Breaking: ತಮಿಳು ನಟ ವಿಕ್ರಮ್‌ಗೆ ಎದೆ ನೋವು: ಚೆನ್ನೈ ಆಸ್ಪತ್ರೆಗೆ ದಾಖಲು

ತಮಿಳು ಸೂಪರ್‌ಸ್ಟಾರ್ ಚಿಯಾನ್ ವಿಕ್ರಮ್‌ ಅಭಿಮಾನಿಗಳಿಗೆ ಆತಂಕ ಸುದ್ದಿಯೊಂದು ಎದುರಾಗಿದೆ. ಇಂದು (ಜುಲೈ 8) ಬೆಳಗ್ಗೆ ಚಿಯಾನ್ ವಿಕ್ರಮ್‌ಗೆ ಹೃದಯಾಘಾತವಾಗಿದ್ದು ಚೆನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಆಸ್ಪತ್ರೆ ಮೂಲಗಳು ಇನ್ನೂ ಚಿಯಾನ್ ವಿಕ್ರಮ್ ಅವರ ಆರೋಗ್ಯದ ಸ್ಥಿತಿ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೆ ಈ ವಿಕ್ರಮ ಹೃದಯಘಾತದ ಸುದ್ದಿ ಹೊರಬೀಳುತ್ತಿದ್ದಂತೆ ಅವರ ಅಭಿಮಾನಿಗಳಿಗೆ ಆತಂಕ ಶುರುವಾಗಿದೆ.

ಮೂಲಗಳ ಪ್ರಕಾರ, ವಿಕ್ರಮ್ ಇಂದು (ಜುಲೈ 8)ರ ಸಂಜೆ 6 ಗಂಟೆಗೆ ಅವರದ್ದೇ 'ಪೊನ್ನಿಯನ್ ಸೆಲ್ವನ್' ಸಿನಿಮಾದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಅದಕ್ಕೂ ಮುನ್ನವೇ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಇವರ ಆರೋಗ್ಯದ ಬಗ್ಗೆ ಇನ್ನೂ ಹೆಚ್ಚು ಮಾಹಿತಿಯನ್ನು ಆಸ್ಪತ್ರೆ ಮೂಲಗಳು ನೀಡಬೇಕಿದೆ.

ವಿಕ್ರಮ್‌ ಆರೋಗ್ಯದ ಬಗ್ಗೆ ಆತಂಕ!

ವಿಕ್ರಮ್‌ ಆರೋಗ್ಯದ ಬಗ್ಗೆ ಆತಂಕ!

'ಅನ್ನಿಯನ್' ಖ್ಯಾತಿಯ ಚಿಯಾನ್ ವಿಕ್ರಮ್‌ಗೆ ನಿನ್ನೆ (ಜುಲೈ 07)ಯಿಂದಲೇ ಆರೋಗ್ಯದಲ್ಲಿ ಕಸಿವಿಸಿಯಾದಂತಹ ಅನುಭವವಾಗಿತ್ತು. ಈ ಬೆನ್ನಲ್ಲೇ ಇಂದು ( ಜುಲೈ 08) ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಸಂಜೆ ವೇಳೆಗೆ ವಿಕ್ರಮ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಯಾಗಿದೆ. ಇನ್ನೊಂದು ವಿಕ್ರಮ್‌ಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ವಿಕ್ರಮ್‌ಗೆ ಕೊರೊನಾ ಸೋಂಕು

ವಿಕ್ರಮ್‌ಗೆ ಕೊರೊನಾ ಸೋಂಕು

ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಮ್ 2021 ಡಿಸೆಂಬರ್‌ನಲ್ಲಿ ಕೊರೊನಾ ಸೋಂಕು ತಗುಲಿತ್ತು. ಆ ವೇಳೆ ಕೂಡ ವಿಕ್ರಮ್ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಆಗ ಸ್ವತ: ವಿಕ್ರಮ್ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು. " ಹಿತೈಷಿಗಳೇ, ಸೋಂಕು ಗಂಭೀರವಾಗಿಲ್ಲ. ಆತಂಕ ಪಡುವ ಯಾವುದೇ ಅಗತ್ಯವಿಲ್ಲ. ನಿಮ್ಮ ಪ್ರಾರ್ಥನೆಗಳಿಗೆ ಧನ್ಯವಾದಗಳು ಎಂದು ಹೇಳಿದ್ದರು. ಈಗ ಆರು ತಿಂಗಳ ಬಳಿಕ ಹೃದಯಾಘಾತವಾಗಿದೆ ಎಂಬ ಸುದ್ದಿ ಅಭಿಮಾನಿಗಳನ್ನು ಆತಂಕಕ್ಕೀಡು ಮಾಡಿದೆ.

 ಟೀಸರ್ ಲಾಂಚ್‌ಗೆ ಗೈರು

ಟೀಸರ್ ಲಾಂಚ್‌ಗೆ ಗೈರು

ಮಣಿರತ್ನಂ ನಿರ್ದೇಶನದ 'ಪೊನ್ನಿಯನ್ ಸೆಲ್ವನ್' ಸಿನಿಮಾದ ಟೀಸರ್‌ ಲಾಂಚ್ ಕಾರ್ಯಕ್ರಮ ಇಂದು (ಜುಲೈ 8) ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಚಿಯಾನ್ ವಿಕ್ರಮ್ ಆರೋಗ್ಯದ ಹದಗೆಟ್ಟಿರುವುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ, ವಿಕ್ರಮ್ ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದರೂ, ಕಾರ್ಯಕ್ರಮಕ್ಕೆ ಹಾಜರಾಗುವುದು ಅನುಮಾನ ಎನ್ನಲಾಗಿದೆ. ಆದರೆ, ಸೋಮವಾರ (ಜುಲೈ 11)ದಂದು ಕೋಬ್ರಾ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ ಎನ್ನಲಾಗಿದೆ.

ವಿಕ್ರಮ್‌ಗೆ ರಾಷ್ಟ್ರ ಪ್ರಶಸ್ತಿ

ವಿಕ್ರಮ್‌ಗೆ ರಾಷ್ಟ್ರ ಪ್ರಶಸ್ತಿ

ಚಿಯಾನ್ ವಿಕ್ರಮ್ ಮೂಲ ಹೆಸರು ಕೆನಡಿ ಜಾನ್ ವಿಕ್ಟರ್. ಇವರು ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಪಿತಾಮಗನ್' ಸಿನಿಮಾಗಾಗಿ ಚಿಯಾನ್ ವಿಕ್ರಮ್‌ಗೆ ರಾಷ್ಟ್ರ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೆ 7 ಫಿಲ್ಮ್ ಫೇರ್ ಅವಾರ್ಡ್, ಒಂದು ತಮಿಳು ನಾಡಿನ ರಾಜ್ಯ ಪ್ರಶಸ್ತಿ ಕೂಡ ಲಭಿಸಿದೆ. ಪಾತ್ರಕ್ಕಾಗಿ ಆಗಾಗ ಹೇವಿ ಡಯೇಟ್ ಮಾಡುತ್ತಿದ್ದ ವಿಕ್ರಮ್‌ಗೆ ಫಿಟ್‌ನೆಸ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು.

More from Filmibeat

English summary
Tamil Actor Chiyaan Vikram suffers heart attack, admitted to hospital in Chennai, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X