Keerthy Suresh Wedding:ಗೋವಾದಲ್ಲಿ ಬಾಯ್‌ಫ್ರೆಂಡ್ ಜೊತೆ ಹಸೆಮಣೆ ಏರಿದ ಕೀರ್ತಿ ಸುರೇಶ್:
ದಕ್ಷಿಣ ಭಾರತದ ಜನಪ್ರಿಯ ನಟಿ ಕೀರ್ತಿ ಸುರೇಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುದಿನದ ಗೆಳೆಯ ಆಂಟೋನಿ ಥಟ್ಟಿಲ್ ಅವರನ್ನು ಗೋವಾದಲ್ಲಿ ಇಂದು (ಡಿಸೆಂಬರ್ 12) ವಿವಾಹವಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಕೀರ್ತಿ ಸುರೇಶ್ ಮದುವೆ ಬಗ್ಗೆ ಸುದ್ದಿ ಹರಿದಾಡುತ್ತಲೇ ಇತ್ತು. ಕೊನೆಗೂ ಬಾಲ್ಯದ ಗೆಳೆಯನ ಜೊತೆ ಕೀರ್ತಿ ಸುರೇಶ್ ಸಪ್ತಪದಿ ತುಳಿದಿದ್ದಾರೆ.
ಕೀರ್ತಿ ಸುರೇಶ್ ಸ್ವತ: ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತನ್ನ ವಿವಾಹದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕೇರಳ ಮೂಲದ ಬಾಲ್ಯದ ಗೆಳೆಯನ ಆಂಟೋನಿ ಥಟ್ಟಿಲ್ ಪ್ರೀತಿಯಲ್ಲಿ ಮುಳುಗಿದ್ದ ನಟಿ ಕೀರ್ತಿ ಸುರೇಶ್ ವಿವಾಹವಾಗಿದ್ದು, ಆ ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಬಹುಭಾಷಾ ನಟಿ ಕೀರ್ತಿ ಸುರೇಶ್ ತಮ್ಮ ವೃತ್ತಿ ಬದುಕಿನಲ್ಲಿ ಉತ್ತುಂಗದಲ್ಲಿ ಇರುವಾಗಳೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಎರಡೂ ಕುಟುಂಬದ ಸದಸ್ಯರು ಹಾಗೂ ಚಿತ್ರರಂಗದ ಕೆಲವೇ ಕೆಲವು ಗಣ್ಯರ ಸಮ್ಮುಖದಲ್ಲಿ ಕೀರ್ತಿ ಸುರೇಶ್ ಮದುವೆ ಆಗಿದ್ದಾರೆ. ಪಕ್ಕಾ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಫೋಟೊಗಳನ್ನು ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.
ಇನ್ನು ಕೀರ್ತಿ ಸುರೇಶ್ ಪತಿ ಆಂಟೋನಿ ಥಟ್ಟಿಲ್ ಮೂಲತ: ಕೇರಳದ ಕೊಚ್ಚಿಯವರು. ಆಂಟೋನಿ ದುಬೈನಲ್ಲಿ ತಮ್ಮದೇ ಸ್ವಂತ ಉದ್ಯಮವನ್ನು ಹೊಂದಿದ್ದಾರೆ. ಕೀರ್ತಿ ಸುರೇಶ್ ಹಾಗೂ ಆಂಟೋನಿ ಇಬ್ಬರೂ 15 ವರ್ಷಗಳ ಕಾಲ ಪ್ರೀತಿ ಮಾಡುತ್ತಿದ್ದರು. ತಮ್ಮ ತಮ್ಮ ವೃತ್ತಿ ಜೀವನದಲ್ಲಿ ಸಪೋರ್ಟ್ ಮಾಡಿಕೊಂಡು ಬಂದಿದ್ದರು. ಕೊನೆಗೂ ಇಬ್ಬರೂ ಜೊತೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ನಿರ್ಧರಿಸಿ, ಇಂದು (ಡಿಸೆಂಬರ್ 12) ಗೋವಾದಲ್ಲಿ ವಿವಾಹವಾಗಿದ್ದಾರೆ.
ದಕ್ಷಿಣ ಭಾರತದಲ್ಲಿ 'ಮಹಾನಟಿ' ಅಂತಲೇ ಕರೆಸಿಕೊಳ್ಳುವ ಕೀರ್ತಿ ಸುರೇಶ್ ದಶಕಗಳಿಗೂ ಹೆಚ್ಚು ಕಾಲ ಸಿನಿಮಾ ರಂಗದಲ್ಲಿ ಇದ್ದರೂ ತಮ್ಮ ಭಾಯ್‌ಫ್ರೆಂಡ್ ಬಗ್ಗೆ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಮದುವೆ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದರೂ ಕೀರ್ತಿ ಸುರೇಶ್ ತಮ್ಮ ಬಾಲ್ಯದ ಗೆಳೆಯನ ಬಗ್ಗೆ ಎಲ್ಲೂ ಹೇಳಿಕೊಂಡಿರಲಿಲ್ಲ. ಇನ್ನೇನು ವಿವಾಹದ ದಿನ ಹತ್ತಿರವಿದೆ ಎಂದಾಗಲೇ ಆಂಟೋನಿ ಥಟ್ಟಿಲ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

ಕೀರ್ತಿ ಸುರೇಶ್ ಮದುವೆ ಬಗ್ಗೆ ಆಗಾಗ ಗಾಳಿ ಸುದ್ದಿಗಳು ಹಬ್ಬುತ್ತಲೇ ಇದ್ದವು. ಕೆಲವೊಮ್ಮೆ ತಮಿಳಿನ ಸ್ಟಾರ್ ನಟರೊಂದಿಗೆ ಇವರ ಹೆಸರು ತಳುಕು ಹಾಕಿಕೊಳ್ಳುತ್ತಿತ್ತು. ಮತ್ತೆ ಕೆಲವೊಮ್ಮೆ ಉದ್ಯಮಿ ಜೊತೆ ಮದುವೆ ಅಂತ ಅನ್ನೋ ಸುದ್ದಿ ಓಡಾಡಿತ್ತು. ಈ ವೇಳೆ ಕೀರ್ತಿ ಸುರೇಶ್ ತಾಯಿ ಸುಳ್ಳು ಸುದ್ದಿಗಳು ಎಂದು ಸಮರ್ಥನೆ ಮಾಡಿಕೊಂಡಿದ್ದರು. ಈಗ ಎಲ್ಲಾ ಗಾಳಿ ಸುದ್ದಿಗಳಿಗೂ ಬ್ರೇಕ್ ಹಾಕಿ ಪ್ರೀತಿಸಿದವರನ್ನು ಕೈ ಹಿಡಿದಿದ್ದಾರೆ.
ಈ ಮದುವೆ ಸಮಾರಂಭದಲ್ಲಿ ತಮಿಳು ಚಿತ್ರರಂಗದ ಜನಪ್ರಿಯ ನಟ ದಳಪತಿ ವಿಜಯ್ ಭಾಗವಹಿಸಿದ್ದಾರೆ. ಆ ಫೋಟೊಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಕೀರ್ತಿ ಸುರೇಶ್ ಮದುವೆಯಲ್ಲಿ ವಿಜಯ್ ರೇಷ್ಮೆ ಶರ್ಟ್ ಹಾಗೂ ಪಂಚೆಯುಟ್ಟು ಫೋಟೊಗಳಿಗೆ ಪೋಸ್ ಕೊಟ್ಟಿದ್ದಾರೆ. ಸದ್ಯಕ್ಕೀಗ ದಕ್ಷಿಣ ಭಾರತದ ಮತ್ತೊಬ್ಬ ನಟಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಬಳಿಕ ಕೀರ್ತಿ ಸುರೇಶ್ ನಟಿಸುತ್ತಾರೋ ಇಲ್ಲವೋ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











