ಸೋಲಿನಿಂದ ಕಂಗೆಟ್ಟು ಬಾಲಿವುಡ್‌ಗೆ ಹಾರಿದ್ದ ತಮನ್ನಾ, ರಾಶಿ ಖನ್ನಾ; ಗೆಲುವು ಸಿಕ್ಕಿದ್ದು ದಕ್ಷಿಣ ಭಾರತದಲ್ಲೇ!

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಈ ಇಬ್ಬರು ನಟಿಯರಿಗೆ ವಿಶೇಷವಾದ ಸ್ಥಾನವಿದೆ. ಅದರಲ್ಲೂ ತೆಲುಗು ಸಿನಿಮಾರಂಗದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಹಾಗೂ ರಾಶಿ ಖನ್ನಾ ಇಬ್ಬರೂ ಫೇಮಸ್. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಆದರೆ, ಇತ್ತೀಚೆಗೆ ಇಬ್ಬರೂ ನಟಿಯರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ.

ತಮನ್ನಾ ಭಾಟಿಯಾ ಅಂತೂ ಬಾಲಿವುಡ್‌ ಕಡೆ ಮುಖ ಮಾಡಿದ್ದಾರೆ. ಹಾಗೇ ರಾಶಿ ಖನ್ನಾ ಕೂಡ ಬಾಲಿವುಡ್‌ ಪ್ರಾಜೆಕ್ಟ್‌ ಕಡೆಗೆ ಮುಖ ಮಾಡಿದ್ದರು. ದಕ್ಷಿಣ ಭಾರತದಲ್ಲಿ ಇಬ್ಬರಿಗೂ ಒಳ್ಳೆಯ ಸಕ್ಸಸ್ ಸಿಕ್ಕಿದೆ. ಇಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಬಳಿಕ ಇವರಿಗೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಬೇಕು ಅನ್ನೋ ಆಸೆ ಹುಟ್ಟಿಕೊಂಡಿತ್ತು.

Tamannaah Rashi Khanna movie Aranmanai 4 Box Office Surpasses 75 50 Crore Targets 100 Crore

ಹೀಗಾಗಿ ಇವರಿಬ್ಬರೂ ಕಳೆದ ಕೆಲವು ದಿನಗಳಿಂದ ಬಾಲಿವುಡ್‌ನಲ್ಲಿ ಯಶಸ್ಸು ಗಳಿಸುವುದಕ್ಕೆ ಸಾಕಷ್ಟು ಪ್ರಯತ್ನ ಮಾಡಿದ್ದರು. ತಮನ್ನಾ ಹಾಗೂ ರಾಶಿ ಖನ್ನಾ ಇಬ್ಬರೂ ಸಿನಿಮಾ ಹಾಗೂ ವೆಬ್‌ ಸೀರಿಸ್‌ ಎರಡರಲ್ಲೂ ನಟಿಸಿದ್ದರು. ಆದರೆ, ಇಬ್ಬರಿಗೂ ಹೇಳಿಕೊಳ್ಳುವಂತಹ ಯಶಸ್ಸೇನು ಸಿಕ್ಕಿರಲಿಲ್ಲಿ. ಮೆಗಾ ಸಕ್ಸಸ್ ರುಚಿ ನೋಡುವುದಕ್ಕೆ ಇವರಿಬ್ಬರೂ ಮತ್ತೆ ದಕ್ಷಿಣ ಭಾರತಕ್ಕೆ ಬರಲೇಬೇಕಾಯ್ತು. ಆ ಸಿನಿಮಾವೇ ತಮಿಳಿನ 'ಅರನ್ಮನೈ 4'.

ಖುಷ್ಬೂ ಸುಂದರ್ ಪತಿ ಸಿ. ಸುಂದರ್ ನಿರ್ದೇಶಿಸಿದ ಸಿನಿಮಾ ತಮಿಳು ಚಿತ್ರರಂಗದಲ್ಲಿ ಕಳೆದ ಎರಡು ವಾರಗಳಿಂದ ಸದ್ದು ಮಾಡುತ್ತಿದೆ. 2024ರಲ್ಲಿ ತೆರೆಕಂಡು ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಗಳಿಸಿದ ತಮಿಳಿನ ಎರಡನೇ ಸಿನಿಮಾ ಎನಿಸಿಕೊಂಡಿದೆ. ಈ ಸಿನಿಮಾದಲ್ಲಿ ತಮನ್ನಾ ಭಾಟಿಯಾ ಹಾಗೂ ರಾಶಿ ಖನ್ನಾ ಇಬ್ಬರೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಇಲ್ಲಿವರೆಗೂ ಸೂಪರ್‌ಸ್ಟಾರ್‌ಗಳಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಇಬ್ಬರು ನಟಿಯರು ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. 'ಅರನ್ಮನೈ' ಕಳೆದ ಮೂರು ಸಿರೀಸ್‌ ಸೂಪರ್ ಹಿಟ್ ಆಗಿತ್ತು. ಈಗ ನಾಲ್ಕನೇ ಸೀರಿಸ್ ಕೂಡ ವಿಶ್ವದಾದ್ಯಂತ 75.50 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಸದ್ಯ ಬಾಕ್ಸಾಫೀಸ್‌ನಲ್ಲಿ ಶೇ.40ರಷ್ಟು ಡ್ರಾಪ್ ಆಗಿದ್ದರೂ, ಇನ್ನೆರಡು ವಾರಗಳಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತೆ ಎಂದು ಭವಿಷ್ಯ ನುಡಿಯಲಾಗುತ್ತಿದೆ.

Tamannaah Rashi Khanna movie Aranmanai 4 Box Office Surpasses 75 50 Crore Targets 100 Crore

ತಮಿಳುನಾಡಿನಲ್ಲಿ ನಾಯಕಿಯರೇ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ಅರನ್ಮನೈ 4'ಗೆ ಸಕ್ಸಸ್ ಸಿಕ್ಕಿದೆ. ಈ ಮೂಲಕ ಸೋಲಿನಿಂದ ಕಂಗೆಟ್ಟಿದ ಈ ಇಬ್ಬರು ನಟಿಯರಿಗೆ ಮತ್ತೆ ದೊಡ್ಡ ಸಕ್ಸಸ್ ಸಿಕ್ಕಂತಾಗಿದೆ. ಇನ್ನು 100 ಕೋಟಿ ಕ್ಲಬ್ ಸೇರಿದರೆ, ಮತ್ತೆ ಬೇಡಿಕೆಯ ನಟಿಯರಾಗುವುದರಲ್ಲಿ ಡೌಟ್ ಇಲ್ಲ. ತಮನ್ನಾ ಹಾಗೂ ರಾಶಿ ಖನ್ನ ಇಬ್ಬರೂ ಮತ್ತೆ ಫಾರ್ಮ್‌ಗೆ ಮರಳಿದ್ದು, ಮುಂದಿನ ಸಿನಿಮಾಗಳ ಮೇಲೆ ಫ್ಯಾನ್ಸ್ ಕಣ್ಣಿಟ್ಟಿದ್ದಾರೆ.

ಇನ್ನೊಂದು ಕಡೆ ತಮನ್ನಾ ಬಾಲಿವುಡ್‌ಗೆ ಎಂಟ್ರಿ ಕೊಟ್ಟು ಈಗಾಗಲೇ ಕೆಲವು ಸಿನಿಮಾ ಹಾಗೂ ವೆಬ್ ಸೀರಿಸ್‌ಗಳಲ್ಲಿ ನಟಿಸಿದ್ದಾರೆ. ಆದರೆ, ಇದೂವರೆಗೂ ಯಶಸ್ಸಿನ ರುಚಿ ನೋಡಿಲ್ಲ. 'ಲಸ್ಟ್ ಸ್ಟೋರಿಸ್ 2' ವೆಬ್ ಸೀರಿಸ್ ಕೊಂಚ ಮಟ್ಟಿಗೆ ಸೌಂಡ್ ಮಾಡಿತ್ತು. ಅತ್ತ ರಾಶಿ ಖನ್ನಾ ಸ್ಥಿತಿಯೇನು ಬೇರೆಯಿಲ್ಲ. ಇತ್ತೀಚೆಗೆ ಹಿಂದಿಯಲ್ಲಿ ನಟಿಸಿದ 'ಯೋಧ' ಬಾಕ್ಸಾಫೀಸ್‌ನಲ್ಲಿ ಮಖಾಡೆ ಮಲಗಿತ್ತು. ಯಶಸ್ಸು ಹುಡುಕಿಕೊಂಡು ಬಾಲಿವುಡ್‌ಗೆ ಹೋಗಿದ್ದ ಈ ಇಬ್ಬರು ನಟಿಯರಿಗೆ ಮತ್ತೆ ಯಶಸ್ಸು ಸಿಗಲು ದಕ್ಷಿಣ ಭಾರತದ ಸಿನಿಮಾವೇ ಬೇಕಾಯ್ತು ಅಂತ ಚರ್ಚೆಯಾಗುತ್ತಿದೆ.

More from Filmibeat

English summary
Aranmanai 4, starring Tamannaah and Rashi Khanna, has exceeded 75.50 crore in box office collections and is on track to hit the 100 crore mark worldwide:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X