Chennai Rains: ಚೆನ್ನೈನಲ್ಲಿ ಭಾರೀ ಮಳೆ; ರಜನಿಕಾಂತ್ ಐಷಾರಾಮಿ ಮನೆಗೆ ನುಗ್ಗಿದ ಮಳೆ ನೀರು!

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ತಮಿಳುನಾಡಿನಾದ್ಯಂತ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಚೆನ್ನೈನಲ್ಲಿ ಬಿಡದೆ ಸುರಿಯುತ್ತಿರುವ ಮಳೆಗೆ ಚೆನ್ನೈನಲ್ಲಿನ ಜನರ ಜೀವನ ಅಸ್ತವ್ಯಸ್ತವಾಗಿದೆ. ಇನ್ನೂ ಎರಡು ಮೂರು ದಿನಗಳು ಈಗ ಭಾರೀ ಮಳೆಯಾಗುವುದಾಗಿ ಹವಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಅತಿಯಾಗಿ ಮಳೆ ಆಗುತ್ತಿರುವ ಬೆನ್ನಲ್ಲೇ ಚೆನ್ನೈನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಅತಿಯಾದ ಮಳೆಯಿಂದಾಗಿ ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ಭಾಗಗಲ್ಲಿ ಜನರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಿದೆ. ಪ್ರಮುಖ ರಸ್ತೆಗಳು ಜಲಾವೃತವಾಗಿವೆ. ಮನೆಗೆ ನೀರು ನುಗ್ಗಿದೆ. ಅತಿಯಾಗಿ ಮಳೆ ಸುರಿಯುತ್ತಿರುವ ಬೆನ್ನಲ್ಲೇ ಅಲ್ಲಿನ ಜನರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಕೆಲವರ ಮನೆಗಳಿಗೆ ನೀರು ನುಗ್ಗಿದ್ದು ಮನೆಯಿಂದ ಹೊರಗೆ ಬರಲಾರದ ಪರಿಸ್ಥಿತಿ ನಿರ್ಮಾಣ ಆಗಿದೆ.

Superstar Rajinikanth s house in Chennai s Poes Garden has been flooded after heavy rain

ಚೆನ್ನೈನ ಶ್ರೀಮಂತ ಏರಿಯಗಳಲ್ಲಿ ಒಂದಾದ ಪೋಯಸ್‌ ಗಾರ್ಡನ್‌ನಲ್ಲೂ ಮಳೆ ಅವಾಂತರವನ್ನು ಸೃಷ್ಟಿಸಿದೆ. ಬಹುತೇಕ ಸಿನಿಮಾ ಹಾಗೂ ರಾಜಕೀಯ ಮುಖಂಡರೇ ಇರುವ ಈ ಏರಿಯ ಕೂಡ ನೀರಿನಿಂದ ಜಲಾವೃತವಾಗಿದೆ. ಇದೇ ಏರಿಯಾದಲ್ಲಿ ಇರುವ ಸೂಪರ್‌ಸ್ಟಾರ್ ರಜನಿಕಾಂತ್ ಮನೆಗೂ ಮಳೆ ನೀರು ನುಗ್ಗಿದ್ದು, ಮನೆ ಮುಂದೆ ಕರೆಯಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

Superstar Rajinikanth s house in Chennai s Poes Garden has been flooded after heavy rain

ಸೂಪರ್‌ಸ್ಟಾರ್ ರಜನಿಕಾಂತ್, ಧನುಷ್, ಮಾಜಿ ಸಿ ಎಂ ದಿವಂಗತ ಜಯಲಲಿತಾ ಅಂತಹ ದಿಗ್ಗಜರ ಐ‍ಷಾರಾಮಿ ಬಂಗಲೆಗಳು ಇದೇ ಏರಿಯಾದಲ್ಲಿ ಇವೆ. ನಿನ್ನೆಯಿಂದ ಸುರಿಯುತ್ತಿರುವ ಮಳೆ ನೀರಿನಿಂದ ಈ ಏರಿಯಾಗೂ ನೀರು ನುಗ್ಗಿದೆ. ಸದ್ಯ ಪೋಯಸ್ ಗಾರ್ಡನ್‌ನಲ್ಲಿರುವ ರಜನಿಕಾಂತ್ ಮನೆಯೊಳಗೆ ನೀರು ನುಗ್ಗಿರುವ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

More from Filmibeat

English summary
Superstar Rajinikanth's house in Chennai's Poes Garden has been flooded after heavy rain:
Read more about: rajinikanth floods filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X