Kanguva Box Office Day 1: ಮೊದಲ ದಿನ 'ಕಂಗುವ' ಕಲೆಕ್ಷನ್ ಕರ್ನಾಟಕದಲ್ಲಿ ಎಷ್ಟು? ಸಿನಿಮಾದ ಭವಿಷ್ಯವೇನು?

ತಮಿಳು ನಟ ಸೂರ್ಯ ಅಭಿನಯದ ಬಿಗ್ ಬಜೆಟ್ ಸಿನಿಮಾ 'ಕಂಗುವ' ನಿನ್ನೆ (ನವೆಂಬರ್ 14) ವಿಶ್ವದಾದ್ಯಂತ ರಿಲೀಸ್ ಆಗಿದೆ. ಈ ಪ್ಯಾನ್ ಇಂಡಿಯಾ ಸಿನಿಮಾವನ್ನು ಕರ್ನಾಟಕದಲ್ಲಿಯೂ ದೊಡ್ಡ ಮಟ್ಟದಲ್ಲಿಯೇ ಬಿಡುಗಡೆ ಮಾಡಲಾಗಿತ್ತು. ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡಿದೆ.

ತಮಿಳಿನ ಸ್ಟಾರ್ ನಟ ಸೂರ್ಯ, ಬಾಲಿವುಡ್ ನಟ ಬಾಬಿ ಡಿಯೋಲ್, ನಟಿ ದಿಶಾ ಪಟಾನಿ ಸೇರಿದಂತೆ ದಿಗ್ಗಜರೇ ನಟಿಸಿರುವ ಈ ಸಿನಿಮಾಗೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಎಲ್ಲಾ ಭಾಷೆಗಳಲ್ಲಿ ಈ ಸಿನಿಮಾಗೆ ಬಗ್ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇದು ಮುಂದಿನ ದಿನಗಳಲ್ಲಿ ಬಾಕ್ಸಾಫೀಸ್‌ ಕಲೆಕ್ಷನ್ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

Tamil actor Suriya movie Kanguva Karnataka Box office collection day 1 report

ತಮಿಳು ಸಿನಿಮಾಗಳು ಬೆಂಗಳೂರು ಹಾಗೂ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತವೆ. ಹೀಗಾಗಿ ಕರ್ನಾಟಕದ ಬಾಕ್ಸಾಫೀಸ್‌ ಮೇಲೂ ತಮಿಳು ಸಿನಿಮಾ ಮಂದಿ ಕಣ್ಣಿಟ್ಟಿರುತ್ತಾರೆ. ಹಾಗೆಯೇ ಸೂರ್ಯ ನಟನೆಯ 'ಕಂಗುವ' ಸಿನಿಮಾದ ಕರ್ನಾಟಕದ ಬಾಕ್ಸಾಫೀಸ್‌ ಗಳಿಕೆಯನ್ನು ಗಮನಿಸಿದ್ದರು. ಹಾಗಿದ್ದರೆ, ಮೊದಲ ದಿನ ಇಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ? ಮುಂದಿನ ದಿನಗಳಲ್ಲಿ ಈ ಸಿನಿಮಾ ಕಲೆಕ್ಷನ್ ಏನಾಗಬಹುದು? ತಿಳಿಯಲು ಮುಂದೆ ಓದಿ.

'ಕಂಗುವ' ಕರ್ನಾಟಕ ಕಲೆಕ್ಷನ್ ಎಷ್ಟು?

ಸೂರ್ಯ ನಟನೆಯ 'ಕಂಗುವ' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಉತ್ತಮವಾಗಿತ್ತು. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ ಕೇವಲ ಅಡ್ವಾನ್ಸ್ ಬುಕಿಂಗ್‌ನಿಂದಲೇ ಈ ಸಿನಿಮಾ 10 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇನ್ನು ಕರ್ನಾಟಕದ ವಿಚಾರಕ್ಕೆ ಬರುವುದಾದರೆ, ಮೊದಲ ದಿನ ಈ ಸಿನಿಮಾ ದೊಡ್ಡ ಮಟ್ಟದ ರೆಸ್ಪಾನ್ಸ್ ಏನೂ ಸಿಕ್ಕಿಲ್ಲ. ಕರ್ನಾಟಕದಲ್ಲಿ ಸುಮಾರು 205 ಸ್ಕ್ರೀನ್‌ಗಲ್ಲಿ 'ಕಂಗುವ' ಪ್ರದರ್ಶನ ಕಂಡಿತ್ತು. ಅದರಲ್ಲಿ ತಮಿಳು 140 ಸ್ಟ್ರೀನ್, ತೆಲುಗು 65 ಸ್ಕ್ರೀನ್‌ಗಳಲ್ಲಿಸ ರಿಲೀಸ್ ಆಗಿತ್ತು. ಇನ್ನು ವಿತರಕರ ವಲಯದ ಮೂಲಗಳ ಪ್ರಕಾರ 'ಕಂಗುವ' ಮೊದಲ ದಿನ ಗಳಿಸಿದ್ದು 1.60 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಆದರೆ, ಕೆಲವೆಡೆ 2.25 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದೂ ವರದಿಯಾಗಿದೆ.

Tamil actor Suriya movie Kanguva Karnataka Box office collection day 1 report

ಕರ್ನಾಟಕದಲ್ಲಿ ಹೇಗಿದೆ ಕ್ರೇಜ್?

ಕರ್ನಾಟಕದಲ್ಲಿ ತಮಿಳು ನಟ ಸೂರ್ಯ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದೊಡ್ಡ ದಾಖಲೆಯನ್ನೇನು ಬರೆದಿಲ್ಲ. ತಮಿಳು ಪ್ರೇಕ್ಷಕರು ಅವರ ಸಿನಿಮಾಗಳನ್ನು ನೋಡುವುದು ಬಿಟ್ಟರೆ, ಬೇರೆ ಭಾಷೆಯ ಸಿನಿಪ್ರಿಯರು ಮುಗಿಬಿದ್ದು ಸಿನಿಮಾ ನೋಡಿದ್ದು ಇಲ್ಲ. ಆದರೆ, 'ಕಂಗುವ' ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಬೆಂಗಳೂರು ಹಾಗೂ ಹಲವೆಡೆ ಸಿನಿಮಾ ನೋಡುವುದಕ್ಕೆ ಆಸಕ್ತಿ ತೋರಿದ್ದರು. ಆದರೆ, ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದರಿಂದ ವೀಕೆಂಡ್ ಕಲೆಕ್ಷನ್ ಮೇಲೆ ಪರಿಣಾಮ ಬೀರಬಹುದು.

ಮೊದಲ ದಿನ ಭಾರತದಾದ್ಯಂತ ಗಳಿಸಿದ್ದೆಷ್ಟು?

ಸೂರ್ಯ ಸಿನಿಮಾ ಮೊದಲ ದಿನದ ಉತ್ತಮ ಕಲೆಕ್ಷನ್ ಮಾಡಿದೆ. ಈಗಾಗಲೇ ವರದಿಯಾಗಿರುವ ಪ್ರಕಾರ 26 ಕೋಟಿ ರೂಪಾಯಿ ಗಳಿಸಿದೆ. ಇದರಲ್ಲಿ 10 ಕೋಟಿ ರೂಪಾಯಿ ಅಡ್ವಾನ್ಸ್ ಬುಕಿಂಗ್‌ನಿಂದ ಬಂದಿದೆ. ಆದರೆ, 300 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಖರ್ಚು ಮಾಡಿದ್ದರಿಂದ ಮೊದಲ ದಿನ ಕಮ್ಮಿ ಅಂದರೂ 35 ಕೋಟಿ ರೂಪಾಯಿ ಕಲೆಕ್ಷನ್ ಅನ್ನು ನಿರೀಕ್ಷೆ ಮಾಡಲಾಗಿತ್ತು. ಆ ಮೊತ್ತವನ್ನು 'ಕಂಗುವ' ಟೀಮ್ ರೀಚ್ ಆಗಲಿಲ್ಲ.

ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ಕಲೆಕ್ಷನ್?

'ಕಂಗುವ' ತಮಿಳು ನಾಡಿನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲವಾಗಿದೆ. ತಮಿಳುನಾಡಿನಲ್ಲಿ ಈ ಸಿನಿಮಾ 10.85 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಹಾಗೇ ಆಂಧ್ರ ಹಾಗೂ ತೆಲಂಗಾಣದಿಂದ 5.50 ಕೋಟಿ ರೂ., ಕರ್ನಾಟಕದಲ್ಲಿ 1.60 ಕೋಟಿ ರೂ., ಕೇರಳದಲ್ಲಿ 3.75 ಕೋಟಿ ರೂ. ಹಾಗೂ ಭಾರತದ ಬೇರೆ ಬೇರೆ ರಾಜ್ಯಗಳಿಂದ 4.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ಲೆಕ್ಕ ಹಾಕಿದ್ದಾರೆ.

More from Filmibeat

English summary
Tamil actor Suriya movie Kanguva Karnataka Box office collection day 1 report;
Read more about: suriya box office filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X