'ವಿಡಮುಯಾರ್ಚಿ'ಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಹೀರೊ: ಅಜಿತ್ ಸಾಹಸಕ್ಕೆ ಬೆಚ್ಚಿಬಿದ್ದ ನೆಟ್ಟಿಗರು

ಕಾಲಿವುಡ್ ಸ್ಟಾರ್ ಹೀರೋ ಅಜಿತ್ ಕುಮಾರ್ ಬೇರೆ ನಟರಿಗಿಂತ ಸ್ಪೆಷಲ್. ಸಿನಿಮಾ ಹಾಗೂ ವೈಯಕ್ತಿಕ ಬದುಕನ್ನು ಬೇರೆಯಾಗಿ ನೋಡುವ ನಟನೀತ. ಸಿನಿಮಾದಿಂದ ಬಿಡುವು ಸಿಕ್ಕಾಗ ಬೈಕ್ ಏರಿ ಪ್ರವಾಸಕ್ಕೆ ಹೊರಡುತ್ತಾರೆ. ಕಾರು ರೇಸ್‌ನಲ್ಲಿ ಬಗ್ಗೆ ಆಸಕ್ತಿ ಹೆಚ್ಚು. ಸಿನಿಮಾ ಇದ್ದಾಗ ಸಿನಿಮಾ. ಬಿಡುವಿದ್ದಾಗ ತನ್ನ ಪ್ಯಾಷನ್ ಕಡೆಗೆ ಗಮನ ಹರಿಸುವ ನಟ.

ಅಜಿತ್ ಕುಮಾರ್ ಈಗ 'ವಿಡಮುಯಾರ್ಚಿ' ಅನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಈ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಇದೊಂದು ಪಕ್ಕಾ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಆಗಿದ್ದು, ಅಜಿತ್ ಕುಮಾರ್ ಡೇಂಜರಸ್ ಸ್ಟಂಟ್‌ಗಳಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೀಗ ಇನ್ನೊಂದಿಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ.

Tamil actor Ajith Kumar s dangerous car stunts for the Vidaamuyarchi movie video are trending

'ವಿಡಮುಯಾರ್ಚಿ' ತಮಿಳು ಚಿತ್ರರಂಗದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಅಜಿತ್ ಕುಮಾರ್ ಈ ಸಿನಿಮಾದಲ್ಲಿ ಹೈ ವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್‌ಗಳಲ್ಲಿ ನಟಿಸುತ್ತಿರೋದು ಈಗಾಗಲೇ ಹೊರಬಿದ್ದಿರೋ ತುಣುಕುಗಳೇ ಹೇಳುತ್ತಿವೆ. ಇತ್ತೀಚೆಗೆ ಇನ್ನೂ ಡೇಂಜರಸ್ ಕಾರು ಸ್ಟಂಟ್‌ಗಳಲ್ಲಿ ನಟಿಸಿದ್ದಾರೆ. ಇದರ ಮೇಕಿಂಗ್ ವಿಡಿಯೋಗಳನ್ನು ಈಗ ಹರಿದಾಡುತ್ತಿದೆ.

ಇದೇ ಸಿನಿಮಾ ಸಾಹಸ ದೃಶ್ಯವೊಂದರಲ್ಲಿ ಅಜಿತ್ ಕಾರು ಚಲಾಯಿಸುವಾಗ ಕಾರು ಚಲಾಯಿಸುವಾಗ ಅಪಘಾತವಾಗಿತ್ತು. ಅಜಿತ್ ಚಲಾಯಿಸುತ್ತಿದ್ದ ಕಾರು ಗಾಳಿಗೆ ತೂರಿ ಮೂರು ಬಾರಿ ಪಲ್ಟಿಯಾಗಿ ಧರೆಗೆ ಉರುಳಿತ್ತು. ಇದು 'ವಿಡಮುಯಾರ್ಚಿ' ಸಿನಿಮಾದ ದೃಶ್ಯಕ್ಕಾಗಿಯೇ ಮಾಡಿದ ಸ್ಟಂಟ್ ಆಗಿದ್ದರೂ, ಸ್ವತ: ಅಜಿತ್ ಅವರೇ ಅದರಲ್ಲಿ ಭಾಗವಹಿಸಿದ್ದರು.

ಮೂರು ಪಟ್ಟಿ ಹೊಡೆದ ಕಾರಿನಲ್ಲಿ ಅಜಿತ್ ಕುಮಾರ್ ಇದ್ದರು. ಇದರ ಮೇಕಿಂಗ್ ದೃಶ್ಯಗಳನ್ನು ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದರು. ಈಗ ಮತ್ತೊಮ್ಮೆ ಇಂತಹದ್ದೇ ಭಯಬೀಳಿಸುವ ಸ್ಟಂಟ್‌ಗಳಲ್ಲಿ ಅಜಿತ್ ನಟಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕ್ರೇನ್ ಸಹಾಯದಿಂದ ಕಾರನ್ನು ಮೇಲೆಕ್ಕೆ ಎತ್ತಲಾಗಿದೆ. ಅದರೊಳಗೆ ಅಜಿತ್ ಕುಮಾರ್ ಹಾಗೂ ಮತ್ತೊಬ್ಬ ನಟ ಆರವ್ ಕೂಡ ಜೊತೆಗಿದ್ದಾರೆ.

ಕ್ರೇನ್ ಸಹಾಯದಿಂದ ಅಜಿತ್ ಹಾಗೂ ಆರವ್ ಇದ್ದ ಕಾರು ಗಾಳಿಯಲ್ಲಿ ಗಿರ ಗಿರನೇ ತಿರುಗುವ ದೃಶ್ಯ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಈ ದೃಶ್ಯವನ್ನು ಚಿತ್ರೀಕರಣ ಮಾಡುವಾಗ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಆದರೂ, ಡೋಪ್ ಬಳಸದೆ ಸ್ವತ: ಅಜಿತ್ ಈ ಸಾಹಸ ದೃಶ್ಯಗಳಲ್ಲಿ ಭಾಗಿಯಾಗಿದ್ದನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಅಜಿತ್ ಕುಮಾರ್ ಸಾಹಸಗಳನ್ನು ನೋಡಿ ನೆಟ್ಟಿಗರು ಸಾಲು ಸಾಲಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ಸಿನಿಮಾಗೆ ಪ್ರಾಣ ಕೊಡೋದು ಅಂದ್ರೆ ಇದೇ" ಅಂತ ನೆಟ್ಟಿಗರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು "ಅಜಿತ್ ಅದಕ್ಕೇ ನಿಮಗೆ ಇಷ್ಟೊಂದು ಅಭಿಮಾನಿಗಳಿದ್ದಾರೆ" ಎಂದಿದ್ದಾರೆ. ಮತ್ತೊಬ್ಬರು "ನೀನೇ ರಿಯಲ್ ಹೀರೋ" ಎಂದು ಕಾಮೆಂಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದಲ್ಲಿ ಅಜಿತ್, ಆರವ್ ಜೊತೆ ತ್ರಿಷಾ, ರೆಜಿನಾ ಹಾಗೂ ಅರ್ಜುನ್ ಸರ್ಜಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Ajith Kumar's dangerous car stunts for the Vidaamuyarchi movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X