ಸೂಪರ್‌ಸ್ಟಾರ್ ರಜನಿಕಾಂತ್ ಕೂಲಿ ಟ್ರೈಲರ್ ಬೆಂಕಿ; ಆಮಿರ್, ನಾಗಾರ್ಜುನ, ಉಪ್ಪಿ ಲುಕ್‌ ಸಖತ್ ಕಿಕ್ಕು!

ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಬಹು ನಿರೀಕ್ಷೆಯ ಸಿನಿಮಾ 'ಕೂಲಿ'ಯ ಟ್ರೈಲರ್ ರಿಲೀಸ್ ಆಗಿದೆ. ಸಿನಿಮಾ ಬಿಡುಗಡೆಗೂ ಮುನ್ನ ಅವರ ಅಭಿಮಾನಿಗಳು ಟ್ರೈಲರ್‌ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ರಜನಿಕಾಂತ್ ಹಾಗೂ ಲೋಕೇಶ್ ಕನಗರಾಜ್ ಕಾಂಬಿನೇಷನ್ ಅಂದ್ಮೇಲೆ ಈ ಕ್ರೇಜ್ ಕಾಮನ್. ಅಭಿಮಾನಿಗಳ ಆ ನಿರೀಕ್ಷೆಗೆ ತಕ್ಕಂತೆ ಜಬರ್ದಸ್ತ್ ಮಾಸ್ ಟ್ರೈಲರ್ ರಿಲೀಸ್ ಆಗಿದೆ. ಸೂಪರ್‌ಸ್ಟಾರ್ ರಜನಿಕಾಂತ್ ಎನರ್ಜಿಗೆ ನೆಟ್ಟಿಗರು ಬಹುಪರಾಕ್ ಹೇಳುತ್ತಿದ್ದಾರೆ.

ರಜನಿಕಾಂತ್ ಸಿನಿಮಾ ಸ್ಟೈಲಿಶ್‌ ಆಗಿರುತ್ತೆ. ಮಾಸ್ ಸೀನ್‌ಗಳು, ಪವರ್‌ಫುಲ್ ಡೈಲಾಗ್‌ಗಳಿಗೇನು ಕಮ್ಮಿ ಇರುವುದಿಲ್ಲ. ಇನ್ನು ಸೂಪರ್‌ಸ್ಟಾರ್ ಜೊತೆ ಬೇರೆ ಬೇರೆ ಚಿತ್ರರಂಗದ ಸೂಪರ್‌ಸ್ಟಾರ್‌ಗಳು ಕೈ ಜೋಡಿಸಿದರೆ ಮುಗಿದೇ ಹೋಯ್ತು. 'ಜೈಲರ್‌' ಬಳಿಕ ಇಂತಹದ್ದೇ ಸೂಪರ್‌ಸ್ಟಾರ್ ಕಾಂಬಿನೇಷನ್‌ ಅನ್ನುಸ ಲೋಕೇಶ್ ಕನಗರಾಜ್ ನಿರ್ದೇಶಿಸಿದ 'ಕೂಲಿ' ಸಿನಿಮಾದಲ್ಲಿಯೂ ನೋಡಬಹುದು.

Superstar Rajinikanth s Coolie Movie Trailer Released Aamir Khan Nagarjuna Upendra Stunning look revealed

ಚೆನ್ನೈನಲ್ಲಿ 'ಕೂಲಿ' ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭ ನಡೆದಿದೆ. ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಆಡಿಯೋ ಸಮಾರಂಭದಲ್ಲಿ ತಾರೆಗಳ ಸಂಭ್ರಮವೇ ಸೇರಿತ್ತು. ಈ ಕಾರ್ಯಕ್ರಮಕ್ಕೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಇದೇ ವೇಳೆ ಎಲ್ಲರೂ ಕಾದು ಕೂತಿದ್ದ 'ಕೂಲಿ' ಸಿನಿಮಾದ ಟ್ರೈಲರ್ ಕೂಡ ರಿಲೀಸ್ ಮಾಡಲಾಗಿತ್ತು. ರಜನಿಕಾಂತ್ ಸ್ಟೈಲ್, ಪಂಚಿಂಗ್ ಡೈಲಾಗ್‌ಗಳು ಹಾಗೂ ಆಕ್ಷನ್ ಸೀನ್‌ಗಳನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಹಾಗಿದ್ದರೆ, 'ಕೂಲಿ' ಟ್ರೈಲರ್ ಹೇಗಿದೆ? ಆಮಿರ್ ಖಾನ್, ನಾಗಾರ್ಜುನ, ಉಪೇಂದ್ರ ಖದರ್ ಹೇಗಿದೆ? ತಿಳಿಯಲು ಮುಂದೆ ಓದಿ.

'ಕೂಲಿ' ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ 1.3 ಮಿಲಿಯನ್‌ಗೂ ಅಧಿಕ ವೀವ್ಸ್ ಕಂಡಿದೆ. ರಜನಿಕಾಂತ್ ಸಿನಿಮಾ ಮೇಲಿರುವ ಕ್ರೇಜ್‌ಗೆ ಇದೇ ಸಾಕ್ಷಿ. ಸೂಪರ್‌ಸ್ಟಾರ್ ಇಲ್ಲಿ ಪಕ್ಕಾ ಮಾಸ್, ವಿಂಟೇಜ್ ಶೈಲಿಯಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಲೋಕೇಶ್ ಕನಗರಾಜ್ ಟಿಪಿಕಲ್ ರಜನಿಕಾಂತ್ ಸಿನಿಮಾ ಮಾಡಿರೋದು ಟ್ರೈಲರ್ ಮೂಲಕ ಸಾಬೀತಾಗಿದೆ. ರಜನಿಯ ಸೈಲಿಶ್ ಲುಕ್, ಪಂಚಿಂಗ್ ಡೈಲಾಗ್ ಇಲ್ಲೂ ನೋಡಬಹುದು. ಕೋಪ, ಆಕ್ಷನ್, ಕಾಮಿಡಿಯ ತುಣುಕುಗಳು ಸೂಪರ್‌ಸ್ಟಾರ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ.

More from Filmibeat

English summary
Superstar Rajinikanth's Coolie Movie Trailer Released Aamir Khan, Nagarjuna, Upendra Stunning look revealed.
Read more about: rajinikanth trailer upendra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X