Trisha: ತಮಿಳು ನಟಿ ತ್ರಿಶಾ ಎಕ್ಸ್ ಖಾತೆ ಹ್ಯಾಕ್: ಫ್ಯಾನ್ಸ್‌ಗೆ ಎಚ್ಚರಿಕೆ ಕೊಟ್ಟ ನಟಿ

ದಕ್ಷಿಣ ಭಾರತದ ಜನಪ್ರಿಯ ನಟಿ ತ್ರಿಶಾ ಕೃಷ್ಣನ್‌ಗೆ ಹೊಸದೊಂದು ತಲೆನೋವು ಎದುರಾಗಿದೆ. ಅವರ ಎಕ್ಸ್ ಖಾತೆಯನ್ನು (ಟ್ವಿಟರ್) ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ಇಂದು (ಫೆಬ್ರವರಿ 11) ಎಕ್ಸ್‌ ಖಾತೆಯನ್ನು ಹ್ಯಾಕ್ ಮಾಡಿದ್ದು, ಸಮಸ್ಯೆ ಬಗೆ ಹರಿಯುವವರೆಗೂ ಯಾವುದೇ ಪೋಸ್ಟ್ ಅನ್ನು ನಂಬದಂತೆ ತಮ್ಮ ಅಭಿಮಾನಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ತನ್ನ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ತಮ್ಮ ಎಕ್ಸ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ಸ್ನೇಹಿತರೇ ನನ್ನ ಟ್ವಿಟರ್ ಖಾತೆ ಹ್ಯಾಕ್ ಆಗಿದೆ. ಅಲ್ಲಿಂದ ಯಾವುದೇ ಪೋಸ್ಟ್ ಬಂದರೂ ಅದು ನನ್ನದಲ್ಲ. ಇದು ಬಗೆಹರಿಯುವವರೆಗೂ ಎಚ್ಚರ" ಎಂದು ತ್ರಿಶಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡು ಅಭಿಮಾನಿಗಳಿಗೆ ಹಾಗೂ ಫಾಲೋವರ್ಸ್‌ಗೆ ಮಾಹಿತಿಯನ್ನು ನೀಡಿದ್ದಾರೆ.

Tamil Actress Trisha s X Account Hacked What Happened

ಕೆಲವು ಗಂಟೆಗಳ ಹಿಂದೆ ತ್ರಿಶಾ ಟ್ವಿಟರ್ ಖಾತೆಯಲ್ಲಿ ಕ್ರಿಪ್ಟೋಕರೆನ್ಸಿ ಬಗ್ಗೆ ಪೋಸ್ಟ್ ಒಂದನ್ನು ಮಾಡಲಾಗಿತ್ತು. ಈಗ ಡಿಲೀಟ್ ಆಗಿದೆ. ಕ್ರಿಪ್ಟೋ ಕರೆನ್ಸಿಯನ್ನು ಪ್ರಮೋಟ್ ಮಾಡುವಂತಹ ಸಂದೇಶವನ್ನು ಆ ಪೋಸ್ಟ್‌ನಲ್ಲಿ ಶೇರ್ ಮಾಡಲಾಗಿತ್ತು. ಸ್ಕ್ಯಾಮರ್‌ಗಳು ಮಾಡಿರುವ ಈ ಪೋಸ್ಟ್ ತ್ರಿಶಾ ನೆಮ್ಮದಿಯನ್ನು ಹಾಳು ಮಾಡಿದ್ದು, ಅಭಿಮಾನಿಗಳಿಗೆ ಕೂಡ ಎಚ್ಚರಿಕೆಯನ್ನು ನೀಡಿದ್ದಾರೆ.

ಹಾಗಂತ ನಟಿ ತ್ರಿಶಾ ಕೃಷ್ಣನ್‌ಗೆ ಇಂತಹ ಅನುಭವ ಆಗುತ್ತಿರುವುದು ಇದೇ ಮೊದಲೇನು ಅಲ್ಲ. ಈ ಹಿಂದೆ ಅಂದರೆ, 2017ರಲ್ಲೂ ಕೂಡ ತ್ರಿಶಾಗೆ ಇಂತಹದ್ದೇ ಅನುಭವ ಆಗಿತ್ತು. PETA ಜೊತೆ ಒಡಂಬಡಿಕೆ ಮಾಡಿಕೊಂಡ ಬಳಿಕ ಅವರ ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿತ್ತು. ಕಿಡಿಗೇಡಿಗಳು ಜಲ್ಲಿಕಟ್ಟು ವಿವಾದದ ಬಗ್ಗೆ ಪೋಸ್ಟ್ ಮಾಡಿದ್ದರು. ಆ ಬಳಿಕ ಕೆಲವು ದಿನಗಳು ತ್ರಿಶಾ ತನ್ನ ಟ್ವಿಟರ್ ಖಾತೆಯನ್ನು ಕೆಲವು ದಿನಗಳ ಮಟ್ಟಿಗೆ ಸ್ಥಗಿತಗೊಳಿಸಬೇಕಾಗಿತ್ತು. ಈಗ ಮತ್ತೊಮ್ಮೆ ಇಂತಹದ್ದೇ ಘಟನೆ ನಡೆದಿದೆ.

ಇನ್ನು ತ್ರಿಶಾ ಸಿನಿಮಾ ವಿಚಾರಕ್ಕೆ ಬರೋದಾರೆ, ಇತ್ತೀಚೆಗಷ್ಟೇ ಅಜಿತ್ ಕುಮಾರ್ ಅಭಿನಯದ 'ವಿಡಾಮುಯಾರ್ಚಿ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಸುಮಾರಿ 10 ವರ್ಷಗಳ ಬಳಿಕ ತ್ರಿಶಾ ಹಾಗೂ ಅಜಿತ್ ಒಟ್ಟಿಗೆ ನಟಿಸಿದ್ದಾರೆ. ಆದರೆ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಆ ಮಟ್ಟಿಗೆ ಸದ್ದು ಮಾಡಲಿಲ್ಲ. ಆದರೆ, ತ್ರಿಶಾ ಹಾಗೂ ಅಜಿತ್ ಕಾಂಬಿನೇಷನ್ ಬಗ್ಗೆ ಪ್ರೇಕ್ಷಕರು ಮೆಚ್ಚಿಗೆ ವ್ಯಕ್ತಪಡಿಸಿದ್ದರು.

ತ್ರಿಶಾ ಕೈಯಲ್ಲಿ ಇನ್ನೂ ಒಳ್ಳೊಳ್ಳೆ ಪ್ರಾಜೆಕ್ಟ್‌ಗಳು ಇವೆ. ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ 'ವಿಶ್ವಂಭರ' ಶೂಟಿಂಗ್‌ ನಡೆಯುತ್ತಿದೆ. ಇದರೊಂದಿಗೆ ಅಜಿತ್ ಕುಮಾರ್ ಜೊತೆಗೇ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಪುಷ್ಪ 2' ಸಿನಿಮಾ ನಿರ್ಮಾಣ ಮಾಡಿರುವ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಕೂಡ ಶೀಘ್ರದಲ್ಲಿಯೇ ರಿಲೀಸ್ ಆಗುವ ಸಾಧ್ಯತೆಯಿದೆ. ಹಾಗೆ ಮಣಿರತ್ನಂ ನಿರ್ದೇಶನದಲ್ಲಿ ಕಮಲ್ ಹಾಸನ್ ನಟಿಸುತ್ತಿರುವ 'ಥಗ್ ಲೈಫ್' ಸಿನಿಮಾದ ಶೂಟಿಂಗ್ ಕೂಡ ನಡೆಯುತ್ತಿದೆ. ಹಾಗೇ ಸೂರ್ಯ 45ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗೇ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ನಟಿಸುತ್ತಿರುವ 'ರಾಮ್' ಸಿನಿಮಾಗೂ ಇವರೇ ನಾಯಕಿಯಾಗಿದ್ದಾರೆ.

More from Filmibeat

English summary
Tamil Actress Trisha's X Account Hacked: What Happened
Read more about: trisha hack kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X