Nayanthara-Trisha: "ತ್ರಿಶಾಗೆ ಪೈಪೋಟಿ ನೀಡೋದಕ್ಕೆ ನಯನತಾರಾ ಕರ್ಕೊಂಡು ಬಂದ್ರು"- ಹಿರಿಯ ಪತ್ರಕರ್ತ

ದಕ್ಷಿನ ಭಾರತೀಯ ಚಿತ್ರರಂಗದಲ್ಲಿ ಅದೆಷ್ಟೋ ನಾಯಕಿ ತೆರೆಮೇಲೆ ಮಿಂಚಿ ಮರೆಯಾಗಿದ್ದಾರೆ. ಆರಂಭದ ಅಚ್ಚರಿಸಿದವರು ಬಳಿಕ ತಮ್ಮ ಸ್ಟಾರ್‌ಡಮ್ ಕಳೆದುಕೊಂಡು ಸೈಲೆಂಟ್ ಆಗಿದ್ದನ್ನೂ ನೋಡಿದ್ದೇವೆ. ಆದರೆ, ನಯನತಾರಾ ಹಾಗೂ ತ್ರಿಶಾ ಹಾಗಲ್ಲ. ಇಬ್ಬರೂ ಚಿತ್ರರಂಗದಲ್ಲಿ ನೆಲೆ ನಿಲ್ಲುವುದಕ್ಕೆ ಹೋರಾಟವನ್ನೇ ಮಾಡಿದ್ದರು.

ತಮಿಳು ಚಿತ್ರರಂಗದಲ್ಲಿ ಈ ನಟಿಯನ್ನು ಇಂದಿಗೂ ಯಾರೂ ಹಿಂದಿಕ್ಕುವುದಕ್ಕೆ ಸಾಧ್ಯವಾಗಲೇ ಇಲ್ಲ. ತಮಿಳು ಸಿನಿಮಾ ಮಂದಿಗೆ ನಯನತಾರಾ ಹಾಗೂ ತ್ರಿಶಾ ಇಬ್ಬರೂ ಮೊದಲ ಆಯ್ಕೆ ಒಂದು ವೇಳೆ ಅವರು ಒಪ್ಪದೇ ಹೋದರೆ ಬೇರೆಯವರನ್ನು ಹುಡುಕುತ್ತಾರೆ.

nayanathara-trisha

ಒಬ್ಬರಿಗೆ 40 ವರ್ಷ. ಇನ್ನೊಬ್ಬರಿಗೆ 38 ವರ್ಷ. ಹೀಗಿದ್ದರೂ ತ್ರಿಶಾ ಹಾಗೂ ನಯನತಾರಾ ಇಬ್ಬರಿಗೂ ಅವಕಾಶಗಳ ಮೇಲೆ ಅವಕಾಶಗಳು ಸಿಗುತ್ತಿದೆ. ನಯನತಾರಾ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದು, 'ಜವಾನ್' ಸಿನಿಮಾ ಮೂಲಕ ಮತ್ತೆ ಸೌತ್‌ ಲೇಡಿ ಸೂಪರ್‌ಸ್ಟಾರ್ ಅನ್ನೋದನ್ನು ಪ್ರೂವ್ ಮಾಡಿದ್ದಾರೆ.

40ರ ಆಸುಪಾಸಿನಲ್ಲೂ ಕೈ ತುಂಬಾ ಸಿನಿಮಾ

ಸೌತ್ ಸೂಪರ್‌ಸ್ಟಾರ್ ನಯನತಾರಾ ವಯಸ್ಸು 38. ಅದೇ ತ್ರಿಶಾ ವಯಸ್ಸು 40. ಬೇರೆ ನಟಿಯರು ಈ ವಯಸ್ಸಿನಲ್ಲಿ ಪೋಷಕ ಪಾತ್ರಗಳಿಗೆ ಶಿಫ್ಟ್ ಆಗಿದ್ದಾರೆ. ಆದರೆ, ನಯನತಾರಾ, ತ್ರಿಶಾ ಮಾತ್ರ ಇನ್ನೂ ನಾಯಕಿಯರಾಗಿಯೇ ಮುಂದುವರೆದಿದ್ದಾರೆ. ಅಲ್ಲದೆ ಸೂಪರ್‌ಸ್ಟಾರ್‌ಗಳ ಜೊತೆಗೆನೇ ಸಿನಿಮಾ ಮಾಡುತ್ತಿದ್ದಾರೆ. ಇಬ್ಬರೂ ಬೇಡಿಕೆ ಕಡಿಮೆಯಾಗಿಲ್ಲ. ಹೀಗಿರುವಾಗ ತ್ರಿಶಾಗೆ ಟಕ್ಕರ್ ಕೊಡುವುದಕ್ಕೆ ನಯನತಾರಾರನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಲಾಯಿತು ಎಂದು ತಮಿಳಿನ ಪತ್ರಕರ್ತ ಚೆಯ್ಯರ್ ಬಾಲು ಸಂದರ್ಶನದಲ್ಲಿ ಹೇಳಿದ್ದಾರೆ.

nayanathara-trisha

ತ್ರಿಶಾಗೆ ಟಕ್ಕರ್ ಕೊಡಲು ಬಂದ ನಯನಾತಾರಾ

2003ರಲ್ಲಿ ನಯನತಾರಾ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಎರಡು ವರ್ಷಗಳ ಬಳಿಕ 2005ರಲ್ಲಿ ತಮಿಳು ಚಿತ್ರರಂಗಕ್ಕೆ ಕರೆದುಕೊಂಡು ಬರಲಾಗಿತ್ತು. ಅಷ್ಟೋತ್ತಿಗಾಗಲೇ ತ್ರಿಶಾ ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿದ್ದರು. ಕೇವಲ ವಿಜಯ್, ವಿಕ್ರಂ ಹಾಗೂ ಅಜಿತ್ ಸಿನಿಮಾಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದರು. ಹೊಸಬರ ಸಿನಿಮಾಗಳ ಕಥೆಯನ್ನೂ ಹೇಳುತ್ತಿರಲಿಲ್ಲ. ಈ ಕಾರಣಕ್ಕೆ ತ್ರಿಶಾಗೆ ಟಕ್ಕರ್ ಕೊಡುವುದಕ್ಕಂತಲೇ ನಯನತಾರಾರನ್ನು ಕಾಲಿವುಡ್‌ಗೆ ಪರಿಚಯ ಮಾಡಲಾಯಿತು ಎಂದು ಹೇಳಿದ್ದಾರೆ.

ತ್ರಿಶಾಗಿಂತ ಹೆಚ್ಚು ಸಂಭಾವನೆ ಪಡೆಯೋ ನಟಿ

ನಯನತಾರಾ ಕಾಲಿವುಡ್‌ಗೆ ಕಾಲಿಡುತ್ತಿದ್ದಂತೆ ಇಬ್ಬರ ನಡುವೆ ಪೈಪೋಟಿ ಶುರುವಾಗಿತ್ತು. ನಯನತಾರಾ ನಿರಂತರವಾಗಿ ಹಿಟ್ ಸಿನಿಮಾಗಳನ್ನು ಕೊಡಲು ಶುರು ಮಾಡಿದ್ದರು. ಆಗ ತ್ರಿಶಾ ಫೇಮ್ ಸ್ವಲ್ಪ ತಗ್ಗಿತ್ತು. ಇಂದು ನಯನತಾರಾ ಒಂದು ಸಿನಿಮಾ 5 ಕೋಟಿ ರೂಪಾಯಿಯಿಂದ 11 ಕೋಟಿ ರೂಪಾಯಿವರೆಗೂ ಸಂಭಾವನೆ ಪಡೆಯುತ್ತಾರೆ. ಅದೇ ತ್ರಿಶಾ ಸಂಭಾವನೆ 3 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.

'ಪೊನ್ನಿಯನ್ ಸೆಲ್ವನ್'ನಿಂದ ತಿರುಗೇಟು

ತ್ರಿಶಾ ಮತ್ತೆ ನಂಬರ್ ಒನ್ ಸ್ಥಾನಕ್ಕೆ ಏರಲು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗಿದೆ. ಅದಕ್ಕಾಗಿಯೇ ಮಣಿರತ್ನಂ ನಿರ್ದೇಶನದ 'ಪೊನ್ನಿಯನ್ ಸೆಲ್ವನ್' ಸಿನಿಮಾ ಒಪ್ಪಿಕೊಂಡಿದ್ದರು. ಇದರಿಂದ ಮತ್ತೆ ಯಶಸ್ಸು ಕಂಡಿದ್ದರು. ಸದ್ಯ ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾ ಕೈಯಲ್ಲಿದೆ. ಹೀಗಾಗಿ ನಯನತಾರಾಗೆ ಟಕ್ಕರ್ ಕೊಡಬಹುದು ಎಂದು ಲೆಕ್ಕ ಹಾಕುತ್ತಿದ್ದಾರೆ.

More from Filmibeat

English summary
Nayanthara introduced kollywood as Trish Competitor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X