Leo: ರಜನಿಗೆ 'ಲಿಯೋ' ಇಷ್ಟ ಆಗಿಲ್ಲ.. ಲೋಕೇಶ್ ಸಿನಿಮಾ ಏನಾಗುತ್ತೆ? ಮತ್ತೆ ಶುರುವಾಗುತ್ತಾ ಫ್ಯಾನ್ಸ್ ವಾರ್?

ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ದಳಪತಿ ವಿಜಯ್ ಫ್ಯಾನ್ಸ್ ನಡುವೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಯುದ್ಧ ನಡೆಯುತ್ತಲೇ ಇರುತ್ತೆ. ಇಬ್ಬರಲ್ಲಿ ಒಬ್ಬರ ಸಿನಿಮಾ ರಿಲೀಸ್ ಆಯ್ತು ಅಂದರೆ, ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಯುದ್ಧವೇ ಆರಂಭ ಆಗಿ ಬಿಡುತ್ತೆ.

ಈ ಹಿಂದೆ ರಜನಿಕಾಂತ್ ಅಭಿಮಾನಿಗಳು ಹಾಗೂ ವಿಜಯ್ ಫ್ಯಾನ್ಸ್ ನಡುವೆ ಅದೆಷ್ಟೋ ಬಾರಿ ಕಿತ್ತಾಟ ನಡೆದಿತ್ತು. ಮತ್ತೆ ತಾನಾಗಿಯೇ ತಣ್ಣಗಾಗಿತ್ತು. ಈಗ ಮತ್ತೆ ಫ್ಯಾನ್ಸ್ ವಾರ ಆರಂಭ ಆಗುವ ಲಕ್ಷಣಗಳು ಕಾಣಿಸುತ್ತಿವೆ. ಅದಕ್ಕೆ ಕಾರಣ ತಮಿಳಿನ ಪತ್ರಕರ್ತನ ಒಂದು ವರದಿ.

rajini-thalapathy-vijay-leo

ತಮಿಳಿನ ಹಿರಿಯ ಪತ್ರಕರ್ತ ಸೇಯರ್ ಬಾಬು ಆಗಾಗ ವಿವಾದಾತ್ಮಕ ಟಾಪಿಕ್ ಬಗ್ಗೆ ಮಾತಾಡುತ್ತಲೇ ಇದ್ದಾರೆ. ಈಗ ವಿಜಯ್ ನಟನೆಯ 'ಲಿಯೋ' ಸಿನಿಮಾವನ್ನು ಸೂಪರ್‌ಸ್ಟಾರ್ ರಜನಿಕಾಂತ್ ವೀಕ್ಷಿಸಿದ್ದಾರೆ. ಆದರೆ, ರಜನಿಗೆ ಸಿನಿಮಾ ಇಷ್ಟ ಆಗಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಷ್ಟಕ್ಕೂ ಸೇಯರ್ ಬಾಬು ಹೇಳಿದ್ದೇನು? ತಿಳಿಯಲು ಮುಂದೆ ಓದಿ.

ಲೋಕೇಶ್ ಕನಗರಾಜ್‌ ಸಿನಿಮಾಗೆ ಸೋಲು

ಇದೇ ಅಕ್ಟೋಬರ್ 19ಕ್ಕೆ ದಳಪತಿ ವಿಜಯ್ ನಟನೆಯ ಸಿನಿಮಾ 'ಲಿಯೋ' ರಿಲೀಸ್ ಆಗಿತ್ತು. ಆದರೆ, ಫಸ್ಟ್ ಡೇ ಫಸ್ಟ್ ಶೋದಲ್ಲೇ ಮಿಶ್ರ ಪ್ರತಿಕ್ರಿಯೆ ಶುರುವಾಗಿತ್ತು. ಇಲ್ಲಿಂದ ಬಾಕ್ಸಾಫೀಸ್‌ನಲ್ಲೂ 'ಲಿಯೋ' ವೇಗಕ್ಕೆ ಕತ್ತರಿ ಬಿದ್ದಿತ್ತು. ಲೋಕೇಶ್ ಕನಗರಾಜ್ ಮೇಲೆ ನಂಬಿಕೆ ಇಟ್ಟುಕೊಂಡಿದ್ದ ಫ್ಯಾನ್ಸ್‌ಗೆ ನಿರಾಸೆಯಾಗಿದೆ. 'ಲಿಯೋ' ಲೋಕೇಶ್ ಕನಗರಾಜ್ ಸಿನಿಮಾದಂತೆ ಇಲ್ಲ ಎಂದು ಕಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಈ ಮಧ್ಯೆ ರಜನಿ 'ಲಿಯೋ' ಸಿನಿಮಾ ನೋಡಿದ್ದು, ಅವರಿಗೆ ಇಷ್ಟ ಆಗಿಲ್ಲ ಎಂದು ಹೇಳಲಾಗುತ್ತಿದೆ.

rajini-thalapathy-vijay-leo

ರಜನಿಗೆ 'ಲಿಯೋ' ಇಷ್ಟ ಆಗಿಲ್ಲ

ಸೂಪರ್‌ಸ್ಟಾರ್ ರಜನಿಕಾಂತ್ 'ಲಿಯೋ' ಸಿನಿಮಾ ವೀಕ್ಷಿಸಿದ್ದಾರೆ. ಆದರೆ ಅವರಿಗೆ ಸಿನಿಮಾ ಇಷ್ಟ ಆಗಿಲ್ಲ ಎಂದು ಸೇಯರ್ ಬಾಲು ಸಂದರ್ಶನದಲ್ಲಿ ಹೇಳಿದ್ದಾರೆ. ಇಷ್ಟೇ ಅಲ್ಲದೆ, ಉತ್ತಮ ಸಿನಿಮಾ ಮಾಡಿದ್ದರೆ, ಅವರೇ ಕರೆದು ಅಭಿನಂದನೆ ಸಲ್ಲಿಸುತ್ತಿದ್ದರು. ಖುದ್ದಾಗಿ ಕರೆ ಮಾಡುತ್ತಿದ್ದರು. ಫೋಟೊ ತೆಗೆಸಿಕೊಳ್ಳುತ್ತಿದ್ದರು. ಆದರೆ, ರಜನಿಕಾಂತ್ ಹಾಗೆ ಮಾಡಿಲ್ಲವೆಂದು ಹೇಳಿದ್ದಾರೆ.

ರಜನಿ ಬಗ್ಗೆ ಲಿಯೋ ಬೇಸರ?

'ಲಿಯೋ' ಸಿನಿಮಾದ ನೋಡಿದ ರಜನಿಕಾಂತ್ ನಿರ್ಮಾಪಕ ಲಲಿತ್ ಕುಮಾರ್‌ಗೆ ಪ್ರೊಡಕ್ಷನ್ ವ್ಯಾಲ್ಯೂ ಉತ್ತಮವಾಗಿದೆ ಎಂದು ಹೇಳಿದ್ದಾರೆ. ಸಿನಿಮಾ ಚೆನ್ನಾಗಿದೆ ಅಥವಾ ಚೆನ್ನಾಗಿ ಅನ್ನೋದನ್ನು ಹೇಳಿಲ್ಲ. ಸಿನಿಮಾದ ಹೈಲೈಟ್ಸ್ ಬಗ್ಗೆನೂ ಒಂದೇ ಒಂದು ಮಾತನ್ನೂ ಹೇಳದಿರುವುದು ಲಿಯೋ ತಂಡಕ್ಕೆ ತೀವ್ರ ಬೇಸರ ಉಂಟು ಮಾಡಿದೆ. ಒಂದು ವೇಳೆ ರಜನಿಗೆ ನಿಜಕ್ಕೂ ಇಷ್ಟ ಆಗಿದ್ದರೆ, ನಿರ್ದೇಶಕರು, ನಿರ್ಮಾಪಕರು ಮತ್ತು ಅನಿರುದ್ಧ್ ಗೆ ಖುದ್ದಾಗಿ ಕರೆ ಮಾಡುತ್ತಿದ್ದರು ಎಂದು ಸೇಯರ್ ಬಾಬು ಹೇಳಿದ್ದಾರೆ.

ಲೋಕೇಶ್ ಕನಗರಾಜ್ ನಿರ್ದೇಶನ

ರಜನಿಕಾಂತ್ 171ನೇ ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿ 'ಲಿಯೋ' ರಜನಿಗೆ ತುಂಬಾನೇ ಮುಖ್ಯ ಆಗಿತ್ತು. ಆ ಕಾರಣ ಸಿನಿಮಾ ವೀಕ್ಷಿಸಿದ್ದಾರೆಂದು ಸುದ್ದಿ ಹಬ್ಬಿದೆ. ರಜನಿ ಹಾಗೂ ಲೋಕೇಶ್ ಕನಗರಾಜ್ ಸಿನಿಮಾ ಮುಂದಿನ ವರ್ಷ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಶೂಟಿಂಗ್ ಶುರು ಆಗಲಿದೆ ಎಂದು ಹೇಳಲಾಗಿದೆ.

More from Filmibeat

English summary
Buzz: Rajinikanth didn't like Thalapathy Vijay Movie Leo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X