಗಿ ಹೇಳಿದ್ದಾರೆ. ರಜನಿ ಹಾಗೂ ಅಭಿಮಾನಿಗಳ ಮುಖಾ ಮುಖಿಯಾಗಿದ್ದು, ಈ ವಿಡಿಯೋವನ್ನು ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

ನೆಲ್ಸನ್ ದಿಲೀಪ್ ಕುಮಾರ್ ಹಾಗೂ ರಜನಿ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಜೈಲರ್‌' ಸಿನಿಮಾ ಮೆಗಾ ಹಿಟ್ ಆಗಿತ್ತು. ಅದೇ ಜೋಷ್‌ನಲ್ಲಿಯೇ ಸೇಮ್ ಟೀಮ್ ಪಾರ್ಟ್ 2ಗೆ ಕೈ ಹಾಕಿತ್ತು. ಸಿನಿಮಾ ಶೂಟಿಂಗ್‌ಗೆ ತೆರಳುವುದಕ್ಕೂ ಮುನ್ನ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಝಲಕ್ ಒಂದನ್ನು ರಿಲೀಸ್ ಮಾಡಿದ್ದರು. ಅದಕ್ಕೆ ಸಿನಿ ಪ್ರಿಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಹೀಗಾಗಿ ಕಳೆದ ತಿಂಗಳಿನಿಂದಲೇ ಸಿನಿಮಾದ ಶೂಟಿಂಗ್ ಅನ್ನು ಆರಂಭ ಮಾಡಲಾಗಿದೆ.

ಇನ್ನು ನ್ಯೂಸ್ 18 ವರದಿ ಪ್ರಕಾರ ಏಪ್ರಿಲ್ 11 ರಿಂದ ರಜನಿಕಾಂತ್ ಕೇರಳದಲ್ಲಿ ಬೀಡುಬಿಟ್ಟಿದ್ದಾರೆ. ನಿರಂತರವಾಗಿ 'ಜೈಲರ್ 2' ಸಿನಿಮಾ ಶೂಟಿಂಗ್ ಅನ್ನು ಮಾಡುತ್ತಿದ್ದಾರೆ. ಸುಮಾರು 20 ದಿನಗಳ ಕಾಲ ಇಲ್ಲಿ ಚಿತ್ರೀಕರಣ ನಡೆಯಲಿದ್ದು, ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ರಮ್ಯಾ ಕೃಷ್ಣ ಹಾಗೂ ಮಿರ್ನಾ ಮೆನನ್ ಕೂಡ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ. 'ಜೈಲರ್ 2' ನಲ್ಲಿ ಟೈಗರ್ ಮುತ್ತುವೇಲ್ ಪಾಂಡಿಯನ್ ಅವತಾರದಲ್ಲಿ ರಜನಿಕಾಂತ್ ಮತ್ತಷ್ಟು ಅಬ್ಬರಿಸಲಿದ್ದಾರೆ.

'ಜೈಲರ್ 2' ಬಾಕ್ಸಾಫೀಸ್‌ನಲ್ಲಿ ಮೆಗಾ ಬ್ಲಾಕ್‌ಬಸ್ಟರ್ ಎಂದು ಸಾಬೀತಾಗಿತ್ತು. 'ಜೈಲರ್' ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ 650 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇನ್ನು ಶಿವಣ್ಣನ ಪಾತ್ರ ತಮಿಳುನಾಡಿನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅತಿಥಿ ಪಾತ್ರವಾಗಿದ್ದರೂ ಶಿವಣ್ಣ ಮ್ಯಾನರಿಸಂಗೆ, ಲುಕ್‌ಗೆ ಪರಭಾಷೆಯ ಪ್ರೇಕ್ಷಕರು ಕೂಡ ಫಿದಾ ಆಗಿದ್ದರು. ಇನ್ನು ಪಾರ್ಟ್ 2ನಲ್ಲೂ ಶಿವಣ್ಣ ಕಾಣಿಸಿಕೊಳ್ಳುತ್ತಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

More from Filmibeat

English summary
Superstar Rajinikanth waved his fans from his car while shooting Jailer 2 in Kerala;
Read more about: rajinikanth jailer shooting
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X