ವೇದಿಕೆ ಮೇಲೆ ಅವಮಾನ ಮಾಡಿದವರಿಗೆ ಸೆಡ್ಡು ಹೊಡೆದ ಯುವ ನಟ: ಮೊದಲ 3 ಸಿನಿಮಾಗಳೂ ₹100 ಕೋಟಿ ಕಲೆಕ್ಷನ್

ನೋಡುವುದಕ್ಕೆ ಸುಂದರನಲ್ಲ. ಹೀರೋಗೆ ಬೇಕಿರೋ ಹೈಟ್ ಇಲ್ಲ. ಸಿಕ್ಸ್ ಪ್ಯಾಕ್ ಇಲ್ಲ. ಇವರನ್ನು ನೋಡಿ.. ಇವನು ಯಾವ ಸೀಮೆ ಹೀರೋ ಗುರೂ ಅಂದರು. ವೇದಿಕೆ ಮೇಲೆ ಅವಮಾನ ಮಾಡಿದರು. ಇದೆಲ್ಲವೂ ಈ ನಾಯಕ ನಟನಿಗೆ ವರವಾಯ್ತು. ಇಷ್ಟೆಲ್ಲ ಅವಮಾನಗಳನ್ನು ಸಹಿಸಿಕೊಂಡು ನಾಯಕ ನಟನಾಗಿ ಗೆದ್ದು ತೋರಿಸಿದ್ದಾನೆ. ಆ ನಟನ ಹೆಸರು ಪ್ರದೀಪ್ ರಂಗನಾಥನ್.

ಭಾರತೀಯ ಚಿತ್ರರಂಗದಲ್ಲಿ ಪ್ರದೀಪ್ ರಂಗನಾಥನ್ ಸಾಧನೆ ಅಸಾಧಾರಣ ಎನ್ನಬಹುದು. ತಮಿಳಿನ ಈ ಯುವ ನಟ ಬಾಕ್ಸಾಫೀಸ್‌ನಲ್ಲಿ ಹೊಸ ಚರಿತ್ರೆಯನ್ನು ಬರೆದಿದ್ದಾರೆ. ತಾನು ನಟಿಸಿದ ಮೊದಲ ಮೂರು ಸಿನಿಮಾಗಳನ್ನು ಬಾಕ್ಸಾಫೀಸ್‌ನಲ್ಲಿ ₹100 ಕೋಟಿ ಕಲೆಕ್ಷನ್ ಮಾಡಿಸಿ ಎಲ್ಲರ ಹುಬ್ಬೇರಿಸಿದ್ದಾರೆ. ಅದರಲ್ಲೂ ನೀನು ಹೀರೋ ಅಂದವರ ಬಾಯಿ ಮುಚ್ಚಿಸಿದ್ದಾರೆ.

Tamil Actor Pradeep Ranganathan back to back 3 movie earned Rs 100 crore

ಪ್ರದೀಪ್ ರಂಗನಾಥನ್‌ಗೆ ಅಭಿಮಾನಿಗಳೇನು ಕಮ್ಮಿಯಿಲ್ಲ. ಈ ಯುವ ನಟ ಸಿನಿಮಾಗಳಿಗೆ ತಮಿಳುನಾಡಿನಲ್ಲಿ ಅದ್ಭುತ ಕ್ರೇಜ್ ಇದೆ. ಸಾಮಾನ್ಯ ಜನರ ಹೀರೋ ಅಂತಲೇ ಕರೆಸಿಕೊಂಡಿರುವ ಈ ನಟ ಸಾಧನೆ ಏನೇನು? ಮೊದಲ ಮೂರು ಸಿನಿಮಾಗಳು ಯಾವುವು? ಅವುಗಳು ಮಾಡಿದ ಕಲೆಕ್ಷನ್ ಎಷ್ಟು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ದಕ್ಷಿಣ ಭಾರತದಲ್ಲಿ ಇಂತಹದ್ದೊಂದು ಸಾಧನೆ ಮಾಡಿದ ಯುವ ನಟ ಕಣ್ಣಿಗೆ ಬಿದ್ದಿದ್ದು ತೀರಾ ವಿರಳ. ಈ ನಟನ 'ಹ್ಯಾಟ್ರಿಕ್' ಸಾಧನೆ ದಕ್ಷಿಣ ಭಾರತದಾದ್ಯಂತ ಕೊಂಡಾಡುತ್ತಿದ್ದಾರೆ. ಈ ಮೂಲಕ ಪ್ರದೀಪ್ ರಂಗನಾಥನ್ ಅವರನ್ನು ಹೊಸ ಪೀಳಿಗೆಯ ಅತ್ಯಂತ ಪ್ರಭಾವಶಾಲಿ ನಟನೆಂದು ಫಿಲ್ಮ್ ಮೇಕರ್ಸ್ ಕರೆಯುತ್ತಿದ್ದಾರೆ. ಸಾಮಾನ್ಯ ಜನರೊಂದಿಗೆ ಬೆಸೆಯುವ ಇವರ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿವೆ.

ಅಂದ್ಹಾಗೆ ಪ್ರದೀಪ್ ರಂಗನಾಥನ್ ನಟಿಸಿರುವ ಮೊದಲ ಮೂರು ಸಿನಿಮಾ 'ಲವ್ ಟುಡೇ', 'ಡ್ರ್ಯಾಗನ್' ಹಾಗೂ 'ಡ್ಯೂಡ್'. ಈ ಮೂರು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ₹100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿವೆ. ಹೀಗಾಗಿ ಇಡೀ ದಕ್ಷಿಣ ಭಾರತದ ಚಿತ್ರರಂಗ ಪ್ರದೀಪ್ ರಂಗನಾಥನ್ ಅವರ ಕಡೆಗೆ ಗಮನ ಹರಿಸಿದೆ. ಕೀರ್ತಿಸ್ವರನ್ ನಿರ್ದೇಶಿಸಿ, ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ 'ಡ್ಯೂಡ್' ಇತ್ತೀಚೆಗೆ ರಿಲೀಸ್ ಆಗಿತ್ತು. ಮೊದಲ ವಾರದಲ್ಲಿಯೇ ವಿಶ್ವದಾದ್ಯಂತ ₹100 ಕೋಟಿ ಗಡಿ ದಾಟಿ ಅಚ್ಚರಿ ಮೂಡಿಸಿದೆ.

ದೀಪಾವಳಿ ಹಬ್ಬದ ವೀಕೆಂಡ್‌ನಲ್ಲಿ ರಿಲೀಸ್ ಆಗಿದ್ದ 'ಡ್ಯೂಡ್' ತಮಿಳುನಾಡಿನ ಬಾಕ್ಸ್ ಆಫೀಸ್‌ನಲ್ಲಿ ಚಿಂದಿ ಕಲೆಕ್ಷನ್ ಮಾಡಿತ್ತು. ಹಾಗಂತ ತಮಿಳುನಾಡು ಅಷ್ಟೇ ಅಲ್ಲ. ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ಕರ್ನಾಟಕದಲ್ಲಿ ಈ ಸಿನಿಮಾ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ಮೂರು ಸಿನಿಮಾಗಳು ಅಸಾಧಾರಣ ಸಾಧನೆ ಮಾಡಿದ್ದಕ್ಕೆ ಪ್ರದೀಪ್ ರಂಗನಾಥನ್ ಪ್ರತಿಕ್ರಿಯಿಸಿದ್ದಾರೆ. "ಈ ಯಶಸ್ಸಿಗೆ ಕಾರಣ ನಾನು ಅಲ್ಲ. ಬದಲಾಗಿ ನನ್ನನ್ನು ತಮ್ಮ ಕುಟುಂಬದ ಸದಸ್ಯರಂತೆ ಪ್ರೀತಿಸಿ, ಬೆಂಬಲಿಸಿದ ಪ್ರೇಕ್ಷಕರು" ಎಂದಿದ್ದಾರೆ.

ಪ್ರದೀಪ್ ರಂಗನಾಥನ್ ಅಚಾನಕ್ ಆಗಿ ಹೀರೋ ಆದವರಲ್ಲ. ಸಿನಿಮಾ ಮೇಕಿಂಗ್‌ನ ಆಳ ಅಗಲವನ್ನು ಅರಿತು ಹೀರೋ ಆದವರು. ಪ್ರದೀಪ್ 2019ರಲ್ಲಿ ತೆರೆಕಂಡಿದ್ದ ರವಿ ಮೋಹನ್ ಹಾಗೂ ಕಾಜಲ್ ಅಗರ್ವಾಲ್ ನಟಿಸಿದ 'ಕೋಮಲಿ' ಸಿನಿಮಾವನ್ನು ನಿರ್ದೇಶಿಸಿದ್ದರು. ಇದು ಚೊಚ್ಚಲ ನಿರ್ದೇಶನದ ಸಿನಿಮಾ ಆಗಿತ್ತು. ಬಾಕ್ಸಾಫೀಸ್‌ನಲ್ಲಿ ₹50 ಕೋಟಿ ಲೂಟಿ ಮಾಡಿತ್ತು.

More from Filmibeat

English summary
Tamil Actor Pradeep Ranganathan back to back 3 movie earned Rs. 100 crore.
Read more about: actor tamil movie box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X