'ವಿಕ್ರಂ' ಬಳಿಕ ಮತ್ತೊಂದು ಅತಿಥಿ ಪಾತ್ರ: ಅಕ್ಷಯ್ ಸಿನಿಮಾದಲ್ಲಿ ಸೂರ್ಯ ಗೆಸ್ಟ್!

ಬಾಲಿವುಡ್‌ನ ಬಿಗ್ ಬಜೆಟ್ ಸಿನಿಮಾ 'ಸಾಮ್ರಾಟ್ ಪೃಥ್ವಿರಾಜ್' ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿದೆ. ಸಿನಿಮಾ ರಿಲೀಸ್ ಆಗಿ ಎರಡು ವಾರಗಳಾದರೂ, ಬಾಕ್ಸಾಫೀಸ್‌ನಲ್ಲಿ ಗೆಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಈ ಸೋಲಿನ ಬಳಿಕ ಅಕ್ಷಯ್ ಕುಮಾರ್ ಮತ್ತೊಂದು ಸಿನಿಮಾದ ಶೂಟಿಂಗ್ ಬ್ಯುಸಿಯಾಗಿದ್ದಾರೆ.

ಅಕ್ಷಯ್ ಕುಮಾರ್ ಸದ್ಯಕ್ಕೀಗ ತಮಿಳಿನ 'ಸೂರರೈ ಪೋಟ್ರು' ಸಿನಿಮಾದ ರಿಮೇಕ್‌ನಲ್ಲಿ ನಟಿಸುತ್ತಿದ್ದಾರೆ. 'ಸೂರರೈ ಪೋಟ್ರು' ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಾರೆ ಅನ್ನುವುದು ಹಳೆಯ ಸುದ್ದಿ. ಆದರೆ, ಕೆಲವು ದಿನಗಳಿಂದ ಹೊಸ ಸುದ್ದಿಯೊಂದು ಹರಿದಾಡಿತ್ತು. ಈ ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟ ಸೂರ್ಯ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಲೇ ಇತ್ತು. ಈಗ ಸ್ವತ: ಇಬ್ಬರು ಸೂಪರ್‌ಸ್ಟಾರ್‌ಗಳೇ ಕನ್ಫರ್ಮ್ ಮಾಡಿದ್ದಾರೆ.

ಸೂರರೈ ಪೋಟ್ರು ರಿಮೇಕ್‌ನಲ್ಲಿ ಸೂರ್ಯ

ಸೂರರೈ ಪೋಟ್ರು ರಿಮೇಕ್‌ನಲ್ಲಿ ಸೂರ್ಯ

ತಮಿಳು ನಟ ಸೂರ್ಯ ತಮ್ಮ ಸೋಶಿಯಲ್ ಮೀಡಿಯಾ ಖ್ಯಾತೆಯಲ್ಲಿ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. 'ಸೂರರೈ ಪೋಟ್ರು' ಸಿನಿಮಾದ ರಿಮೇಕ್‌ನಲ್ಲಿ ಅಕ್ಷಯ್ ಕುಮಾರ್ ಜೊತೆ ಸೂರ್ಯ ಕಾಣಿಸಿಕೊಂಡಿದ್ದಾರೆ. ಇದೇ ಫೋಟೊವನ್ನು ಸೂರ್ಯ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ನಟರೂ ಏರ್‌ಕ್ರಾಫ್ಟ್ ಮುಂದೆ ಪೋಸ್ಟ್ ಕೊಟ್ಟ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ತಮ್ಮದೇ ಸಿನಿಮಾದ ಸೂರ್ಯ ಅತಿಥಿ

ತಮಿಳು ನಟ ಸೂರ್ಯ ಅಭಿನಯದ 'ಸೂರರೈ ಪೋಟ್ರು' ಸಿನಿಮಾ ವಿಶ್ವದೆಲ್ಲಡೆ ಸಿಕ್ಕಾ ಪಟ್ಟೆ ಸದ್ದು ಮಾಡಿತ್ತು. ಸೂರ್ಯಗೆ ಬಹಳ ದಿನಗಳ ಬಳಿಕ ಸೂಪರ್ ಸಕ್ಸಸ್ ಕೊಟ್ಟ ಸಿನಿಮಾ ಆಗಿತ್ತು. ಈಗ ಇದೇ ಸಿನಿಮಾ ಬಾಲಿವುಡ್‌ನಲ್ಲಿ ರಿಮೇಕ್ ಆಗುತ್ತಿದ್ದು, ತಮ್ಮದೇ ಸಿನಿಮಾದ ಹಿಂದಿ ಅವತರಣಿಕೆಯಲ್ಲಿ ಸೂರ್ಯ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನೂ ಸುಧಾ ಕೊಂಗಾರ ಅವರೇ ನಿರ್ದೇಶನ ಮಾಡುತ್ತಿದ್ದಾರೆ.

ಕ್ಯಾ.ಗೋಪಿನಾಥ್ ಬಯೋಗ್ರಫಿ

ಕ್ಯಾ.ಗೋಪಿನಾಥ್ ಬಯೋಗ್ರಫಿ

'ಸೂರರೈ ಫೋಟ್ರು' ಸಿನಿಮಾ ಕರ್ನಾಟಕದ ಹೆಮ್ಮೆ ಕ್ಯಾಪ್ಟನ್ ಗೋಪಿನಾಥ್ ಅವರ ಚರಿತ್ರೆಯನ್ನು ಆಧರಿಸಿದ ಸಿನಿಮಾ. ಈ ಸಿನಿಮಾಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕ್ಯಾಪ್ಟನ್ ಗೋಪಿನಾಥ್ ಪಾತ್ರದಲ್ಲಿ ಸೂರ್ಯ ನಟಿಸಿದ್ದರು. ಇನ್ನು ಅಪರ್ಣ ಬಾಲಮುರಳಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಡಿಮೆ ಬೆಲೆಯಲ್ಲಿ ವಿಮಾನಯಾನದ ಸಾಮಾನ್ಯರ ಕನಸನ್ನು ನನಸು ಮಾಡಿದ ಕ್ಯಾಪ್ಟನ್ ಗೋಪಿನಾಥ್ ಕಥೆ ಬಾಲಿವುಡ್‌ನಲ್ಲೂ ಮೂಡಲಿದೆ.

ಪೃಥ್ವಿರಾಜ್ ಒಪ್ಪಲಿಲ್ಲ ಪ್ರೇಕ್ಷಕರು

ಪೃಥ್ವಿರಾಜ್ ಒಪ್ಪಲಿಲ್ಲ ಪ್ರೇಕ್ಷಕರು

ಕಳೆದ ಕೆಲವು ವರ್ಷಗಳಿಂದ ಅಕ್ಷಯ್ ಕುಮಾರ್‌ ಸೋಲು ಎಂಬುವುದನ್ನೇ ಕಂಡಿರಲಿಲ್ಲ. ಆದರೆ, ಈ ವರ್ಷ ಅಕ್ಷಯ್‌ಗೆ ಹೇಳಿಕೊಳ್ಳುವಂತಹ ಹಿಟ್ ಸಿನಿಮಾ ಸಿಕ್ಕಿಲ್ಲ. ಎರಡು ವಾರಗಳ ಹಿಂದಷ್ಟೇ ರಿಲೀಸ್ ಆಗಿದ್ದ ಸಾಮ್ರಾಟ್ ಪೃಥ್ವಿರಾಜ್ ಕೂಡ ಸೋಲುಂಡಿದೆ. ಹೀಗಾಗಿ 'ಸೂರರೈ ಪೋಟ್ರು' ಸಿನಿಮಾ ಅಕ್ಷಯ್‌ ಕುಮಾರ್‌ಗೆ ಮತ್ತೊಂದು ಗೆಲುವು ನೀಡುತ್ತಾ? ಅನ್ನುವುದನ್ನು ಬಾಲಿವುಡ್ ಎದುರು ನೋಡುತ್ತಿದೆ.

More from Filmibeat

English summary
Suriya Shoots Cameo in Akshay Kumar's Hindi remake of Soorarai Pottru in Chennai, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X