47ನೇ ವಯಸ್ಸಿಗೆ ತಂದೆಯಾದ ತಮಿಳು ನಟ; ಹೆಣ್ಣು ಮಗುವಿಗೆ ಜನ್ಮ ನೀಡಿ ಸಂಭ್ರಮಿಸಿದ ಸ್ಟಾರ್ ದಂಪತಿ

ಸಿನಿಮಾ ತಾರೆಯರ ಮದುವೆ ಮುಂಜಿ ಕಾರ್ಯಕ್ರಮಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತವೆ. ಅವರ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟರ ಬಗ್ಗೆ ಇಂಚಿಂಚು ಮಾಹಿತಿಯನ್ನು ತಿಳಿದುಕೊಳ್ಳುವ ತವಕ. ಅದರಲ್ಲೂ 50ರ ಆಸುಪಾಸಿನಲ್ಲಿ ಯಾರಾದರೂ ಮದುವೆಯಾದರೆ, ಮಗು ಜನಿಸಿದರೆ. ಅವುಗಳು ದೊಡ್ಡ ಮಟ್ಟಕ್ಕೆ ಸುದ್ದಿಯಾಗುತ್ತವೆ. ಈಗ ತಮಿಳಿನ ಜನಪ್ರಿಯ ನಟ ಇದೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

ರೆಡಿನ್ ಕಿಂಗ್‌ಸ್ಲೇ ತಮಿಳಿನ ಜನಪ್ರಿಯ ಹಾಸ್ಯ ನಟ. ಕಾಲಿವುಡ್‌ನಲ್ಲಿ ಈ ನಟ ಸಿಕ್ಕಾಪಟ್ಟೆ ಫೇಮಸ್. ಇವರ ಕಾಮಿಡಿ ಸೆನ್ಸ್‌ಗೆ ಸಿನಿಮಾ ಪ್ರಿಯರು ಬಿದ್ದು ಬಿದ್ದು ನಕ್ಕಿದ ಸಾಕಷ್ಟು ಉದಾಹರಣೆಗಳು ಇವೆ. 2023ರ ಡಿಸೆಂಬರ್ 10ರಂದು ರೆಡಿನ್ ಕಿಂಗ್‌ಸ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ತಮಿಳಿನ ಜನಪ್ರಿಯ ಕಿರುತೆರೆ ನಟಿ ಸಂಗೀತಾ ಅವರನ್ನು ವಿವಾಹವಾಗಿದ್ದರು.

Tamil actor Redin Kingsley becomes father at 47 wife Sangeetha gave birth to baby girl

ಈಗ ತಮಿಳು ನಟ ರೆಡಿನ್ ಕಿಂಗ್‌ಸ್ಲೇ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. 47ನೇ ವಯಸ್ಸಿನಲ್ಲಿ ತಂದೆಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯ ಸಂಗತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಗುವನ್ನು ಎತ್ತಿಕೊಂಡಿರುವ ಫೋಟೊವನ್ನು ಶೇರ್ ಮಾಡಿ ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ತಮಿಳು ನಟ ರೆಡಿನ್ ಕಿಂಗ್‌ಸ್ಲೇ ಫೋಟೊವನ್ನು ಹಂಚಿಕೊಳ್ಳುತ್ತಿದ್ದಂತೆ ಅವರ ಅಭಿಮಾನಿಗಳು ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

ರೆಡಿನ್ ಕಿಂಗ್‌ಸ್ಲೇ ಇತ್ತೀಚೆಗೆ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದು, ಈ ವಿಶೇಷ ಕ್ಷಣಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗೆ ಜನಿಸಿದ ಮಗಳ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ತಮ್ಮ ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ಇಬ್ಬರಿಗೂ ಪ್ರೇಕ್ಷಕರು ಶುಭಾಶಯವನ್ನು ತಿಳಿಸುತ್ತಿದ್ದಾರೆ. ಈಗ ಕೆಲವೇ ಗಂಟೆಗಳಲ್ಲಿ ಮಗಳೊಂದಿಗಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ತಮಿಳು ನಟ ರೆಡಿನ್ ಕಿಂಗ್‌ಸ್ಲೇ ತನ್ನ ಮಗಳ ಫೋಟೊವನ್ನು ಶೇರ್ ಮಾಡಿಕೊಂಡು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. "ನಿಮ್ಮ ವಿಶ್‌ಗಳು ಹಾಗೂ ಆಶೀರ್ವಾದಗಳಿಗೆ ಬೆಲೆ ಕಟ್ಟುವುದಕ್ಕೆ ಆಗುವುದಿಲ್ಲ" ಎಂದು ಬರೆದುಕೊಂಡಿದ್ದಾರೆ. ಇದೇ ಪೋಸ್ಟ್‌ನಲ್ಲಿ ಶೇರ್ ಮಾಡಿರುವ ಫೋಟೊದಲ್ಲಿ ರೆಡಿನ್ ತನ್ನ ಮುದ್ದಿನ ಮಗಳ ಎತ್ತಿಕೊಂಡಿದ್ದಾರೆ. ಈ ಫೋಟೊದಲ್ಲಿ ಮಗುವಿನ ಮುಖವನ್ನು ಬ್ಲರ್ ಮಾಡಲಾಗಿದೆ. ಈ ಫೋಟೊವನ್ನು ನೋಡಿ ನೆಟ್ಟಿಗರು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ರೆಡಿನ್ ಕಿಂಗ್‌ಸ್ಲೇ ಪತ್ನಿ ಸಂಗೀತಾ ಅವರ ಸೀಮಂತವನ್ನು ಮಾಡಿದ್ದರು. ಪತ್ನಿಯೊಂದಿಗೆ ನಿಂತು ಫೋಟೊವನ್ನು ತೆಗೆಸಿಕೊಂಡಿದ್ದರು. ಈ ಫೋಟೊಗಳು ಕೂಡ ಈ ಸಂದರ್ಭದಲ್ಲಿ ವೈರಲ್ ಆಗುತ್ತಿದೆ. ಇನ್ನು ರೆಡಿನ್ ಕಿಂಗ್‌ಸ್ಲೇ ಏಪ್ರಿಲ್ 16, 1977ರಲ್ಲಿ ಜನಿಸಿದ್ದಾರೆ. ತಮ್ಮ 45ನೇ ವಯಸ್ಸಿನಲ್ಲಿ ಇವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಇವರ ಮದುವೆಯನ್ನು ಇಟ್ಟುಕೊಂಡು ಟೀಕೆ ಮಾಡಲಾಗಿತ್ತು.

ರೆಡಿನ್ ಕಿಂಗ್‌ಸ್ಲೇ ತಮಿಳು ಚಿತ್ರರಂಗದ ಜನಪ್ರಿಯ ನಟ. ತಮ್ಮ ಹಾಸ್ಯ ಪ್ರಜ್ಞೆ ಹಾಗೂ ಕಾಮಿಡಿ ಟೈಮಿಂಗ್‌ನಿಂದ ಹೆಸರುವಾಸಿಯಾಗಿದ್ದಾರೆ. ಇವರು ನಟನೆಗೆ ಇಳಿಯುವುದಕ್ಕೂ ಮುನ್ನ ಡ್ಯಾನ್ಸರ್ ಆಗಿ ಕೆಲಸ ಮಾಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ಡ್ಯಾನ್ಸರ್ ಆಗಿಯೂ ಕಾಣಿಸಿಕೊಂಡಿದ್ದರು. ಇಷ್ಟೇ ಅಲ್ಲದೆ ಬೆಂಗಳೂರು ಹಾಗೂ ಚೆನ್ನೈನಲ್ಲಿಯೂ ಕೆಲಸ ಮಾಡಿದ್ದಾರೆ. 2012ರಲ್ಲಿ ಇವರು 'ವೆಟ್ಟೈ ಮನ್ನನ್' ಸಿನಿಮಾ ಮೂಲಕ ಜರ್ನಿಯನ್ನು ಆರಂಭಿಸಿದ್ದರು.

ಆದರೆ, 'ವೆಟ್ಟೈ ಮನ್ನನ್' ಸಿನಿಮಾವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಸಿನಿಮಾಗೆ ಎಂಟ್ರಿ ಕೊಡುವುದಕ್ಕೆ ಆಗಲಿಲ್ಲ. ಆದರೆ, 2018ರಲ್ಲಿ ಲೇಡಿ ಸೂಪರ್‌ಸ್ಟಾರ್ ನಯನತಾರಾ ನಟಿಸಿದ 'ಕೊಲಮಾವು ಕೋಕಿಲಾ' ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದ್ದರು. 2021ರಲ್ಲಿ ತೆರೆಕಂಡಿದ್ದ ಶಿವಕಾರ್ತಿಕೇಯನ್ ನಟಿಸಿದ 'ಡಾಕ್ಟರ್' ಸಿನಿಮಾ ರೆಡಿನ್ ಕಿಂಗ್‌ಸ್ಲೇ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ದಳಪತಿ ವಿಜಯ್ ಸಿನಿಮಾದಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

More from Filmibeat

English summary
Tamil actor Redin Kingsley becomes father at 47 wife Sangeetha gave birth to baby girl
Read more about: father birth kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X