ಸೂರ್ಯ ಅಭಿನಯದ ‘ಕಂಗುವ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ

ಕಳೆದ ಕೆಲವು ದಿನಗಳಿಂದ ದಕ್ಷಿಣ ಭಾರತದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಬರೆಯುತ್ತಿವೆ. 'RRR','ಕೆಜಿಎಫ್', 'ಕಾಂತಾರ'ದಂತಹ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿದ್ದಂತೆ ಸೂಪರ್‌ಸ್ಟಾರ್ ಪ್ಯಾನ್ ಇಂಡಿಯಾ ಸಿನಿಮಾಗಳನ್ನೇ ಮಾಡುತ್ತಿದ್ದಾರೆ.

ಕನ್ನಡ, ತೆಲುಗು, ತಮಿಳು ಈ ಮೂರು ಭಾಷೆಯ ಸೂಪರ್‌ಸ್ಟಾರ್‌ಗಳು ಪ್ಯಾನ್ ಇಂಡಿಯಾ ಸಿನಿಮಾಗಳನ್ನೇ ಮಾಡುತ್ತಿದ್ದಾರೆ. ಈಗ ತಮಿಳಿನ ಮತ್ತೊಬ್ಬ ಸ್ಟಾರ್ ನಟ ಸೂರ್ಯ ಕೂಡ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೂವರೆಗೂ ಈ ಸಿನಿಮಾ ಬಗ್ಗೆ ಚಿಕ್ಕದೊಂದು ಸುಳಿವನ್ನೂ ಬಿಟ್ಟು ಕೊಟ್ಟಿರಲಿಲ್ಲ.

Surya 42nd Movie Title Kanguva Releasing 10 Languages At A Time

ಇದು ಸೂರ್ಯ ನಟನೆಯ 42ನೇ ಸಿನಿಮಾ. ಸಿರುಟ್ಟೈ ಶಿವ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಇದೊಂದು ಪಿರಿಯಾಡ್ ಡ್ರಾಮಾ. ಈಗ ಇದೇ ಸಿನಿಮಾದ ಟೈಟಲ್ ಫಿಕ್ಸ್ ಆಗಿದ್ದು, ಗ್ರ್ಯಾಂಡ್ ಆಗಿ ರಿಲೀಸ್ ಮಾಡಲಾಗಿದೆ.

ಸೂರ್ಯ 42ನೇ ಚಿತ್ರದ ಟೈಟಲ್ ಏನು?

ಈ ವರ್ಷ ಸೂರ್ಯ ನಟಿಸುತ್ತಿರುವ 42ನೇ ಸಿನಿಮಾ ಕುತೂಹಲ ಹೆಚ್ಚಿಸುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಸಿನಿಮಾವನ್ನು ಅನೌನ್ಸ್ ಮಾಡಲಾಗಿತ್ತು. ಅಲ್ಲಿಂದ ಇಲ್ಲಿವರೆಗೂ ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ನಡೆದಿದೆ. ಆದರೆ, ಸಿನಿಮಾ ಟೈಟಲ್ ಮಾತ್ರ ರಿವೀಲ್ ಮಾಡಿರಲಿಲ್ಲ.

ಸೂರ್ಯ ಅಭಿನಯದ 42ನೇ ಸಿನಿಮಾದ ಟೈಟಲ್ ಈಗ ರಿವೀಲ್ ಆಗಿದ್ದು, 'ಕಂಗುವ' ಎಂದು ಅನೌನ್ಸ್ ಮಾಡಿದೆ. 'ಕಂಗುವ' ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದ್ರಿಂದ ಎಲ್ಲಾ ಭಾಷೆಗಳಿಗೂ ಹೊಂದಾಣಿಕೆಯಾಗುವ ಟೈಟಲ್ ಇಟ್ಟಿದೆ. ಅಷ್ಟಕ್ಕೂ 'ಕಂಗುವ' ಎಂದರೆ, ಬೆಂಕಿಯಂತಹ ಶಕ್ತಿಯುಳ್ಳವನು ಎಂದು ಅರ್ಥ ಕೊಡುತ್ತೆ. ಇಲ್ಲಿ ಸೂರ್ಯ ಸೂಪರ್ ಹೀರೊ ಆಗಿದ್ದು, ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾನೆ.

Surya 42nd Movie Title Kanguva Releasing 10 Languages At A Time

3ಡಿ ಸಿನಿಮಾ.. 10 ಭಾಷೆಯಲ್ಲಿ ರಿಲೀಸ್

ಸೂರ್ಯ ನಟಿಸುತ್ತಿರುವ 42ನೇ ಸಿನಿಮಾ ತಮಿಳಿನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಈ ಸಿನಿಮಾ ಸುಮಾರು 10 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಸಿನಿಮಾ ಸದ್ದು ಮಾಡೋದು ಗ್ಯಾರಂಟಿ.

ವಿಶೇಷ ಅಂದ್ರೆ, 'ಕಂಗುವ' 10 ಭಾಷೆಗಳಲ್ಲಷ್ಟೇ ಅಲ್ಲ, 3ಡಿಯಲ್ಲಿ ನಿರ್ಮಾಣ ಗೊಳ್ಳುತ್ತಿದೆ. ಹೀಗಾಗಿ ಈ ಸೂಪರ್ ಹೀರೊ ಸಿನಿಮಾ ಪ್ರೇಕ್ಷಕರ ಕಣ್ಣುಗಳಿಗೆ ಥ್ರಿಲ್ ಕೊಡೋದು ಗ್ಯಾರಂಟಿ. ಇನ್ನು ಸೂರ್ಯ ಜೊತೆ ಬಾಲಿವುಡ್‌ನ ಹಾಟ್ ಬೇಬ್ ದಿಶಾ ಪಠಾಣಿ ಈ ಸಿನಿಮಾದಲ್ಲಿ ಲೀಡ್‌ ರೋಲ್‌ನಲ್ಲಿ ನಟಿಸುತ್ತಿದ್ದಾರೆ.

VFXಗೆ ದುಬಾರಿ ಹಣ ಖರ್ಚು

ಸಿರುಟ್ಟೈ ಶಿವ ನಿರ್ದೇಶನದ ಈ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ವೆಟ್ರಿ ಪಳನಿಸಾಮಿ ಕ್ಯಾಮರಾವರ್ಕ್ ಇದ್ದು, ದೇವಿ ಶ್ರೀಪ್ರಸಾದ್ ಸಂಗೀತ ನೀಡುತ್ತಿದ್ದಾರೆ. ಈ ಸಿನಿಮಾ ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದ್ದು, VFXಗೆ ಸಿಕ್ಕಾಪಟ್ಟೆ ಹಣ ಖರ್ಚಾಗಲಿದೆ. ಅಲ್ಲದೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಹೆಚ್ಚು ಸಮಯ ಬೇಕಿರುವುದರಿಂದ 2024ರಲ್ಲಿ ರಿಲೀಸ್ ಆಗಲಿದೆ.

'ಕಂಗುವ' ಸಿನಿಮಾ ಈಗಾಗಲೇ ಶೂಟಿಂಗ್ ಶುರು ಮಾಡಿದೆ. ಗೋವಾ, ಚೆನ್ನೈ ಸೇರಿಂದ ಹಲವೆಡೆ ಶೂಟಿಂಗ್ ಮಾಡಿದೆ. ಅಲ್ಲದೆ ಶೇ.50ರಷ್ಟು ಶೂಟಿಂಗ್ ಈಗಾಗಲೇ ಮುಗಿದಿದೆ. ಶಿವ ನಿರ್ದೇಶಿಸುತ್ತಿರುವ ಈ ಚಿತ್ರವು ಪ್ರಾರಂಭವಾದಾಗಿನಿಂದ ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

More from Filmibeat

English summary
Surya 42nd Movie Title Kanguva Releasing 10 Languages At A Time. Kanguva Releasing in Kannada and all major languages, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X