48 ವರ್ಷದ ನಟನ ಜೊತೆ ಸಪ್ತಪದಿ ತುಳಿಯುವುದಕ್ಕೆ ರೆಡಿಯಾಗಿರುವ ಈ ನಟಿ ವಯಸ್ಸೆಷ್ಟು? ಇಬ್ಬರ ವಯಸ್ಸಿನ ಅಂತರವೆಷ್ಟು?

ದಕ್ಷಿಣ ಭಾರತದ ಜನಪ್ರಿಯ ನಟ ವಿಶಾಲ್‌ ಅಭಿಮಾನಿಗಳಿಗೆ ಡಬಲ್ ಧಮಾಕ. ಒಂದ್ಕಡೆ 48ನೇ ಹುಟ್ಟುಹಬ್ಬವನ್ನು ಆಚರಿಸಿದ್ದರೆ, ಇನ್ನೊಂದು ಬರ್ತ್‌ಡೇ ದಿನವೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ಅವರ ಅಭಿಮಾನಿಗಳು ಕೊನೆಗೂ ನಟನ ಮದುವೆಯನ್ನು ಕಣ್ತುಂಬಿಕೊಳ್ಳುವುದಕ್ಕೆ ಕಾತುರರಾಗಿದ್ದಾರೆ. ಕಾಲಿವುಡ್ ನಟಿ ಸಾಯಿ ಧನ್ಷಿಕಾ ಅವರೊಂದಿಗೆ ವಿಶಾಲ್ ನಿಶ್ವಿತಾರ್ಥ ಮಾಡಿಕೊಂಡಿದ್ದು, ಫೋಟೊಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಭಾರತೀಯ ಚಿತ್ರರಂಗದಲ್ಲಿ ಇನ್ನೂ ಮದುವೆ ಆಗದೆ ಉಳಿದುಕೊಂಡ ಸ್ಟಾರ್ ನಟರುಗಳಿದ್ದಾರೆ. ಸಲ್ಮಾನ್ ಖಾನ್‌ನಿಂದ ಶುರುವಾದರೆ, ಪ್ರಭಾಸ್, ವಿಶಾಲ್‌ವರೆಗೂ ಬಂದು ನಿಲ್ಲುತ್ತೆ. ಹೀಗಾಗಿ ವಿಶಾಲ್ ಅಭಿಮಾನಿಗಳು ಮದುವೆ ಬಗ್ಗೆ ಪ್ರಶ್ನೆ ಮಾಡುತ್ತಲೇ ಇದ್ದರು. ಕೊನೆಗೂ ತನ್ನ 48ನೇ ಹುಟ್ಟುಹಬ್ಬದಂದು ನಟಿ ಸಾಯಿ ಧನ್ಷಿಕಾ ಅವರೊಂದಿಗೆ ನಿಶ್ವಿತಾರ್ಥ ಮಾಡಿಕೊಂಡು ಫ್ಯಾನ್ಸ್ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

Tamil Actor Vishal and Sai Dhanshika Age Gap Love Story amp amp Engagement Details

ವಿಶಾಲ್ ಅವರೊಂದಿಗೆ ಹಲವು ನಾಯಕಿಯರ ಹೆಸರುಗಳು ಈ ಹಿಂದೆ ಕೇಳಿ ಬಂದಿದ್ದವು. ಈ ಹಿಂದೆ ಕೂಡ ನಿಶ್ಚಿತಾರ್ಥದವರೆಗೂ ಬಂದು ಮುರಿದು ಬಿದ್ದಿತ್ತು. ಇದರ ಜೊತೆ ಇತ್ತೀಚೆಗೆ ಅನಾರೋಗ್ಯದಿಂದ ಕುಸಿದು ಬಿದ್ದಿದ್ದರು. ಈ ವೇಳೆ ಅವರ ಆರೋಗ್ಯ ಸಮಸ್ಯೆಗಳ ಬಗ್ಗೆ ನೂರೆಂಟು ವದಂತಿಗಳು ಹಬ್ಬಿದ್ದವು. ಹೀಗಿರುವಾಗ ಇನ್ನು ಮದುವೆ ಆಗೋದು ಅನುಮಾನ ಅಂತಲೇ ಭಾವಿಸಿದ್ದರು. ಆದರೆ, 48ನೇ ಹುಟ್ಟುಹಬ್ಬಕ್ಕೆ ಫ್ಯಾನ್ಸ್‌ಗೆ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ.

ಆದರೆ, 48 ವರ್ಷದ ನಟನ ಜೊತೆ ಸಪ್ತಪದಿ ತುಳಿಯುವುದಕ್ಕೆ ರೆಡಿಯಾಗಿರುವ ನಟಿ ಸಾಯಿ ಧನ್ಷಿಕಾ ಅವರ ವಯಸ್ಸಿ ಬಗ್ಗೆನೂ ಚರ್ಚೆಯಾಗುತ್ತಿದೆ. ವಿಶಾಲ್ 48ನೇ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದಿದ್ದನ್ನು ಅಚ್ಚರಿಯಿಂದ ನೋಡುತ್ತಿದ್ದಾರೆ. ಯಾಕಂದ್ರೆ, ವಿಶಾಲ್ ಹಾಗೂ ಸಾಯಿ ಧನ್ಷಿಕಾ ಮಧ್ಯೆ ವಯಸ್ಸಿನ ಅಂತರ ದೊಡ್ಡದಿದೆ. ಹೀಗಾಗಿ ಇಬ್ಬರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ ಅನ್ನೋದನ್ನು ತಿಳಿದುಕೊಳ್ಳುವುದಕ್ಕೂ ಕಾತುರರಾಗಿದ್ದಾರೆ.

ವಿಶಾಲ್ ಮತ್ತು ಸಾಯಿ ಧನ್ಷಿಕಾ ಇಬ್ಬರಿಗೂ 15 ವರ್ಷಗಳಿಂದ ಪರಸ್ಪರ ಪರಿಚಯ. ಚಿತ್ರರಂಗಕ್ಕೆ ಇವರೇನು ಹೊಸಬರಲ್ಲ. ಇಬ್ಬರೂ ತಮ್ಮದೇ ವೃತ್ತಿ ಬದುಕಿನಲ್ಲಿ ಯಶಸ್ಸನ್ನು ಕಂಡಿದ್ದಾರೆ. 2006ರಿಂದ ಸಾಯಿ ಧನ್ಷಿಕಾ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ ವರ್ಷದ 'ಯೋಗಿ ಡಾ' ಎನ್ನುವ ಸಿನಿಮಾದ ಪ್ರಚಾರದ ವೇಳೆ ವಿಶಾಲ್ ಹಾಗೂ ಸಾಯಿ ಧನ್ಷಿಕಾ ಇಬ್ಬರೂ ತಮ್ಮ ಜೀವನದಲ್ ಒಬ್ಬರಿಗೊಬ್ಬರು ಪ್ರಭಾವ ಬೀರಿದ್ದನ್ನು ಒಪ್ಪಿಕೊಂಡಿದ್ದರು.

Tamil Actor Vishal and Sai Dhanshika Age Gap Love Story amp amp Engagement Details

"ನನಗೆ ವಿಶಾಲ್ ಸುಮಾರು 15 ವರ್ಷಗಳಿಂದ ಬಲ್ಲೆ. ನಾವು ಪರಸ್ಪರ ಭೇಟಿಯಾದಾಗಲೆಲ್ಲಾ ಅವರು ನನಗೆ ಗೌರವ ಕೊಟ್ಟಿದ್ದಾರೆ. ನನ್ನ ಕಷ್ಟದಲ್ಲಿದ್ದಾಗ ಅವರು ವೈಯಕ್ತಿಕವಾಗಿ ನನ್ನ ಮನೆಗೆ ಬಂದು ನನ್ನನ್ನು ವಿಚಾರಿಸಿಕೊಂಡರು. ಬೇರೆ ಯಾವುದೇ ಹೀರೋಗಳು ಹಾಗೆ ಮಾಡಿಲ್ಲ. ಅವರ ಈ ನಡೆ ನಿಜವಾಗಿಯೂ ನಿಶ್ಕಲ್ಮಶವಾಗಿತ್ತು" ಎಂದು ನಟಿ ಸಾಯಿ ಧನ್ಷಿಕಾ ಹೇಳಿಕೊಂಡಿದ್ದರು.

ಇನ್ನು ವಿಶಾಲ್ ಹುಟ್ಟಿದ್ದು ಆಗಸ್ಟ್ 19, 1977. ಇಂದು ಅವರು 48ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇನ್ನು ಭಾವಿ ಪತ್ನಿ ಸಾಯಿ ಧನ್ಸಿಕಾ ಜನಿಸಿದ್ದು, ನವೆಂಬರ್ 20, 1989. ಈಗ ಅವರಿಗೆ 35 ವರ್ಷ. ಇವರಿಬ್ಬರ ನಡುವೆ ಬರೋಬ್ಬರಿ 13 ವರ್ಷಗಳ ಅಂತರವಿದೆ. ಆದರೆ, ಪ್ರೀತಿಯ ಮುಂದೆ ಈ ವಯಸ್ಸಿನ ಅಂತರ ಯಾವ ಲೆಕ್ಕಕ್ಕೂ ಇಲ್ಲ.

More from Filmibeat

English summary
Tamil actor Vishal and actress Sai Dhanshika’s engagement has become the talk of Kollywood. Fans are curious about their age gap, how their love story. Here’s everything you need to know.
Read more about: vishal engagement love story
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X