ಧನುಷ್, ಸಿಂಬು, ವಿಶಾಲ್, ಅಥರ್ವ್ ವಿರುದ್ಧ ಸಿಡಿದೆದ್ದ ತಮಿಳು ನಿರ್ಮಾಪಕರು: 4 ನಟರಿಗೆ 'ರೆಡ್ ಕಾರ್ಡ್'

ತಮಿಳು ಚಿತ್ರರಂಗದಲ್ಲಿ ಅಚ್ಚರಿಯ ಬೆಳವಣಿಗೆಯಾಗಿದೆ. ತಮಿಳಿನ ಧನುಷ್, ಸಿಂಬು, ವಿಶಾಲ್, ಅಥರ್ವ್ ಈ ನಾಲ್ಕು ಮಂದಿ ಸ್ಟಾರ್ ನಟರ ವಿರುದ್ಧ ನಿರ್ಮಾಪಕರು ಕೆಂಡಾಮಂಡಲಗೊಂಡಿದ್ದಾರೆ. ನಿನ್ನೆ (ಸೆಪ್ಟೆಂಬರ್ 13) ನಡೆದಿದ್ದ ತಮಿಳು ನಿರ್ಮಾಪಕರ ಕಾರ್ಯಕಾರಿ ಸಮಿತಿಯಲ್ಲಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗಿದೆ.

ಧನುಷ್, ಸಿಂಬು, ವಿಶಾಲ್ ಹಾಗೂ ಅಥರ್ವ್ ಅಷ್ಟೇ ಅಲ್ಲದೆ ತಮಿಳಿನ ಒಟ್ಟು 14 ಮಂದಿ ನಟ ಹಾಗೂ ನಟಿಯರಿಗೂ ರೆಡ್ ಕಾರ್ಡ್ ನೀಡಲು ಮುಂದಾಗಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.

ಚೆನ್ನೈನ ಅಣ್ಣಾ ರಸ್ತೆಯಲ್ಲಿರುವ ತಮಿಳು ಸಿನಿಮಾ ನಿರ್ಮಾಪಕರ ಸಂಘದಲ್ಲಿ ನಿನ್ನೆ ನಡೆದ ಕಾರ್ಯಕಾರಿ ಸಮಿತಿಯಲ್ಲಿ ಎಲ್ಲಾ ನಿರ್ಮಾಪಕರು ಒಕ್ಕೊರಲಿನ ನಿರ್ಧಾರಕ್ಕೆ ಬಂದಿದ್ದಾರೆ. ಈ ನಾಲ್ಕು ಮಂದಿ ಸ್ಟಾರ್ ನಟರಿಗೆ ರೆಡ್ ಕಾರ್ಡ್ ನೀಡುವುದಕ್ಕೆ ಒಮ್ಮತ ಸೂಚಿಸಿದ್ದಾರೆ. ಅಷ್ಟಕ್ಕೂ ಇಂತಹ ಕಠಿಣ ನಿರ್ಧಾರಕ್ಕೆ ಬಂದಿದ್ದೇಕೆ? ತಿಳಿಯಲು ಮುಂದೆ ಓದಿ.

dhanush-simbu-vishal-atharv-red-card

ಧನುಷ್‌ಗೆ ರೆಡ್ ಕಾರ್ಡ್

ತಮಿಳು ನಿರ್ಮಾಪಕರು ನೀಡಿರುವ ಮಾಹಿತಿ ಪ್ರಕಾರ, ಧನುಷ್‌ಗೆ ನಿರ್ಮಾಪಕರ ಸಂಘದಿಂದ ರೆಡ್ ಕಾರ್ಡ್ ನೀಡಲಾಗಿದೆ. ಶ್ರೀ ತೇನಾಂಡಾಲ್ ಫಿಲ್ಮ್ಸ್ ಸಂಸ್ಥೆಯ ಮುರಳಿ ಎಂಬುವವರು ಧನುಷ್ ವಿರುದ್ಧ ನಿರ್ಮಾಪಕರ ಸಂಘಕ್ಕೆ ದೂರನ್ನು ನೀಡಿದ್ದರು. ಇವರ ನಿರ್ಮಾಣದ ಸಿನಿಮಾ ಶೇ.80ರಷ್ಟು ಶೂಟಿಂಗ್ ಮುಗಿಸಿದ್ದಾಗ, ಧನುಷ್ ಶೂಟಿಂಗ್‌ಗೆ ಬಂದಿರಲಿಲ್ಲ. ಹೀಗಾಗಿ ನಿರ್ಮಾಪಕರಿಗೆ ನಷ್ಟ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು. ಧನುಷ್‌ಗೆ ರೆಡ್ ಕಾರ್ಡ್ ನೀಡಲು ಇದೇ ಕಾರಣವೆಂದು ಹೇಳಲಾಗಿದೆ.

ಸಿಂಬುಗೆ ರೆಡ್‌ ಕಾರ್ಡ್

2017ರಲ್ಲಿ ಸಿಂಬು ನಟಿಸಿದ್ದ 'ಅನ್ಬಾನವನ್ ಅಸರಾದವನ್ ಆದಂಗಧವನ್' ಸಿನಿಮಾವನ್ನು ಮೈಕಲ್ ರಾಯಪ್ಪನ್ ನಿರ್ಮಾಣ ಮಾಡಿದ್ದರು. ಸಿಂಬು ವಿರುದ್ಧ ಈ ನಿರ್ಮಾಪಕ ಹಲವು ಬಾರಿ ದೂರನ್ನು ನೀಡಿದ್ದರು. ಆದರೆ, ಸಿಂಬುಗೂ ಹಾಗೂ ನಿರ್ಮಾಪಕ ಮೈಕಲ್ ರಾಯಪ್ಪನ್ ನಡುವೆ ಏನಾಗಿತ್ತು ಅನ್ನೋದು ಬಹಿರಂಗಗೊಳಿಸಿಲ್ಲ. ನಿರ್ಮಾಪಕ ದೂರಿನ ಹಿನ್ನೆಲೆಯಲ್ಲಿ ಸಿಂಬುಗೆ ರೆಡ್ ಕಾರ್ಡ್ ಅಷ್ಟೇ ನೀಡಲಾಗಿದೆ ಎಂದು ದೂರಲಾಗಿದೆ.

dhanush-simbu-vishal-atharv-red-card

ವಿಶಾಲ್‌ಗೆ ರೆಡ್ ಕಾರ್ಡ್

ತಮಿಳು ಚಿತ್ರರಂಗದಲ್ಲಿ ವಿಶಾಲ್ ಹಲವು ವಿವಾದಗಳಲ್ಲಿ ಸಿಕ್ಕಿಕೊಂಡಿದ್ದಾರೆ. ಇತ್ತೀಚೆಗೆ ವಂಚನೆ ಆರೋಪದ ಮೇಲೆ ವಿಶಾಲ್ ಸಿನಿಮಾ 'ಮಾರ್ಕ್ ಆಂಟೋನಿ'ಯನ್ನು ಬಿಡುಗಡೆ ಮಾಡಬಾರದು ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಈಗ ತಮಿಳು ನಿರ್ಮಾಪಕ ಸಂಘ ವಿಶಾಲ್‌ಗೆ ರೆಡ್ ಕಾರ್ಡ್ ನೀಡಿದೆ. ನಿರ್ಮಾಪಕರ ಸಂಘದ ಅಧ್ಯಕ್ಷರಾಗಿದ್ದಾಗ ಸಂಘದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ ವಿಶಾಲ್‌ಗೆ ರೆಡ್ ಕಾರ್ಡ್ ನೀಡಲಾಗಿದೆ.

ಅಥರ್ವ್ ರೆಡ್ ಕಾರ್ಡ್

ಕನ್ನಡದ ಲೆಜೆಂಡರಿ ನಿರ್ದೇಶಕ ದಿವಂಗತ ಸಿದ್ಧಲಿಂಗಯ್ಯ ಅವರ ಮೊಮ್ಮಗ ಅಥರ್ವಗೂ ರೆಡ್ ಕಾರ್ಡ್ ನೀಡಲಾಗಿದೆ. ನಿರ್ಮಾಪಕ ಮಥಿಯಳಗನ್ ಎಂಬ ನಿರ್ಮಾಪಕ ನೀಡಿದ ದೂರ ಹಿನ್ನೆಲೆಯಲ್ಲಿ ನಿರ್ಮಾಪಕರ ಸಂಘ ರೆಡ್ ಕಾರ್ಡ್ ನೀಡಿದೆ. ಹಾಗೇ ನಟಿಯರಲ್ಲಿ ಅಮಲಾ ಪೌಲ್ ಹಾಗೂ ಲಕ್ಷ್ಮಿ ರೈಗೂ ರೆಡ್ ಕಾರ್ಡ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ರೆಡ್ ಕಾರ್ಡ್ ಪಡೆದ ನಟ ನಟಿಯರ ಪ್ರತಿಕ್ರಿಯೆ ಏನು ಎಂಬುದನ್ನು ನಿರ್ಮಾಪಕರು ಎದುರು ನೋಡುತ್ತಿದ್ದಾರೆ.

More from Filmibeat

English summary
Tamil Film Producers Association gave red card to Dhanush, Simbu,Vishal, Atharv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X