54ನೇ ಹುಟ್ಟುಹಬ್ಬಕ್ಕೂ ಮುನ್ನ ಆಸ್ಪತ್ರೆಗೆ ದಾಖಲಾದ ಅಜಿತ್ ಕುಮಾರ್‌: ಸ್ಟಾರ್ ನಟನಿಗೆ ಏನಾಯ್ತು?

ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ಇತ್ತೀಚೆಗೆಷ್ಟೇ ದೆಹಲಿಯಲ್ಲಿ ರಾಷ್ಟ್ರಪತಿಗಳ ಕೈಯಿಂದ ಪದ್ಮವಿಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಸಿನಿಮಾ ಕ್ಷೇತ್ರದಲ್ಲಿ ಅಜಿತ್ ಮಾಡಿದ ಸಾಧನೆ ಹಾಗೂ ಸೇವೆಯನ್ನು ಗುರುತಿಸಿ ಅಜಿತ್ ಕುಮಾರ್‌ಗೆ ಕೇಂದ್ರ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಿಸಿತ್ತು. ಈಗ ದೆಹಲಿಯಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ತಮ್ಮ ನೆಚ್ಚಿನ ನಟನಿಗೆ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿದ ಖುಷಿಯಲ್ಲಿದ ಅಭಿಮಾನಿಗಳಿಗೆ ದಿಢೀರನೇ ಆಂತಕ ಹೆಚ್ಚಾಗಿದೆ. ನಾಳೆ (ಮೇ 1) ಅಭಿಮಾನಿಗಳೊಂದಿಗೆ ತಮ್ಮ 54ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿದ್ದ ನಟ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಅಜಿತ್ ಫ್ಯಾನ್ಸ್ ಆಸ್ಪತ್ರೆಗೆ ಸಿಬ್ಬಂದಿಗೆ ಅವರ ಆರೋಗ್ಯದ ಬಗ್ಗೆ ಅಪ್‌ಡೇಟ್ ಕೊಡಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ.

Tamil actor Ajith Kumar admitted in Chennai Apollo hospital before his birthday

ದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಪ್ರಶಸ್ತಿಯನ್ನು ಸ್ವೀಕರಿಸಿ ನಿನ್ನೆ (ಏಪ್ರಿಲ್ 29) ಚೆನ್ನೈಗೆ ಮರಳಿದ್ದರು. ಪ್ರಶಸ್ತಿ ಪಡೆದ ಖುಷಿಯಲ್ಲಿದ್ದ ಅಜಿತ್ ಕುಮಾರ್ ಇಂದು ಆಸ್ಪತ್ರೆ ದಾಖಲಾಗಿದ್ದು, ಅಭಿಮಾನಿಗಳ ಆತಂಕವನ್ನು ದುಪ್ಪಟ್ಟು ಮಾಡಿದೆ. ಅಷ್ಟಕ್ಕೂ ಅಜಿತ್‌ ಕುಮಾರ್‌ಗೆ ಏನಾಗಿದೆ? ಹುಟ್ಟುಹಬ್ಬಕ್ಕೆ ಇನ್ನೊಂದು ದಿನ ಬಾಕಿ ಇರುವಾಗಲೇ ಆಸ್ಪತ್ರೆಗೆ ದಾಖಲಾಗಿದ್ದು ಏಕೆ? ತಿಳಿಯುವುದಕ್ಕೆ ಮುಂದೆ ಓದಿ.

ನಟ ಅಜಿತ್ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದರ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಹೊರ ಬೀಳಬೇಕಾಗಿದೆ. ಆದರೆ, ನಿನ್ನೆ (ಏಪ್ರಿಲ್ 29) ಚೆನ್ನೈ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದ ಅಜಿತ್ ಕುಮಾರ್ ಅವರನ್ನು ಜನರ ಗುಂಪು ಸುತ್ತುವರೆದಿತ್ತು. ಪದ್ಮಭೂಷಣ ಪ್ರಶಶ್ತಿ ಪಡೆದು ಹಿಂತಿರುಗಿದ್ದ ಖುಷಿಯಲ್ಲಿ ಅಭಿಮಾನಿಗಳು ಸೇರಿದಂತೆ ಜನರು ಗುಂಪು ಕಾರಿನ ಬಳಿ ಹೋಗುವುದಕ್ಕೂ ಬಿಟ್ಟಿರಲಿಲ್ಲ. ಈ ವೇಳೆ ವಾರ ಕಾಲಿಗೆ ಏಟು ಬಿದ್ದಿತ್ತು ಎಂದು ಹೇಳಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿದ್ದಾರೆ ಎಂದು ವರದಿಯಾಗಿದೆ.

ಅಜಿತ್‌ ಕುಮಾರ್‌ ಚೆನ್ನೈಗೆ ಬಂದಿಳಿದಾಗ ಜನರ ಗುಂಪು ಅವರನ್ನು ಸುತ್ತುವರೆದಿತ್ತು. ಈ ವೇಳೆ ಅವರಿಗೆ ಚಿಕ್ಕದಾಗಿ ಪೆಟ್ಟಾಗಿದೆ. ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಅಜಿತ್ ಕುಮಾರ್ ಅವರಿಗೆ ಪಿಸಿಯೋಥೆರಪಿ ಮಾಡುವುದಕ್ಕೆ ಸಲಹೆ ನೀಡಿದ್ದಾರೆ. ಇಂದು (ಏಪ್ರಿಲ್ 29) ಸಂಜೆಯ ವೇಳೆಗೆ ಅಜಿತ್ ಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುಬಹುದು. ಅವರ ಆರೋಗ್ಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಮೂಲಗಳು ಮಾಹಿತಿ ನೀಡಿದ್ದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಇನ್ನು ಅಜಿತ್ ಕುಮಾರ್ ಈ ವರ್ಷದ ಆರಂಭದಿಂದಲೇ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ವರ್ಷದ ಆರಂಭದಲ್ಲಿಯೇ ಅವರು ನಟಿಸಿದ 'ವಿಡಾಮುಯಾರ್ಚಿ' ಸಿನಿಮಾ ಬಿಡುಗಡೆಯಾಗಿತ್ತು. ಆದರೆ, ಆ ಸಿನಿಮಾ ಅಜಿತ್ ನಿರೀಕ್ಷೆ ಮಾಡಿದಂತೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಕೆಲವೇ ದಿನಗಳ ಹಿಂದಷ್ಟೇ ಅಜಿತ್ ನಟಿಸಿದ ಮತ್ತೊಂದು ಸಿನಿಮಾ 'ಗುಡ್ ಬ್ಯಾಕ್ ಅಗ್ಲಿ' ರಿಲೀಸ್ ಆಗಿತ್ತು. ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಮಾಡಿದ್ದರೂ, ಅವರ ಅಭಿಮಾನಿಗಳಿಗೆ ಇಷ್ಟ ಆಗಲಿಲ್ಲ.

ಸಿನಿಮಾ ಜೊತೆಗೆ ಈ ವರ್ಷ ಕಾರ್‌ ರೇಸಿಂಗ್‌ನಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷದಿಂದಲೇ ಕಾರು ರೇಸಿಂಗ್‌ನಲ್ಲಿ ಹೆಚ್ಚು ಗಮನ ಹರಿಸಿರುವ ಅಜಿತ್ ಸಿನಿಮಾದ ಜೊತೆಗೆ ತಮ್ಮ ಇಷ್ಟದ ಕೆಲಸದ ಕಡೆಗೂ ಗಮನ ಹರಿಸಿದ್ದಾರೆ. ಇಲ್ಲಿವರೆಗೆ ಅಜಿತ್‌ಗೆ ಕಾರು ರೇಸಿಂಗ್‌ನಲ್ಲಿ ಉತ್ತಮ ಫಲಿತಾಂಶ ಸಿಕ್ಕಿದೆ. ಮೂರು ಬಾರಿ ರೇಸಿಂಗ್‌ನಲ್ಲಿ ಭಾಗವಹಿಸಿದ್ದ ಅಜಿತ್ ಕುಮಾರ್ ದುಬೈ ಹಾಗೂ ಇಟಲಿಯಲ್ಲಿ ಮೂರನೇ ಸ್ಥಾನ ಗಳಿಸಿದ್ದರೆ, ಇನ್ನೊಂದು ಸಾರಿ ಬೆಲ್ಜಿಯಂನಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಅಷ್ಟೇ ಅಲ್ಲದೆ ನಾಲ್ಕು ಬಾರಿ ಕಾರು ಅಪಘಾತಕ್ಕೂ ಒಳಗಾಗಿತ್ತು ಅನ್ನೋದು ಗಮನಿಸಬೇಕಾದ ಅಂಶ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಅಜಿತ್ ಪ್ರತಿನಿಧಿಸುತ್ತಿದ್ದಾರೆ. ಅಲ್ಲಿಯೂ ಇವರಿಗೆ ಯಶಸ್ಸು ಸಿಗುತ್ತಿದೆ.

More from Filmibeat

English summary
Tamil actor Ajith Kumar admitted in Chennai Apollo hospital before his birthday.
Read more about: ajith kumar hospital chennai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X