Kanguva Box Office; 'ಕಂಗುವ' ನೋಡಿ ಪ್ರೇಕ್ಷಕರು ಕಂಗಾಲು; ಮೊದಲ ದಿನದ ಬಾಕ್ಸಾಫೀಸ್ ಲೆಕ್ಕಾಚಾರವೇನು?

ಕಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕಂಗುವ' ಇಂದು (ನವೆಂಬರ್ 14) ಅದ್ಧೂರಿಯಾಗಿ ರಿಲೀಸ್ ಆಗಿದೆ. ದೇಶಾದ್ಯಂತ ತೆರೆಕಂಡಿರುವ ಈ ಸಿನಿಮಾದ ಪ್ರಮುಖ ಆಕರ್ಷಣೆ ಸೂರ್ಯ. ಇವರೊಂದಿಗೆ ಬಾಲಿವುಡ್‌ ನಟ ಬಾಬಿ ಡಿಯೋಲ್ ಕೂಡ ಅಷ್ಟೇ ಪವರ್‌ಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಮುಖಾ-ಮುಖಿ ಸಿನಿಪ್ರಿಯರ ಕುತೂಹಲಕ್ಕೆ ಕಾರಣವಾಗಿತ್ತು.

ಕೊನೆಗೂ ನಿರೀಕ್ಷೆಯಂತೆ ಸೂರ್ಯ ನಟನೆಯ 'ಕಂಗುವ' ತೆರೆಕಂಡಿದೆ. ಎಲ್ಲರ ಕಣ್ಣು ಈಗ ಬಾಕ್ಸಾಫೀಸ್ ಮೇಲಿದೆ. ಸುಮಾರು 300 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಕಲೆಕ್ಷನ್ ಎಷ್ಟು ಮಾಡಬಹುದು ಅನ್ನೋ ಲೆಕ್ಕಾಚಾರ ಕೂಡ ಈಗಾಗಲೇ ಶುರುವಾಗಿದೆ. ಇದು ತಮಿಳು ಚಿತ್ರರಂಗದಲ್ಲಿ ನಿರ್ಮಾಣಗೊಂಡ ಮತ್ತೊಂದು ಬಿಗ್ ಬಜೆಟ್ ಸಿನಿಮಾ.

Tamil actor Suriya starrer Kanguva box office collection Day prediction report

'ಕಂಗುವ' ಸಿನಿಮಾ ದಕ್ಷಿಣ ಭಾರತದ ರಾಜ್ಯಗಳಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ. ಅದೇ ಉತ್ತರ ಭಾರತದಲ್ಲಿ ಈ ಸಿನಿಮಾಗೆ ಅಷ್ಟೊಂದು ಒಳ್ಳೆಯ ಒಪನಿಂಗ್ ಸಿಕ್ಕಿಲ್ಲ ಅನ್ನೋದು ಪ್ರಾಥಮಿಕ ವರದಿ. ಹಾಗಿದ್ದರೆ, ಈ ಪ್ಯಾನ್ ಇಂಡಿಯಾ ಸಿನಿಮಾದ ಮೊದಲ ದಿನದ ಲೆಕ್ಕಾಚಾರವೇನು? ಉತ್ತರ ಭಾರತದಲ್ಲಿ ಯಾಕೆ ಅಷ್ಟೊಂದು ಸದ್ದು ಮಾಡಿಲ್ಲ? ಅನ್ನೋದನ್ನು ತಿಳಿಯಲು ಮುಂದೆ ಓದಿ.

300 ಕೋಟಿ ಬಜೆಟ್ ಸಿನಿಮಾ

ದಕ್ಷಿಣ ಭಾರತದ ಮತ್ತೊಂದು ಭಾರೀ ಬಜೆಟ್ ಸಿನಿಮಾ 'ಕಂಗುವ'. ಅದ್ಧೂರಿ ಸ್ಟಾರ್‌ಕಾಸ್ಟ್, ದುಬಾರಿ ಸೆಟ್ ಇರುವ ಈ ಸಿನಿಮಾದ ಸುಮಾರು 300 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಸೂರ್ಯ, ಬಾಬಿ ಡಿಯೋಲ್ ಹಾಗೂ ದಿಶಾ ಪಟಾನಿ ಸಂಭಾವನೆ ಕೂಡ ಸೇರಿಕೊಂಡಿದೆ. ಇಷ್ಟು ದೊಡ್ಡ ಬಜೆಟ್ ಮೊದಲ ದಿನ ಕಮ್ಮಿ ಅಂದರೂ 40 ರಿಂದ 45 ಕೋಟಿ ರೂಪಾಯಿ ಕಲೆಕ್ಷನ್ ಆಗುತ್ತೆ ಎಂಬ ನಿರೀಕ್ಷೆಯಿತ್ತು. ಆದರೆ, ಚಿತ್ರತಂಡದ ಲೆಕ್ಕಾಚಾರ ಎಲ್ಲಾ ತಲೆ ಕೆಳಗಾಗಿದೆ.

ಮೊದಲ ದಿನದ ಅಂದಾಜು ಕಲೆಕ್ಷನ್ ಎಷ್ಟು?

ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ 'ಕಂಗುವ' ಸಿನಿಮಾ ಭಾರತದಾದ್ಯಂತ ಮೊದಲ ದಿನದ ಕಲೆಕ್ಷನ್ 24 ರಿಂದ 25 ಕೋಟಿ ರೂಪಾಯಿ ಆಗಿದೆ ಎಂದು ಅಂದಾಜಿಸಲಾಗಿದೆ. ತಮಿಳುನಾಡಿನಲ್ಲಿ ಅತೀ ಹೆಚ್ಚು ಅಂದರೆ, 15 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿದೆ. ಇನ್ನು ಕರ್ನಾಟಕ, ಆಂಧ್ರ ಪ್ರದೇಶ, ಕೇರಳ ರಾಜ್ಯಗಳಲ್ಲೂ ಕಲೆಕ್ಷನ್ ಉತ್ತಮವಾಗಿದೆ ಎಂದು ಹೇಳಲಾಗಿದೆ. ಆದರೆ, ಉತ್ತರ ಭಾರತದಲ್ಲಿ ಮಾತ್ರ ಗಳಿಕೆ ಅಷ್ಟೊಂದು ಚೆನ್ನಾಗಿಲ್ಲ ಎನ್ನಲಾಗಿದೆ.

Tamil actor Suriya starrer Kanguva box office collection Day prediction report

ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ

ಸೂರ್ಯ ಸಿನಿಮಾಗೆ ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೂರ್ಯ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆದರೆ, ಸಿನಿಮಾ ಚೆನ್ನಾಗಿಲ್ಲ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇನ್ನೊಂದು ಕಡೆ ಶಿವಕಾರ್ತಿಕೇಯನ್ ನಟನೆಯ 'ಅಮರನ್' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಾಗಿ ಜನರಿನ್ನೂ 'ಅಮರನ್' ಕಡೆಗೆ ಹೆಚ್ಚು ಒಲವು ತೋರಿಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಮೊದಲ ದಿನ ದಕ್ಷಿಣ ಭಾರತದಲ್ಲಿ 'ಕಂಗುವ' ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎನ್ನಲಾಗಿದೆ.

ಹಿಂದಿ ಬೆಲ್ಡ್‌ನಲ್ಲಿ ಎಷ್ಟು ಕಲೆಕ್ಷನ್?

'ಕಂಗುವ' ಅಡ್ವಾನ್ಸ್ ಬುಕಿಂಗ್‌ನಿಂದ 10 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಆದರೂ, ಹಿಂದಿ ಬೆಲ್ಟ್‌ಗಳಲ್ಲಿ ಈ ಸಿನಿಮಾಗೆ ಅಷ್ಟೊಂದು ರೆಸ್ಪಾನ್ಸ್ ಸಿಕ್ಕಿಲ್ಲ. ಕೇವಲ ಶೇ.9ರಷ್ಟು ಚಿತ್ರಮಂದಿರಗಳು ತುಂಬಿವೆ ಎಂದು ವರದಿಯಾಗಿವೆ. ಹೀಗಾಗಿ ಹಿಂದಿ ಮಾರ್ಕೆಟ್‌ನಲ್ಲಿ ಮೊದಲ ದಿನ ದೊಡ್ಡ ಮಟ್ಟದ ಕಲೆಕ್ಷನ್ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಫಸ್ಟ್ ಡೇ 40 ರಿಂದ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂಬ ಲೆಕ್ಕ ಹಾಕಲಾಗಿತ್ತು.

More from Filmibeat

English summary
Tamil actor Suriya starrer Kanguva box office collection Day prediction report;
Read more about: suriya box office filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X