Mansoor Ali Khan: ತ್ರಿಶಾ ಬಗ್ಗೆ ಅಶ್ಲೀಲ ಹೇಳಿಕೆ: ಕ್ಷಮೆ ಕೇಳದ ನಟ ಮನ್ಸೂರ್ ಅಲಿ ಖಾನ್ ವಿರುದ್ಧ ಕೇಸ್ ದಾಖಲು!

Mansoor Ali Khan - Trisha: ತಮಿಳುನಾಡಿನಲ್ಲಿ ನಟ ಮನ್ಸೂರ್ ಅಲಿ ಖಾನ್ ಟಾಕ್ ಆಫ್‌ ದಿ ಟೌನ್ ಆಗಿದ್ದಾರೆ. ತ್ರಿಶಾ ಬಗ್ಗೆ ಅಶ್ಲೀಲ ಹೇಳಿಕೆ ನೀಡಿದ ಬೆನ್ನಲ್ಲೇ ಚಿತ್ರರಂಗದ ಗಣ್ಯರಿಂದ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಮನ್ಸೂರ್ ಅಲಿ ಖಾನ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇದೇ ಬೆನ್ನಲ್ಲೇ ವಿವಾದಿತ ನಟನ ವಿರುದ್ಧ ದೂರು ದಾಖಲಿಸಲಾಗಿದೆ.

ಮನ್ಸೂರ್ ಅಲಿ ಖಾನ್ ತಮಿಳುನಾಡಿನ ಜನಪ್ರಿಯ ನಟ. ಆದರೆ, ಒಂದಿಷ್ಟು ದಿನ ಚಿತ್ರರಂಗದಿಂದ ದೂರ ಉಳಿದಿದ್ದರು. ಈಗ ಮತ್ತೆ ಸಿನಿಮಾಗಳಲ್ಲಿ ಆಕ್ಟಿವ್ ಆಗಿದ್ದಾರೆ. ಇತ್ತೀಚೆಗೆ ತೆರೆಕಂಡ 'ಲಿಯೋ' ಸಿನಿಮಾದಲ್ಲಿ ದಳಪತಿ ವಿಜಯ್ ಹಾಗೂ ತ್ರಿಶಾ ಜೊತೆ ಖಳನಾಯಕನಾಗಿ ಕಾಣಿಸಿಕೊಂಡಿದ್ದರು.

trisha-mansoor-ali-khan-arrest

ಪತ್ರಿಕಾಗೋಷ್ಠಿಯೊಂದರಲ್ಲಿ ಇದೇ 'ಲಿಯೋ' ಸಿನಿಮಾ ಬಗ್ಗೆ ಮಾತಾಡುವಾಗ ತ್ರಿಶಾ ಬಗ್ಗೆ ಅಶ್ಲೀಲ ಕಮೆಂಟ್‌ಗಳನ್ನು ಮಾಡಿದ್ದರು. "ಲಿಯೋ ಸಿನಿಮಾದಲ್ಲಿ ತ್ರಿಶಾ ಜೊತೆ ಬೆಡ್‌ ರೂಮ್ ಸೀನ್‌ಗಳು ಇರುತ್ತವೆ. ಆಕೆಯನ್ನು ಎತ್ತಿಕೊಂಡು ಬೆಡ್‌ರೂಮ್‌ಗೆ ಹೋಗುವಂತಹ ದೃಶ್ಯಗಳಿರುತ್ತೆಂದು ಭಾವಿಸಿದ್ದೆ. ಆದರೆ, ಈ ಸಿನಿಮಾದಲ್ಲಿ ತ್ರಿಶಾ ಮುಖವನ್ನೂ ನನಗೆ ತೋರಿಸಿಲ್ಲ." ಎಂದು ಮನ್ಸೂರ್ ಅಲಿ ಖಾನ್ ಹೇಳಿದ್ದರು.

ಮನ್ಸೂರ್ ಅಲಿ ಖಾನ್ ಇದೇ ಹೇಳಿಕೆ ವಿರುದ್ಧ ಮೆಗಾಸ್ಟಾರ್ ಚಿರಂಜೀವಿ, ಖುಷ್ಬೂ, ರೋಜಾ ಸೇರಿದಂತೆ ಹಲವರು ಆಕ್ರೋಶ ಹೊರಹಾಕಿದ್ದರು. ಮನ್ಸೂರ್ ಅಲಿ ಖಾನ್ ಕ್ಷಮೆ ಕೇಳುವಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು. ಆದರೆ, ವಿವಾದಿತ ನಟ ಕ್ಷಮೆ ಹೇಳಲು ನಿರಾಕರಿಸಿದ್ದರು.

trisha-mansoor-ali-khan-arrest

ವಿವಾದಾತ್ಮಕ ಹೇಳಿಕೆ ಗದ್ದಲಕ್ಕೆ ತಿರುಗಿದಾಗ ಮನ್ಸೂರ್ ಅಲಿ ಖಾನ್ "ನಾನೇ ತಪ್ಪು ಹೇಳಿಕೆ ನೀಡಿಲ್ಲ. ತ್ರಿಶಾ ಬಗ್ಗೆ ಹೇಳಿದ ವಿಡಿಯೋವನ್ನು ಕಟ್ ಮಾಡಿ ತಪ್ಪಾಗಿ ತೋರಿಸಲಾಗಿದೆ. ದೇಶದಲ್ಲಿ ಹಲವು ಸಮಸ್ಯೆಗಳಿವೆ ಅವುಗಳನ್ನು ನೋಡಿ" ಎಂದಿದ್ದರು. ಈ ಹೇಳಿಕೆ ಬಳಿಕ ಮತ್ತಷ್ಟು ಮಂದಿ ರೊಚ್ಚಿಗೆದ್ದರು. ಮನ್ಸೂರ್ ಅಲಿ ಖಾನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಕಿಡಿಕಾರಿದ್ದರು.

ತ್ರಿಶಾ ಬಗ್ಗೆ ಮನ್ಸೂರ್ ಅಲಿ ಖಾನ್ ಆಡಿದ ಮಾತುಗಳು ಖಂಡನೀಯ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ. ಇಷ್ಟೇ ಅಲ್ಲದೆ ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸುವಂತೆ ಡಿಜಿಪಿಗೆ ಸೂಚಿಸಿತ್ತು. ಈ ಸಂಬಂಧ ಮನ್ಸೂರ್ ಅಲಿ ಖಾನ್ ವಿರುದ್ಧ ತಮಿಳುನಾಡು ಪೊಲೀಸರು ದೂರು ದಾಖಲಿಸಿದ್ದಾರೆ.

ಸದ್ಯಕ್ಕೀಗ ತಮಿಳುನಾಡು ಪೊಲೀಸರು ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 354-A, 509 (ಮಹಿಳೆಯರಿಗೆ ತೊಂದರೆಯಾಗುವ ಪದ, ಸನ್ನೆ ಅಥವಾ ಕೃತ್ಯ) ಅಡಿಯಲ್ಲಿ ಎಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಅತೀ ಶೀಘ್ರದಲ್ಲಿಯೇ ಮನ್ಸೂರ್ ಅಲಿ ಖಾನ್‌ರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎಂದು ತಮಿಳು ಮಾಧ್ಯಮಗಳು ಸುದ್ದಿ ಮಾಡಿವೆ.

More from Filmibeat

English summary
Police registered a case against Mansoor Ali Khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X