Surya: ಪೋಷಕರನ್ನು ಚೆನ್ನೈನಲ್ಲೇ ಬಿಟ್ಟು ಮುಂಬೈ ಸೇರಿದ 'ರೋಲೆಕ್ಸ್'.. ಎಲ್ಲದಕ್ಕೂ ಕಾರಣ ಪತ್ನಿ ಜ್ಯೋತಿಕಾ?

ತಮಿಳಿನ ಸ್ಟಾರ್ ನಟರಲ್ಲಿ ಸೂರ್ಯ ಕೂಡ ಒಬ್ಬರು. ತಮಿಳು ಹಾಗೂ ತೆಲುಗು ಎರಡೂ ಭಾಷೆಗಳಲ್ಲೂ ಸೂರ್ಯಗೆ ಲೆಕ್ಕವಿಲ್ಲದಷ್ಟು ಅಭಿಮಾನಿಗಳಿದ್ದಾರೆ. ಸೂರ್ಯ ಮಾಸ್ ಸಿನಿಮಾಗಳಲ್ಲೂ, ಕ್ಲಾಸ್ ಸಿನಿಮಾಗಳಲ್ಲೂ ಗೆದ್ದ ನಟ.

ಸೂರ್ಯ ಕೆಲವು ಸಾಮಾಜಿಕ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇವೂ ವಿಮರ್ಶಕರನ್ನೂ ಗೆದ್ದಿವೆ, ಹಾಗೇ ಬಾಕ್ಸಾಫೀಸ್‌ನಲ್ಲೂ ಧೂಳೆಬ್ಬಿಸಿವೆ. ಇತ್ತೀಚೆಗೆ ತೆರೆಕಂಡ 'ಸೂರರೈ ಪೋಟ್ರು' ಸಿನಿಮಾವೇ ಇದಕ್ಕೆ ಸಾಕ್ಷಿ. ಈ ಚಿತ್ರ ಪ್ರೇಕ್ಷಕರ ಮನಗೆದ್ದಿದ್ದಷ್ಟೇ ಅಲ್ಲದೆ, ಅಂತರಾಷ್ಟ್ರೀಯ ಅತ್ಯುತ್ತಮ ಪ್ರಶಸ್ತಿ ಕೂಡ ಗಿಟ್ಟಿಸಿಕೊಂಡಿದ್ದಾರೆ. ಇದೇ ಸೂರ್ಯ ಬಗ್ಗೆ ತಮಿಳುನಾಡಿನಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ.

ಫ್ಯಾಮಿಲಿ ಜೊತೆ ಚೆನ್ನೈ ತೊರೆದ್ರಾ ಸೂರ್ಯ?

ತಮಿಳು ಚಿತ್ರರಂಗದಲ್ಲಿ ಹರಿದಾಡುತ್ತಿರುವ ಸುದ್ದಿ ಏನಪ್ಪಾ ಅಂದ್ರೆ, ಸ್ಟಾರ್ ನಟ ಸೂರ್ಯ ಚೆನ್ನೈ ತೊರೆದಿದ್ದಾರಂತೆ. ಸೂರ್ಯ ತಮ್ಮ ಪತ್ನಿ ಜ್ಯೋತಿಕಾ ಹಾಗೂ ಮಕ್ಕಳೊಂದಿಗೆ ಚೆನ್ನೈ ತೊರೆದು, ಮುಂಬೈಗೆ ಶಿಫ್ಟ್ ಆಗಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ. ಸದ್ಯಕ್ಕೀಗ ಸೂರ್ಯ ಕುಟುಂಬದ ಜೊತೆ ಮುಂಬೈನಲ್ಲೇ ನೆಲೆಸಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.

Surya left Chennai and bought a 70-crore flat in Mumbai to live with his wife, Jyothika, and kids

ಇತ್ತೀಚೆಗೆ ಸೂರ್ಯ ಮುಂಬೈನ ಹೊಟೇಲ್‌ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾದ ಪೋಟೊಗಳು ವೈರಲ್ ಆಗುತ್ತಿವೆ. ಅಷ್ಟಕ್ಕೂ ಸೂರ್ಯ, ಪತ್ನಿ ಜ್ಯೋತಿಕಾ ಹಾಗೂ ಮಕ್ಕಳೊಂದಿಗೆ ಮುಂಬೈಗೆ ಹೋಗಿದ್ದೇಕೆ ಅನ್ನೋ ಬಗ್ಗೆ ಹಲವು ರೀತಿಯಲ್ಲಿ ಚರ್ಚೆ ನಡೆಯುತ್ತಿದೆ. ಸೂರ್ಯ ತೆಗೆದುಕೊಂಡ ಈ ನಿರ್ಧಾರದ ಹಿಂದೆ ಪತ್ನಿ ಜ್ಯೋತಿಕಾ ಇದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.

ಚೆನ್ನೈ ತೊರೆಯಲು ಜ್ಯೋತಿಕಾ ಕಾರಣ

ತಮಿಳು ನಟ ಸೂರ್ಯ ಚೆನ್ಣೈ ತೊರೆಯಲು ಜ್ಯೋತಿಕಾ ಕಾರಣ ಅನ್ನೋ ಮಾತು ಹರಿದಾಡುತ್ತಿದೆ. ಜ್ಯೋತಿಕಾ ವಿವಾಹದ ಬಳಿಕ ಇತ್ತೀಚೆಗೆ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜ್ಯೋತಿಕಾ ಹಿಂದಿಯ ವೆಬ್ ಸೀರಿಸ್ ಒಂದರಲ್ಲಿ ನಟಿಸುತ್ತಿದ್ದಾರಂತೆ. ಈ ಕಾರಣಕ್ಕೆ ಈ ಕಾರಣಕ್ಕಾಗಿಯೇ ಸೂರ್ಯ ಚೆನ್ನೈ ತೊರೆದಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

ಇನ್ನೊಂದು ಕಡೆ ಸೂರ್ಯ ಕುಟುಂಬ ಸಮೇತ ಮುಂಬೈಗೆ ಶಿಫ್ಟ್ ಆಗಲು ಮತ್ತೊಂದು ಕಾರಣವಿದೆಯಂತೆ. 'ಸೂರರೈ ಪೋಟ್ರು' ಸಿನಿಮಾ ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ. ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಂದ್ಹಾಗೆ ಬಾಲಿವುಡ್ ರಿಮೇಕ್ ಅನ್ನು ಸೂರ್ಯ ಹಾಗೂ ಜ್ಯೋತಿಕಾ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಮುಂಬೈನಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಆದರೆ, ಈ ಸ್ಟಾರ್ ಪರ್ಮನೆಂಟ್ ಆಗಿ ಮುಂಬೈನಲ್ಲೇ ನೆಲೆಸುತ್ತಾರಾ? ಇಲ್ಲಾ ಹಿಂತಿರುಗುತ್ತಾರಾ? ಅನ್ನೋ ಆತಂಕದಲ್ಲಿ ಅಭಿಮಾನಿಗಳಿದ್ದಾರೆ.

70 ಕೋಟಿ ರೂ. ಫ್ಲ್ಯಾಟ್ ಖರೀದಿಸಿದ್ರಾ ಸೂರ್ಯ?

ಮುಂಬೈನಲ್ಲಿ ಕುಟುಂಬದೊಂದಿಗೆ ನೆಲೆಸಲೆಂದೇ ಸೂರ್ಯ 70 ಕೋಟಿ ರೂ. ಬೆಲೆಯ ಪ್ಲ್ಯಾಟ್ ಖರೀದಿ ಮಾಡಿದ್ದಾರೆ ಅಂತಾನೂ ವರದಿಯಾಗಿದೆ. ಆದರೆ, ತಾತ್ಕಾಲಿಕವಾಗಿ ನೆಲೆಸುವುದಕ್ಕೆ ಇಷ್ಟು ದುಬಾರಿ ಬಂಗಲೆ ಖರೀದಿ ಮಾಡಿದ್ದೇಕೆ? ಅನ್ನೋ ಪ್ರಶ್ನೆಯಂತೂ ಹುಟ್ಟಿಕೊಂಡಿದೆ.

Surya left Chennai and bought a 70-crore flat in Mumbai to live with his wife, Jyothika, and kids

ಸೂರ್ಯ ಇದೇ ಮೊದಲ ಬಾರಿಗೆ ಚೆನ್ನೈನಲ್ಲಿರುವ ತಮ್ಮ ಪೋಷಕರನ್ನು ತೊರೆದು ಮುಂಬೈ ಸೇರಿದ್ದಾರೆ. ಇತ್ತ ನೋಡಿದ್ರೆ, ತಮಿಳು ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಸಿರುಟ್ಟೈ ಶಿವ ನಿರ್ದೇಶಿಸುತ್ತಿರುವ ಆಕ್ಷನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ 'ವಿಕ್ರಂ' ಸಿನಿಮಾದಲ್ಲಿ ಕಿಕ್ ಕೊಟ್ಟ ರೋಲೆಕ್ಸ್ ಪಾತ್ರವನ್ನು ಮುಂದಿನ ಪಾರ್ಟ್‌ನಲ್ಲಿ ಮುಂದುವರೆಸುತ್ತಿದ್ದಾರೆ. ಈ ಮಧ್ಯೆ ಚೆನ್ನೈ ತೊರೆದ ಸುದ್ದಿ ಸಂಚಲನ ಮೂಡಿಸಿದೆ.

More from Filmibeat

English summary
Surya left Chennai and bought a 70-crore flat in Mumbai to live with his wife, Jyothika, and kids. Rumour is that Surya brought house in Mumbai for wife Jyothika, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X