"ತುಂಬಾ ಅವಕಾಶಗಳು ಬಂದ್ವು.. ವಡಿವೇಲು ಎಲ್ಲದನ್ನೂ ಕಸಿದುಕೊಂಡ್ರು": ತಮಿಳು ನಟಿ ಪ್ರೇಮ ಪ್ರಿಯಾ ಆರೋಪ

ಹಾಸ್ಯ ಪ್ರಿಯರಿಗೆ ವಡಿವೇಲು ಬಗ್ಗೆ ಚೆನ್ನಾಗಿಯೇ ಗೊತ್ತಿರುತ್ತೆ. ಭಾಷೆಯ ಎಲ್ಲೆ ಮೀರಿ ವಡಿವೇಲು ಸಿನಿಮಾಗಳನ್ನು ಇಷ್ಟ ಪಡುವ ಜನರು ಇದ್ದಾರೆ. ತಮಿಳು, ಮಲಯಾಳಂ ಭಾಷೆಯ ಜನರಷ್ಟೇ ಅಲ್ಲ. ದಕ್ಷಿಣ ಭಾರತದ ಸಿನಿಮಾ ಪ್ರೇಮಿಗಳುಗೆ ವಡಿವೇಲು ಪಾತ್ರಗಳು ತುಂಬಾನೇ ಇಷ್ಟ.

ವಡಿವೇಲು ಕಾಮಿಡಿ ಸೆನ್ಸ್‌ಗೆ, ಮ್ಯಾನರಿಸಂಗೆ, ಡೈಲಾಗ್‌ಗೆ ಫಿದಾ ಆಗಿರೋ ಅದೆಷ್ಟೋ ಮಂದಿ ಇದ್ದಾರೆ. ಒಂದು ಕಾಲದಲ್ಲಿ ವಡಿವೇಲು ಇಲ್ಲದೆ ಸಿನಿಮಾಗಳನ್ನೇ ನಿರ್ಮಾಣ ಮಾಡುತ್ತಿರಲಿಲ್ಲ. ಇಂತಹ ನಟ ಈಗ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದಾರೆ. ಆದರೂ ಅಭಿಮಾನಿಗಳೇನು ಕಮ್ಮಿಯಾಗಿಲ್ಲ.

Tamil actress Prema Priya acussed Legendary Comedian Vadivelu for stopping her career

ಇತ್ತೀಚೆಗೆ ತಮಿಳಿನ 'ಮಾಮಣ್ಣನ್' ಅನ್ನೋ ಸಿನಿಮಾದಲ್ಲಿ ವಡಿವೇಲು ವಿಶಿಷ್ಠವಾದ ಪಾತ್ರದಲ್ಲಿ ನಟಿಸಿದ್ದರು. ಆ ಪಾತ್ರವನ್ನು ನೋಡಿ ಸಿನಿಪ್ರಿಯರು ಮೆಚ್ಚುಗೆ ಸೂಚಿಸಿದ್ದರು. ಇದೇ ಖುಷಿಯಲ್ಲಿ ಇರುವಾಗಲೇ ತಮಿಳು ನಟಿ ಪ್ರೇಮ ಪ್ರಿಯಾ ಎಂಬುವವರು ವಡಿವೇಲು ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ವಡಿವೇಲು ವಿರುದ್ಧ ಗಂಭೀರ ಆರೋಪ

ತಮಿಳಿನ 62 ವರ್ಷದ ಲೆಜೆಂಡರಿ ಹಾಸ್ಯ ನಟ ವಡಿವೇಲು ವಿರುದ್ಧ ಮತ್ತೊಬ್ಬ ನಟಿ ಪ್ರೇಮ ಪ್ರಿಯಾ ಗಂಭೀರ ಆರೋಪ ಮಾಡಿದ್ದಾರೆ. ಯೂಟ್ಯೂಬ್ ಚಾನೆಲ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ವಡಿವೇಲು ವಿರುದ್ಧ ಪ್ರತಿಕ್ರಿಯೆ ನೀಡಿದ್ದು, "ಸಾಕಷ್ಟು ಪಾತ್ರಗಳು ಹುಡುಕಿಕೊಂಡು ಬಂದಿದ್ದವು. ಆದರೆ, ವಡಿವೇಲು ಮಧ್ಯೆ ಪ್ರವೇಶ ಮಾಡಿದ್ದರಿಂದ ಬೇರೆಯವರ ಪಾಲಾಯ್ತು" ಎಂದು ನಟಿ ಪ್ರೇಮ ಪ್ರಿಯಾ ದೂರಿದ್ದಾರೆ.

Tamil actress Prema Priya acussed Legendary Comedian Vadivelu for stopping her career

ಯಾರಿದು ಪ್ರೇಮ ಪ್ರಿಯಾ?

ಪ್ರೇಮ ಪ್ರಿಯಾ ಕೂಡ ತಮಿಳಿನ ಜನಪ್ರಿಯ ಹಾಸ್ಯ ನಟಿ. ಸಾಕಷ್ಟು ಸೂಪರ್‌ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ವಲ್ಲವನ್', 'ಸಿಂಗಂ', 'ರಾಜ ರಾಣಿ', 'ಮಣಿದನ್', 'ಹರ ಹರ ಮಹಾ ದೇವಕಿ', 'ಆಡೈ', 'ಸಭಾಪತಿ' ಅಂತ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ನಟಿ ವಡಿವೇಲು, ಸಂತಾನಂ ಹಾಗೂ ಸೂರಿ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೇ ನಟಿಯೀಗ ವಡಿವೇಲು ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.

"ವಡುವೇಲು ಅವಕಾಶಗಳಿಗೆ ಕೊಕ್ಕೆ ಹಾಕಿದ್ರು"

ವಡಿವೇಲು ವಿರುದ್ಧ ಕಿಡಿಕಾರಿದ್ದ ಪ್ರೇಮ ಪ್ರಿಯಾ ಗಂಭೀರ ಆರೋಪಗಳನ್ನು ಮಾಡುವುದನ್ನು ನಿಲ್ಲಿಸಿಲ್ಲ. "ನಾನು ವಡಿವೇಲು ಜೊತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ, ವಡಿವೇಲು ಅವರೇ ಚಿತ್ರರಂಗದಲ್ಲಿ ನನ್ನ ಬೆಳವಣಿಗೆಯನ್ನು ತಡೆದರು. ತುಂಬಾ ಅವಕಾಶಗಳು ನನ್ನನ್ನು ಹುಡುಕಿಕೊಂಡು ಬಂದಿದ್ದವು. ಅದೆಲ್ಲವನ್ನು ವಡಿವೇಲು ತಡೆದರು. ಒಳ್ಳೆ ಸಿನಿಮಾಗಳು ಕೈ ತಪ್ಪಿ ಹೋದವು. ವಡಿವೇಲು ವಿರುದ್ಧ ಮಾತಾಡಿದ್ದಕ್ಕೆ ನಿರ್ದೇಶಕರೊಬ್ಬರು ನನಗೆ ಅವಕಾಶ ಕೊಡುವುದಕ್ಕೆ ನಿರಾಕರಿಸಿದರು. ಅಷ್ಟೇ ಅಲ್ಲದೆ ಆ ವಿಡಿಯೋವನ್ನು ತೆಗೆದು ಹಾಕುವಂತೆ ಕೇಳಿಕೊಂಡಿದ್ದರು" ನಟಿ ಪ್ರೇಮಾ ಪ್ರಿಯಾ.

ನೋವು ತೋಡಿಕೊಂಡ ಪ್ರೇಮ ಪ್ರಿಯಾ

ಇದೇ ವೇಳೆ ಕೊರೊನಾ ಸಮಯದಲ್ಲಿ ಕುಟುಂಬವನ್ನು ಕಳೆದುಕೊಂಡು ಆರ್ಥಿಕವಾಗಿ ಸಂಕಷ್ಟ ಎದುರಿಸಿದ್ದನ್ನು ನೆನಪಿಸಿಕೊಂಡಿದ್ದಾರೆ. "ಕೊರೊನಾ ಸಮಯದಲ್ಲಿ ನನ್ನ ಸಹೋದರಿ ಸಾವನ್ನಪ್ಪಿದರು. 10 ದಿನಗಳ ಬಳಿಕ ನನ್ನ ತಂದೆ ಸಾವನ್ನಪ್ಪಿದರು. ಎರಡು ತಿಂಗಳ ಬಳಿಕ ನನ್ನ ಗಂಡ ಕೂಡ ಬಹು ಅಂಗಾಗ ವೈಫಲ್ಯದಿಂದ ಸಾವನ್ನಪ್ಪಿದರು. ಆ ವೇಳೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದೆ. ಏನು ಮಾಡಬೇಕು ಅಂತಾನೇ ಗೊತ್ತಾಗಿಲ್ಲ. ಆಗ ನಟ ಸೂರಿ ಆರ್ಥಿಕವಾಗಿ ಸಹಾಯ ಮಾಡಿದರು" ಎಂದು ಪ್ರೇಮ ಪ್ರಿಯಾ ಹೇಳಿದ್ದಾರೆ.

More from Filmibeat

English summary
Tamil actress Prema Priya acussed Legendary Comedian Vadivelu for stopping her career.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X