ವೋಟ್ ಹಾಕಿದ ಬಳಿಕ ಫೋಟೋ ಹಂಚಿಕೊಂಡ ತ್ರಿಶಾ; ಅಭಿಮಾನಿಗಳ ಕ್ರೇಜಿ ಕಾಮೆಂಟ್.. ಡಿಕೋಡ್ ಮಾಡ್ತಿರೋ ಫ್ಯಾನ್ಸ್

ಇಂದು (ಏಪ್ರಿಲ್ 23) ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆದಿದೆ. ಈ ಬಾರಿ ಚುನಾವಣೆ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ಇಲ್ಲಿವರೆಗೂ ಡಿಎಂಕೆ ಹಾಗೂ ಎಐಡಿಎಂಕೆ ನಡುವೆ ಅಧಿಕಾರಕ್ಕಾಗಿ ಪೈಪೋಟಿ ನಡೆಯುತ್ತಿತ್ತು. ಆದರೆ, ಈ ಬಾರಿ ದಳಪತಿ ವಿಜಯ್ ಅವರ ಟಿವಿಕೆ ಪಕ್ಷ ಕೂಡ ಸೇರಿಕೊಂಡಿದೆ. ಕಳೆದ ಕೆಲವು ದಿನಗಳಿಂದ ವಿಜಯ್ ತಮಿಳುನಾಡಿನಾದ್ಯಂತ ವಿಜಯ್ ಅಬ್ಬರದ ಪ್ರಚಾರ ಮಾಡಿದ್ದಾರೆ.

2026ರ ಚುನಾವಣೆಯಲ್ಲಿ ವಿಜಯ್ ತಮಿಳುನಾಡು ರಾಜಕೀಯದ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುತ್ತಾರಾ? ಅನ್ನೋದನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಈ ಮಧ್ಯೆ ತಮಿಳುನಾಡು ಚಿತ್ರರಂಗ ವಿಜಯ್‌ ವಿಚಾರವಾಗಿ ತಟಸ್ಥ ನೀತಿಯನ್ನು ಅನುಸರಿಸಿದಂತೆ ತೋರುತ್ತಿದೆ. ಕೆಲವೇ ಕೆಲವು ಮಂದಿ ವಿಜಯ್ ಪರ ಪ್ರಚಾರ ಮಾಡಿದ್ದಾರೆ. ಇತ್ತ ವಿಜಯ್ ಜೊತೆ ನಟಿ ತ್ರಿಶಾ ಹೆಸರು ತಳುಕು ಹಾಕಿಕೊಂಡ ದಿನದಿಂದ ಕೆಲ ಹಿರಿಯ ನಟರು ವಿರೋಧ ವ್ಯಕ್ತಪಡಿಸಿದ್ದರು.

Tamil Nadu Elections 2026 Actress Trisha Krishnan cast vote fans comments are crazy

ಇದೆಲ್ಲ ಏನೇ ಇದ್ದರೂ ವಿಜಯ್ ಹಾಗೂ ತ್ರಿಶಾ ಇಬ್ಬರೂ ತಲೆ ಕೆಡಿಸಿಕೊಂಡಿಲ್ಲ. ನಟಿ ತ್ರಿಶಾ ಇಂದು ಮತ ಚಲಾಯಿಸಿದ್ದಾರೆ. ಬಳಿಕ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ತ್ರಿಶಾ ಫೋಟೊ ಶೇರ್ ಮಾಡುತ್ತಿದ್ದಂತೆ ಕ್ರೇಜಿ ಕಾಮೆಂಟ್‌ಗಳು ಹರಿದಾಡುವುದಕ್ಕೆ ಶುರುವಾಗಿವೆ. ಅಲ್ಲದೇ ವೋಟ್ ಯಾರಿಗೆ ಹಾಕಿರಬಹುದೆಂದು ಊಹೆ ಮಾಡುವುದಕ್ಕೆ ಶುರು ಮಾಡಿದ್ದಾರೆ.

ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟ ದಿನದಿಂದ ತ್ರಿಶಾ ಬಹಿರಂಗವಾಗಿ ಬೆಂಬಲ ಸೂಚಿಸಿಲ್ಲ. ರಾಜಕೀಯ ವಿಚಾರದಲ್ಲಿ ವಿಜಯ್‌ರಿಂದ ದೂರವೇ ಉಳಿದಿದ್ದಾರೆ. ಎಲ್ಲೂ ವಿಜಯ್ ಪರ ಹೇಳಿಕೆಗಳನ್ನು ನೀಡಿಲ್ಲ. ತನ್ನ ಹೆಸರು ವಿಜಯ್ ಜೊತೆ ತಳುಕು ಹಾಕಿಕೊಂಡಾಗಲೂ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದರಷ್ಟೇ. ವಿಜಯ್ ಪರ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪ್ರಚಾರ ಕೂಡ ಮಾಡಿಲ್ಲ. ಹೀಗಾಗಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿತ್ತು.

Also Read
Tamil Nadu Election 2026: ಮತ ಚಲಾಯಿಸಿದ ಟಿವಿಕೆ ವಿಜಯ್; ಚುನಾವಣೆ ಆಯೋಗಕ್ಕೆ ವಿಶೇಷ ಮನವಿ
Tamil Nadu Election 2026: ಮತ ಚಲಾಯಿಸಿದ ಟಿವಿಕೆ ವಿಜಯ್; ಚುನಾವಣೆ ಆಯೋಗಕ್ಕೆ ವಿಶೇಷ ಮನವಿ

ತ್ರಿಶಾ ಮತ ಚಲಾಯಿಸಿದ ಬಳಿಕ ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟ್‌ನಿಂದಲೇ ಅಭಿಮಾನಿಗಳು ಗೆಸ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ತ್ರಿಶಾ ವೋಟ್ ಮಾಡಿದ ಫೋಟೋವನ್ನು ಹಂಚಿಕೊಂಡಿದ್ದಾರೆಯೇ ವಿನ: ಏನೂ ಹೇಳಿಲ್ಲ. ಹೀಗಿದ್ದರೂ ಅಭಿಮಾನಿಗಳು ಯಾರಿಗೆ ಮತ ಹಾಕಿರಬಹುದು ಅನ್ನೋದನ್ನು ಅವರ ಪೋಸ್ಟ್‌ನಿಂದಲೇ ಡಿಕೋಡ್ ಮಾಡುತ್ತಿದ್ದಾರೆ.

ತ್ರಿಶಾ ಶೇರ್ ಮಾಡಿದ ಫೋಟೊ ಜೊತೆಗೆ ಅವರೇ ನಟಿಸಿದ 'ಗಿಲ್ಲಿ' ಸಿನಿಮಾದ ಹಾಡನ್ನು ಬ್ಯಾಕ್‌ಗ್ರೌಂಡ್‌ನಲ್ಲಿ ಹಾಕಿದ್ದಾರೆ. 'ಗಿಲ್ಲಿ' ಸಿನಿಮಾದಲ್ಲಿ ವಿಜಯ್‌ಗೆ ತ್ರಿಶಾ ನಾಯಕಿಯಾಗಿ ನಟಿಸಿದ್ದರು. ಇದನ್ನೇ ಇಟ್ಟುಕೊಂಡು ಅಭಿಮಾನಿಗಳು ಗೆಸ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಆದರೆ, ಆ ಹಾಡಿನಲ್ಲಿ ಸೀಟಿ ಹಾಕುವ ಬಿಟ್ ಅನ್ನು ತ್ರಿಶಾ ಕಟ್ ಮಾಡಿದ್ದಾರೆ. ಟಿವಿಕೆ ಚಿಹ್ನೆಯಾಗಿರುವ ವಿಶಲ್ ಆಗಿದ್ದು, ಬೇಕಂತಲೇ ನಟಿ ತ್ರಿಶಾ ಕಟ್ ಮಾಡಿದ್ದಾರೆಂದು ಹೇಳಲಾಗಿದೆ.

ಇನ್ನು ತ್ರಿಶಾ ಅಭಿಮಾನಿಗಳ ಕಾಮೆಂಟ್ ಕೂಡ ಅಷ್ಟೇ ಮಜವಾಗಿದೆ. "ಗಿಲ್ಲಿ ಸಾಂಗ್ ಕೋಡ್ ವರ್ಡ್‌ ಅನ್ನು ಒಪ್ಪಿಕೊಂಡಿದ್ದೇವೆ" ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೇ ಇನ್ನೊಬ್ಬರು "ಹಿನ್ನೆಲೆ ಸಂಗೀತ ನೀವು ಯಾರಿಗೆ ವೋಟು ಹಾಕಿರಬಹುದೆಂಬ ಸುಳಿವು ನೀಡಿದೆ" ಎಂದು ಕಾಮೆಂಟ್ ಮಾಡಿದ್ದಾರೆ. "ತ್ರಿಶಾ ಅಕ್ಕ ನೀವು GOAT" ಎಂದರೆ, ಇನ್ನೊಬ್ಬರು "ಅತ್ತಿಗೆ ಫುಲ್ ಬೆಂಕಿ" ಕಾಮೆಂಟ್ ಮಾಡಿದ್ದಾರೆ. ಹೀಗಾಗಿ ನೆಟ್ಟಿಗರು ಒಳ್ಳೊಳ್ಳೆ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ವಿಜಯ್ ಹಾಗೂ ತ್ರಿಶಾ ಇಬ್ಬರೂ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. 'ಗಿಲ್ಲಿ', 'ತಿರುಪತಿ','ಕುರುವಿ' ಹಾಗೂ ಇತ್ತೀಚೆಗೆ 'ಲಿಯೋ' ಸಿನಿಮಾದಲ್ಲಿ ನಟಿಸಿದ್ದರು. ಈ ಜೋಡಿ ಕಾಲಿವುಡ್‌ನಲ್ಲಿ ಸಕ್ಸಸ್‌ಫುಲ್ ಫೇರ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಸದ್ಯ ತ್ರಿಶಾ ತಮಿಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸೂರ್ಯಾ ಜೊತೆ 'ಕರುಪ್ಪು' ಸಿನಿಮಾದಲ್ಲಿ ನಟಿಸುತ್ತಿದ್ದು, ಇನ್ನು ಬಿಡುಗಡೆಯಾಗಬೇಕಿದೆ.

English summary
Tamil Nadu Elections 2026: Actress Trisha Krishnan casts her vote; fans go crazy, trying to decode whom she voted for.
Read more about: vijay trisha election
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X