"ಅಷ್ಟೊಂದು ನಟಿಯರು ಇರುವಾಗ ಗಾಯಕಿ ಮನೆಗೆ ವಿಶಾಲ್ ಯಾಕೆ ಹೋಗ್ತಾನೆ?"; ಸುಚಿತ್ರಾಗೆ ನಟಿಯ ತಿರುಗೇಟು!

ತಮಿಳು ನಟ ವಿಶಾಲ್ ಅನಾರೋಗ್ಯ ಚಿತ್ರರಂಗದಲ್ಲಿ ಆತಂಕವನ್ನು ಹುಟ್ಟಾಕಿತ್ತು. ಮೈಕ್ ಹಿಡಿದು ಮಾತಾಡುವುದಕ್ಕೂ ಆಗ ಸ್ಥಿತಿಯಲ್ಲಿ ವಿಶಾಲ್ ನೋಡಿ ಗಾಬರಿಗೊಂಡಿದ್ದರು. ಇದ್ದಕ್ಕಿದ್ದ ಹಾಗೇ ಅಂತಹದ್ದು ಏನಾಯ್ತು ಅಂತ ಬೆಚ್ಚಿಬಿದ್ದಿದ್ದರು. ಒಬ್ಬೊಬ್ಬರು ಒಂದೊಂದು ಕಾರಣ ಕೊಡುವುದಕ್ಕೆ ಶುರು ಮಾಡಿದ್ದರು. ಈ ವೇಳೆ ಸುಚಿ ಲೀಕ್ಸ್ ಖ್ಯಾತಿಯ ಗಾಯಕಿ ಸುಚಿತ್ರಾ ಮಾಡಿದ ಆರೋಪ ಟೀಕೆ ಗುರಿಯಾಗಿತ್ತು.

ನಟ ವಿಶಾಲ್ ವಿರುದ್ಧ ಗಾಯಕಿ ಸುಚಿತ್ರಾ ಗಂಭೀರ ಆರೋಪ ಮಾಡಿದ್ದರು. ತನ್ನ ಮಾಜಿ ಗಂಡ ಕಾರ್ತಿಕ್ ಕುಮಾರ್ ಮನೆಯಲ್ಲಿ ಇಲ್ಲದ ವೇಳೆ ವಿಶಾಲ್ ವೈನ್ ಬಾಟಲ್ ಹಿಡಿದು ಬಂದಿದ್ದ. ಆ ವೇಳೆ ಮದ್ಯಪಾನ ಮಾಡಿದ್ದ. ಅಂದು ವೈನ್ ಬಾಟಲ್ ಹಿಡಿದು ಕೈಗಳು ಇಂದು ನಡುಗುವುದನ್ನು ನೋಡಿ ಖುಷಿಯಾಗುತ್ತಿದೆ ಎಂದು ಎಂದು ಗಾಯಕಿ ಸುಚಿತ್ರಾ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

Tamil actor Vishal health issue actress Sharmila shows angry on singer suchitra allegation

ವಿಶಾಲ್ ಬಗ್ಗೆ ಗಾಯಕಿ ಸುಚಿತ್ರಾ ಕೊಟ್ಟ ಈ ಹೇಳಿಯನ್ನು ನಟಿ ಶರ್ಮಿಳಾ ಖಂಡಿಸಿದ್ದಾರೆ. ಸುಚಿತ್ರಾ ಈ ಹಿಂದೆ ತಮಿಳು ನಟ ಧನುಷ್, ಸಿನಿ ಸಾಹಿತಿ ವೈರಮುತ್ತು ಬಗ್ಗೆನೂ ಟೀಕೆಗಳನ್ನು ಮಾಡಿದ್ದಾರೆ. ಆದರೆ, ಅವರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ವಿಶಾಲ್ ಬಗ್ಗೆ ಕೆಟ್ಟದಾಗಿ ಮಾತಾಡುವಾಗ ನನಗೆ ಕೋಪ ಬರುತ್ತಿದೆ. ವಿಶಾಲ್ ವೈಯಕ್ತಿಕವಾಗಿ ಗೊತ್ತು. ಚಿತ್ರರಂಗದಲ್ಲಿ ಅಷ್ಟೊಂದು ನಟಿಯರು ಇರುವಾಗ ಗಾಯಕಿ ಮನೆಗೆ ಯಾಕೆ ಹೋಗುತ್ತಾನೆ ಅಂತ ಸುಚಿತ್ರಾ ಟೀಕಿಸುವ ಜೋಷ್‌ನಲ್ಲಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಅದೇನು ಅಂತ ನೋಡುವುದಾದರೆ..

ತಮಿಳಿನ ವಿವಾದಾತ್ಮಕ ಗಾಯಕಿ ಸುಚಿತ್ರಾ ಯೂಟ್ಯೂಬ್‌ ಚಾನೆಲ್‌ನಲ್ಲಿ ವಿಶಾಲ್ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ್ದ ಎಂದು ಆರೋಪಿಸಿದ್ದರು. ಅದನ್ನು ನಟಿ ಶರ್ಮಿಳಾ ಖಂಡಿಸಿದ್ದಾರೆ. ವಿಶಾಲ್ ತನ್ನೊಂದಿಗೆ ಹೀಗೆ ಅನುಚಿತವಾಗಿ ವರ್ತಿಸಿದ್ದಾನೆಂದು ಅಂದೇ ಹೇಳಬೇಕಿತ್ತು. ಈಗ ಇದ್ದಕ್ಕಿದ್ದಂತೆ ಮಾತಾಡುವ ಅಗತ್ಯವೇನಿದೆ? ಯಾವುದೇ ವಿಷಯ ಚರ್ಚೆಗೆ ಬಂದರೂ ಸುಚಿತ್ರಾ ಏನಾದರೂ ಟೀಕೆ ಮಾಡುವುದು ಏಕೆ? ಅದೇ ರೀತಿ ವಿಶಾಲ್ ಬಗ್ಗೆನೂ ಸುಚಿತ್ರಾ ಮಾತಾಡಿದ್ದಾರೆಂದು ಕಿಡಿಕಾರಿದ್ದಾರೆ.

Tamil actor Vishal health issue actress Sharmila shows angry on singer suchitra allegation

ಸುಚಿತ್ರಾ ನಿರಂತರವಾಗಿ ಚಿತ್ರರಂಗದವನ್ನು ಟೀಕಿಸುತ್ತಾ ಬರುತ್ತಿದ್ದಾರೆ. ಕೆಲವು ವರ್ಷಗಳಿಂದ ಧನುಷ್, ವೈರಮುತ್ತು ಸೇರಿದಂತೆ ಹಲವರನ್ನು ಟೀಕಿಸುತ್ತಲೇ ಬರುತ್ತಿದ್ದಾರೆ. ಆದರೆ, ಅವರ ಮಾಡಿದ ಆರೋಪವನ್ನು ಸಾಬೀತು ಪಡಿಸಲು ಒಂದೇ ಒಂದು ಪುರಾವೆಯನ್ನೂ ಒದಗಿಸಿಲ್ಲ. ಸಿನಿಮಾರಂಗದಲ್ಲಿ ಅಷ್ಟೊಂದು ನಟಿಯರು ಇರುವಾಗ ಎಲ್ಲರೂ ಗಾಯಕಿಯ ಮನೆಗೆ ಯಾಕೆ ಹೋಗುತ್ತಾರೆ? ಎಂದು ಹೇಳಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ವಿಶಾಲ್ ಅಂತಹ ಒಬ್ಬ ಸೆಲೆಬ್ರಿಟಿ ಫೋನ್ ಮಾಡಿ ಮನೆಯಲ್ಲಿ ಇದ್ದೀರಾ ಎಂದು ವಿಚಾರಿಸಿಕೊಳ್ಳದೆ ಹೇಗೆ ನಿಮ್ಮ ಮನೆಗೆ ಬರಲು ಸಾಧ್ಯ? ಇದು ನಂಬಲು ಅಸಾಧ್ಯ. ಅಷ್ಟೇ ಅಲ್ಲ ಚಿತ್ರರಂಗದಲ್ಲಿ ತುಂಬಾ ಮಂದಿ ನಾಯಕಿಯರು ಇದ್ದಾರೆ. ಅಲ್ಲದೆ ಅವರು ಕಲಾವಿದರ ಸಂಘದ ಅಧ್ಯಕ್ಷರಾಗಿದ್ದವರು. ಉತ್ತಮ ಸ್ಥಾನದಲ್ಲಿರುವ ವ್ಯಕ್ತಿ ಹೀಗೆ ನಿಮ್ಮ ಮನೆಗೆ ಬಂದು ಬಾಗಿಲು ತಟ್ಟಿದ್ದಾನೆಂದು ನಂಬಲು ಸಾಧ್ಯವಿಲ್ಲ. ಸುಚಿತ್ರಾ ಅವರೇ ವಿಶಾಲ್‌ಗೆ ಕರೆ ಮಾಡಿರಬೇಕು. ಇಲ್ಲದೆ ಹೋದರೆ ಸುಚಿತ್ರಾನೇ ಸುಳ್ಳು ಹೇಳುತ್ತಿದ್ದಾರೆ ಎಂದು ನಟಿ ಆರೋಪ ಮಾಡಿದ್ದಾರೆ.

ನಟಿ ಸುಚಿತ್ರಾರನ್ನು ಟೀಕಿಸುವ ಭರಾಟೆಯಲ್ಲಿ ನಟಿಯರನ್ನು ಎಳೆದು ತಂದಿದ್ದಾರೆ. ಈ ಬಗ್ಗೆನೂ ಈಗ ಟೀಕೆಗಳು ಬರುತ್ತಿವೆ. ಏನೇ ಇದ್ದರೂ ವಿಶಾಲ್ ಒಳ್ಳೆಯ ವ್ಯಕ್ತಿ ಎಂದು ನಟಿ ಶರ್ಮಿಳಾ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ. ಅಲ್ಲದೆ ಸುಚಿತ್ರಾ ಯಾವುದೇ ಪುರಾವೆಗಳೇ ಇಲ್ಲದೆ ವಿಶಾಲ್ ಬಗ್ಗೆ ಕಟ್ಟು ಕಥೆಗಳನ್ನು ಕಟ್ಟಿದ್ದಾರೆ. ಆರೋಗ್ಯ ಸರಿಯಿಲ್ಲದ ವ್ಯಕ್ತಿಯ ಬಗ್ಗೆ ಇಂತಹ ಆರೋಪಗಳ ಅಗತ್ಯವಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

More from Filmibeat

English summary
Tamil actor Vishal health issue actress Sharmila shows angry on singer suchitra allegations;
Read more about: vishal health kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X