"ಇದು ಅಷ್ಟು ಸುಲಭವಲ್ಲ": ಕಣ್ಣೀರಿಟ್ಟ ಬಿಗ್ ಬಾಸ್ ಸೆಲೆಬ್ರಿಟಿ.. ಏನ್ ಸಮಾಚಾರ?
ಕೆಲವೊಮ್ಮೆ ಸೆಲೆಬ್ರೆಟಿಗಳು ದಿಢೀರನೇ ಶಾಕ್ ಕೊಟ್ಟು ಬಿಡುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಅವರು ಹಾಕೋ ಒಂದು ಪೋಸ್ಟ್ ಅಭಿಮಾನಿಗಳನ್ನು ಗೊಂದಲಕ್ಕೆ ಸಿಲುಕಿಸಿಬಿಡುತ್ತೆ. ಅದರಲ್ಲೂ ಕಣ್ಣೀರು ಹಾಕುವ ಫೋಟೊಗಳಂತೂ ವಿಚಲಿತರನ್ನಾಗಿ ಮಾಡಿಬಿಡುತ್ತೆ.
ಇತ್ತೀಚೆಗೆ ಸೆಲೆಬ್ರೆಟಿಗಳು ಖಿನ್ನತೆ ಜಾರುತ್ತಿರುವ ಸಾಕಷ್ಟು ಪ್ರಕರಣಗಳು ಹೊರಬಂದಿವೆ. ಸೆಲೆಬ್ರೆಟಿಗಳು ಕೂಡ ಕೆಲವೊಮ್ಮೆ ಮುಕ್ತವಾಗಿ ಈ ಮಾತನ್ನು ಹಂಚಿಕೊಂಡಿದ್ದು ಇದೆ. ಈಗ ಇನ್ನೊಬ್ಬ ಸೆಲೆಬ್ರೆಟಿ ಅಳುತ್ತಿರುವ ಫೋಟೊಗಳನ್ನು ಶೇರ್ ಮಾಡಿ ಆತಂಕ ಸೃಷ್ಟಿಸಿದ್ದಾರೆ.
ರೈಜಾ ವಿಲ್ಸನ್ ಅನ್ನೋ ಸೆಲೆಬ್ರೆಟಿ ಕೂಡ ತನ್ನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಅಳುತ್ತಿರುವ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ, ಚಿತ್ರರಂಗಕ್ಕೆ ದೊಡ್ಡ ಶಾಕ್ ಕೊಟ್ಟಿದೆ. ಅಸಲಿಗೆ ಯಾಕೆ ಇಂತಹ ಫೋಟೊಗಳನ್ನು ಶೇರ್ ಮಾಡಿದ್ದಾರೆ? ಅನ್ನೋದು ಗೊಂದಲಕ್ಕೆ ಸಿಲುಕಿಸಿದೆ.

ಕಣ್ಣೀರಿಟ್ಟ ರೈಜಾ ವಿಲ್ಸನ್
ತಮಿಳು ನಟಿ ರೈಜಾ ವಿಲ್ಸನ್ ತನ್ನ ಇನ್‌ಸ್ಟಾಗ್ರಾಂನಲ್ಲಿ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಆಕೆ ಹಂಚಿಕೊಂಡ ಫೋಟೋಗಳು ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ. ಈ ಫೋಟೊಗಳಲ್ಲಿ ರೈಜಾ ವಿಲ್ಸನ್ ಕಣ್ಣೀರು ಹಾಕುತ್ತಿದ್ದಾರೆ. ಮುಖ ಪೂರ್ತಿ ನೋವಿನಿಂದ ತುಂಬಿದೆ. ಇದೇ ಫೋಟೊಗಳನ್ನು ಹಂಚಿಕೊಂಡು ಹೀಗೆ ಬರೆದುಕೊಂಡಿದ್ದಾರೆ.
" ಇದು ಅಷ್ಟು ಸುಲಭವಲ್ಲ. ನೀನು ಒಬ್ಬಂಟಿಯಲ್ಲ. ಹಂತ ಹಂತವಾಗಿ ನಾವು ಇದನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ರೈಜಾ ವಿಲ್ಸನ್ ಬರೆದುಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಿನಿಮಾ ಸ್ಟಾರ್ಸ್ ಜಿ.ವಿ.ಪ್ರಕಾಶ್ ಕುಮಾರ್, ಮಂಜಿಮಾ ಮೋಹನ್, ಫರೀನಾ ಆಜಾದ್ ಮತ್ತು ಮಾಧುರಿ ಅಂತಹ ನಟಿಯರಯ ಸಾಂತ್ವನದ ಮಾತುಗಳನ್ನಾಡಿದ್ದಾರೆ.
ಸಮಸ್ಯೆಯೇನು? ಯಾರೀ ನಟಿ?
ನಟಿ ರೈಜಾ ವಿಲ್ಸನ್ ದಿಢೀರನೇ ಹೀಗೆ ಅಳುತ್ತಿರುವ ಫೋಟೊಗಳನ್ನು ಯಾಕೆ ಶೇರ್ ಮಾಡಿದ್ದಾರೆ ಅನ್ನೋದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಆಕೆ ಕೂಡ ಬಹಿರಂಗಪಡಿಸಿಲ್ಲ. ಆದರೆ, ಫೋಟೊಗಳು ಮಾತ್ರ ಅವರ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ.
ರೈಜಾ ವಿಲ್ಸನ್ ಮಾಡೆಲ್ ಆಗಿ ಗುರುತಿಸಿಕೊಂಡಿದ್ದರು. 2017ರಲ್ಲಿ ಕಮಲ್ ಹಾಸನ್ ನಡೆಸಿಕೊಡುತ್ತಿದ್ದ ತಮಿಳಿನ ಬಿಗ್ ಬಾಸ್ ಶೋ ಮೂಲಕ ಫೇಮಸ್ ಆಗಿದ್ದರು. ಬಿಗ್‌ಬಾಸ್‌ನಿಂದ ಹೊರಬರುತ್ತಿದ್ದಂತೆ ಸೀದಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ಕೈಯಲ್ಲಿ ಇನ್ನೂ ಹಲವು ಸಿನಿಮಾಗಳಿವೆ.
ಚಿತ್ರರಂಗದಲ್ಲಿ ರೈಜಾ ವಿಲ್ಸನ್ ಬ್ಯುಸಿ
ನಟಿ ರೈಜಾ ವಿಲ್ಸನ್ 'ಅರ್ಜುನ್ ರೆಡ್ಡಿ' ಸಿನಿಮಾ ತಮಿಳು ರಿಮೇಕ್ 'ಪ್ಯಾರ್ ಪ್ರೇಮ ಕಾದಲ್'ನಲ್ಲಿ ನಟಿಸಿದ್ದಾರೆ. 'ಧನುಸು ರಾಶಿ ನೆಯ್ಯರ್ಗಳೇ' ಹಾಗೂ 'ವರ್ಮಾ' ಸಿನಿಮಾದಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಆ ಬಳಿಕ 'ಎಫ್‌ಐಆರ್', 'ಪೊಯಿಕ್ಕಲ್ ಕುತಿರೈ', 'ಕಾಫಿ ವಿತ್ ಕಡಲ್' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ರೈಜಾ ವಿಲ್ಸನ್ ಕೈ ತುಂಬಾ ಸಿನಿಮಾಗಳಿವೆ. 'ಕರುಂಗಾಪ್ಪಿಯಂ' ಶೀಘ್ರದಲ್ಲೇ ಬಿಡುಗಡೆಗೆ ಸಿದ್ಧವಾಗುತ್ತಿದೆ. ಹಲವು ಸಿನಿಮಾಗಳಿಗೆ ರೈಜಾ ವಿಲ್ಸನ್ ಸಹಿ ಹಾಕಿದ್ದಾರೆ. 'ಲವ್', 'ದಿ ಚೇಸ್', 'ಆಲಿಸ್' ಮತ್ತು 'ಕದಲಿಕ್ಕ ಯಾರಿಮಿಲ್ಲೈ' ಶೂಟಿಂಗ್ ಆರಂಭ ಆಗಿದೆ. ಇನ್ನು ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಈಗ ಕಣ್ಣೀರು ಇಟ್ಟದ್ದಕ್ಕೆ ಏನು ಕಾರಣ ಅನ್ನೋದು ಗೊತ್ತಾಗಬೇಕಿದೆ.


Click it and Unblock the Notifications











